ದಿನ ಭವಿಷ್ಯ: ದೈವಬಲದಿಂದ ಪ್ರಯತ್ನ ಕಾರ್ಯಗಳೆಲ್ಲವೂ ಶುಭ ಫಲಗಳನ್ನೇ ನೀಡಲಿವೆ
Published 8 ಫೆಬ್ರುವರಿ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತೊಂದರೆಗಳೆಲ್ಲಾ ಉಪಶಮನಗೊಳ್ಳುತ್ತ ಹಂತ ಹಂತವಾಗಿ ಅಭಿವೃದ್ಧಿ ತೋರಿ ಬರಲಿದೆ. ಸಂಬಂಧಗಳಿಗೆ ಅತಿಯಾಗಿ ಬೆಲೆ ಕೊಡುವ ನೀವು ಸಂಬಂಧಿಕರ ಮೊಸಳೆ ಕಣ್ಣೀರಿಗೆ ಸುಲಭವಾಗಿ ಮರುಳಾಗದಿರಿ.
08 ಫೆಬ್ರುವರಿ 2026, 18:30 IST
ವೃಷಭ
ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಂತೋಷದಿಂದ ಕೆಲಸ ಮಾಡುವ ಮತ್ತು ಹೊಸದಾದ ಜಾಗ ಪ್ರಾಪ್ತಿ. ಚರ್ಮದ ವಸ್ತುಗಳ ತಯಾರಿ ಅಥವಾ ಮಾರಾಟದಿಂದ ಲಾಭ ಬರಲಿದೆ. ಗೃಹ ತಾಪತ್ರಯಗಳಿಂದ ಮುಕ್ತರಾಗುವಿರಿ.
08 ಫೆಬ್ರುವರಿ 2026, 18:30 IST
ಮಿಥುನ
ಬಂಧು-ಮಿತ್ರರ ಸಹಾಯ ಸಕಾಲಕ್ಕೆ ಒದಗುವುದರಿಂದ ನಿರಾಳ ಭಾವ ಮೂಡುವುದು. ನಿಮ್ಮ ಕ್ಷೇತ್ರದಲ್ಲಿ ಉಳಿದುಕೊಳ್ಳಬೇಕಾದರೆ ಅವಿರತ ದುಡಿಮೆಯೊಂದೇ ಮಾರ್ಗ. ವಿದೇಶಿ ಪ್ರಯಾಣ ಸುಖಕರವಾಗಿರುವುದು.
08 ಫೆಬ್ರುವರಿ 2026, 18:30 IST
ಕರ್ಕಾಟಕ
ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಆನಂದ ಸಿಗಬಹುದು. ತಂಗಿಗಾಗಿ ಹಣವನ್ನು ಮತ್ತು ಸಮಯವನ್ನು ಖರ್ಚು ಮಾಡಬೇಕಾದ ಸಂದರ್ಭ ಬರುವುದು.
08 ಫೆಬ್ರುವರಿ 2026, 18:30 IST
ಸಿಂಹ
ಲೋಹ ಮಾರಾಟಗಾರರು ಹಳೆಯ ಲೋಹಗಳನ್ನು ಕೊಳ್ಳುವ ರೀತಿಯಲ್ಲಿ ಅನಿರೀಕ್ಷಿತವಾಗಿ ಲಾಭ ಪಡೆಯುವರು. ಬೇರೆಯವರನ್ನು ಮರುಳುಗೊಳಿಸುವ ಮಾತಿನ ಕೌಶಲ ನಿಮ್ಮಲ್ಲಿದೆ.
08 ಫೆಬ್ರುವರಿ 2026, 18:30 IST
ಕನ್ಯಾ
ಮಹತ್ವದ ವಿಷಯಕ್ಕೆ ಗಂಭೀರ ಚಿಂತನೆ ಅಗತ್ಯ. ವಕೀಲರ ಸಲಹೆ, ಮಾರ್ಗದರ್ಶನ ಪಡೆದು ಮುನ್ನುಗ್ಗುವುದು ಅತ್ಯುತ್ತಮ. ವ್ಯವಹಾರದಲ್ಲಿ ಪಾಲುದಾರರನ್ನಾಗಿ ಸೇರಿಸಿಕೊಳ್ಳಲು ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸುವಿರಿ.
08 ಫೆಬ್ರುವರಿ 2026, 18:30 IST
ತುಲಾ
ನೂತನ ಕಾರ್ಯ ಅಥವಾ ಗೃಹ ನಿರ್ಮಾಣದಂತಹ ಕೆಲಸಗಳಿಗಾಗಿ ಸಮಯ ವಿನಿಯೋಗಿಸುವಿರಿ. ಹೊಸ ಕೆಲಸ ಕಾರ್ಯಗಳ ಬಗ್ಗೆ ಸುದೀರ್ಘವಾದ ಮಾತುಕತೆ ನಡೆಸಿ. ಸಾಲದ ಹಣ ಹಿಂತಿರುಗಿ ಬರುವುದು.
08 ಫೆಬ್ರುವರಿ 2026, 18:30 IST
ವೃಶ್ಚಿಕ
ಋಣಬಾಧೆ, ಖರ್ಚು-ವೆಚ್ಚ, ಕುಟುಂಬ ಸ್ಥಾನದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು.
08 ಫೆಬ್ರುವರಿ 2026, 18:30 IST
ಧನು
ಸ್ವಯಂ ಔಷಧಿಗಳ ಅಧಿಕ ಬಳಕೆ ಅಥವಾ ಅದರ ಅಡ್ಡಪರಿಣಾಮದಿಂದ ಅನಾರೋಗ್ಯಕ್ಕೆ ಗುರಿಯಾಗಬೇಕಾಗುವುದು. ಮದುವೆಯ ವಿಚಾರದಲ್ಲಿ ಆಯ್ಕೆ ಸರಿಯಾಗಿದ್ದು ನಿರ್ಭಯವಾಗಿ ನಿರ್ಧಾರವನ್ನು ಎಲ್ಲರಲ್ಲಿ ತಿಳಿಸಿ.
08 ಫೆಬ್ರುವರಿ 2026, 18:30 IST
ಮಕರ
ವಿವಾದ ಗೊಡವೆಗಳಿಂದ ದೂರ ಉಳಿಯುವಂಥ ನಿರ್ಧಾರ ಗೌರವವನ್ನು ಕಾಪಾಡಿಕೊಳ್ಳುವಲ್ಲಿ ಅನುಕೂಲ. ವಿಮಾ ಸಲಹೆಗಾರರು ಯಾರಿಗೂ ಬಲವಂತ ಪಡಿಸಬೇಡಿ. ನೂತನ ವಾಹನ ಖರೀದಿಯ ಯೋಗವಿದೆ.
08 ಫೆಬ್ರುವರಿ 2026, 18:30 IST
ಕುಂಭ
ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವುದು ಸರಿಯಾದ ಮಾರ್ಗ. ನೆರೆಯವರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ. ಮಕ್ಕಳ ವರ್ತನೆ ಮನಸ್ಸಿಗೆ ಸಂತೋಷ ತಂದುಕೊಡಲಿದೆ.
08 ಫೆಬ್ರುವರಿ 2026, 18:30 IST
ಮೀನ
ದೈವಬಲ ಒದಗುವುದರಿಂದ ಪ್ರಯತ್ನ ಕಾರ್ಯಗಳೆಲ್ಲವೂ ಶುಭ ಫಲಗಳನ್ನೇ ನೀಡಲಿವೆ. ಸಂಜೆಯ ಸಮಯದಲ್ಲಿ ಶಿರೋ ವೇದನದಿಂದ ಬಳಲುವ ಸಾಧ್ಯತೆ ಇದೆ. ಆರ್ಥಿಕವಾಗಿ ಸದೃಢವಾಗಲಿದ್ದೀರಿ.
08 ಫೆಬ್ರುವರಿ 2026, 18:30 IST