ಕ್ಲೆರ್ಮಾನ್ ಫೆರಾಂಡ್ (ಫ್ರಾನ್ಸ್): ಸ್ಪೇನ್ನ ಅರ್ಮಾಂಡ್ ಡುಪ್ಲಾಂಟಿಸ್ ಅವರು ಭಾನುವಾರ ನಡೆದ ‘ಆಲ್ ಸ್ಟಾರ್ ಪರ್ಚ್’ ಕೂಟದ ಪೋಲ್ವಾಲ್ಟ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡರು. ಹೊಟ್ಟೆಕೆಟ್ಟು ಸಮಸ್ಯೆ ಎದುರಿಸಿದ್ದರೂ ಅವರು ಗೆಲುವಿನ ಓಟ ಮುಂದುವರಿಸಿದರು. ಆದರೆ, ಈ ಬಾರಿ ವಿಶ್ವದಾಖಲೆಯನ್ನು ಸುಧಾರಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸಲು ಕೊನೆಯ ಕ್ಷಣದಲ್ಲಿ ನಿರ್ಧರಿಸಿದ ‘ಸೋಲಿಲ್ಲದ ಸರದಾರ’ ಡುಪ್ಲಾಂಟಿಸ್ ಮೊದಲ ಯತ್ನದಲ್ಲಿ 6.06 ಮೀ. ಜಿಗಿದರು. ಅದರೊಂದಿಗೆ ಚಿನ್ನದ ಪದಕ ಖಚಿತಪಡಿಸಿಕೊಂಡರು. ಆಸ್ಟ್ರೇಲಿಯಾದ ಕರ್ಟಿಸ್ ಮಾರ್ಷಲ್ (6.0 ಮೀ.) ಹಾಗೂ ಗ್ರೀಸ್ನ ಎಮಾನುಯಿಲ್ ಕೆರಾಲಿಸ್ (5.90 ಮೀ.) ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು.

26 ವರ್ಷ ವಯಸ್ಸಿನ ಡುಪ್ಲಾಂಟಿಸ್ ಅವರು 2023ರಿಂದ ಸತತ 37 ಕೂಟಗಳಲ್ಲಿ ಚಿನ್ನ ಗೆದ್ದಿದ್ದಾರೆ. ಅವರು ಟೋಕಿಯೊದಲ್ಲಿ ನಡೆದ 2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ 6.30ಮೀ. ಜಿಗಿದು 14ನೇ ಬಾರಿಗೆ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.