ಮುಂಬೈ: ಕರ್ನಾಟಕ ಮತ್ತು ಮುಂಬೈ ನಡುವಣ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯವು ರೋಚಕ ಹಂತಕ್ಕೆ ತಲುಪಿದೆ. ಮಯಂಕ್ ಅಗರವಾಲ್ ಬಳಗವು ಗೆಲ್ಲಲು ಇನ್ನೂ 212 ರನ್ ಗಳಿಸಬೇಕು. ಆದರೆ ಇದಕ್ಕೂ ಮುನ್ನ ಶಾರ್ದೂಲ್ ಠಾಕೂರ್ ತಂಡವು ಎಂಟು ವಿಕೆಟ್ಗಳನ್ನು ಗಳಿಸಿದರೆ ಸೆಮಿಫೈನಲ್ ಪ್ರವೇಶಿಸಬಹುದು. ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿ ಇವೆ.

ನಾಲ್ಕರ ಘಟ್ಟಕ್ಕೆ ತಲುಪುವ ಛಲದಲ್ಲಿರುವ ಕರ್ನಾಟಕ ತಂಡವು ಅನುಭವಿ ಬ್ಯಾಟರ್ಗಳಾದ ಕೆ.ಎಲ್. ರಾಹುಲ್ (ಬ್ಯಾಟಿಂಗ್ 60) ಮತ್ತು ಕರುಣ್ ನಾಯರ್ (ಬ್ಯಾಟಿಂಗ್ 9) ಅವರ ಮೇಲೆ ಈಗ ಭರವಸೆಯ ನೋಟ ನೆಟ್ಟಿದೆ. ಎಂಸಿಎ–ಬಿಕೆಸಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕವು ಶನಿವಾರ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. ಆದರೆ ಎರಡನೇ ಇನಿಂಗ್ಸ್ನಲ್ಲಿ ತಿರುಗೇಟು ನೀಡಿದ್ದ ಆತಿಥೇಯ ಮುಂಬೈ, ಕರ್ನಾಟಕಕ್ಕೆ 325 ರನ್ಗಳ ಜಯದ ಗುರಿಯೊಡ್ಡಿತು. ಈ ಪೈಕಿ ಕರ್ನಾಟಕವು 29 ಓವರ್ಗಳಲ್ಲಿ 2 ವಿಕೆಟ್ಗಳಿಗೆ 113 ರನ್ ಗಳಿಸಿದೆ.

ಮಯಂಕ್ ಅಗರವಾಲ್ ಅವರ ವಿಕೆಟ್ ಶಾರ್ದೂಲ್ ಠಾಕೂರ್ ಹಾಕಿದ ಮೂರನೇ ಓವರ್ನಲ್ಲಿ ಪತನವಾಯಿತು. ಇದರಿಂದಾಗಿ ಆತಂಕದಲ್ಲಿದ್ದ ತಂಡಕ್ಕೆ ನಾಯಕ ದೇವದತ್ತ ಪಡಿಕ್ಕಲ್ (39; 52ಎ, 4X5, 6X1) ಮತ್ತು ರಾಹುಲ್ ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿ ಆಸರೆಯಾದರು. ಇದರಿಂದಾಗಿ ಕರ್ನಾಟಕ ಬಳಗದಲ್ಲಿ ಗೆಲುವಿನ ವಿಶ್ವಾಸ ಮೂಡಿತು. ಆದರೆ ತನುಷ್ ಕೋಟ್ಯಾನ್ ಅವರ ಬೌಲಿಂಗ್ನಲ್ಲಿ ಯಶಸ್ವಿ ಜೈಸ್ವಾಲ್ ಪಡೆದ ಕ್ಯಾಚ್ಗೆ ದೇವದತ್ತ ಔಟಾದರು. ಮೊದಲ ಇನಿಂಗ್ಸ್ನಲ್ಲಿ ಕರುಣ್, ಸ್ಮರಣ್, ಕೃತಿಕ್ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಎರಡನೇ ಇನಿಂಗ್ಸ್ನಲ್ಲಿ ಅವರೆಲ್ಲರ ಮೇಲೆ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಹೊಣೆ ಇದೆ.

ತನುಷ್, ತುಷಾರ್ ಮಿಂಚು

ಎರಡನೇ ದಿನದಾಟದ ಮುಕ್ತಾಯಕ್ಕೆ ಮುಂಬೈ ತಂಡವು 2 ವಿಕೆಟ್ಗಳಿಗೆ 189 ರನ್ ಗಳಿಸಿತ್ತು. ಆಕಾಶ್ ಆನಂದ್ ( 53 ರನ್) ಮತ್ತು ಮುಷೀರ್ ಖಾನ್ (49 ರನ್) ಕ್ರೀಸ್ನಲ್ಲಿದ್ದರು. ಒಟ್ಟು 136 ರನ್ಗಳ ಮುನ್ನಡೆ ಸಾಧಿಸಿತ್ತು. ಭಾನುವಾರ ಆಟ ಮುಂದುವರಿಸಿದ ಆಕಾಶ್ ತಮ್ಮ ಮೊತ್ತಕ್ಕೆ 16 ರನ್ ಸೇರಿಸಿದರು. ಆದರೆ ಖಾನ್ ಅರ್ಧಶತಕ ಗಳಿಸಲು ವಿದ್ಯಾಧರ್ ಪಾಟೀಲ ಬಿಡಲಿಲ್ಲ. ಸಿದ್ದೇಶ್ ಲಾಡ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದ ಸ್ಪಿನ್ನರ್ ಶಿಖರ್ ಶೆಟ್ಟಿ ಮಿಂಚಿದರು. ಸೂರ್ಯಂಶ್ ಶೆಡಗೆ (25 ರನ್) ಅವರಿಗೂ ವಿದ್ಯಾಧರ್ ಪಾಟೀಲ ಪೆವಿಲಿಯನ್ ದಾರಿ ತೋರಿಸಿದರು.

ಆದರೆ ಕೆಳಕ್ರಮಾಂಕದಲ್ಲಿ ತನುಷ್ ಕೋಟ್ಯಾನ್ (ಔಟಾಗದೇ 48; 73ಎ, 4X5, 6X1) ತುಷಾರ್ ದೇಶಪಾಂಡೆ (37; 40ಎ, 4X7. 6X2) ತಂಡದ ಮೊತ್ತ ಹೆಚ್ಚಿಸಿದರು. ಮುಂಬೈ ತಂಡವು 98.3 ಓವರ್ಗಳಲ್ಲಿ 377 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಮುಂಬೈ 48.1 ಓವರ್ಗಳಲ್ಲಿ 120. ಕರ್ನಾಟಕ: 47.1 ಓವರ್ಗಳಲ್ಲಿ 173. ಎರಡನೇ ಇನಿಂಗ್ಸ್: ಮುಂಬೈ: 98.3 ಓವರ್ಗಳಲ್ಲಿ 377 (ಆಕಾಶ್ ಆನಂದ್ 70, ಮುಷೀರ್ ಖಾನ್ 49, ಸಿದ್ಧೇಶ್ ಲಾಡ್ 25, ಸೂರ್ಯಾಂಶ್ ಶೆಡಗೆ 25, ತನುಷ್ ಕೋಟ್ಯಾನ್ ಔಟಾಗದೇ 48, ತುಷಾರ್ ದೇಶಪಾಂಡೆ 47, ವಿದ್ಯಾಧರ್ ಪಾಟೀಲ 78ಕ್ಕೆ2, ಪ್ರಸಿದ್ಧಕೃಷ್ಣ 71ಕ್ಕೆ1, ವಿದ್ವತ್ ಕಾವೇರಪ್ಪ 78ಕ್ಕೆ2, ಶಿಖರ್ ಶೆಟ್ಟಿ 45ಕ್ಕೆ3) ಕರ್ನಾಟಕ: 29 ಓವರ್ಗಳಲ್ಲಿ 2 ವಿಕೆಟ್ಗಳಿಗೆ 113 (ಕೆ.ಎಲ್. ರಾಹುಲ್ ಬ್ಯಾಟಿಂಗ್ 60, ದೇವದತ್ತ ಪಡಿಕ್ಕಲ್ 39, ಶಾರ್ದೂಲ್ ಠಾಕೂರ್ 24ಕ್ಕೆ1, ತನುಷ್ ಕೋಟ್ಯಾನ್ 13ಕ್ಕೆ1)

ಕೃತಿಕ್ ಕೃಷ್ಣಗೆ 7 ಬಲಿ

ಕರ್ನಾಟಕ ತಂಡದ ವಿಕೆಟ್ಕೀಪರ್ ಕೃತಿಕ್ ಕೃಷ್ಣ ಅವರು ಮುಂಬೈ ಎದುರಿನ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದ ಒಂದೇ ಇನಿಂಗ್ಸ್ನಲ್ಲಿ ಏಳು ಬಲಿ ಪಡೆದರು. ಅದರಲ್ಲಿ ಆರು ಕ್ಯಾಚ್ ಮತ್ತು ಒಂದು ಸ್ಟಂಪಿಂಗ್ ಸೇರಿವೆ.

ಕೃತಿಕ್ ಅವರು ಆಡುತ್ತಿರುವ ಎರಡನೇ ರಣಜಿ ಪಂದ್ಯ ಇದಾಗಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಂಜಾಬ್ ಎದುರು ಅವರು ಪದಾರ್ಪಣೆ ಮಾಡಿದ್ದರು. ಅದಕ್ಕೂ ಮುನ್ನ ವಿಕೆಟ್ಕೀಪರ್ ಆಗಿದ್ದ ಕೆ.ಎಲ್. ಶ್ರೀಜಿತ್ ಅವರು ಗಾಯಗೊಂಡ ಕಾರಣ ಕೃತಿಕ್ ಅವಕಾಶ ಪಡೆದಿದ್ದಾರೆ.

ಬಿಕೆಸಿ ಮೈದಾನದಲ್ಲಿ ಭಾನುವಾರ ದಿನದಾಟದಲ್ಲಿ ಕೃತಿಕ್ ಅವರು ಕೀಪಿಂಗ್ ನಲ್ಲಿ ಕಠಿಣ ಸವಾಲು ಎದುರಿಸಿದರು. ವೇಗಿಗಳಾದ ಪ್ರಸಿದ್ಧ ಕೃಷ್ಣ, ವಿದ್ವತ್ ಕಾವೇರಪ್ಪ ಮತ್ತು ವಿದ್ಯಾಧರ್ ಪಾಟೀಲ ಅವರ ಎಸೆತಗಳು ಬೌನ್ಸ್ ಮತ್ತು ಸ್ವಿಂಗ್ ಗಳಿಂದ ಕೂಡಿದ್ದವು. ಅವುಗಳನ್ನು ನಿರ್ವಹಿಸುವಲ್ಲಿ ಕೃತಿಕ್ ಗಮನ ಸೆಳೆದರು. ಮಂಡ್ಯದ 23 ವರ್ಷದ ಕೃತಿಕ್ ಅವರು ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಸ್ಟಂಪಿಂಗ್ ಮಾಡಿದ್ದು ಅಮೋಘವಾಗಿತ್ತು.

ಸೆಮಿಫೈನಲ್ಗೆ ಉತ್ತರಾಖಂಡ ಜೆಮ್ಶೆಡ್ಪುರ

ಮಯಂಕ್ ಮಿಶ್ರಾ (22ಕ್ಕೆ5) ಮತ್ತು ಅಭಯ್ ನೇಗಿ (36ಕ್ಕೆ4) ಅವರ ಅಮೋಘ ಬೌಲಿಂಗ್ ಬಲದಿಂದ ಉತ್ತರಾಖಂಡ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಜಾರ್ಖಂಡ್ ಎದುರು ಇನಿಂಗ್ಸ್ ಮತ್ತು 6 ರನ್ಗಳಿಂದ ಜಯಿಸಿತು.

ಇದರೊಂದಿಗೆ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಯಿತು. ಮೊದಲ ಇನಿಂಗ್ಸ್ನಲ್ಲಿ ಉತ್ತರಾಖಂಡ ತಂಡವು 136 ರನ್ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್ ಆರಂಭಿಸಿದ ಜಾರ್ಖಂಡ್ ತಂಡವು 41.1 ಓವರ್ಗಳಲ್ಲಿ 130 ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.

ಅಭಯ್ ಮತ್ತು ಮಯಂಕ್ ಅವರ ಪರಿಣಾಮಕಾರಿ ಬೌಲಿಂಗ್ನಿಂದಾಗಿ ಉತ್ತರಾಖಂಡ ಗೆದ್ದಿತು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಜಾರ್ಖಂಡ್ 85 ಓವರ್ಗಳಲ್ಲಿ 235. ಉತ್ತರಾಖಂಡ: 122.3 ಓವರ್ಗಳಲ್ಲಿ 371.

ಎರಡನೇ ಇನಿಂಗ್ಸ್: ಜಾರ್ಖಂಡ್: 41.1 ಓವರ್ಗಳಲ್ಲಿ 130 (ವಿರಾಟ್ ಸಿಂಗ್ 55 ಅಭಯ್ ನೇಗಿ 36ಕ್ಕೆ4 ಮಯಂಕ್ ಮಿಶ್ರಾ 22ಕ್ಕೆ5)

ಕಲ್ಯಾಣಿ: ಮೊದಲ ಇನಿಂಗ್ಸ್: ಆಂಧ್ರ: 88.4 ಓವರ್ಗಳಲ್ಲಿ 295. ಬಂಗಾಳ: 146 ಓವರ್ಗಳಲ್ಲಿ 6ಕ್ಕೆ418 (ಸುದೀಪ್ ಕುಮಾರ್ ಘರಾಮಿ 216 ಸುಮಂತ್ ಗುಪ್ತಾ 81 ಶಾಕೀರ್ ಹಬೀಬ್ ಗಾಂಧಿ ಬ್ಯಾಟಿಂಗ್ 45 ಕೆ.ವಿ. ಶಶಿಕಾಂತ್ 59ಕ್ಕೆ2 ಸೌರಭ್ ಕುಮಾರ್ 81ಕ್ಕೆ2)

ಇಂದೋರ್: ಮೊದಲ ಇನಿಂಗ್ಸ್: ಜಮ್ಮು–ಕಾಶ್ಮೀರ: 67 ಓವರ್ಗಳಲ್ಲಿ 194. ಮಧ್ಯಪ್ರದೇಶ: 53.4 ಓವರ್ಗಳಲ್ಲಿ 152. ಎರಡನೇ ಇನಿಂಗ್ಸ್: ಜಮ್ಮು–ಕಾಶ್ಮೀರ್ 70.3 ಓವರ್ಗಳಲ್ಲಿ 248 (ಅಬಿದ್ ಮುಷ್ತಾಕ್ 41 ವಂಶಜ್ ಶರ್ಮಾ ಔಟಾಗದೇ 54 ಸುನೀಲ್ ಕುಮಾರ್ 26 ಕುಲದೀಪ್ ಸೇನ್ 65ಕ್ಕೆ4 ವೆಂಕಟೇಶ್ ಅಯ್ಯರ್ 23ಕ್ಕೆ3 ರಣವೀರ್ ಗುಜ್ಜರ್ 66ಕ್ಕೆ3) ಮಧ್ಯಪ್ರದೇಶ ಗೆಲುವಿಗೆ ಇನ್ನೂ 204 ರನ್ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.