ಮಲೆನಾಡು, ಕರಾವಳಿಯ ವಿವಿಧೆಡೆ ಮಳೆ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಹಾಗೂ ಕರಾವಳಿಯ ಕೆಲವೆಡೆ ಭಾನುವಾರ ಧಾರಾಕಾರ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಕಳಸ ಭಾಗದಲ್ಲಿ ಕಾಫಿ, ಅಡಿಕೆ ಬೆಳೆಗೆ ಹಾನಿಯಾಗಿದೆ. ಕೊಪ್ಪ ಪಟ್ಟಣದ ಸಾರ್ವಜನಿಕರ ಆಸ್ಪತ್ರೆ ಮುಂಭಾಗದ ರಸ್ತೆ ಬದಿಯ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿತ್ತು.
ಕಳಸ ಬಳಿಯ ಬಾಳೆಹೊಳೆ ಭಾಗದ ತೋಟಗಳಲ್ಲಿ ನೀರು ಭೋರ್ಗರೆದು ಹರಿದಿದೆ. ಉದುರಿದ್ದ ಅಡಿಕೆ ಕಾಯಿಗಳು ನೀರು ಪಾಲಾಗಿವೆ. ಬದುಗಳು ಕೊಚ್ಚಿ ಹೋಗಿವೆ. ಕೆಲವೆಡೆ ಮಣ್ಣು ಕೊಚ್ಚಿ ಹೋಗಿ ಕೊರಕಲಾಗಿದೆ. ಕಾಫಿ ಗಿಡಗಳಲ್ಲಿನ ಕಾಯಿಗಳು ಉದುರಿವೆ.Last Updated 14 ನವೆಂಬರ್ 2021, 20:20 IST