ನವದೆಹಲಿ: ಜಾಗತಿಕ ಮಟ್ಟದ ಟೂರ್ನಿಗಳ ಸ್ವರೂಪ ಬದಲಿಸಿರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್), ಲಖನೌನಲ್ಲಿ ನಡೆಯುವ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ದರ್ಜೆಯನ್ನು ಸೂಪರ್ 300ರಿಂದ ಸೂಪರ್ 100ಕ್ಕೆ ಇಳಿಸಿದೆ.

ಅಲ್ಲದೆ, ಸೂಪರ್ 100 ದರ್ಜೆ ಹೊಂದಿದ್ದ ಗುವಾಹಟಿ ಹಾಗೂ ಒಡಿಶಾ ಮಾಸ್ಟರ್ಸ್ ಟೂರ್ನಿಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಆದರೆ, ಈ ಕ್ರಮ ಕೈಗೊಳ್ಳಲು ಕಾರಣವೇನು ಎಂಬುದನ್ನು ಬಿಡಬ್ಲ್ಯುಎಫ್ ಬಹಿರಂಗಪಡಿಸಿಲ್ಲ.

ದೆಹಲಿಯಲ್ಲಿ ನಡೆಯುವ ಇಂಡಿಯಾ ಓಪನ್ ಟೂರ್ನಿಯು ಸೂಪರ್ 750ರ ದರ್ಜೆಯನ್ನು ಉಳಿಸಿಕೊಂಡಿದೆ. ನೂತನ ಬದಲಾವಣೆಗಳು 2027–30ರ ನಡುವಿನ ಋತುಗಳಿಗೆ ಅನ್ವಯವಾಗಲಿವೆ.

ಹೊಸ ಬದಲಾವಣೆಯಂತೆ, ಬಿಡಬ್ಲ್ಯುಎಫ್ ವಿಶ್ವ ಟೂರ್ ಅಡಿಯಲ್ಲಿ 6 ಸ್ತರದ 36 ಟೂರ್ನಿಗಳು ನಡೆಯಲಿವೆ. ವಿಶ್ವ ಟೂರ್ ಫೈನಲ್ಸ್, ತಲಾ 5 ಸೂಪರ್ 1000 ಹಾಗೂ ಸೂಪರ್ 750 ಟೂರ್ನಿ, 9 ಸೂಪರ್ 500 ಟೂರ್ನಿ ಮತ್ತು ತಲಾ 8 ಸೂಪರ್ 300 ಹಾಗೂ ಸೂಪರ್ 100 ದರ್ಜೆಯ ಟೂರ್ನಿಗಳಿಗೆ ಬಿಡಬ್ಲ್ಯುಎಫ್ ಮಾನ್ಯತೆ ನೀಡಿದೆ.

ಈ ಮೊದಲು ಸೂಪರ್ 1000 ಮಟ್ಟದ ನಾಲ್ಕು ಟೂರ್ನಿಗಳು ನಡೆಯುತ್ತಿದ್ದವು.

ಟೂರ್ನಿಗಳ ಸ್ವರೂಪ ಬದಲು:

ವಿಶ್ವ ಚಾಂಪಿಯನ್ಷಿಪ್ಗಳಲ್ಲಿ ನಾಕೌಟ್ ಸುತ್ತಿಗೆ ಮೊದಲು ಗುಂಪು ಹಂತವನ್ನು ಪರಿಚಯಿಸಲಾಗಿದೆ. ಇದರಿಂದಾಗಿ, ಪ್ರತಿ ಆಟಗಾರರು ಕನಿಷ್ಠ ಎರಡು ಪಂದ್ಯಗಳಲ್ಲಿ ಆಡಲು ಅವಕಾಶ ಸಿಗಲಿದೆ. ಪ್ರತಿಷ್ಠಿತ ಸುದೀರ್ಮನ್ ಕಪ್, ಥಾಮಸ್ ಕಪ್ ಹಾಗೂ ಊಬರ್ ಕಪ್ ಫೈನಲ್ಸ್ ಟೂರ್ನಿಗಳಲ್ಲಿ ಭಾಗವಹಿಸುವ ತಂಡಗಳ ಮಿತಿಯನ್ನು ಹೆಚ್ಚಿಸಲಾಗುತ್ತದೆ. ವಿಶ್ವ ಟೂರ್ ಫೈನಲ್ಸ್ ನಡೆಯುವ ತಾಣವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಬಿಡಬ್ಲ್ಯುಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಶಸ್ತಿ ಮೊತ್ತ ಹೆಚ್ಚಳ:

ಪ್ರತಿಯೊಂದು ಸೂಪರ್ 1000 ಟೂರ್ನಿಗಳ ಒಟ್ಟು ಪ್ರಶಸ್ತಿ ಮೊತ್ತವನ್ನು ₹18 ಕೋಟಿಗೆ ಹೆಚ್ಚಿಸಲಾಗಿದೆ. ಸೂಪರ್ 750 ಟೂರ್ನಿಗೆ ₹10 ಕೋಟಿ ಹಾಗೂ ಸೂಪರ್ 500 ಟೂರ್ನಿಗೆ ₹5 ಕೋಟಿ ನಿಗದಿಪಡಿಸಲಾಗಿದೆ. ಸೂಪರ್ 300 ಹಾಗೂ ಸೂಪರ್ 100 ಟೂರ್ನಿಗಳ ಪ್ರಶಸ್ತಿ ಮೊತ್ತವನ್ನು ಕ್ರಮವಾಗಿ ₹2.6 ಕೋಟಿ ಮತ್ತು ₹1.26 ಕೋಟಿಗೆ ಏರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.