ಚ‘ಮೊದ್ಲೆಲ್ಲಾ ಹೈಕಮಾಂಡ್ ಓಲೈಸಕ್ಕೆ ಹಾರ–ತುರಾಯಿ ಸನ್ಮಾನ. ಈಗ ಪದರ್ಗುಟ್ಕೊಂಡು ಬೆನ್ನತ್ತಿ ಓಗ್ಬೇಕು ವಿಮಾನ’ ನಕ್ಕ ಗುದ್ಲಿಂಗ.

‘ಇಂಗ್ ವೊಸ ತರ ಸಾಹಸ ಮಾಡಕ್ಕೂ ಬೀಟನ್ವೇ, ರನ್ವೇ ಅಂತಾರೆ. ಆದ್ರೂ ಅಲ್ಯಾಕೋ ಸಿಎಂ, ಡಿಸಿಎಂ ಇಬ್ರೂ ನಾನೊಂದು ತೀರಾ ನೀನೊಂದು ತೀರಾ ಪ್ಯಾಥೋ ಸಾಂಗ್ ಆಕ್ಕಂಡು ನಿಂತಿದ್ರಲ್ಲ’.

‘ತಳ ಸೀದು ಧಗ್ ಅನ್ನೋ ಒತ್ನಲ್ಲಿ ಏನ್ ರಾಕ್ ಸಾಂಗ್ ಆಕ್ಕಂಡು ಜಿಂಗಿಚಕ್ಕ ಡಾನ್ಸ್ ಮಾಡಕ್ಕೆ ಆಯ್ತದೇನ್ಲಾ?’

‘ಅದೇನೋ ನಿಜವೇ ಬುಡು. ಈ ಮಾಡೆಲ್ಗಳ ಶೋ ರ್ಯಾಂಪ್ ಇರಕಾಕಿಲ್ವಾ, ಅದ್ಕೂ ರನ್ವೇ ಅಂತಾರೆ. ಇದೂ ಒಂತರಾ ಹೈಕಮಾಂಡ್ ಮಾಡುಸ್ತಿರೋ ಡಾನ್ಸೇ ಕಣ್ಲಾ’.

‘ರಾಹುಲಣ್ಣ ಯಾರನ್ನ ಪೈಲೆಟ್ ಮಾಡಿ ಕಾಕ್ಪಿಟ್ಟಲ್ಲಿ ಹಾಕ್ತಾರೋ, ಯಾರನ್ನ ಸೋಕ್ ಪಿಟ್ಟಲ್ಲಿ ಹಾಕ್ತಾರೋ ದೇವರಿಗೇ ಗೊತ್ತು’.

‘ಸೋಕ್ ಪಿಟ್ ಅಂದ್ರೆ ಯೋನ್ಲಾ?’

‘ನಾರಿನ್ ಗುಂಜ್ ಆಕಿ ನೀರು ಇಂಗ್ಸೋದು. ಇಲ್ಲಿ ಭಿನ್ನಮತನ ಇಂಗ್ಸೋದು. ನಾಯಕ್ರುಗೆ ಏನ್ ಯೋಳುದ್ರಂತೋ?’

‘ಒಬ್ರಿಗೆ ಮತ ಕಳವು, ಇನ್ನೊಬ್ರಿಗೆ ಮನರೇಗಾ ಟಾಸ್ಕ್ ಕೊಟ್ಟು ಗೆದ್ದೋರಿಗೆ ಮಣೆ ಆಕದು ಅಂದವ್ರಂತೆ’.

‘ಅಯ್ಯೊ ಮನೆಗೋಗೋ ಅಂಗಾದಾತು ಅಂತ ಮನೋ
ರೋಗ ಅಂಟ್ಕಂಡದೆ. ಮನೆ‘ರಾಗಾ’ ಬದ್ಲಾಯಿಸುದ್ರೆ ಎಂಗೆ?’

‘ಒಟ್ನಾಗೆ ರಾಹುಲಣ್ಣಂಗೆ ಭಾರೀ ಪೇಚಾಟ ಆಗೋಗದೆ. ಎಲ್ಲಾರಾ ಒಂದ, ಎರಡ ಮಾಡಕ್ಕು ಇಮಾನದಿಂದ ಇಳಿಯಂಗಿಲ್ಲ, ನಾಯಕ್ರು ಅಟಕಾಯಿಸ್ಕಂಡ್ ಬುಡ್ತಾರೆ’.

‘ಅದ್ಕೇ ಸಮ್ಮರ್ ಟೂರ್ ಅಂತ ಫಾರಿನ್ಗೆ ಒಂಟೋದ್ರೆ ಮಳೆಗಾಲದ ಕುದಿವೇಶನದ ತಂಕ ರನ್ವೇ ಕಾಯೋ ಅಂಗಿಲ್ಲ’.

‘ಇದು ರನ್ವೇ ಟಾಕ್ ಅಲ್ಲ, ರನ್ ಅವೇ ಟಾಕ್...’ ಎಂದ ಪರ್ಮೇಶಿ.

ಎಲ್ಲಾ ಬಿದ್ದು ಬಿದ್ದು ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.