ಹೋಬಾರ್ಟ್: ಎಫ್ಐಎಚ್ ಪ್ರೋ ಲೀಗ್ ಋತುವಿನಲ್ಲಿ ಭಾರತ ತಂಡದ ಸೋಲಿನ ಸರಪಣಿ ಕೊನೆಗೂ ಮುರಿಯಿತು. ಹಾರ್ದಿಕ್ ಸಿಂಗ್ ನೇತೃತ್ವದ ತಂಡ ಬುಧವಾರ ನಡೆದ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 3–1 ಗೋಲುಗಳಿಂದ ಸೋಲಿಸಿತು. ನಿಗದಿ ಅವಧಿಯ ಆಟ 1–1 ಸಮಬಲಗೊಂಡಿತ್ತು.

ಆಸ್ಟ್ರೇಲಿಯಾ ವಿಶ್ವಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದು, ಈ ಗೆಲುವು ಭಾರತಕ್ಕೆ ಆತ್ಮವಿಶ್ವಾಸ ಗಳಿಸಲು ನೆರವಾಗಲಿದೆ. ಭಾರತ ಈ ಋತುವಿನಲ್ಲಿ ಈ ಮೊದಲು ಆಡಿದ ಎಲ್ಲಾ ಏಳು ಪಂದ್ಯಗಳನ್ನು ಸೋತಿತ್ತು.

ಬುಧವಾರ ನಡೆದ ಪಂದ್ಯದ ಮೊದಲ ಮೂರು ಕ್ವಾರ್ಟರ್ಗಳಲ್ಲಿ ಎರಡೂ ತಂಡಗಳಿಂದ ಉತ್ತಮ ಪೈಪೋಟಿ ಕಂಡುಬಂದಿತು. ಆದರೆ ಈ ಅವಧಿ ಗೋಲುರಹಿತವಾಯಿತು. 49ನೇ ನಿಮಿಷ ಜೆರೆಮಿ ಹೆವಾರ್ಡ್ ಅವರು ಪೆನಾಲ್ಟಿ ಕಾರ್ನರ್ಅನ್ನು ಗೋಲಾಗಿ ಪರಿವರ್ತಿಸಿ ಆಸ್ಟ್ರೇಲಿಯಾ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ ಆತಿಥೇಯ ತಂಡದ ಸಂತಸ ಕ್ಷಣಿಕವಾಯಿತು. ಎರಡೇ ನಿಮಿಷಗಳ ನಂತರ ಶಿಲಾನಂದ ಲಾಕ್ರಾ ಅವರು ಆಕರ್ಷಕ ಫೀಲ್ಡ್ ಗೋಲಿನ ಮೂಲಕ ಸ್ಕೋರ್ ಭಾರತ ತಂಡವು ಸಮಬಲ ಸಾಧಿಸಲು ನೆರವಾದರು.

ಎರಡೂ ತಂಡಗಳು ನಿರ್ಣಾಯಕ ಗೋಲು ಗಳಿಸಲು ಇನ್ನಿಲ್ಲದ ಯತ್ನದಲ್ಲಿ ತೊಡಗಿದವು. ಆದರೆ ಪಂದ್ಯ 1–1 ರಲ್ಲಿ ಸಮಬಲದಲ್ಲಿ ಕೊನೆಗೊಂಡ ಕಾರಣ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು.

ಶೂಟೌಟ್ನಲ್ಲಿ ಲಾಕ್ರಾ, ಮಣಿಂದರ್ ಸಿಂಗ್, ವಿಷ್ಣುಕಾಂತ್ ಸಿಂಗ್ ಅವರು ಚೆಂಡನ್ನು ಗುರಿತಲುಪಿಸಿದರು. ಆಸ್ಟ್ರೇಲಿಯಾ ಪರ ಏಕೈಕ ಗೋಲನ್ನು ಹೆವಾರ್ಡ್ ಗಳಿಸಿದರು. ಉಳಿದವರ ಯತ್ನಗಳನ್ನು ಕನ್ನಡಿಗ ಗೋಲ್ಕೀಪರ್ ಹೊನ್ನೇನಹಳ್ಳಿ ಶಶಿಕುಮಾರ್ ಮೋಹಿತ್ ತಡೆದ ಪರಿಣಾಮ ಭಾರತ ಕೊನೆಗೂ ಋತುವಿನ ಮೊದಲ ಗೆಲುವು ಸಾಧಿಸಿ ನಿಟ್ಟುಸಿರುಬಿಟ್ಟಿತು.

ರೂರ್ಕೆಲಾ ಲೆಗ್ ಮೂಲಕ ಪ್ರೊ ಲೀಗ್ ಋತು ಆರಂಭಿಸಿದ ಭಾರತ, ತವರಿನಲ್ಲಿ ಎಲ್ಲಾ ನಾಲ್ಕೂ ಪಂದ್ಯಗಳನ್ನು (ಬೆಲ್ಜಿಯಂ ಮತ್ತು ಅರ್ಜೆಂಟೀನಾ ವಿರುದ್ಧ) ಸೋತು ನಿರಾಶೆ ಅನುಭವಿಸಿತ್ತು. ಹೋಬಾರ್ಟ್ ಲೆಗ್ನಲ್ಲೂ ಭಾರತ ತಂಡವು ಸ್ಪೇನ್ ಮತ್ತು ಆಸ್ಟ್ರೇಲಿಯಾ ಎದುರಿನ ಮೊದಲ ಮೂರು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಇದರಲ್ಲಿ ತಲಾ ಒಂದು ಪಂದ್ಯಗಳು ಶೂಟೌಟ್ನಲ್ಲಿ ಇತ್ಯರ್ಥಗೊಂಡಿದ್ದವು.

ಭಾರತ ತಂಡವು, ಒಂಬತ್ತು ತಂಡಗಳ ಪ್ರೊ ಲೀಗ್ನಲ್ಲಿ ಎಂಟು ಪಂದ್ಯಗಳನ್ನು ಆಡಿದ್ದು, ನಾಲ್ಕು ಪಾಯಿಂಟ್ಸ್ ಗಳಿಸಿ ಎಂಟನೇ ಸ್ಥಾನದಲ್ಲಿದೆ.

ಭಾರತ ತಂಡವು ಜೂನ್ 21ರಿಂದ ನಡೆಯುವ ರೋಟರ್ಡ್ಯಾಮ್ ಲೆಗ್ನಲ್ಲಿ ಆತಿಥೇಯ ನೆದರ್ಲೆಂಡ್ಸ್ ಮತ್ತು ಜರ್ಮನಿ ವಿರುದ್ಧ ಪಂದ್ಯಗಳನ್ನು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.