ಕಲ್ಯಾಣಿ (ಪಶ್ಚಿಮ ಬಂಗಾಳ): ಆತಿಥೇಯ ಬಂಗಾಳ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.

ಮಂಗಳವಾರ ಇಲ್ಲಿ ಮುಕ್ತಾಯವಾದ ಕ್ವಾರ್ಟರ್ಫೈನಲ್ನಲ್ಲಿ ಬಂಗಾಳ ತಂಡವು ಇನಿಂಗ್ಸ್ ಹಾಗೂ 90 ರನ್ಗಳಿಂದ ಆಂಧ್ರದ ಎದುರು ಜಯಿಸಿತು. ಆಂಧ್ರ ತಂಡವು ಮೊದಲ ಇನಿಂಗ್ಸ್ನಲ್ಲಿ 295 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಬಂಗಾಳ ತಂಡವು ಸುದೀಪ್ ಕುಮಾರ್ ಘರಾಮಿ ಅವರು ಗಳಿಸಿದ 299 ರನ್ಗಳ ಬಲದಿಂದ 629 ರನ್ ಗಳಿಸಿತ್ತು. ಎರಡನೇ ಇನಿಂಗ್ಸ್ನಲ್ಲಿ ಆಂಧ್ರ ತಂಡವು ಶಹಬಾಜ್ ಅಹಮದ್ (72ಕ್ಕೆ4) ಮತ್ತು ಸೂರಜ್ ಸಿಂಧು (42ಕ್ಕೆ2) ಅವರ ದಾಳಿಯ ಮುಂದೆ ಕುಸಿಯಿತು. ಆಂಧ್ರದ ನಿತೀಶ್ ಕುಮಾರ್ ರೆಡ್ಡಿ (90; 144ಎ) ಹತ್ತು ರನ್ಗಳಿಂದ ಶತಕ ತಪ್ಪಿಸಿಕೊಂಡರು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಆಂಧ್ರ: 88.4 ಓವರ್ಗಳಲ್ಲಿ 295. ಬಂಗಾಳ:199.1 ಓವರ್ಗಳಲ್ಲಿ 629.

ಎರಡನೇ ಇನಿಂಗ್ಸ್: ಆಂಧ್ರ: 72.2 ಓವರ್ಗಳಲ್ಲಿ 244 (ನಿತೀಶ್ ಕುಮಾರ್ ರೆಡ್ಡಿ 90, ರಿಕಿ ಭುಯ್ 30, ತ್ರಿಪುರಣಾ ವಿಜಯ್ 46, ನರಸಿಂಹ ರಾಜು 25, ಸೂರಜ್ ಸಿಂಧು ಜೈಸ್ವಾಲ್ 42ಕ್ಕೆ2, ಶಹಬಾಜ್ ಅಹಮದ್ 72ಕ್ಕೆ4)

ಫಲಿತಾಂಶ: ಬಂಗಾಳ ತಂಡಕ್ಕೆ ಇನಿಂಗ್ಸ್, 90 ರನ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.