ಮುಂಬೈ: ಕರ್ನಾಟಕ ತಂಡವು ಒಂಬತ್ತನೇ ಬಾರಿ ರಣಜಿ ಪ್ರಶಸ್ತಿ ಗೆಲ್ಲಲು ಇನ್ನು ಎರಡು ಗೆಲುವುಗಳಷ್ಟೇ ದೂರದಲ್ಲಿದೆ. ಕೆ.ಎಲ್.ರಾಹುಲ್ ಅವರ ಶತಕ ಮತ್ತು ರವಿಚಂದ್ರನ್ ಸ್ಮರಣ್ ಅವರ ಅಜೇಯ 83 ರನ್ಗಳ ನೆರವಿನಿಂದ ಕರ್ನಾಟಕ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಇನ್ನೂ ಒಂದು ದಿನ ಉಳಿದಿರುವಂತೆ ಮುಂಬೈ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು.

ದೇವದತ್ತ ಪಡಿಕ್ಕಲ್ ನೇತೃತ್ವದ ತಂಡ ಇದೇ 15 ರಿಂದ ಡೆಹ್ರಾಡೂನ್ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು ಎದುರಿಸಲಿದೆ.

ಟೆಸ್ಟ್ ತಂಡದ ಆರಂಭ ಆಟಗಾರ ಕೆ.ಎಲ್.ರಾಹುಲ್ ಅಮೋಘವಾಗಿ ಆಡಿ 130 ರನ್ (182 ಎಸೆತ, 4x14, 6x1) ಗಳಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು. ಅವರಿಗೆ ಎಡಗೈ ಬ್ಯಾಟರ್ ಸ್ಮರಣ್ ಸಮರ್ಥ ಬೆಂಬಲ ನೀಡಿದರು. 123 ಎಸೆತಗಳ ಅವರ ಅಜೇಯ ಇನಿಂಗ್ಸ್ನಲ್ಲಿ 11 ಬೌಂಡರಿಗಳಿದ್ದವು. ಇದರಲ್ಲಿ ಸೊಗಸಾದ ಪುಲ್ ಮತ್ತು ಡ್ರೈವ್ ಹೊಡೆತಗಳಿದ್ದವು.

ಕರ್ನಾಟಕ ತಂಡವು 2 ವಿಕೆಟ್ಗೆ 113 ರನ್ಗಳೊಡನೆ ಸೋಮವಾರ ನಾಲ್ಕನೇ ದಿನದಾಟ ಮುಂದುವರಿಸಿದಾಗ ಗೆಲುವಿಗೆ ಇನ್ನೂ 212 ರನ್ಗಳ ಅಗತ್ಯವಿತ್ತು. ಕರುಣ್ ನಾಯರ್ (13), ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಈ ವೇಳೆ ರಾಹುಲ್ ಜೊತೆಗೂಡಿದ ಸ್ಮರಣ್ ಅವರು ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದರು. ಕೇವಲ 159 ಎಸೆತಗಳಲ್ಲಿ ನಾಲ್ಕನೇ ವಿಕೆಟ್ಗೆ 147 ರನ್ ಸೇರಿಸಿ ಒತ್ತಡ ನಿವಾರಿಸಿದರು.

ಶಾರ್ದೂಲ್ ಠಾಕೂರ್ ಮತ್ತು ತುಷಾರ ದೇಶಪಾಂಡೆ ಅವರ ಶಾರ್ಟ್ಬಾಲ್ ಅಸ್ತ್ರ ಫಲ ನೀಡಲಿಲ್ಲ. ರಾಹುಲ್ಗೆ ಅದೃಷ್ಟದ ಬಲವೂ ಇತ್ತು. ಠಾಕೂರ್ ಬೌಲಿಂಗ್ನಲ್ಲಿ ಬ್ಯಾಟಿಗೆ ತಗುಲಿದ ಚೆಂಡು ಮೊದಲ ಸ್ಪಿಪ್ನತ್ತ ಹಾರಿತ್ತು. ಆದರೆ ಜೈಸ್ವಾಲ್ ಕ್ಯಾಚ್ ಹಿಡಿಯುವಷ್ಟರಲ್ಲಿ ಸಿದ್ದೇಶ್ ಲಾಡ್ ಎರಡನೇ ಸ್ಲಿಪ್ನಿಂದ ಅಡ್ಡಬಂದರು. ಆಗ ಅವರ ಮೊತ್ತ 75. ನಂತರ ಅವರು ಮೊದಲ ದರ್ಜೆ ಕ್ರಿಕೆಟ್ನಲ್ಲಿ 24ನೇ ಶತಕ ಪೂರೈಸಿದರು.

ಲಂಚ್ ವೇಳೆಗೆ ಕರ್ನಾಟಕ ಗೆಲುವಿಗೆ 60 ರನ್ಗಳು ಬೇಕಿದ್ದು ಏಳು ವಿಕೆಟ್ಗಳು ಉಳಿದಿದ್ದವು. ನಂತರ ಆತಂಕದ ಕ್ಷಣಗಳನ್ನು ಕಂಡಿತು. 7.2 ಓವರುಗಳ ಅಂತರದಲ್ಲಿ 3 ವಿಕೆಟ್ಗಳು ಬಿದ್ದವು. ರಾಹುಲ್ ಮೊದಲನೆಯರಾಗಿ ನಿರ್ಗಮಿಸಿದರು. ದೇಶಪಾಂಡೆ ಅವರ ಶಾರ್ಟ್ ಎಸೆತತವನ್ನು ಆಡಲು ಹೋಗಿ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಯಶಸ್ವಿ ಜೈಸ್ವಾಲ್ ಹಿಡಿದ ಉತ್ತಮ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಶ್ರೇಯಸ್ ಗೋಪಾಲ್ ಮತ್ತು ಕೃತಿಕ್ ಕೃಷ್ಣ ಕೂಡ ಹೆಚ್ಚುಹೊತ್ತು ನಿಲ್ಲಲಿಲ್ಲ.

ಸ್ಮರಣ್ ಜೊತೆಗೂಡಿದ ವಿದ್ಯಾಧರ ಪಾಟೀಲ್ (ಔಟಾಗದೇ 31, 30ಎ, 4x3, 6x1) ಟೀ ವಿರಾಮಕ್ಕೆ ಅರ್ಧ ಗಂಟೆಯಿರುವಾಗ ಗೆಲುವು ಪೂರೈಸಿದರು.

ಸ್ಕೋರುಗಳು:

ಮೊದಲ ಇನಿಂಗ್ಸ್: ಮುಂಬೈ: 120; ಕರ್ನಾಟಕ: 173

ಎರಡನೇ ಇನಿಂಗ್ಸ್: ಮುಂಬೈ: 98.3 ಓವರುಗಳಲ್ಲಿ 377; ಕರ್ನಾಟಕ: 73.4 ಓವರುಗಳಲ್ಲಿ 6 ವಿಕೆಟ್ಗೆ 325 (ಕೆ.ಎಲ್.ರಾಹುಲ್ 130, ಸ್ಮರಣ್ ರವಿಚಂದ್ರನ್ ಔಟಾಗದೇ 83, ವಿದ್ಯಾಧರ ಪಾಟೀಲ ಔಟಾಗದೇ 31; ಶಾರ್ದೂಲ್ ಠಾಕೂರ್ 55ಕ್ಕೆ2, ತುಷಾರ್ ದೇಶಪಾಂಡೆ 67ಕ್ಕೆ2, ತನುಷ್ ಕೋಟ್ಯಾನ್ 77ಕ್ಕೆ2).

ಪಂದ್ಯದ ಆಟಗಾರ: ಕೆ.ಎಲ್.ರಾಹುಲ್.

ಮತ್ತೆ ಗಮನ ಸೆಳೆದ ಸ್ಮರಣ್

‘ಮುಂಬೈನಂಥ ಪ್ರಬಲ ತಂಡವನ್ನು ಅದರದೇ ನೆಲದಲ್ಲಿ ಸೋಲಿಸುವುದು ಖುಷಿ ನೀಡುತ್ತದೆ. ಕ್ವಾರ್ಟರ್ಫೈನಲ್ ನಂಥ ಪಂದ್ಯದಲ್ಲಿ ಈ ಗೆಲುವು ದಕ್ಕಿರುವುದು ಹೆಚ್ಚು ಸಂತಸ ಮೂಡಿಸಿದೆ’ ಎಂದು ಕರ್ನಾಟಕದ ಗೆಲುವಿನಲ್ಲಿ ಅಮೂಲ್ಯ ಕಾಣಿಕೆ ನೀಡಿದ ಬ್ಯಾಟರ್ ರವಿಚಂದ್ರನ್ ಸ್ಮರಣ್ ಹೇಳಿದರು.2024–25ನೇ ಸಾಲಿನಲ್ಲಿ ರಣಜಿಗೆ ಪದಾರ್ಪಣೆ ಮಾಡಿದ ನಂತರ ರವಿಚಂದ್ರನ್ ಸ್ಮರಣ್ ತಮ್ಮ ಸ್ಥಿರ ಬ್ಯಾಟಿಂಗ್ನಿಂದ ಗಮನ ಸೆಳೆದಿದ್ದಾರೆ. ಈ ಋತುವಿನಲ್ಲಿ ಎರಡು ಶತಕ, ಮೂರು ಅರ್ಧಶತಕಗಳು ಸೇರಿದಂತೆ 86ರ ಸರಾಸರಿಯಲ್ಲಿ 688 ರನ್ ಗಳಿಸಿದ್ದಾರೆ.

ಮೊದಲ ಇನಿಂಗ್ಸ್ನಲ್ಲಿ ವಿಫಲರಾದ 22 ವರ್ಷ ವಯಸ್ಸಿನ ಆಟಗಾರ ಎರಡನೇ ಇನಿಂಗ್ಸ್ನಲ್ಲಿ ಅತ್ಯುಪಯುಕ್ತ ಅಜೇಯ 83 ರನ್ ಗಳಿಸಿದರು. ಶತಕ ಬಾರಿಸಿದ ಕೆ.ಎಲ್.ರಾಹುಲ್ ಅವರೊಡನೆ ಉಪಯುಕ್ತ ಜೊತೆಯಾಟದಲ್ಲೂ ಭಾಗಿಯಾದರು.

ಮೊದಲ ಬಾರಿ ಸೆಮಿಗೆ ಜಮ್ಮು–ಕಾಶ್ಮೀರ

ಇಂದೋರ್: ವೇಗದ ಬೌಲರ್ ಅಕಿಬ್ ನಬಿ ಅವರ ಜೀವನ ಶ್ರೇಷ್ಠ ಸಾಧನೆ (110 ರನ್ನಿಗೆ 12 ವಿಕೆಟ್) ಜಮ್ಮು ಮತ್ತು ಕಾಶ್ಮೀರ ತಂಡ 56 ರನ್ಗಳಿಂದ ಪ್ರಬಲ ಮಧ್ಯ ಪ್ರದೇಶ ತಂಡವನ್ನು ಸೋಲಿಸಿ ಸೆಮಿಫೈನಲ್ಗೆ ಮುನ್ನಡೆಯಿತು.

67 ವರ್ಷಗಳ ಹಿಂದೆ ರಣಜಿ ಆಡತೊಡಗಿದ ನಂತರ ಇದೇ ಮೊದಲ ಬಾರಿ ಜಮ್ಮು–ಕಾಶ್ಮೀರ ತಂಡ ಈ ಸಾಧನೆಗೆ ಪಾತ್ರವಾಗಿದೆ. 29 ವರ್ಷ ವಯಸ್ಸಿನ ನಬಿ ಮೊದಲ ಇನಿಂಗ್ಸ್ನಲ್ಲಿ 40 ರನ್ನಿಗೆ 7 ವಿಕೆಟ್ ಪಡೆದರೆ ಎರಡನೇ ಇನಿಂಗ್ಸ್ನಲ್ಲಿ 70 ರನ್ನಿಗೆ 5 ವಿಕೆಟ್ ಗಳಿಸಿದರು.

ಗೆಲುವಿಗೆ 291 ರನ್ ಗಳಿಸಬೇಕಿದ್ದ ಮಧ್ಯಪ್ರದೇಶ (ಭಾನುವಾರ: 5 ವಿಕೆಟ್ಗೆ 87) ಎರಡನೇ ಇನಿಂಗ್ಸ್ನಲ್ಲಿ 234 ರನ್ಗಳಿಗೆ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರು: ಜಮ್ಮು ಮತ್ತು ಕಾಶ್ಮೀರ: 194 ಮತ್ತು 70.3 ಓವರುಗಳಲ್ಲಿ 248; ಮಧ್ಯಪ್ರದೇಶ: 152 ಮತ್ತು 234 (ಶುಭಂ ಶರ್ಮಾ 32, ಸಾರಾಂಶ್ ಜೈನ್ 64; ಅಖಿಬ್ ನಬಿ 70ಕ್ಕೆ5, ಅಬಿದ್ ಮುಷ್ತಾಕ್ 49ಕ್ಕೆ3).

ಕಲ್ಯಾಣಿ (ಪಶ್ಚಿಮ ಬಂಗಾಳ): ಮೊದಲ ಇನಿಂಗ್ಸ್: ಆಂಧ್ರ: 295; ಬಂಗಾಳ: 629 (ಸುದೀಪ್ ಕುಮಾರ್ ಘರಾಮಿ 299, ಹಬೀಬ್ ಗಾಂಧಿ 95, ಮೊಹಮ್ಮದ್ ಶಮಿ 53; ಎರಡನೇ ಇನಿಂಗ್ಸ್: ಆಂಧ್ರ: 24 ಓವರುಗಳಲ್ಲಿ 3 ವಿಕೆಟ್ಗೆ 64.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.