ಚೆನ್ನೈ: ಮಿಚೆಲ್ ಸ್ಯಾಂಟನರ್ ನಾಯಕತ್ವದ ನ್ಯೂಜಿಲೆಂಡ್ ತಂಡವು ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಡಿ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಆಡಲಿದೆ.

ನವೀಕೃತ ಹುಲ್ಲುಹಾಸು ಮತ್ತು ಪಿಚ್ ಸಿದ್ಧಗೊಂಡಿರುವ ಕ್ರೀಡಾಂಗಣದಲ್ಲಿ ಆಲ್ರೌಂಡ್ ಸಾಮರ್ಥ್ಯ ಮೆರೆಯುವ ಛಲದಲ್ಲಿ ನ್ಯೂಜಿಲೆಂಡ್ ಇದೆ. ಈಚೆಗೆ ಭಾರತ ಎದುರು ಐದು ಪಂದ್ಯಗಳ ಸರಣಿಯಲ್ಲಿ ಕಿವೀಸ್ ಬಳಗವು 1–4ರಿಂದ ಸೋತಿತ್ತು. ಆದರೆ ಸುಮಾರು ಒಂದು ತಿಂಗಳಿನಿಂದ ಭಾರತದಲ್ಲಿ ಇರುವ ನ್ಯೂಜಿಲೆಂಡ್ ಆಟಗಾರರು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಇದರಿಂದಾಗಿ ಉತ್ತಮವಾಗಿ ಆಡುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಡೆವೊನ್ ಕಾನ್ವೆ, ಫಿನ್ ಅಲೆನ್, ಮಿಚೆಲ್ ಬ್ರೇಸ್ವೆಲ್, ಗ್ಲೆನ್ ಫಿಲಿಪ್ಸ್ ಹಾಗೂ ಡ್ಯಾರಿಲ್ ಮಿಚೆಲ್ ಅವರು ‘ವೈಟ್ ಬಾಲ್’ ಕ್ರಿಕೆಟ್ನ ಅಪ್ರತಿಮ ಆಟಗಾರರಾಗಿದ್ದಾರೆ. ಅವರನ್ನು ನಿಯಂತ್ರಿಸುವುದೇ ಅಫ್ಗನ್ ಪಡೆಗೆ ಪ್ರಮುಖ ಸವಾಲು.

ಸ್ಪಿನ್ನರ್ ರಶೀದ್ ಖಾನ್ ನಾಯಕತ್ವದ ಅಫ್ಗನ್ ತಂಡವೂ ಸಮತೋಲನವಾಗಿದೆ. ಈ ಹಿಂದಿನ ಟೂರ್ನಿಗಳಲ್ಲಿ ಬಲಾಢ್ಯ ತಂಡಗಳಿಗೆ ಕಠಿಣ ಪೈಪೋಟಿಯೊಡ್ಡಿದ ಅನುಭವ ಅಫ್ಗಾನಿಸ್ತಾನಕ್ಕೆ ಇದೆ. ಫಜಲ್ ಹಕ್ ಫಾರೂಖಿ, ನೂರ್ ಅಹಮದ್, ಅಬ್ದುಲ್ಲಾ ಅಹಮದ್ಝೈ, ಶಹೀದುಲ್ಲಾ ಕಮಲ್, ಮೊಹಮ್ಮದ್ ನಬಿ, ಗುಲ್ಬದೀನ್ ನೈಬ್ ಹಾಗೂ ಮುಜೀಬ್ ಉರ್ ರೆಹಮಾನ್ ಅವರು ತಮ್ಮ ತಂಡಕ್ಕೆ ಉತ್ತಮ ಫಲಿತಾಂಶ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಇಂದಿನ ಪಂದ್ಯಗಳು

ನ್ಯೂಜಿಲೆಂಡ್–ಅಫ್ಗಾನಿಸ್ತಾನ (ಬೆಳಿಗ್ಗೆ 11ರಿಂದ)

ಇಂಗ್ಲೆಂಡ್–ನೇಪಾಳ (ಮಧ್ಯಾಹ್ನ 3ರಿಂದ)

ಶ್ರೀಲಂಕಾ–ಐರ್ಲೆಂಡ್ (ರಾತ್ರಿ 7ರಿಂದ)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.