ಬೆಂಗಳೂರು: ಲಖನೌನಲ್ಲಿ ಇದೇ 15ರಿಂದ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ನಲ್ಲಿ ಆಡಲಿರುವ ದೇವದತ್ತ ಪಡಿಕ್ಕಲ್ ನಾಯಕತ್ವದ ಕರ್ನಾಟಕ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.

ಈಚೆಗೆ ನಡೆದ ಕ್ವಾರ್ಟರ್ಫೈನಲ್ನಲ್ಲಿ ಮುಂಬೈ ತಂಡವನ್ನು ಅದರ ತವರುನೆಲದಲ್ಲಿಯೇ ಮಣಿಸಿದ್ದ ತಂಡವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಭಾರತ ತಂಡದ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ ಎಂ ಕೃಷ್ಣ ಕೂಡ ಇದ್ದಾರೆ. ವಿಕೆಟ್ಕೀಪರ್ಗಳಾದ ಕೃತಿಕ್ ಕೃಷ್ಣ ಮತ್ತು ಕೆ.ಎಲ್. ಶ್ರೀಜಿತ್ ಕೂಡ ಸ್ಥಾನ ಪಡೆದಿದ್ದಾರೆ. ಕರ್ನಾಟಕ ತಂಡವು ನಾಲ್ಕರ ಘಟ್ಟದಲ್ಲಿ ಉತ್ತರಾಖಂಡವನ್ನು ಎದುರಿಸಲಿದೆ.

ಉತ್ತರಾಖಂಡಕ್ಕೆ ಡೆಹ್ರಾಡೂನ್ ತವರು ಕ್ರೀಡಾಂಗಣವಾಗಿದೆ. ಆದರೆ ಕಾರಣಾಂತರಗಳಿಂದ ಪಂದ್ಯವನ್ನು ಲಖನೌನ ಎಕನಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ.

ತಂಡ: ದೇವದತ್ತ ಪಡಿಕ್ಕಲ್ (ನಾಯಕ), ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್, ಅನೀಶ್ ಕೆ.ವಿ., ಕರುಣ್ ನಾಯರ್, ಆರ್. ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ಕೀಪರ್), ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ, ಪ್ರಸಿದ್ಧ ಎಂ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆ.ಎಲ್. ಶ್ರೀಜಿತ್, ವೈಶಾಖ ವಿಜಯಕುಮಾರ್.

ಕೋಚ್: ಯರೇಗೌಡ ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.