ವಾರ ಭವಿಷ್ಯ: ವಾರ ಭವಿಷ್ಯ 8-2-2026 ರಿಂದ 14-2-2026ರವರೆಗೆ– ಮನಸ್ಸಿನಲ್ಲಿ ಆನಂದ
Published 7 ಫೆಬ್ರುವರಿ 2026, 18:35 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಹೊಂದಾಣಿಕೆಯಾಗುವ ಗುಣ ಇರುತ್ತದೆ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಭೂಮಿಯ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣಬಹುದು. ಆರೋಗ್ಯದ ಕುರಿತು ಎಚ್ಚರವಹಿಸಿ. ಮಕ್ಕಳಿಂದ ಅಂತಹ ಅನುಕೂಲವಿರುವುದಿಲ್ಲ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಬುದ್ಧಿವಂತಿಕೆಯಿಂದ ಹಳೆಯ ಸಾಲಗಳನ್ನು ತೀರಿಸಿಕೊಳ್ಳಬಹುದು. ಸಂಗಾತಿಯಿಂದ ನಿರೀಕ್ಷೆಗೆ ಮೀರಿದ ಸಹಕಾರ ದೊರೆಯುತ್ತದೆ. ವೃತ್ತಿಯ ಸ್ಥಳದಲ್ಲಿ ಅಲ್ಪಸ್ವಲ್ಪ ಸಮಸ್ಯೆಗಳಿರುತ್ತವೆ.
ವೃಷಭ
ಅಲಂಕಾರಿಕವಾಗಿ ಮಾತನಾಡಿ ಜನರನ್ನು ಸೆಳೆಯುವಿರಿ. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಬಂಧುಗಳಿಂದ ನಿರೀಕ್ಷಿತ ಸಹಕಾರ ದೊರೆಯುವುದಿಲ್ಲ. ಕುಟುಂಬದಲ್ಲಿ ಸ್ವಲ್ಪ ವಾಗ್ವಾದಗಳಾಗಬಹುದು. ಮಕ್ಕಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಶೀತಬಾಧೆ ನಿಮ್ಮನ್ನು ಕಾಡಬಹುದು. ಮಹಿಳೆಯರೊಡನೆ ಹಣಕಾಸಿನ ವ್ಯವಹಾರಗಳು ಬೇಡ. ಅನಿರೀಕ್ಷಿತ ಆದಾಯ ಮತ್ತು ಖರ್ಚುಗಳು ಬರಬಹುದು.
ಮಿಥುನ
ಆದಾಯವು ಕಡಿಮೆ ಇರುತ್ತದೆ. ಬಂಧುಗಳು ಈಗ ಸಹಕಾರ ಕೊಟ್ಟಂತೆ ನಟಿಸಿ ನುಣುಚಿಕೊಳ್ಳುವರು. ವ್ಯಾಪಾರದಲ್ಲಿ ಮುನ್ನಡೆ ಇರುತ್ತದೆ. ವಿದೇಶಿ ವ್ಯಾಪಾರ ವ್ಯವಹಾರಗಳಲ್ಲಿ ಸ್ಥಿರತೆಯ ಜೊತೆಗೆ ಲಾಭವನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ ಇರುತ್ತದೆ. ಸ್ವಲ್ಪ ತಲೆನೋವು ಬಾಧಿಸಬಹುದು. ಸಂಗಾತಿ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ ಇರುತ್ತದೆ.
ಕರ್ಕಾಟಕ
ವಾರದ ಆರಂಭ ಬಹಳ ಆಲಸಿತನದಿಂದ ಕೂಡಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಪಶು ಸಂಗೋಪನೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಎಲೆಕ್ಟ್ರಾನಿಕ್ ವಿಷಯ ಅಭ್ಯಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಪಿತ್ತ ವಿಕಾರ ಕೆಲವರನ್ನು ಕಾಡಬಹುದು. ಸಂಗಾತಿ ಕಡೆಯವರ ಸಹಕಾರದಿಂದ ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ. ಕೃಷಿಯಿಂದ ಆದಾಯ ಹೆಚ್ಚುತ್ತದೆ.
ಸಿಂಹ
ಒಂದು ರೀತಿಯ ನಿರಾಸೆ ನಿಮ್ಮನ್ನು ಆವರಿಸುತ್ತದೆ. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ವಿದ್ಯಾರ್ಥಿಗಳಿಗೆ ಈಗ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಪಾದಗಳಲ್ಲಿ ಗಾಯವಾಗುವ ಸಾಧ್ಯತೆಗಳಿವೆ. ವಿದೇಶದಲ್ಲಿರುವ ನಿಮ್ಮ ಸಂಗಾತಿಯನ್ನು ಈಗ ಹೋಗಿ ಸೇರಿಕೊಳ್ಳಬಹುದು. ಕಬ್ಬಿಣದ ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಏರಿಳಿತವನ್ನು ಕಾಣಬಹುದು. ಸಂಗಾತಿ ವ್ಯವಹಾರಗಳಲ್ಲಿ ಲಾಭ ಹೆಚ್ಚುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಲಾಭ ಹೆಚ್ಚುತ್ತದೆ.
ಕನ್ಯಾ
ಮನಸ್ಸು ಸಂಪೂರ್ಣ ವ್ಯವಹಾರದಲ್ಲಿ ಕೇಂದ್ರೀಕೃತವಾಗಿರುತ್ತದೆ. ಆದಾಯವು ಏರಿಕೆಯತ್ತ ಹೊರಳುತ್ತದೆ. ಬಂಧುಗಳಿಂದ ನಿಮ್ಮ ಕಾರ್ಯಗಳಿಗೆ ಸಹಕಾರ ದೊರೆಯುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಸಾಮರ್ಥ್ಯವನ್ನು ತೋರುವ ಅವಕಾಶವಿದೆ. ಮೂಳೆ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಆಹಾರ ಧಾನ್ಯಗಳನ್ನು ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ. ಆಭರಣ ಮಾರಾಟಗಾರರಿಗೆ ವ್ಯಾಪಾರದಲ್ಲಿ ಹಿನ್ನಡೆ ಇರುತ್ತದೆ. ವೃತ್ತಿಯಲ್ಲಿ ಏಳಿಗೆ ಇರುತ್ತದೆ.
ತುಲಾ
ಮನಸ್ಸಿನಲ್ಲಿ ಆನಂದವಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಒಡಹುಟ್ಟಿದವರ ಸಹಾಯ ಪಡೆಯಲು ಸಾಕಷ್ಟು ಪ್ರಯತ್ನ ಪಡುವಿರಿ. ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆಯುವುದು ಕಷ್ಟ. ಸಂಬಂಧಿಕರ ಜತೆಗಿನ ಹಣದ ವ್ಯವಹಾರಗಳಿಂದ ನಷ್ಟವಾಗಬಹುದು. ಸಂಗಾತಿಗೆ ಆಸ್ತಿ ದೊರಕುವ ಯೋಗವಿದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬಹುದು. ಶಾಲೆಗಳನ್ನು ನಡೆಸುವವರಿಗೆ ತೊಂದರೆಗಳು ಎದುರಾಗಬಹುದು.
ವೃಶ್ಚಿಕ
ನಿಮ್ಮಲ್ಲಿ ಭಯ ಇರುತ್ತದೆ. ಆದಾಯವು ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ಕೃಷಿಭೂಮಿ ಖರೀದಿ ಯೋಗವಿದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಸ್ತ್ರೀರೋಗ ತಜ್ಞರಿಗೆ ಆದಾಯವು ಹೆಚ್ಚುತ್ತದೆ. ಈಗ ಸಂಗಾತಿಯ ಸಹಕಾರದಿಂದ ನಿಮ್ಮ ಆದಾಯ ಹೆಚ್ಚುತ್ತದೆ. ಹೈನುಗಾರಿಕೆ ಕ್ಷೇತ್ರದಲ್ಲಿರುವವರಿಗೆ ಅನಿರೀಕ್ಷಿತ ಲಾಭವಿರುತ್ತದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ವೃತ್ತಿಯಲ್ಲಿ ಸ್ಥಾನಮಾನ ಹೆಚ್ಚುವ ಸಾಧ್ಯತೆಗಳಿವೆ.
ಧನು
ಆದಾಯ ಮಧ್ಯಮಗತಿಯಲ್ಲಿರುತ್ತದೆ. ಸರ್ಕಾರಿ ಅನುದಾನಗಳು ದೊರೆಯುತ್ತವೆ. ವಿದೇಶದಲ್ಲಿನ ನಿಮ್ಮ ಸ್ನೇಹಿತರು ನಿಮಗೆ ಸಹಕಾರ ನೀಡುವವರು. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಬೇಡಿಕೆ ಹೆಚ್ಚಾಗಿ ಲಾಭವು ಬರುತ್ತದೆ. ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ. ಒಡಹುಟ್ಟಿದವರ ಜೊತೆಯಲ್ಲಿ ಮಾಡಿದ ಹಣಕಾಸಿನ ವ್ಯವಹಾರಗಳು ನಷ್ಟಕ್ಕೆ ಕಾರಣವಾಗುತ್ತವೆ. ಸಂಗಾತಿಯ ಜತೆ ಮಾಡಿದ ವ್ಯವಹಾರಗಳಲ್ಲಿ ನಿಮಗೆ ಲಾಭವಿರುತ್ತದೆ. ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು.
ಮಕರ
ಆತ್ಮವಿಶ್ವಾಸ ಹೆಚ್ಚಾಗಿ ಕೆಲಸ ಮಾಡಲು ಮುನ್ನುಗ್ಗುವಿರಿ. ಆದಾಯವು ನಿರೀಕ್ಷಿತ ಮಟ್ಟದಲ್ಲಿರುತ್ತದೆ. ಶತ್ರುಗಳನ್ನು ನಿಗ್ರಹಿಸುವ ಯುಕ್ತಿ ನಿಮಗೆ ತಿಳಿಯುತ್ತದೆ. ಸರ್ಕಾರಕ್ಕೆ ಜಮೀನು ಒದಗಿಸುವವರ ಆದಾಯ ಹೆಚ್ಚುತ್ತದೆ. ಲಲಿತ ಕಲೆಗಳನ್ನು ಅಭ್ಯಾಸ ಮಾಡುತ್ತಿರುವವರಿಗೆ ಉತ್ತಮ ಪ್ರಗತಿ ಇರುತ್ತದೆ. ವಾಯು ಪ್ರಕೋಪ ಕೆಲವರನ್ನು ಕಾಡಬಹುದು. ವೃತ್ತಿಯಲ್ಲಿದ್ದ ಜಂಜಾಟಗಳು ನಿವಾರಣೆಯಾಗುತ್ತವೆ. ಮಹಿಳೆಯರ ಸಿದ್ಧ ಉಡುಪುಗಳನ್ನು ಮಾರುವವರ ಆದಾಯ ಹೆಚ್ಚುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ನಿರೀಕ್ಷಿತ ವ್ಯಾಪಾರವಿರುವುದಿಲ್ಲ.
ಕುಂಭ
ಆದಾಯವು ಕಡಿಮೆ ಇರುತ್ತದೆ. ಇತರ ಮೂಲಗಳಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಹಿರಿಯರು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯುವರು. ಒಡಹುಟ್ಟಿದವರ ಸಹಕಾರ ಸಿಗುವುದು ಕಡಿಮೆ. ನಾಟ್ಯ ಪ್ರವೀಣರಿಗೆ ಹೆಚ್ಚು ಅವಕಾಶಗಳು ದೊರೆತು ಆದಾಯವು ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸನ್ನು ಪಡೆಯುವ ಯೋಗವಿದೆ. ಶೀತ ಸಂಬಂಧಿತ ದೋಷಗಳು ಕೆಲವರನ್ನು ಕಾಡಬಹುದು.
ಮೀನ
ಹೆಚ್ಚು ಶ್ರಮ ಪಡಬೇಕಾದ ಅನಿವಾರ್ಯತೆ ನಿಮ್ಮಲ್ಲಿ ಇರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಒಡಹುಟ್ಟಿದವರು ನಿಮಗೆ ಸಹಕಾರ ನೀಡಲು ನಿರಾಕರಿಸಬಹುದು. ವ್ಯವಹಾರ ಅಭಿವೃದ್ಧಿ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಹೆಚ್ಚು ಶ್ರಮಪಡಬೇಕಾದ ಅನಿವಾರ್ಯತೆ ಇರುತ್ತದೆ. ಬೆನ್ನುನೋವು ಕೆಲವರನ್ನು ಕಾಡಬಹುದು. ಕೃಷಿಯಿಂದ ಹೆಚ್ಚಿನ ಲಾಭವಿರುತ್ತದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಸಹಾಯದಿಂದ ಆದಾಯ ಹೆಚ್ಚುತ್ತದೆ.