ಮುಂಬೈ: ನಾಯಕ ಸೂರ್ಯ ಕುಮಾರ್ ಯಾದವ್ ಅವರ ಏಕಾಂಗಿ ಹೋರಾಟದ ಬಲದಿಂದ ಭಾರತ ತಂಡವು ಶನಿವಾರ ಆರಂಭವಾದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಎದುರಿನ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಅಮೆರಿಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶಾಡ್ಲಿ ವ್ಯಾನ್ ಶಾಲ್ವಿಕ್ (25ಕ್ಕೆ4) ಅವರ ಅಮೋಘ ಬೌಲಿಂಗ್ನಿಂದಾಗಿ ಆತಿಥೇಯ ತಂಡವು ಆರಂಭದಲ್ಲಿಯೇ ಆಘಾತ ಅನುಭವಿ ಸಿತು. 13 ಓವರ್ಗಳಲ್ಲಿ 77 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡಿತು.

ಆದರೆ ಆತ್ಮವಿಶ್ವಾಸಭರಿತ ಆಟವಾಡಿದ ಸೂರ್ಯ 49 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿದರು. ಅದರಲ್ಲಿ 10 ಬೌಂಡರಿ, ನಾಲ್ಕು ಸಿಕ್ಸರ್ಗಳಿದ್ದವು. ಅದರಲ್ಲೂ ಇನಿಂಗ್ಸ್ನ ಕೊನೆಯ ಐದು ಓವರ್ಗಳಲ್ಲಿ 66 ರನ್ಗಳು ಹರಿದುಬಂದವು. ಸೂರ್ಯ ತಮ್ಮ ತವರಿನ ಅಂಗಳದಲ್ಲಿ ಮಿಂಚಿದರು. ಅದರಿಂದಾಗಿ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 161 ರನ್ ಗಳಿಸಿತು. ಅದಕ್ಕುತ್ತರವಾಗಿ ಅಮೆರಿಕ ತಂಡಕ್ಕೆ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 132 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಭಾರತ 29 ರನ್ಗಳಿಂದ ಗೆದ್ದಿತು.

ಅಮೆರಿಕದ ಬೌಲರ್ಗಳು ಶಿಸ್ತಿನ ದಾಳಿ ನಡೆಸಿದರು. ಬ್ಯಾಟರ್ಗಳಿಗೆ ಹೆಚ್ಚಿನ ಅವಕಾಶ ನೀಡಲಿಲ್ಲ. ಇನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್ (20 ರನ್) ಮೊದಲ ಓವರ್ನಲ್ಲಿ ನಾಲ್ಕು ಎಸೆತಗಳಲ್ಲಿ ರನ್ ಗಳಿಸಲಿಲ್ಲ. ಐದನೇ ಎಸೆತವನ್ನು ಸಿಕ್ಸರ್ ಎತ್ತಿದರು. ಆದರೆ ಅಲಿ ಖಾನ್ ಹಾಕಿದ ಎರಡನೇ ಓವರ್ನ ಮೊದಲ ಎಸೆತದಲ್ಲಿಯೇ ಅಭಿಷೇಕ್ ಶರ್ಮಾ ಸಿಕ್ಸರ್ ಹೊಡೆಯುವ ಯತ್ನದಲ್ಲಿ ಡೀಪ್ ಕವರ್ನಲ್ಲಿದ್ದ ಸಂಜಯ್ ಕೃಷ್ಣಮೂರ್ತಿಗೆ ಸುಲಭದ ಕ್ಯಾಚ್ ಆದರು. ವಾಂಖೆಡೆ ಕ್ರೀಡಾಂಗಣದ ಗ್ಯಾಲರಿ ಸ್ತಬ್ಧವಾಯಿತು.

ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್ ಅವರು ಯೋಜನಾಬದ್ಧವಾಗಿ ಫೀಲ್ಡಿಂಗ್ ನಿಯೋಜನೆ ಮಾಡಿದರು. ಅದಕ್ಕೆ ತಕ್ಕಂತೆ ಬೌಲರ್ಗಳೂ ಎಸೆತಗಳನ್ನು ಪ್ರಯೋಗಿಸಿದರು.

ಆದರೆ ಕ್ರೀಸ್ಗೆ ಬಂದ ತಿಲಕ್ ವರ್ಮಾ (25 ರನ್) ಅವರು ಬೌಲರ್ಗಳಿಗೆ ಬಿಸಿ ಮುಟ್ಟಿಸಿದರು. ಸೌರಭ್ ನೇತ್ರಾವಳ್ಕರ್ ಅವರ ಎಸೆತವನ್ನು ಬೌಂಡರಿ ದಾಟಿಸಿದರು. ಶಾಡ್ಲಿ ವ್ಯಾನ್ ಅವರ ಒಂದೇ ಓವರ್ನಲ್ಲಿ ಮೂರು ಬೌಂಡರಿ ಗಳಿಸಿದರು. ಇದರಿಂದಾಗಿ ಭಾರತವು ತನ್ನ ನೈಜ ಲಯಕ್ಕೆ ಮರಳಿದಂತೆ ಭಾಸವಾಗಿತ್ತು. ಆದರೆ ಇನ್ನೊಂದೆಡೆ ಇಶಾನ್ ಅವರು ತಮ್ಮ ಸಿಕ್ಕ ಜೀವದಾನ ವನ್ನೂ ಬಳಸಿಕೊಳ್ಳಲು ಸಫಲರಾಗಲಿಲ್ಲ. ಇಶಾನ್ ಮತ್ತು ತಿಲಕ್ ಅವರಿಬ್ಬರ ವಿಕೆಟ್ ಕೂಡ ಶಾಡ್ಲಿ ಬುಟ್ಟಿ ಸೇರಿದವು. ಶಾಡ್ಲಿ ಎಸೆತದ ಪುಟಿತವನ್ನು ಅಂದಾಜಿಸುವಲ್ಲಿ ವಿಫಲರಾದ ಶಿವಂ ದುಬೆ ‘ಗೋಲ್ಡನ್ ಡಕ್’ ಆದರು.

ರಿಂಕು ಸಿಂಗ್ (5) ಮತ್ತು ಹಾರ್ದಿಕ್ ಪಾಂಡ್ಯ (14; 11ಎ) ಅವರು ಕೂಡ ಅವಸರದ ಹೊಡೆತಗಳಿಗೆ ದಂಡ ತೆತ್ತರು.

ಇದೆಲ್ಲದರ ನಡುವೆ ಸೂರ್ಯ ಮಾತ್ರ ಬೆಳಗುತ್ತಲೇ ಇದ್ದರು. 15 ಓವರ್ಗಳು ಮುಗಿದಾಗಲೂ ತಂಡವು 94 ರನ್ ಮಾತ್ರ ಗಳಿಸಿತ್ತು. ಆದರೆ ಈ ಹಂತದಿಂದ ತಮ್ಮ ಆಟದ ವೇಗ ಹೆಚ್ಚಿಸಿದ ಸೂರ್ಯ ರನ್ ಸೂರೆ ಮಾಡಿದರು.

ಮೊಹಮ್ಮದ್ ಸಿರಾಜ್ (29ಕ್ಕೆ3), ಅರ್ಷದೀಪ್ ಸಿಂಗ್ (18ಕ್ಕೆ2) ಮತ್ತು ಅಕ್ಷರ್ ಪಟೇಲ್ (24ಕ್ಕೆ2) ಅವರ ಬೌಲಿಂಗ್ ಬಲದಿಂದ ಭಾರತ ತಂಡವು ಜಯಿಸಲು ಸಾಧ್ಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.