ಸೋಮವಾರ, 5 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
04/01/2026 - 10/01/2026
ವಾರ ಭವಿಷ್ಯ | 2026 ಜನವರಿ 4ರಿಂದ 10ರವರೆಗೆ: ದೈವಭಯ ನಿಮ್ಮನ್ನು ಕಾಡಬಹುದು
Published 4 ಜನವರಿ 2026, 0:08 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ನಿರ್ಧಾರಗಳಲ್ಲಿ ಬಹಳ ದ್ವಂದ್ವವಿರುತ್ತದೆ. ಆದಾಯವು ಕಡಿಮೆ ಇದ್ದು, ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಆಸ್ತಿ ಖರೀದಿಗೆ ಹಣದ ಮೂಲ ಗೋಚರಿಸುತ್ತದೆ. ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಷ್ಟಪಡಬೇಕು. ಮೂತ್ರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸೇನೆಯಲ್ಲಿರುವವರು ಎಚ್ಚರವಹಿಸ ಬೇಕಾದ ಅಗತ್ಯವಿದೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು.
ವೃಷಭ
ಆದಾಯವು ನಿರೀಕ್ಷೆಯಷ್ಟಿರುತ್ತದೆ. ಕೃಷಿಯಿಂದ ಹೆಚ್ಚು ಲಾಭವಿರುತ್ತದೆ. ಅಧ್ಯಾಪಕರಿಗೆ ಉತ್ತಮ ಬೇಡಿಕೆ ಬರುತ್ತದೆ. ಭೂಮಿ ವ್ಯವಹಾರವನ್ನು ಮಾಡುವವರಿಗೆ ಸ್ವಲ್ಪ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳು ಹೆಚ್ಚು ಶ್ರಮಪಡಲೇಬೇಕಾದ ಅನಿವಾರ್ಯತೆ ಇದೆ. ಸರ್ಕಾರಿ ಸವಲತ್ತುಗಳು ಸಿಗುವುದು ಸ್ವಲ್ಪ ನಿಧಾನವಾಗಬಹುದು. ವೃತ್ತಿಯಲ್ಲಿ ಯಶಸ್ಸನ್ನು ಕಾಣಬಹುದು. ಹಣಕಾಸಿನ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ.
ಮಿಥುನ
ಸಮಾಜದಿಂದ ಗೌರವ ಸಿಗುತ್ತದೆ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ. ಕೃಷಿಭೂಮಿಯನ್ನು ಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಸ್ವಲ್ಪ ಯಶಸ್ಸು ಇರುತ್ತದೆ. ಸಂಗಾತಿಯಿಂದ ನಿಮ್ಮ ವ್ಯವಹಾರಗಳಿಗೆ ಬಂಡವಾಳ ದೊರೆಯುವ ಸಾಧ್ಯತೆಗಳಿವೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ. ವೃತ್ತಿಯಲ್ಲಿ ಇದ್ದ ತೊಂದರೆಗಳು ನಿವಾರಣೆಯಾಗಿ ಮನಸ್ಸು ಹಗುರವಾಗುತ್ತದೆ. ದೂರ ಪ್ರಯಾಣಗಳು ಅಷ್ಟು ಒಳಿತಲ್ಲ. ಕೃಷಿಗಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ.
ಕರ್ಕಾಟಕ
ಮನಸ್ಸಿನಲ್ಲಿ ಉತ್ಸಾಹವಿದ್ದರೂ ಕಾರ್ಯಗತ ಮಾಡುವ ಧೈರ್ಯವಿರುವುದಿಲ್ಲ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಆಸ್ತಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಈಗ ನಿರೀಕ್ಷಿತ ಫಲಿತಾಂಶವಿರುವುದಿಲ್ಲ. ಸಂಗಾತಿಯ ಕೋಪಕ್ಕೆ ತುತ್ತಾಗಬಹುದು. ವೃತ್ತಿಯಲ್ಲಿ ಹಿತಶತ್ರುಗಳ ಕಾಟ ಹೆಚ್ಚಾಗಬಹುದು. ಭೂಮಿ ವ್ಯವಹಾರಗಳನ್ನು ಮಾಡುವವರಿಗೆ ಅಂತಹ ಯಶಸ್ಸು ಇರುವುದಿಲ್ಲ. ಕೃಷಿ ಉಪ ಬೆಳೆಗಳಿಂದ ಲಾಭವಿರುತ್ತದೆ.
ಸಿಂಹ
ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಬಹಳ ಉತ್ಸಾಹ ತೋರುವಿರಿ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಬಂಧುಗಳ ಜೊತೆ ಸಂಬಂಧಗಳನ್ನು ಸುಧಾರಿಸಿಕೊಳ್ಳುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಸ್ವಲ್ಪ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಮೇಲುಗೈ ಸಾಧಿಸುವಿರಿ. ಮೂಳೆ ಸಂಬಂಧಿತ ನೋವುಗಳು ಕಾಡಬಹುದು. ಕ್ರೀಡಾಪಟುಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ.
ಕನ್ಯಾ
ಬುದ್ಧಿವಂತಿಕೆಯನ್ನು ಬಳಸಿ ಜನರನ್ನು ಸೆಳೆಯಲು ಯತ್ನಿಸುವಿರಿ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಬಂಧುಗಳ ಸಹಕಾರವನ್ನು ಸ್ವಲ್ಪ ಮಟ್ಟಿಗೆ ನಿರೀಕ್ಷೆ ಮಾಡಬಹುದು. ಸಂಸಾರದಲ್ಲಿ ಕಸಿವಿಸಿ ಇದ್ದರೂ, ಸಂಬಂಧಗಳು ಮುಂದುವರೆಯುತ್ತವೆ. ವಿದ್ಯಾರ್ಥಿಗಳಿಗೆ ಕಷ್ಟಪಡಲೇ ಬೇಕಾದ ಸಂದರ್ಭವಿದೆ. ವ್ಯವಹಾರದಲ್ಲಿ ನೀವು ಮೇಲುಗೈ ಸಾಧಿಸಲು ಪ್ರಯತ್ನ ಪಡುವಿರಿ. ಉಸಿರಾಟದ ತೊಂದರೆಗಳು ಅಥವಾ ಮೂಳೆ ತೊಂದರೆಗಳಿದ್ದಲ್ಲಿ ಚಿಕಿತ್ಸೆ ಪಡೆಯಿರಿ. ಕೃಷಿಯಿಂದ ಲಾಭವಿರುತ್ತದೆ.
ತುಲಾ
ದೊಡ್ಡ ಮನುಷ್ಯರಂತೆ ತೋರಿಸಿಕೊಳ್ಳಲು ಪ್ರಯತ್ನಪಡುವಿರಿ. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಕೃಷಿ ಭೂಮಿ ವ್ಯವಹಾರದಲ್ಲಿ ಅಭಿವೃದ್ಧಿ ಇರುತ್ತದೆ. ವಿದೇಶಕ್ಕೆ ಹೋಗಬೇಕೆನ್ನುವವರಿಗೆ ಅವಕಾಶಗಳು ಲಭಿಸುತ್ತವೆ. ಆಸ್ತಿ ಖರೀದಿ ವಿಚಾರದಲ್ಲಿ ಅಂತಹ ಪ್ರಗತಿ ಇರುವುದಿಲ್ಲ. ವಿದೇಶಿ ಭಾಷಾ ಕಲಿಕೆ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಹಣದ ವ್ಯವಹಾರಗಳಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗಬಹುದು. ಕಫದ ತೊಂದರೆ ಇರುವವರು ಹೆಚ್ಚು ಎಚ್ಚರ ವಹಿಸಿ.
ವೃಶ್ಚಿಕ
ವಾರದ ಆರಂಭದಲ್ಲಿ ದ್ವಂದ್ವ ನಿರ್ಧಾರಗಳಿದ್ದರೂ, ನಂತರ ಸರಿಯಾಗುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ವಿದೇಶದಲ್ಲಿ ಆಸ್ತಿ ಮಾಡುವವರಿಗೆ ಹೆಚ್ಚಿನ ಅನುಕೂಲವಿರುತ್ತದೆ. ಆಸ್ತಿ ವಿಚಾರದಲ್ಲಿ ಸ್ವಲ್ಪಗೊಂದಲಗಳು ಉಂಟಾಗಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಶೀತ ಬಾಧೆ ಇರುವವರು ಹೆಚ್ಚು ಎಚ್ಚರ ವಹಿಸಿ. ಲೋಹದ ವ್ಯಾಪಾರ ಮಾಡುವವರಿಗೆ ಲಾಭವಿರುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿ ಜೊತೆಗೆ ಸ್ಥಾನಮಾನಗಳು ಸಿಗುವ ಸಾಧ್ಯತೆಗಳಿವೆ.
ಧನು
ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡವರಿಗೆ ಈಗ ವಾಸ್ತವ ತಿಳಿಯುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಸ್ಥಿರಾಸ್ತಿಯನ್ನು ಮಾಡುವ ವಿಚಾರದಲ್ಲಿ ಆತುರಬೇಡ. ಸ್ತ್ರೀರೋಗ ತಜ್ಞರಿಗೆ ಬೇಡಿಕೆ ಬರುತ್ತದೆ. ಸಂಗಾತಿಯ ಆದಾಯ ಏರಿಕೆಯಾಗುವ ಸಂದರ್ಭವಿದೆ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ.
ಮಕರ
ಸತ್ಯವನ್ನು ತಿಳಿಸಲು ನೇರವಾಗಿ ಮಾತನಾಡುವುದು ಒಳ್ಳೆಯದು. ವಿದೇಶದಲ್ಲಿ ದುಡಿಯುತ್ತಿರುವವರ ಆದಾಯ ಹೆಚ್ಚುತ್ತದೆ. ಶತ್ರುಗಳು ನಿಮ್ಮ ಸಹವಾಸಕ್ಕೆ ಬರುವುದನ್ನು ನಿಲ್ಲಿಸುವರು. ಕೃಷಿಯಿಂದ ನಿರೀಕ್ಷಿತ ಲಾಭವಿರುವುದಿಲ್ಲ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಒಡಹುಟ್ಟಿದವರ ಕೆಲವು ಕೆಲಸಗಳನ್ನು ಮಾಡಿಕೊಡುವಿರಿ. ವೈವಾಹಿಕ ಜೀವನದಲ್ಲಿ ಕಾವೇರಿದ ವಾತಾವರಣವಿರುತ್ತದೆ. ಸರ್ಕಾರಿ ಸಂಸ್ಥೆಗಳಿಂದ ಅನಿರೀಕ್ಷಿತ ಲಾಭಗಳಾಗಬಹುದು. ಉದ್ಯೋಗದಲ್ಲಿ ಯಾವುದೇ ರೀತಿಯ ಏರಿಳಿತ ಇರುವುದಿಲ್ಲ.
ಕುಂಭ
ಯುವಕರ ಮನಸ್ಸು ಬಹಳ ಉಗ್ರತೆಯಿಂದ ಕೂಡಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ನಾಟಿ ವೈದ್ಯರುಗಳಿಗೆ ಬಹಳ ಬೇಡಿಕೆ ಇರುತ್ತದೆ. ಆಸ್ತಿ ವಿಚಾರದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ಕಣ್ಣಿನ ತೊಂದರೆ, ಉಸಿರಾಟದ ತೊಂದರೆ ಇರುವವರು ಎಚ್ಚರ ವಹಿಸಿ. ವ್ಯಾಪಾರ- ವ್ಯವಹಾರಗಳಲ್ಲಿ ನಿಮ್ಮ ಪಾತ್ರ ಹೆಚ್ಚುತ್ತದೆ. ಕಾರ್ಮಿಕರ ಕೊರತೆಯಿಂದ ಬಳಲುತ್ತಿದ್ದ ಉದ್ದಿಮೆಗಳಿಗೆ ಕೊರತೆ ನೀಗುತ್ತದೆ. ಲೋಹಗಳ ಮೇಲೆ ಕುಸುರಿ ಕೆಲಸ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ.
ಮೀನ
ವಾರದ ಆರಂಭದಲ್ಲಿ ಬಹಳಷ್ಟು ಅಸಹನೆ ಇರುತ್ತದೆ. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಬಂಧುಗಳ ವಿರೋಧವನ್ನು ನೀವೇ ಕಟ್ಟಿಕೊಳ್ಳುವಿರಿ. ವಿದೇಶದಲ್ಲಿ ಹೋಟೆಲ್ ಉದ್ಯಮ ನಡೆಸುವವರಿಗೆ ಲಾಭ ಹೆಚ್ಚುತ್ತದೆ. ಸಂಗಾತಿ ನಡೆಸುವ ವ್ಯವಹಾರದಲ್ಲಿ ಲಾಭ ಬರುತ್ತದೆ. ದೈವಭಯ ನಿಮ್ಮನ್ನು ಕಾಡಬಹುದು. ಹಿರಿಯರ ಒಡವೆಗಳು ದೊರೆಯುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಹೊಸ ಸ್ನೇಹಿತರು ದೊರೆಯುವರು. ಲೋಹದ ವ್ಯಾಪಾರವನ್ನು ಮಾಡುವವರಿಗೆ ಲಾಭದ ಪ್ರಮಾಣ ಹೆಚ್ಚುತ್ತದೆ.
ADVERTISEMENT
ADVERTISEMENT