ನವದೆಹಲಿ: ಭಾರತ ಏಕದಿನ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಸೋಮವಾರ ಹೊಸದಾಗಿ ಪ್ರಕಟಿಸಲಾಗಿರುವ ಬಿಸಿಸಿಯ ವಾರ್ಷಿಕ ಕೇಂದ್ರೀಯ ಗುತ್ತಿಗೆಯಲ್ಲಿ ‘ಬಿ’ ದರ್ಜೆಯಲ್ಲಿ ಸೇರ್ಪಡೆಯಾಗಿದ್ದಾರೆ.

ಈವರೆಗೆ ಚಾಲ್ತಿಯಲ್ಲಿದ್ದ ಎ+ ದರ್ಜೆಯನ್ನು ತೆಗೆದುಹಾಕಲಾಗಿದೆ. ಈ ದರ್ಜೆಯಲ್ಲಿದ್ದ ಆಟಗಾರರು ವಾರ್ಷಿಕ ರಿಟೇನರ್ಶಿಪ್ ಶುಲ್ಕವಾಗಿ ₹7 ಕೋಟಿ ಪಡೆಯುತ್ತಿದ್ದರು. 30 ಆಟಗಾರರು ಮತ್ತು 21 ಆಟಗಾರ್ತಿಯರನ್ನು ಕೇಂದ್ರೀಯ ಗುತ್ತಿಗೆ ಪಟ್ಟಿಯ ಎ, ಬಿ ಮತ್ತು ಸಿ ದರ್ಜೆಯಲ್ಲಿ ವಿಂಗಡಿಸಲಾಗಿದೆ.

ಎರಡು ಮಾದರಿಗಳಿಗೆ ನಾಯಕರಾಗಿರುವ ಶುಭಮನ್ ಗಿಲ್, ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಮತ್ತು ಟೆಸ್ಟ್ ಆಲ್ರೌಂಡರ್ ರವೀಂದ್ರ ಜಡೇಜ ಎ ಗುಂಪಿನಲ್ಲಿದ್ದಾರೆ. ಇವರು ವಾರ್ಷಿಕ ₹5 ಕೋಟಿ ಪಡೆಯಲಿದ್ದಾರೆ. ಬಿ ದರ್ಜೆಯ ಆಟಗಾರರು ₹ 3 ಕೋಟಿ ಮತ್ತು ಸಿ ದರ್ಜೆಯ ಆಟಗಾರರು ₹1 ಕೋಟಿ ಪಡೆಯಲಿದ್ದಾರೆ.

ಕೊಹ್ಲಿ ಮತ್ತು ರೋಹಿತ್ ಈಗ ಏಕದಿನ ಮಾದರಿಗೆ ಮಾತ್ರ ಸೀಮಿತಗೊಂಡಿರುವುದರಿಂದ ಅವರನ್ನು ಎ ಗುಂಪಿನಲ್ಲಿ ಉಳಿಸಿಕೊಂಡಿಲ್ಲ. ಬಿ ದರ್ಜೆಯಲ್ಲಿ ಅವರ ಜೊತೆ ವಾಷಿಂಗ್ಟನ್ ಸುಂದರ್, ಕೆ.ಎಲ್.ರಾಹುಲ್, ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ಸಹ ಇದ್ದಾರೆ.

ಈ ಹಿಂದೆಯಿದ್ದ ಸಿಒಎ (ಆಡಳಿತಗಾರರ ಸಮಿತಿ), ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಆಣತಿಯಂತೆ ಎ+ ದರ್ಜೆ ಪರಿಚಯಿಸಿತ್ತು. ಈವರೆಗೆ ಕೇವಲ ನಾಲ್ವರಷ್ಟೇ (ಕೊಹ್ಲಿ, ರೋಹಿತ್, ಜಡೇಜ ಮತ್ತು ಬೂಮ್ರಾ) ಈ ದರ್ಜೆಯಲ್ಲಿರುತ್ತಿದ್ದರು.

ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆಯಲ್ಲಿ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಜೆಮಿಮಾ ರಾಡ್ರಿಗಸ್, ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾ ಅವರು ‘ಎ’ ಗುಂಪಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.