ಕೊಲಂಬೊ: ಪ್ರಮುಖ ಬೌಲರ್ಗಳ ಗೈರುಹಾಜರಿಯಲ್ಲಿ ಆಸ್ಟ್ರೇಲಿಯಾ ತಂಡವು ಬುಧವಾರದಿಂದ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಅನುಭವಿ ಮತ್ತು ಮ್ಯಾಚ್ ವಿನ್ನಿಂಗ್ ವೇಗದ ಬೌಲರ್ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್ವುಡ್ ಅವರು ಆಸ್ಟ್ರೇಲಿಯಾ ತಂಡದಲ್ಲಿ ಕಣಕ್ಕಿಳಿಯುತ್ತಿಲ್ಲ. ಕಮಿನ್ಸ್ ಮತ್ತು ಜೋಷ್ ಅವರು ಗಾಯದಿಂದಾಗಿ ಕಣಕ್ಕಿಳಿಯುತ್ತಿಲ್ಲ. ಎಡಗೈ ವೇಗಿ ಸ್ಟಾರ್ಕ್ ಅವರು ಟಿ20 ಮಾದರಿಯಿಂದ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ.

ಈ ಖ್ಯಾತನಾಮರ ಅನುಪಸ್ಥಿತಿಯಲ್ಲಿ ನೇಥನ್ ಎಲೀಸ್ ಅವರು ಆಸ್ಟ್ರೇಲಿಯಾ ವೇಗದ ವಿಭಾಗದ ಸಾರಥ್ಯ ವಹಿಸುವ ಸಾಧ್ಯತೆ ಇದೆ. ಆದರೆ ಅವರು ಕೂಡ ಈಚೆಗೆ ಸ್ನಾಯುಸೆಳೆತದಿಂದಾಗಿ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಫೈನಲ್ ಪಂದ್ಯ ತಪ್ಪಿಸಿಕೊಂಡಿದ್ದರು. ತೊಡೆಸಂಧು ಸ್ನಾಯುವಿನ ಗಾಯದಿಂದ ಈಚೆಗೆ ಚೇತರಿಸಿಕೊಂಡಿರುವ ಲೆಗ್ಸ್ಪಿನ್ನರ್ ಆ್ಯಡಂ ಜಂಪಾ ಇಲ್ಲಿ ಆಡಲಿದ್ದಾರೆ. ಇದರಿಂದಾಗಿ ನಾಯಕ ಮಿಚೆಲ್ ಮಾರ್ಷ್ ಅವರಿಗೆ ಬೌಲರ್ಗಳನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಎಚ್ಚರಿಕೆಯಿಂದ ದುಡಿಸಿಕೊಳ್ಳುವ ಸವಾಲು ಇದೆ.

ಬ್ಯಾಟಿಂಗ್ನಲ್ಲಿ ಸ್ವತಃ ಮಾರ್ಷ್, ಟಿಮ್ ಡೇವಿಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಆಲ್ರೌಂಡರ್ ಗಳಾದ ಮಾರ್ಕೊಸ್ ಸ್ಟೋಯಿನಿಸ್, ಕ್ಯಾಮರಾನ್ ಗ್ರೀನ್ ಅವರ ಮೇಲೆ ಹೆಚ್ಚಿನ ಭರವಸೆ ಇದೆ. ಬಹುತೇಕ ಇವರೆಲ್ಲರಿಗೂ ಭಾರತದ ನೆಲದಲ್ಲಿ ಆಡಿದ ಅನುಭವ ಇದೆ.

ಆದರೆ ಅನುಭವಿ ಆಟಗಾರ ಪಾಲ್ ಸ್ಟರ್ಲಿಂಗ್ ನಾಯಕತ್ವದ ಐರ್ಲೆಂಡ್ ತಂಡವು ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದೆ. ಬ್ಯಾರಿ ಮೆಕಾರ್ತಿ, ಮಾರ್ಕ್ ಅಡೇರ್, ರಾಸ್ ಅಡೇರ್, ಜೋಸ್ ಲಿಟಲ್ ಅವರು ಎದುರಾಳಿಗಳಿಗೆ ಸವಾಲೊಡ್ಡಬಲ್ಲ ಸಮರ್ಥರು. ಈ ಟೂರ್ನಿಯಲ್ಲಿ ಐರ್ಲೆಂಡ್ ತಂಡವು ಈಗಾಗಲೇ ಒಂದು ಪಂದ್ಯ ಆಡಿದ್ದು, ಅದರಲ್ಲಿ ಶ್ರೀಲಂಕಾ ಎದುರು ಪರಾಭವಗೊಂಡಿದೆ. ಆಸ್ಟ್ರೇಲಿಯಾಕ್ಕೆ ಇದು ಮೊದಲ ಪಂದ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.