ಜೂನಿಯರ್ ವಿಶ್ವಕಪ್ ಹಾಕಿ: ‘ಬಿ’ ಗುಂಪಿನಲ್ಲಿ ಭಾರತ, ಪಾಕ್
ಭಾರತ ತಂಡವು, ಎಫ್ಐಎಚ್ ಹಾಕಿ ಪುರುಷರ ಜೂನಿಯರ್ ವಿಶ್ವಕಪ್ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ, ಚಿಲಿ ಮತ್ತು ಸ್ವಿಜರ್ಲೆಂಡ್ ಜೊತೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಚಾಂಪಿಯನ್ಷಿಪ್ ಚೆನ್ನೈ ಮತ್ತು ಮಧುರೈನಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 10ರವರೆಗೆ ನಡೆಯಲಿದೆ.Last Updated 28 ಜೂನ್ 2025, 13:22 IST