ಚೆನ್ನೈ: ಹಾಲಿ ಚಾಂಪಿಯನ್ ಶ್ರಾಚಿ ಬೆಂಗಾಲ್ ಟೈಗರ್ಸ್ ತಂಡವು ಭಾನುವಾರ ನಡೆದ ಪುರುಷರ ಹಾಕಿ ಇಂಡಿಯಾ ಲೀಗ್ (ಎಚ್ಐಎಲ್) ಪಂದ್ಯದಲ್ಲಿ 3-1 ಅಂತರದಿಂದ ಜೆಎಸ್ಡಬ್ಲ್ಯೂ ಸೂರ್ಮಾ ಕ್ಲಬ್ ತಂಡವನ್ನು ಮಣಿಸಿ ಅಭಿಯಾನ ಆರಂಭಿಸಿತು.

ಟೈಗರ್ಸ್ ಪರ ಸುಖ್ಜೀತ್ ಸಿಂಗ್ (33ನೇ ನಿಮಿಷ), ಅಭಿಷೇಕ್ (45ನೇ) ಮತ್ತು ಗುರುಸೇವಕ್ ಸಿಂಗ್ (60ನೇ) ಗೋಲು ಗಳಿಸಿದರೆ, ಸೂರ್ಮಾ ಪರ ಪ್ರಭಜೋತ್ ಸಿಂಗ್ (54ನೇ) ಒಂದು ಗೋಲು ಗಳಿಸಿದರು.

ಮೊದಲೆರಡು ಕ್ವಾರ್ಟರ್ನಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. ಯಾವುದೇ ತಂಡಕ್ಕೆ ಮುನ್ನಡೆ ಲಭಿಸಲಿಲ್ಲ. ಮೂರನೇ ಕ್ವಾರ್ಟರ್ ಆರಂಭವಾದ ಮೂರನೇ ನಿಮಿಷದಲ್ಲಿ ಸುಖ್ಜೀತ್ ಅವರು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿ ಟೈಗರ್ಸ್ ತಂಡಕ್ಕೆ ಮುನ್ನಡೆ ಒದಗಿಸಿದರು. ಕ್ವಾರ್ಟರ್ನ ಕೊನೆಯಲ್ಲಿ ಅಭಿಷೇಕ್ ಅವರು ಫೀಲ್ಡ್ ಗೋಲು ದಾಖಲಿಸಿ, ಟೈಗರ್ಸ್ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ಕೊನೆಯ ಕ್ವಾರ್ಟರ್ನಲ್ಲಿ ಸೂರ್ಮಾ ತಂಡವು ಕೊಂಚ ಪ್ರತಿರೋಧ ತೋರಿತು. 54ನೇ ನಿಮಿಷದಲ್ಲಿ ಪ್ರಭಜೋತ್ ಅವರು ಅಚ್ಚುಕಟ್ಟಾಗಿ ಪಾಸಿಂಗ್ ಚಲನೆಯನ್ನು ಪೂರ್ಣಗೊಳಿಸಿ ತಂಡದ ಪರ ಮೊದಲ ಗೋಲು ದಾಖಲಿಸಿದರು. ಕೊನೆಯ ನಿಮಿಷದಲ್ಲಿ ಗುರು ಸೇವಕ್ ಅವರು ಟೈಗರ್ಸ್ ಪರ ಗೋಲು ದಾಖಲಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಸುಖ್ಜೀತ್ ಸಿಂಗ್ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.

ಗೆಲುವಿನಲ್ಲಿ ಮಿಂಚಿದ ಅಗಸ್ಟಿನಾ

ರಾಂಚಿ: ಅಗಸ್ಟಿನಾ ಗೊರ್ಜೆಲಾನಿ ಗಳಿಸಿದ ಗೋಲಿನ ನೆರವಿನಿಂದ ಶ್ರಾಚಿ ಬೆಂಗಾಲ್ ಟೈಗರ್ಸ್ ತಂಡವು ಭಾನುವಾರ ಮಹಿಳಾ ಎಚ್ಐಎಲ್ ಟೂರ್ನಿಯ ಪಂದ್ಯದಲ್ಲಿ 1–0ರಿಂದ ರಾಂಚಿ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿತು.

ಅಗಸ್ಟಿನಾ ಅವರು 37 ನಿಮಿಷದಲ್ಲಿ ದಾಖಲಿಸಿದ ಗೋಲು ಗೆಲುವಿಗೆ ನಿರ್ಣಾಯಕವಾಯಿತು. ಈ ಗೆಲುವಿನೊಂದಿಗೆ ಟೈಗರ್ಸ್ ತಂಡವು (8 ಅಂಕ) ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು. ಎಸ್.ಜಿ. ಪೈಪರ್ಸ್ ತಂಡ (10) ಅಗ್ರಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.