ಚೆನ್ನೈ: ನ್ಯೂಜಿಲೆಂಡ್ನ ಆರಂಭ ಆಟಗಾರರಾದ ಟಿಮ್ ಸೀಫರ್ಟ್ (ಔಟಾಗದೇ 89) ಮತ್ತು ಫಿನ್ ಅಲೆನ್ (ಔಟಾಗದೇ 84) ಅವರು ಯುಎಇ ಬೌಲರ್ಗಳ ಮೇಲೆ ಸವಾರಿ ನಡೆಸಿದರು. ಇವರಿಬ್ಬರ ನಡುವೆ 175 ರನ್ಗಳ ದಾಖಲೆ ಜೊತೆಯಾಟದ ನೆರವಿನಿಂದ ನ್ಯೂಜಿಲೆಂಡ್ ಟಿ20 ವಿಶ್ವಕಪ್ ‘ಡಿ’ ಗುಂಪಿನ ಪಂದ್ಯದಲ್ಲಿ ಮಂಗಳವಾರ ಯುಎಇ ತಂಡವನ್ನು 10 ವಿಕೆಟ್ಗಳಿಂದ ನಿರಾಯಾಸವಾಗಿ ಮಣಿಸಿತು.

ಯುಎಇ ತಂಡ 6 ವಿಕೆಟ್ಗೆ 173 ರನ್ಗಳ ಗೌರವಾರ್ಹ ಮೊತ್ತ ಗಳಿಸಿತು. ನಾಯಕ ಹಾಗೂ ಆರಂಭ ಆಟಗಾರ ಮುಹಮ್ಮದ್ ವಾಸೀಂ (ಔಟಾಗದೇ 66, 45 ಎಸೆತ) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಅಲಿಶಾನ್ ಶರಾಫು (55, 47 ಎಸೆತ) ಅವರು ಅರ್ಧ ಶತಕಗಳನ್ನು ಬಾರಿಸುವುದರೊಂದಿಗೆ ಅರಬ್ ಎಮಿರೇಟರ ತಂಡ ಟೂರ್ನಿಯ ಇತಿಹಾಸದಲ್ಲೇ ತನ್ನ ಅತ್ಯಧಿಕ ಮೊತ್ತ ದಾಖಲಿಸಿತು.

ಆದರೆ ಈ ಮೊತ್ತ ಮಿಚೆಲ್ ಸ್ಯಾಂಟ್ನರ್ ಪಡೆಗೆ ಸವಾಲೆನಿಸಲಿಲ್ಲ. ಫಿನ್ ಅಲೆನ್ ಮತ್ತು ಸೀಫರ್ಟ್ ಅವರು ಇನ್ನೂ 28 ಎಸೆತಗಳು ಉಳಿದಿರುವಂತೆ (15.2 ಓವರುಗಳಲ್ಲಿ) ಗೆಲುವನ್ನು ಪೂರೈಸಿದರು.

ಇದು ‘ಗ್ರೂಪ್ ಆಫ್ ಡೆತ್’ ಎನಿಸಿದ ‘ಡಿ’ ಗುಂಪಿನಲ್ಲಿ ನ್ಯೂಜಿಲೆಂಡ್ಗೆ ಎರಡನೇ ಗೆಲುವು. 2024ರ ವಿಶ್ವಕಪ್ನಲ್ಲಿ ಬೇಗನೇ ಹೊರಬಿದ್ದಿದ್ದ ನ್ಯೂಜಿಲೆಂಡ್ ಈ ಪ್ರದರ್ಶನದಿಂದ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿತು.

ಯುಎಇಯ ಎಡಗೈ ಸ್ಪಿನ್ನರ್ ಹೈದರ್ ಅಲಿ (4–0–27–0) ಮಾತ್ರ ಎದುರಾಳಿಗಳ ಅಬ್ಬರಕ್ಕೆ ಕಡಿವಾಣ ಹಾಕಿದರು. ಉಳಿದವರು ಓವರೊಂದಕ್ಕೆ 12+ ರನ್ ತೆತ್ತರು.

ಹೈದರ್ ಬೌಲಿಂಗ್ನಲ್ಲಿ (11ನೇ ಓವರ್) ಸೀಫರ್ಟ್ ರಿವರ್ಸ್ ಸ್ವೀಪ್ ಮೂಈಲಕ ಸಿಕ್ಸರ್ ಮತ್ತು ಬೌಂಡರಿ ಗಿಟ್ಟಿಸಿದ್ದು ಆಕರ್ಷಕವಾಗಿತ್ತು. ಸೀಫರ್ಟ್ 12 ಬೌಂಡರಿ, ಮೂರು ಸಿಕ್ಸರ್ ಬಾರಿಸಿದರೆ, ಅಲೆನ್ ಐದು ಬೌಂಡರಿಗಳ, ಅಷ್ಟೇ ಸಿಕ್ಸರ್ ಎತ್ತಿದರು.

ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಯುಇಎ ತಂಡ, ಆರ್ಯಾಂಶ್ ಶರ್ಮಾ ಅವರನ್ನು ಬೇಗನೇ ಕಳೆದುಕೊಂಡಿತು. ಅವರು ಜೇಕಬ್ ಡಫಿ ಬೌಲಿಂಗ್ನಲ್ಲಿ (ಎರಡನೇ ಓವರ್) ಶಾರ್ಟ್ಬಾಲ್ಗೆ ನಿರ್ಗಮಿಸಿದರು. ಪುಲ್ ಮಾಡುವ ಯತ್ನದಲ್ಲಿ ಲಾಂಗ್ಲೆಗ್ನಲ್ಲಿ ಕ್ಯಾಚಿತ್ತರು.

ವಾಸಿಂ ಮತ್ತು ಶರಾಫು ಎರಡನೇ ವಿಕೆಟ್ಗೆ 107 ರನ್ ಸೇರಿಸಿದರು. ಇಬ್ಬರಲ್ಲಿ ವಾಸಿಂ ಆಕ್ರಮಣಕಾರಿಯಾಗಿದ್ದು, ಡಫಿ ಮತ್ತು ರಚಿನ್ ರವೀಂದ್ರ ಬೌಲಿಂಗ್ನಲ್ಲಿ ಸಿಕ್ಸರ್ಗಳನ್ನು ಎತ್ತಿದರು. ಈ ಜೊತೆಯಾಟ ಎದುರಾಳಿಗಳ ವಿಶೇಷ ಪ್ರಯತ್ನದಿಂದ ಕೊನೆಗೊಂಡಿತು. ಸ್ಪಿನ್ನರ್ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಸ್ಲಾಗ್ ಸ್ವೀಪ್ ಯತ್ನದಲ್ಲಿ ಚಾಪ್ಮನ್ ಮಿಡ್ವಿಕೆಟ್ ಬೌಂಡರಿ ಬಳಿ ಚೆಂಡನ್ನು ಹಿಡಿದು ಮೇಲಕ್ಕೆಸೆದು ಸೀಮಾರೇಖೆ ದಾಟಿದರು. ಆದರೆ ಅವರು ಮೇಲೆಸೆದ ಚೆಂಡನ್ನು ಮಿಚೆಲ್ ಕ್ಯಾಚ್ ಹಿಡಿದರು.

ಯುಎಇ ಕೊನೆಯ ಐದು ಓವರುಗಳಲ್ಲಿ 51 ರನ್ ಗಳಿಸಿತು. ಕೊನೆಯ ಓವರಿನಲ್ಲಿ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರು:

ಯುಎಇ: 20 ಓವರುಗಳಲ್ಲಿ 6ಕ್ಕೆ 173 (ಮುಹಮ್ಮದ್ ವಾಸಿಂ ಔಟಾಗದೇ 66, ಅಲಿಶಾನ್ ಶರಾಫು 55, ಮಯಂಕ್ ಕುಮಾರ್ 21; ಮ್ಯಾಟ್ ಹೆನ್ರಿ 37ಕ್ಕೆ2)

ನ್ಯೂಜಿಲೆಂಡ್: ವಿಕೆಟ್ ನಷ್ಟವಿಲ್ಲದೇ 175 (ಟಿಮ್ ಸೀಫರ್ಟ್ ಔಟಾಗದೇ 89, ಫಿನ್ ಅಲೆನ್ ಔಟಾಗದೇ 84).

ಪಂದ್ಯದ ಆಟಗಾರ: ಟಿಮ್ ಸೀಫರ್ಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.