ದಿನ ಭವಿಷ್ಯ: ಈ ರಾಶಿಯವರಿಗೆ ಬಂಧುಗಳ ಮಾತಿನಿಂದ ನೋವಾಗಬಹುದು
Published 7 ಫೆಬ್ರುವರಿ 2026, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಹಚರರಿಂದ ಅಥವಾ ಅಧಿಕಾರಿಗಳಿಂದ ನಿಮಗೆ ಅಸಹಕಾರದ ಪರಿಸ್ಥಿತಿ ಎದುರಾಗಬಹುದು. ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಕಂಡುಕೊಳ್ಳುವ ಸ್ಥಿತಿ ಬರಲಿದೆ. ಋಣ ಪರಿಹಾರವಾಗಿ ನೆಮ್ಮದಿ ಮೂಡುವುದು.
07 ಫೆಬ್ರುವರಿ 2026, 19:30 IST
ವೃಷಭ
ಜಾಹೀರಾತು ಏಜೆನ್ಸಿಯಲ್ಲಿರುವವರಿಗೆ ಏಳಿಗೆ ಹಾಗೂ ಪ್ರಚಾರ ತರುವ ಸೂಕ್ತ ವಿಚಾರದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಆತ್ಮಾಭಿಮಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ.
07 ಫೆಬ್ರುವರಿ 2026, 19:30 IST
ಮಿಥುನ
ದುಬಾರಿ ವಸ್ತುಗಳನ್ನು ಖರೀದಿಸುವ ಹಾಗೂ ಅದರ ಅವಶ್ಯಕತೆಯ ಕುರಿತು ನಿಮ್ಮ ಮನೆಯವರೊಂದಿಗೆ ಚರ್ಚಿಸಿ ಬಳಿಕ ಖರೀದಿಸಿ. ದಿನಗೂಲಿ ಕೆಲಸವನ್ನು ಮಾಡುವವರಿಗೆ ಈ ದಿನ ಸ್ವಲ್ಪ ಅಸ್ಥಿರತೆ ಕಾಡಬಹುದು.
07 ಫೆಬ್ರುವರಿ 2026, 19:30 IST
ಕರ್ಕಾಟಕ
ಕಲಾವಿದರಿಗೆ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಗುವುವು. ಸಂಸಾರದಲ್ಲಿ ಬಿರುಕು ಮೂಡದಂತೆ ನೋಡಿಕೊಳ್ಳಿ. ಹಣಕಾಸಿನ ಸಂಸ್ಥೆಗೆ ಪಾಲುದಾರರಾಗುವ ಸಾಧ್ಯತೆ ಇದೆ.
07 ಫೆಬ್ರುವರಿ 2026, 19:30 IST
ಸಿಂಹ
ಅಕ್ಕಪಕ್ಕದವರ ಅಥವಾ ಸ್ನೇಹಿತರ ಹೊಗಳಿಕೆಯ ಮಾತುಗಳಿಗೆ ಕಿವಿಗೊಟ್ಟು ಮರುಳಾಗಬೇಡಿ. ಬಂಧುಗಳ ಮಾತು ಮನಸ್ಸನ್ನು ನೋಯಿಸುವುದು. ಅದರಿಂದಾಗಿ ಮನಸ್ಸು ನಿರಾಸಕ್ತಿಯ ಭಾವನೆಯಿಂದ ಇರುವುದು.
07 ಫೆಬ್ರುವರಿ 2026, 19:30 IST
ಕನ್ಯಾ
ಸಹೋದರಿಯ ಮದುವೆಯಂತಹ ಸಂದರ್ಭಕ್ಕೆ ಆಪ್ತರೊಬ್ಬರು ನೆರವಿಗೆ ಬರಲಿದ್ದಾರೆ. ಆಸ್ತಿ ಕೊಳ್ಳುವ ವಿಷಯದಲ್ಲಿ ಹೆಂಡತಿಯೊಂದಿಗೆ ಮಾತುಕತೆ ನಡೆಸಿ. ಹಿರಿಯ ಸಹೋದ್ಯೋಗಿಗಳಿಂದ ಬೈಗುಳ ಕೇಳಬೇಕಾಗುವುದು.
07 ಫೆಬ್ರುವರಿ 2026, 19:30 IST
ತುಲಾ
ನಿಮ್ಮ ಮನಃಸ್ಥಿತಿಯು ಯಾರೊಂದಿಗೂ ಬೆರೆಯದೆ, ಕೆಲಸ ಕಾರ್ಯಗಳ ತ್ತಲೇ ಇರುವುದು. ಮಕ್ಕಳ ಭವಿಷ್ಯದ ಕುರಿತಾಗಿ ಆಳವಾದ ಚಿಂತನೆ ನಡೆಸುವಿರಿ. ಪರರಿಗೆ ಸಹಾಯ ಮಾಡುವ ಮನೋಭಾವದಿಂದ ಮುನ್ನಡೆ ಇರುವುದು.
07 ಫೆಬ್ರುವರಿ 2026, 19:30 IST
ವೃಶ್ಚಿಕ
ಆಪ್ತರ ಕಷ್ಟಗಳ ಕಡೆಗೆ ಗಮನ ಹರಿಸುವುದು ಪುಣ್ಯದ ಕೆಲಸವೆಂದು ಭಾವಿಸಿ, ಹೊರತಾಗಿ ಪ್ರತಿಫಲವನ್ನು ಅಪೇಕ್ಷಿಸಬೇಡಿ. ಅಂದುಕೊಂಡಿರುವ ಕೆಲಸಗಳು ಉತ್ತಮವಾಗಿ ನೆರವೇರಿವುದರಿಂದ ನೆಮ್ಮದಿ ಇರುವುದು.
07 ಫೆಬ್ರುವರಿ 2026, 19:30 IST
ಧನು
ಸಿಹಿ ವಿಚಾರವನ್ನು, ಅವಕಾಶಗಳನ್ನು ಮತ್ತು ಕಹಿಯ ಸಂಗತಿಯನ್ನು ಮುಕ್ತ ಮನಸ್ಸಿನಿಂದ ಸಮಾನವಾಗಿ ಸ್ವೀಕರಿಸಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ದೂರಾಗುವುವು.
07 ಫೆಬ್ರುವರಿ 2026, 19:30 IST
ಮಕರ
ನಿಮ್ಮ ಅಭಿರುಚಿಗೆ ಹೊಂದುವಂತಹ ಜನರೊಂದಿಗೆ ಒಡನಾಟ ಬೆಳೆಸಿ ನೆಮ್ಮದಿ ಸಿಗುತ್ತದೆ. ಕಾರಣಾಂತರದಿಂದ ಇಂದು ಕೆಲವು ವ್ಯಕ್ತಿಗಳನ್ನು ನಿರ್ಲಕ್ಷಿ ಸುವಿರಿ. ಚರ್ಮದ ವಸ್ತು ವ್ಯಾಪಾರಿಗಳಿಗೆ ಲಾಭದಾಯಕ ದಿನ.
07 ಫೆಬ್ರುವರಿ 2026, 19:30 IST
ಕುಂಭ
ಐ.ಟಿ. ಕಂಪನಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಲಿದೆ. ಅದರ ಪರಿಣಾಮವಾಗಿ ವರಮಾನ ಹೆಚ್ಚಳದ ಸಂಭವವು ಇರುವುದು. ಮನೆಯವರ ಅಥವಾ ಹಿರಿಯರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ.
07 ಫೆಬ್ರುವರಿ 2026, 19:30 IST
ಮೀನ
ಇಂಟೀರಿಯರ್ ಡೆಕೊರೇಟರ್ ಕೋರ್ಸ್ ಕಲಿಯುವಂತಹ ಆಸೆ ಹೊಂದಿದವರಿಗೆ ಶುಭ ಕಾಲ. ಸಗಟು ಧಾನ್ಯ ವರ್ತಕರಿಗೆ ಈ ದಿನ ಲಾಭ ಹೆಚ್ಚಿರುವುದು. ಸೋದರನ ಓದಿಗಾಗಿ ಖರ್ಚು ಮಾಡಬೇಕಾಗುವುದು.
07 ಫೆಬ್ರುವರಿ 2026, 19:30 IST