ಶಿವಮೊಗ್ಗ: ಮನುಷ್ಯರು ಅನಾರೋಗ್ಯಕ್ಕೆ ಒಳಗಾದರೆ ಕಾಯಿಲೆಯ ಹಿನ್ನೆಲೆ, ಮೂಲ, ಹಂತ ಮತ್ತಿತರ ವಿವರ ತಿಳಿಯಲು ರಕ್ತ, ಮೂತ್ರ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ ಪರಿಶೀಲನೆಗೆ ಒಳಪಡಿಸುವುದು ಸಾಮಾನ್ಯ. ಕೆಲವು ದಿನಗಳಿಂದ ಅಸ್ವಸ್ಥವಾಗಿರುವ ತ್ಯಾವರೆ ಕೊಪ್ಪದ ಹುಲಿ–ಸಿಂಹ ಧಾಮದಲ್ಲಿನ ಚಿರತೆಗೂ ಇಲ್ಲಿನ ನಂಜಪ್ಪ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಸ್ಕ್ಯಾನಿಂಗ್ ಮಾಡಲಾಗಿದೆ.

ಪಾರ್ಶ್ವವಾಯುವಿಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಗಂಡು ಚಿರತೆ ‘ಭದ್ರ’ನಿಗೆ (15) ಚಿಕಿತ್ಸೆಯ ಭಾಗವಾಗಿ ಎಂಆರ್ಐ ಸ್ಕ್ಯಾನ್ ಮಾಡಲಾಯಿತು.

ಭದ್ರ ಕೆಲ ದಿನಗಳಿಂದ ಅಸ್ವಸ್ಥವಾಗಿ ಓಡಾಡಲು ಆಗದಂತಾಗಿತ್ತು. ‘ದಿಢೀರ್ ಅಸ್ವಸ್ಥತೆಗೆ ಕಾರಣವೇನು ಎಂಬುದನ್ನು ಅರಿಯುವುದು ಅಗತ್ಯವಾಗಿತ್ತು. ಬೆನ್ನುಹುರಿಗೆ ಪೆಟ್ಟು ಬಿದ್ದಿದಿಯೇ? ಅಥವಾ ಸೋಂಕಿಗೆ ತುತ್ತಾಗಿ ಅನಾರೋಗ್ಯಕ್ಕೆ ಒಳಗಾಗಿದೆಯೇ?’ ಎಂದು ತಿಳಿದುಕೊಳ್ಳಲು ವೈದ್ಯರು ಎಂಆರ್ಐ ಸ್ಕ್ಯಾನ್ಗೆ ಶಿಫಾರಸು ಮಾಡಿದ್ದರು.

ಪ್ರಾಣಿಗಳಿಗೆ ಇರುವ ಪ್ರತ್ಯೇಕ ಚಿಕಿತ್ಸಾಲಯಗಳಲ್ಲಿ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದ್ದರಿಂದ ಚಿರತೆಯ ಎಂಆರ್ಐ ಸ್ಕ್ಯಾನ್ ಮಾಡಲು ನಂಜಪ್ಪ ಆಸ್ಪತ್ರೆಯ ಆಡಳಿತ ಮಂಡಳಿ ಮುಖ್ಯಸ್ಥರಿಗೆ ಕೋರಿದಾಗ ಅವರು ಒಪ್ಪಿಗೆ ಸೂಚಿಸಿದರು. ಹಗಲು ಹೊತ್ತು ರೋಗಿಗಳು, ಆಸ್ಪತ್ರೆಯ ಸಿಬ್ಬಂದಿ ಹೆದರಿಕೊಳ್ಳಬಹುದು ಅಥವಾ ಚಿರತೆ ನೋಡಲು ನೂಕುನುಗ್ಗಲಾಗಬಹುದು ಎಂಬ ಕಾರಣಕ್ಕೆ ತಡರಾತ್ರಿ ಈ ಚಿರತೆಯನ್ನು ಆಸ್ಪತ್ರೆಗೆ ಕರೆತರಲು ಮೃಗಾಲಯ ಪ್ರಾಧಿಕಾರ ನಿರ್ಧರಿಸಿತ್ತು ಎಂದು ಡಾ.ಮುರಳಿಮೋಹನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅದರಂತೆ ಹುಲಿ- ಸಿಂಹ ಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ. ಅಮರಾಕ್ಷರ ಹಾಗೂ ವನ್ಯಜೀವಿ ವೈದ್ಯ ಮುರಳಿಮೋಹನ್ ನೇತೃತ್ವದ ತಂಡ ಚಿರತೆಯನ್ನು ಆಸ್ಪತ್ರೆಗೆ ತಂದಿತ್ತು.

ಚಿರತೆಗೆ ಅರಿವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ನಂತರ ಎಂಆರ್ಐ ಸ್ಕ್ಯಾನ್ ಯಂತ್ರದೊಳಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ತಜ್ಞರು, ಸಿಬ್ಬಂದಿ ಹೀಗೊಂದು ವಿಶಿಷ್ಟ ಪ್ರಯೋಗಕ್ಕೆ ಸಹಕರಿಸಿದರು ಎಂದರು.

‘ಚಿರತೆಯನ್ನು ಸ್ಕ್ಯಾನಿಂಗ್ಗೆ ಒಳಪಡಿಸಲಾಯಿತು. ವರದಿ ಬಂದಿದ್ದು, ಅದಕ್ಕೆ ವಯೋಸಹಜವಾಗಿಯೇ ಪಾರ್ಶ್ವವಾಯು ತಗುಲಿರು ವುದು ಗೊತ್ತಾಗಿದೆ’ ಎಂದರು.

ಚಿರತೆಯ ಆರೋಗ್ಯ ಸ್ಥಿರವಾಗಿದ್ದು, ಹುಲಿ- ಸಿಂಹಧಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದು ವರಿಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಚಿರತೆಗೆ ಎಂಆರ್ಐ ಸ್ಕ್ಯಾನ್ ಮಾಡಲು ಬೇರೆ ಆಸ್ಪತ್ರೆಯವರು ಒಪ್ಪಲಿಲ್ಲ. ಕೊನೆಗೆ ನಂಜಪ್ಪ ಆಸ್ಪತ್ರೆ ಯವರನ್ನು ಸಂಪರ್ಕಿಸಿದೆವು. ಸ್ಕ್ಯಾನ್ ಮಾಡಿದ್ದಕ್ಕೆ ಆಸ್ಪತ್ರೆಯ ಮುಖ್ಯಸ್ಥರು ಶುಲ್ಕ ಕೂಡ ನಿರಾಕರಿಸಿದರು’ ಎಂದು ಹುಲಿ-ಸಿಂಹ ಧಾಮದ ಸಿಬ್ಬಂದಿಯೊಬ್ಬರು ತಿಳಿಸಿದರು.

ಮುಕೇಶ್ ಅಂಬಾನಿ ಅವರ ಪುತ್ರನ ಒಡೆತನದ ಖಾಸಗಿ ಮೃಗಾಲಯದಲ್ಲಿ ಪ್ರಾಣಿಗಳಿಗೆ ಎಂಆರ್ಐ ಸ್ಕ್ಯಾನಿಂಗ್ ನಂತಹ ಅತ್ಯಾಧುನಿಕ ಸೌಲಭ್ಯಗಳಿವೆ. ‘ಭದ್ರ’ ಚಿರತೆಯು ಮನುಷ್ಯರ ಚಿಕಿತ್ಸೆಗಾಗಿ ಇರುವ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ಗೆ ಒಳಗಾದ ಮೊದಲ ವನ್ಯಜೀವಿ ಎಂದು ಅವರು ಹೇಳಿದರು.

ಚಿರತೆಯ ಎಂಆರ್ಐ ಸ್ಕ್ಯಾನಿಂಗ್ಗಾಗಿ ಮೃಗಾಲಯದ ವೈದ್ಯರು ಕೇಳುತ್ತಿದ್ದಂತೆಯೇ ಒಪ್ಪಿಕೊಂಡೆವು. ತಡರಾತ್ರಿಯ ಸಮಯವನ್ನು ಮೃಗಾಲಯದ ಅಧಿಕಾರಿಗಳೇ ನಿರ್ಧರಿಸಿದರು. ಅದು ಸುರಕ್ಷಿತ ಅವಧಿಯಾಗಿದ್ದರಿಂದ ರೋಗಿಗಳಿಗೂ ಗೊತ್ತಾಗಲಿಲ್ಲ.
– ಡಾ.ಅವಿನಾಶ್, ಮುಖ್ಯಸ್ಥರು, ನಂಜಪ್ಪ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.