ದಿನ ಭವಿಷ್ಯ: ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ
Published 9 ಫೆಬ್ರುವರಿ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲವು ವೈಯಕ್ತಿಕ ವಿಚಾರಗಳನ್ನು ಆಪ್ತ ಮಿತ್ರರೊಬ್ಬರಲ್ಲಿ ಹೇಳಿಕೊಳ್ಳ ಬೇಕಾದ ಸಂದರ್ಭ ಬರಲಿದೆ. ಗೃಹಸೌಖ್ಯ ಉತ್ತಮವಿದ್ದು ಸಾಮಾಜಿಕವಾಗಿ ಸ್ಥಾನಮಾನ ಪ್ರಾಪ್ತಿ. ಆದಾಯವು ಸಾಕಷ್ಟು ಕೂಡಿ ಬರಲಿದೆ.
09 ಫೆಬ್ರುವರಿ 2026, 18:30 IST
ವೃಷಭ
ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಬರುತ್ತದೆ. ಆಂಜನೇಯನ ಸೇವೆ ಮಾಡುವುದರಿಂದ ಗೊಂದಲ ನಿವಾರಣೆ. ತೆರಿಗೆ ಅಧಿಕಾರಿಗಳಿಗೆ ಉತ್ತಮವಾದ ಹೊಗಳಿಕೆಯು ಇರುವುದು.
09 ಫೆಬ್ರುವರಿ 2026, 18:30 IST
ಮಿಥುನ
ಮಾತು ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಇರುವ ಬಗ್ಗೆ ಗಮನ ನೀಡಿ. ಕದಡಿದ ಮನಸ್ಸಿಗೆ ಸಂಜೆಯ ವೇಳೆಗೆ ತಣ್ಣನೆಯ ವಾತಾವರಣ ಸಂತೋಷ ನೀಡುತ್ತದೆ. ಎಲ್ಲರೊಂದಿಗೂ ತಾಳ್ಮೆಯಿಂದ ವರ್ತಿಸಿ.
09 ಫೆಬ್ರುವರಿ 2026, 18:30 IST
ಕರ್ಕಾಟಕ
ಮಹಿಳೆಯರಿಗೆ ಋಣಾತ್ಮಕ ಚಿಂತನೆಯಿಂದ ಆರೋಗ್ಯ ಹಾಳಾಗಬಹುದು. ವಿದೇಶ ಪ್ರವಾಸದ ಯೋಜನೆಗಳು ಲಾಭ ನೀಡಲಿವೆ. ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಜಾಗ್ರತೆ ವಹಿಸಿ.
09 ಫೆಬ್ರುವರಿ 2026, 18:30 IST
ಸಿಂಹ
ಅಪರಿಚಿತ ವ್ಯಕ್ತಿಯೊಬ್ಬರು ಉತ್ತಮ ಉಪಾಯಗಳನ್ನು ಮತ್ತು ಅವರ ಅನುಭವಗಳನ್ನು ನೀಡುವುದಾಗಿ ಹೇಳಿ ದಾರಿ ತಪ್ಪಿಸುವ ಮಾರ್ಗಕ್ಕೆ ಎಳೆಯಲಿದ್ದಾರೆ. ಬುದ್ಧಿವಂತಿಕೆಯಿಂದ ಬದುಕ ಬೇಕಾದ ದಿನ.
09 ಫೆಬ್ರುವರಿ 2026, 18:30 IST
ಕನ್ಯಾ
ಬಿಡುವಿಲ್ಲದ ಕೆಲಸದಿಂದ ಬಳಲಿದ ವಿಶ್ರಾಂತಿಗೆ ಸೂಕ್ತ ಸಮಯ ಸಿಗುವುದು. ಯಾವುದೇ ಉದ್ವೇಗಕ್ಕೆ ಒಳಗಾಗದೆ ಹೊಸ ಸ್ಫೂರ್ತಿಯಿಂದ ಗೃಹಕಾರ್ಯ ನಿರ್ವಹಿಸುವಿರಿ. ಯೋಗಾಭ್ಯಾಸ ಮನಸ್ಸಿಗೆ ಹಿತವೆನಿಸುವುದು.
09 ಫೆಬ್ರುವರಿ 2026, 18:30 IST
ತುಲಾ
ತೆರೆಮರೆಯಲ್ಲಿ ನಡೆಸಿದ ಕೆಲಸಗಳಿಂದ ಅಧಿಕಾರವನ್ನು ಪಡೆದುಕೊಳ್ಳುವಿರಿ. ಆಫೀಸಿನ ಕೆಲಸಗಳನ್ನು ಮಾಡಿ ಮುಗಿಸುವಲ್ಲಿ ಆತುರ ತೋರುವುದು ಸರಿಯಲ್ಲ. ರಾಜಕೀಯದಲ್ಲಿನ ಬದಲಾವಣೆಯ ಲಾಭ ಪಡೆಯುವಿರಿ.
09 ಫೆಬ್ರುವರಿ 2026, 18:30 IST
ವೃಶ್ಚಿಕ
ಮಕ್ಕಳು ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸಿ ತಿಳಿ ಹೇಳಿ, ಈ ದಿನ ಮಕ್ಕಳನ್ನು ಶಿಕ್ಷಿಸಬೇಡಿ. ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪುನಃ ಪುನಃ ಪಾಠ ಕಲಿಯುವಂತಾಗಲಿದೆ.
09 ಫೆಬ್ರುವರಿ 2026, 18:30 IST
ಧನು
ಭಾವನಾ ಪ್ರಪಂಚ ಈ ದಿನ ನಿಮ್ಮನ್ನು ಮತ್ತೆ ಮತ್ತೆ ಸೆಳೆಯುತ್ತದೆ. ಮನೆ ಕಟ್ಟುವ ಸಲುವಾಗಿ ಹಣಕಾಸಿನ ವ್ಯವಸ್ಥೆಯಲ್ಲಿ ತಂದೆಗೆ ಸಹಕರಿಸುವಿರಿ. ಜನರ ಸಂಪರ್ಕ ಬೆಳೆಸಿಕೊಳ್ಳುವುದನ್ನು ಅಭ್ಯಾಸಮಾಡಿ.
09 ಫೆಬ್ರುವರಿ 2026, 18:30 IST
ಮಕರ
ಕೆಲಸ ಆರಂಭಿಸುವ ಮುನ್ನ ಆಮೂಲಾಗ್ರ ಚಿಂತನೆ ಅಗತ್ಯ ಎಂಬುದು ತಿಳಿದು ಬಂದಿದೆ. ವಿವಾಹದ ವಿಚಾರದಲ್ಲಿ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ. ಅಧಿಕ ಹೊತ್ತು ವಿಶ್ರಾಂತಿ ಬೇಕೆನಿಸಲಿದೆ.
09 ಫೆಬ್ರುವರಿ 2026, 18:30 IST
ಕುಂಭ
ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕಗಳು ಇರುವುದಿಲ್ಲ. ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ.
09 ಫೆಬ್ರುವರಿ 2026, 18:30 IST
ಮೀನ
ಗಡಿಬಿಡಿಯ ಸ್ವಭಾವದಿಂದಾಗಿ ಕಂಪನಿಯಲ್ಲಿ ಉಂಟಾದ ತಪ್ಪುಗಳಿಗೆ ನೇರ ಹೊಣೆಗಾರಿಕೆ ಇರುತ್ತದೆ. ಕಲಾವಿದರು ಅದರಲ್ಲೂ ಸಂಗೀತ ಕಲಾವಿದರಿಗೆ ಸಿಕ್ಕ ಅವಕಾಶವನ್ನು ತಿರಸ್ಕರಿಸಬೇಡಿ.
09 ಫೆಬ್ರುವರಿ 2026, 18:30 IST