ಟಿಯಾನ್ಜಿನ್ (ಚೀನಾ), (ಪಿಟಿಐ): ತೇಜಸ್ವಿನ್ ಶಂಕರ್ ಅವರು ಏಷ್ಯನ್ ಒಳಾಂಗಣ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಭಾನುವಾರ ಪುರುಷರ ಹೆಪ್ಟಥ್ಲಾನ್ ಸ್ವರ್ಣ ಕೊರಳಿಗೇರಿಸಿಕೊಂಡರು. ಭಾರತ ಮೂರು ದಿನಗಳ ಈ ಕೂಟದಲ್ಲಿ ಒಟ್ಟು ಈ ಚಿನ್ನ ಸೇರಿ ಒಟ್ಟು ಐದು ಪದಕಗಳೊಡನೆ ಅಭಿಯಾನ ಮುಗಿಸಿತು.

ಭಾರತದ ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿತು. ಚೀನಾ 10 ಚಿನ್ನ, 11 ಬೆಳ್ಳಿ, 13 ಕಂಚು ಸೇರಿ 34 ಪದಕಗಳನ್ನು ಗೆದ್ದು ಅಗ್ರಸ್ಥಾನ ಗಳಿಸಿತು.

ತೇಜಸ್ವಿನ್ 5993 ಪಾಯಿಂಟ್ಸ್ ಕಲೆಹಾಕಿ, 2021ರಲ್ಲಿ ಜೂನಿಯರ್ ಒಳಾಂಗಣ ಕೂಟದಲ್ಲಿ ತಾವೇ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆ (5640) ಸುಧಾರಿಸಿದರು.

ಪೂಜಾ (ಹೈಜಂಪ್ನಲ್ಲಿ ಬೆಳ್ಳಿ), ತಜಿಂದರ್ಪಾಲ್ ಸಿಂಗ್ ತೂರ್ (ಶಾಟ್ಪಟ್ನಲ್ಲಿ ಬೆಳ್ಳಿ), ಆ್ಯನ್ಸಿ ಸೋಜನ್ (ಲಾಂಗ್ಜಂಪ್ನಲ್ಲಿ ಕಂಚು) ಭಾನುವಾರ ಪದಕ ಗೆದ್ದ ಇತರರು. ಕೂಟದ ಮೊದಲ ದಿನವಾದ ಶುಕ್ರವಾರ ಪುರುಷರ ಹೈಜಂಪ್ನಲ್ಲಿ ಆದರ್ಶ್ ರಾಮ್ ಜ್ಯೋತಿ ಶಂಕರ್ ಕಂಚಿನ ಪದಕ ಗೆದ್ದಿದ್ದರು.

ಮೊದಲ ದಿನದಿಂದಲೇ ತೇಜಸ್ವಿನ್ ಶಂಕರ್ ತಮ್ಮ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿದ್ದರು. ನಂತರವೂ ತಮ್ಮ ಮೇಲುಗೈ ಮುಂದುವರಿಸಿದರು.

ಶಾಟ್ಪಟ್ನಲ್ಲಿ ತೂರ್ ಗುಂಡನ್ನು 20.05 ಮೀ. ದೂರಕ್ಕೆಸೆದರು. ಇದು ಅವರ ಈ ವರ್ಷದ ಅತ್ಯುತ್ತಮ ಥ್ರೊ ಎನಿಸಿತು. ಚೀನಾದ ಚೆಂಗ್ಯು ಚೆನ್ 20.07 ಮೀ. ದೂರ ಎಸೆದು ಚಿನ್ನ ಗೆದ್ದರು.

ಮಹಿಳೆಯರ ಹೈಜಂಪ್ನಲ್ಲಿ ಪೂಜಾ 1.87 ಮೀ. ಎತ್ತರಕ್ಕೆ ಜಿಗಿದು ಎರಡನೆ ಸ್ಥಾನ ಗಳಿಸಿದರು. ಆ್ಯನ್ಸಿ ಸೋಜನ್ ಲಾಂಗ್ಜಂಪ್ನಲ್ಲಿ 6.21 ಮೀ. ದೂರ ಜಿಗಿದು ಮೂರನೇ ಸ್ಥಾನ ಪಡೆದರು.

ಯುವ ಸ್ಪರ್ಧಿ ಶಾನವಾಝ್ ಖಾನ್ ಲಾಂಗ್ಜಂಪ್ನಲ್ಲಿ ನಾಲ್ಕನೇ ಸ್ಥಾನ ಗಳಿಸಿ ಪದಕ ತಪ್ಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.