2024ರ ಟಿ20 ವಿಶ್ವಕಪ್ನ ಆ ಪಂದ್ಯವನ್ನು ಮರೆಯುವುದು ಕಷ್ಟ. ಜಂಟಿ ಆತಿಥೇಯ ಅಮೆರಿಕ ತಂಡವು, ಸೂಪರ್ ಓವರ್ವರೆಗೆ ಬೆಳೆದ ಪಂದ್ಯದಲ್ಲಿ ಪ್ರಬಲ ಪಾಕಿಸ್ತಾನಕ್ಕೆ ಆಘಾತ ನೀಡಿತ್ತು. ಆ ಗುಂಪು ಹಂತದ ಪಂದ್ಯದಲ್ಲಿ ಭಾರತೀಯ ಮೂಲದ ಆಟಗಾರರಾದ– ಸ್ಪಿನ್ನರ್ ನೋಷ್ತುಷ್ ಕೆಂಜಿಗೆ (30ಕ್ಕೆ3), ವೇಗದ ಬೌಲರ್ ಸೌರಭ್ ನೇತ್ರಾವಲ್ಕರ್ (18ಕ್ಕೆ2), ನಾಯಕ–ವಿಕೆಟ್ ಕೀಪರ್ ಮೊನಾಂಕ್ ಪಟೇಲ್ (50, 38ಎ) ಅವರು ಅನುಭವಿ ಪಾಕ್ ಎದುರು ಕೌಶಲ ತೋರಿದ್ದರು. ಆ ವಿಶ್ವಕಪ್ನಲ್ಲಿ ಇತರ ತಂಡಗಳಲ್ಲೂ ಭಾರತ ಮೂಲದ ಆಟಗಾರರು ಇದ್ದರು.

ಆಟದಲ್ಲಿ ಹೆಚ್ಚಿನ ಅವಕಾಶ, ಉದ್ಯೋಗ ಅರಸಿ ಹೊರದೇಶಗಳಲ್ಲಿ ಇರುವ ಭಾರತ ಮೂಲದ ಕ್ರಿಕೆಟಿಗರು ಆಯಾ ದೇಶಗಳ ತಂಡಗಳಲ್ಲಿ ಆಡುವ ಪರಿಪಾಟಕ್ಕೆ ಇತಿಹಾಸವೇ ಇದೆ. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ 20 ತಂಡಗಳು ಕಣದಲ್ಲಿವೆ. ಭಾರತೀಯ ಮೂಲದ ಸುಮಾರು 40 ಕ್ರಿಕೆಟಿಗರು ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಕೆನಡಾ ತಂಡದಲ್ಲಿ 11 ಮಂದಿ ಭಾರತ ಮೂಲದ ಆಟಗಾರರು ಇದ್ದಾರೆ. ಅಮೆರಿಕ ತಂಡದಲ್ಲಿ 9 ಮಂದಿ, ಒಮಾನ್ ಮತ್ತು ಯುಎಇ ತಂಡದಲ್ಲಿ ತಲಾ ಏಳು ಭಾರತೀಯ ಮೂಲದ ಆಟಗಾರರಿದ್ದಾರೆ.

19 ವರ್ಷದೊಳಗಿನವರ ಕ್ರಿಕೆಟ್ನಲ್ಲಿ ಭಾರತ ತಂಡಕ್ಕೆ ಆಡಿದ್ದ ಎಡಗೈ ವೇಗಿ ಸೌರಭ್ ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. 34 ವರ್ಷದ ಸೌರಭ್ 2024ರ ಆವೃತ್ತಿಯಲ್ಲಿ ಅಮೆರಿಕ ತಂಡ ಸೂಪರ್ 8 ಹಂತ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ತಂಡದ ನಾಯಕರಾಗಿರುವ ಸೂರ್ಯಕುಮಾರ್ ಅವರ ಜೊತೆಗೇ ಸೌರಭ್ ಮುಂಬೈ ತಂಡದಲ್ಲಿ ಆಡಿದ್ದರು. .

ಅಲಬಾಮಾದಲ್ಲಿ ಜನಿಸಿದ 34 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್ ನೋಷ್ತುಷ್ ಕೆಂಜಿಗೆ ಅವರ ಪೋಷಕರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನವರು. ಮೊನಾಂಕ್ 2019ರಲ್ಲಿ ಅಮೆರಿಕ ತಂಡಕ್ಕೆ ಪದಾರ್ಪಣೆ ಮಾಡಿದವರು. ಅಮೆರಿಕ ತಂಡದ ಯಶಸ್ಸಿನಲ್ಲಿ ಈ 32 ವರ್ಷದ ಆಟಗಾರನ ಪಾತ್ರ ದೊಡ್ಡದಿದೆ.
.ಆಳ–ಅಗಲ: ಟಿ20 ಕ್ರಿಕೆಟ್ ಶಕ್ತಿಕೇಂದ್ರ.
ಆಲ್ರೌಂಡರ್ ಹರ್ಮೀತ್ ಸಿಂಗ್ ಅವರು 2012ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಆಡಿದ್ದರು. 2020ರ ಆರಂಭದಲ್ಲಿ ಅಮೆರಿಕಕ್ಕೆ ತೆರಳಿದ ಅವರು ಆ ತಂಡದ ಪ್ರಮುಖ ಆಟಗಾರ ಎನಿಸಿದ್ದಾರೆ.

ಇಟಲಿ ತಂಡದಲ್ಲಿರುವ ವೇಗದ ಬೌಲರ್ ಜಸ್ಪ್ರೀತ್ ಸಿಂಗ್ ಹುಟ್ಟಿದ್ದು ಪಂಜಾಬಿನ ಫಗ್ವಾಡಾದಲ್ಲಿ. ಹದಿಹರೆಯದಲ್ಲಿ ಕ್ರಿಕೆಟ್ ಅವಕಾಶ ಅರಸಿಕೊಂಡು ಇಟಲಿಯಲ್ಲಿ ನೆಲೆಕಂಡುಕೊಂಡರು. ಈಗ ಅವರು ಆ ದೇಶದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನೆದರ್ಲೆಂಡ್ಸ್ ತಂಡದಲ್ಲಿರುವ ಆಫ್ ಸ್ಪಿನ್ನರ್, 22 ವರ್ಷ ವಯಸ್ಸಿನ ಆರ್ಯನ್ ದತ್ ಅವರ ಕುಟುಂಬ ಭಾರತದಿಂದ ಆ ದೇಶಕ್ಕೆ ವಲಸೆ ಹೋಗಿತ್ತು.

19 ವರ್ಷದೊಳಗಿನವರ ಕ್ರಿಕೆಟ್ನಲ್ಲಿ ಮೊನಾಂಕ್ ಮತ್ತು ಜಸ್ಪ್ರೀತ್ ಬೂಮ್ರಾ ಗುಜರಾತ್ ತಂಡದಲ್ಲಿ ಜೊತೆಯಾಗಿ ಆಡಿದವರು. ಈಗ ಅವರು ವಿಶ್ವಶ್ರೇಷ್ಠ ವೇಗದ ಬೌಲರ್ ಆಗಿರುವ ಬೂಮ್ರಾ ಅವರನ್ನು ಎದುರಿಸಬೇಕಾಗಿದೆ! ಮೊನಾಂಕ್ ಪಟೇಲ್ ಗುಜರಾತ್ನ ಆನಂದ್ ಪಟ್ಟಣದಲ್ಲಿ ಜನಿಸಿದವರು.

ಇಟಲಿ ತಂಡದ ಜಸ್ಪ್ರೀತ್ ಸಿಂಗ್ ಮೇಲೆ ಎಲ್ಲರ ಗಮನ ನೆಟ್ಟಿದೆ. 32 ವರ್ಷ ವಯಸ್ಸಿನ ಈ ಬೌಲರ್, 2006ರಲ್ಲಿ ಕುಟುಂಬದ ಜೊತೆ ಮಿಲಾನ್ ಬಳಿಯ ಊರಿಗೆ ಬಂದು ನೆಲೆಸಿದ್ದರು. 2019ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.

ಗುರುದಾಸಪುರದಲ್ಲಿ ಜನಿಸಿದ ದಿಲ್ಪ್ರೀತ್ ಬಾಜ್ವಾ, 2020ರಲ್ಲಿ ಕೆನಡಾಕ್ಕೆ ವಲಸೆ ಹೋದವರು. ಆರು ವರ್ಷಗಳ ನಂತರ ಅವರು ಕೆನಡಾ ತಂಡದ ನಾಯಕರಾಗಿದ್ದಾರೆ. ಈ ಬೌಲರ್ ಈಗ ತಾಯ್ನಾಡಿಗೆ ಬರುತ್ತಿದ್ದಾರೆ. 23 ವರ್ಷ ವಯಸ್ಸಿನ ಬಾಜ್ವಾ ಅವರು 2024ರ ಟಿ20 ತಂಡದಲ್ಲೂ ಆಡಿದ್ದರು.

ಲುಧಿಯಾನದಲ್ಲಿ ಜನಿಸಿದ ಜತಿಂದರ್ ಅವರು ಒಮಾನ್ ತಂಡಕ್ಕೆ ನಾಯಕರಾಗಿದ್ದಾರೆ. 36 ವರ್ಷದ ಈ ಆಫ್ಬ್ರೇಕ್ ಬೌಲರ್ ಭಾರತದಲ್ಲಿ ಹಿಂದೆಂದೂ ಆಡುವ ಅವಕಾಶ ಪಡೆದಿರಲಿಲ್ಲ. ಪ್ರಸ್ತುತ ಒಮಾನ್ನ ಎಲ್ಲ ಪಂದ್ಯಗಳೂ ಶ್ರೀಲಂಕಾದಲ್ಲಿ ನಡೆಯುವ ಕಾರಣ ಈ ಬಾರಿಯೂ ಅವರಿಗೆ ಭಾರತದಲ್ಲಿ ಆಡಲು ಅವಕಾಶ ಸಿಗುವ ಸಾಧ್ಯತೆಯಿಲ್ಲ.

ವಿವಾದದ ಹಾದಿ

* ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾದ ಕಾರಣ, ಬಾಂಗ್ಲಾದ ಆಟಗಾರ ಮುಸ್ತಫಿಝರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಕೈಬಿಡುವಂತೆ ಆಗ್ರಹಗಳು ಕೇಳಿಬಂದವು. ಹೀಗಾಗಿ, ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಬಿಸಿಸಿಐ ನಿರ್ದೇಶನದಂತೆ ಅವರನ್ನು ಜನವರಿ 2ರಂದು ತಂಡದಿಂದ ಕೈಬಿಟ್ಟಿತು.

* ಮುಸ್ತಫಿಜುರ್ ಅವರನ್ನು ಐಪಿಎಲ್ನಿಂದ ಕೈಬಿಟ್ಟ ನಿರ್ಧಾರದಿಂದ ಅಸಮಾಧಾನಗೊಂಡ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು (ಬಿಸಿಬಿ), ತಮ್ಮ ತಂಡವು ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ಭದ್ರತೆಯ ಸಮಸ್ಯೆ ಇದೆ ಎಂಬ ಹೊಸ ಕ್ಯಾತೆ ತೆಗೆಯಿತು. ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ವರ್ಗಾಯಿಸುವಂತೆಯೂ ಐಸಿಸಿಗೆ ಮನವಿ ಮಾಡಿತು. ಇಲ್ಲದಿದ್ದರೆ, ಟೂರ್ನಿಯಿಂದ ಹಿಂದೆ ಸರಿಯುವುದಾಗಿ ತಿಳಿಸಿತು.

* ಬಿಸಿಬಿಯ ಮನವಿಯನ್ನು ಜ.21ರಂದು ತಿರಸ್ಕರಿಸಿದ ಐಸಿಸಿ, ಭಾರತದಲ್ಲಿ ಆಡುವಂತೆ ಮನವೊಲಿಸಲು ಯತ್ನಿಸಿತು. ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿ ನಿರ್ಧಾರ ತಿಳಿಸುವಂತೆ ಗಡುವನ್ನೂ ವಿಧಿಸಿತು. ಆದರೆ ಬಾಂಗ್ಲಾ ಪಟ್ಟು ಸಡಿಲಿಸಲಿಲ್ಲ.

* ಬಾಂಗ್ಲಾದೇಶದ ಬದಲಿಗೆ ಟೂರ್ನಿಯಲ್ಲಿ ಆಡಲು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿರುವುದಾಗಿ ಐಸಿಸಿ ಜ.24ರಂದು ಪ್ರಕಟಿಸಿತು.

* ವಿವಾದದ ಆರಂಭದಿಂದಲೂ ಬಾಂಗ್ಲಾ ಪರ ನಿಲುವು ಹೊಂದಿದ್ದ ಪಾಕಿಸ್ತಾನ, ಲೀಗ್ ಹಂತದಲ್ಲಿ ಭಾರತ ತಂಡದ ವಿರುದ್ಧದ ಪಂದ್ಯವನ್ನು (ಫೆ.15) ಬಹಿಷ್ಕರಿಸುವುದಾಗಿ ಫೆಬ್ರುವರಿ 1ರಂದು ಘೋಷಿಸಿತು. ಈ ಪಂದ್ಯ ನಡೆಯುವ ಬಗ್ಗೆ ಅನುಮಾನಗಳು ಇನ್ನೂ ಬಗೆಹರಿದಿಲ್ಲ. ಅಲ್ಲದೆ, ನಾಕೌಟ್ ಪಂದ್ಯದಲ್ಲಿ ಭಾರತ ತಂಡ ಎದುರಾದರೆ ಆಡಬೇಕಾ ಇಲ್ಲವೇ ಎಂಬುದನ್ನು ಪಾಕ್ ಸರ್ಕಾರ ನಿರ್ಧರಿಸಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.