ಕೊಲಂಬೊ: ಸಲ್ಮಾನ್ ಆಘಾ ನಾಯಕತ್ವದ ಪಾಕಿಸ್ತಾನ ತಂಡವು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ಎ ಗುಂಪಿನಲ್ಲಿ ಮೊದಲ ಪಂದ್ಯ ಆಡಲಿದೆ.

ಸ್ಕಾಟ್ ಎಡ್ವರ್ಡ್ಸ್ ನಾಯಕತ್ವದ ನೆದರ್ಲೆಂಡ್ಸ್ ಎದುರು ಪಾಕ್ ಕಣಕ್ಕಿಳಿಯ ಲಿದೆ. ಪಾಕ್ ತಂಡದಲ್ಲಿ ಅನುಭವಿ ಫಕಾರ್ ಜಮಾನ್, ಬಾಬರ್ ಆಜಂ ಅವರು ಬ್ಯಾಟಿಂಗ್ ವಿಭಾಗದ ಪ್ರಮುಖ ಆಟಗಾರರಾಗಿದ್ದಾರೆ. ಆಲ್ರೌಂಡರ್ಗಳಾದ ಮೊಹಮ್ಮದ್ ನವಾಜ್, ಶಾದಾಬ್ ಖಾನ್ ಅವರು ಮಧ್ಯಮ ಕ್ರಮಾಂಕದಲ್ಲಿ ಶಕ್ತಿಯಾಗಿದ್ದಾರೆ. ಶಾಹಿನ್ ಆಫ್ರಿದಿ ಸಾರಥ್ಯದ ಬೌಲಿಂಗ್ ಪಡೆಯಲ್ಲಿ ನಸೀಂ ಶಾ, ಅಬ್ರಾರ್ ಅಹಮದ್ ಅವರಿದ್ದಾರೆ. ಮುಖ್ಯ ಕೋಚ್ ಮೈಕ್ ಹೆಸನ್ ಅವರ ಮಾರ್ಗದರ್ಶನ ದಲ್ಲಿ ತಂಡವು ಸಿದ್ಧಗೊಂಡಿದೆ.

ಇದೇ 15ರಂದು ಭಾರತ ತಂಡದ ಎದುರಿನ ಪಂದ್ಯದಲ್ಲಿ ತಮ್ಮ ದೇಶದ ತಂಡವು ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರವು ಈಚೆಗೆ ಹೇಳಿದೆ. ಪಾಕ್ ತಂಡವು ಒಂದೊಮ್ಮೆ ಭಾರತದ ಎದುರು ಆಡದಿದ್ದರೆ ಎರಡು ಅಂಕ ಕಳೆದುಕೊಳ್ಳಲಿದೆ. ಆದ್ದರಿಂದ ಸೂಪರ್ 8 ಹಂತ ಪ್ರವೇಶಿಸಲು ಉಳಿದ ಪಂದ್ಯಗಳಲ್ಲಿ ಗೆಲುವು ಅಗತ್ಯವಾಗಿದೆ.

ಆದರೆ ಎರಡು ವರ್ಷಗಳ ಹಿಂದೆ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಅಮೆರಿಕದ ವಿರುದ್ಧ ಆಘಾತ ಅನುಭವಿಸಿತ್ತು.

ಆದ್ದರಿಂದ ಯಾವುದೇ ತಂಡವನ್ನೂ ಇಲ್ಲಿ ಹಗುರವಾಗಿ ಪರಿಗಣಿಸುವಂತಿಲ್ಲ.

ಪಂದ್ಯ ಆರಂಭ: ಬೆಳಿಗ್ಗೆ 11.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.