ಭಾನುವಾರ, 9 ನವೆಂಬರ್ 2025
×
ADVERTISEMENT
ADVERTISEMENT

ಒಳನೋಟ | ಸುರಂಗ: ವಿ–ವಾದ ತರಂಗ

Published : 8 ನವೆಂಬರ್ 2025, 23:52 IST
Last Updated : 8 ನವೆಂಬರ್ 2025, 23:52 IST
ಫಾಲೋ ಮಾಡಿ
Comments
‘ತಿಂಗಳಿಗೆ ₹18 ಸಾವಿರ ಬೇಕು’ ಸುರಂಗ ರಸ್ತೆ ಯೋಜನೆಗೆ ಮಹಾನಗರ ಯೋಜನಾ ಸಮಿತಿ, ಬಿಎಂಎಲ್‌ಟಿಎ ಅಥವಾ ಪರಿಸರ ಇಲಾಖೆಯಿಂದ ಯಾವುದೇ ಅನುಮೋದನೆ ಪಡೆದಿಲ್ಲ. ಸಮಗ್ರ ಸಂಚಾರ ಯೋಜನೆಯಲ್ಲಿ (ಸಿಎಂಪಿ) ಇದು ಇಲ್ಲ. ನಗರ ಭೂಸಾರಿಗೆ ನಿರ್ದೇಶನಾಲಯವು (ಡಿಯುಎಲ್‌ಟಿ) ‘ಈ ಯೋಜನೆಯು ಅಪೇಕ್ಷಣೀಯವಲ್ಲ’ ಎಂದು ಹೇಳಿದೆ. ಎಷ್ಟು ಜನರು ಸುರಂಗ ರಸ್ತೆ ಬಳಸಲಿದ್ದಾರೆ ಎಂದು ಅಂದಾಜಿಸಲು ಯಾವುದೇ ಅಧ್ಯಯನ ಮಾಡಿಲ್ಲ. ಸುರಂಗ ರಸ್ತೆ ‘ಕಾರುಗಳಿಗೆ ಮಾತ್ರ’ ಎಂದು ಡಿಪಿಆರ್‌ ಹೇಳಿದೆ. ಈಗ ನಗರದಲ್ಲಿ ಕೇವಲ 25 ಲಕ್ಷ ಕಾರುಗಳಿವೆ. ಅವರಲ್ಲಿ ಎಷ್ಟು ಮಂದಿ 16 ಕಿ.ಮೀ. ಪ್ರಯಾಣಿಸಲು ಪ್ರತಿದಿನ ಸುಮಾರು ₹600 ಪಾವತಿಸಲು ಶಕ್ತರು? ಅವರು ಈ ಮಾರ್ಗವನ್ನು ನಿಯಮಿತವಾಗಿ ಬಳಸುತ್ತಿದ್ದರೆ ತಿಂಗಳಿಗೆ ₹18 ಸಾವಿರ ಬೇಕಾಗುತ್ತದೆ. ಎಷ್ಟು ಜನ ಇಷ್ಟು ಮೊತ್ತವನ್ನು ಪಾವತಿಸಲು ಸಾಧ್ಯ?
ಕಾತ್ಯಾಯಿನಿ ಚಾಮರಾಜ್‌, ಸಿವಿಕ್‌– ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ
‘ಮಂಕುಬೂದಿ ಎರಚುವ ಯೋಜನೆ’ಸಾಲ ಮಾಡಿ ಸುರಂಗ ನಿರ್ಮಿಸಿ, ಶುಲ್ಕ ವಿಧಿಸುವುದರಿಂದ ಯಾರಿಗೆ ಉಪಯೋಗ? ಯಾರೋ ಕೆಲವರಿಗೆ ಅನುಕೂಲ ಮಾಡಿಕೊಡಲು ಜನಸಾಮಾನ್ಯರ ತೆರಿಗೆ ಹಣ ಬಳಸಿಕೊಳ್ಳುವುದು ಯಾವ ನ್ಯಾಯ? ಬೆಂಗಳೂರಿನ ಭೂಗರ್ಭದಲ್ಲಿ ಅತ್ಯಂತ ಗಟ್ಟಿಮುಟ್ಟಾದ ಬಂಡೆಗಳಿವೆ. ಇಂತಹ ‘ಹಾರ್ಡ್‌ ರಾಕ್‌’ ಕೊರೆಯಲು ಬಿಲ್‌ ಹೆಚ್ಚು ಮಾಡಿಕೊಳ್ಳುತ್ತಾರೆ. ಇದರಿಂದ ಸಮಸ್ಯೆಗಳೇ ಹೆಚ್ಚು. ನಗರ ತಜ್ಞನಾಗಿ ನಾನು ಸರ್ಕಾರಗಳ ಮಟ್ಟದಲ್ಲಿ ಹಲವು ಯೋಜನೆಗಳಿಗೆ ಸಲಹೆಗಳನ್ನೂ ನೀಡಿದ್ದೇನೆ. ಈ ಸುರಂಗ ರಸ್ತೆ ಜನರಿಗೆ ಮಂಕುಬೂದಿ ಎರಚುವ ಅತ್ಯಂತ ದುಬಾರಿ ಯೋಜನೆಯಷ್ಟೇ.
ಪ್ರೊ. ಎಂ.ಎನ್‌. ಶ್ರೀಹರಿ, ಸಂಚಾರ ತಜ್ಞ
‘ಕದ್ದುಮುಚ್ಚಿ ಅನುಷ್ಠಾನ’ ಸುರಂಗ ರಸ್ತೆಯಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತೇವೆ ಎಂದು ಹೇಳುವವರು ಯಾವ ರೀತಿ ಪರಿಹಾರ ಸಿಗಲಿದೆ ಎಂಬುದನ್ನು ಯಾರಿಗೂ ತಿಳಿಸಿಲ್ಲ. ಬೃಹತ್‌ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುನ್ನ ನಾಗರಿಕರು, ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಪರಿಸರ ಹಾಗೂ ನಾಗರಿಕರ ಆಸ್ತಿ ಮೇಲಾಗುವ ಪರಿಣಾಮವನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬುದನ್ನೂ ಹೇಳಿಲ್ಲ. ಸುರಂಗ ರಸ್ತೆ ಯೋಜನೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡದೆ, ಎಲ್ಲವನ್ನೂ ಕದ್ದುಮುಚ್ಚಿ ಮಾಡಲಾಗುತ್ತಿದೆ. ಸುರಂಗ ರಸ್ತೆ ಲಾಲ್‌ಬಾಗ್‌ಗೆ ಧಕ್ಕೆಯನ್ನುಂಟು ಮಾಡಲಿದೆ. ಲಾಲ್‌ಬಾಗ್‌, ಸ್ಯಾಂಕಿ ಕೆರೆ, ಹೆಬ್ಬಾಳ ಕೆರೆಗೆ ಮಾತ್ರವಲ್ಲ, ನಗರದ ಎಲ್ಲ ಭಾಗಗಳಿಗೂ ತೊಂದರೆಯಾಗಲಿದೆ..
ಡಿ.ಟಿ. ದೇವರೆ, ಪರಿಸರ ಕಾರ್ಯಕರ್ತ
ಹಸಿರುನಾಶದ ಅಭಿವೃದ್ಧಿ ಬೇಡ’ ಯೋಜನೆ ಬಗ್ಗೆ ಯಾರೂ ಸವಿವರವಾದ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡಿಲ್ಲ. ಮಾಹಿತಿ ನೀಡದೆ ಮುಚ್ಚಿಡುವಂತಹದ್ದು ಏನಿದೆ ಎಂಬುದೇ ಹಲವಾರು ಗೊಂದಲಕ್ಕೆ ಕಾರಣ. ಲಾಲ್‌ಬಾಗ್‌ನಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬಂಡೆ ಬಗ್ಗೆ ಹಲವು ರೀತಿಯ ವ್ಯಾಖ್ಯಾನಗಳಿವೆ. ಇದಕ್ಕೆ ಹೊಂದಿಕೊಂಡಂತೆಯೇ ಮೂರ್ನಾಲ್ಕು ಜಲಮೂಲಗಳಿವೆ. ಸುರಂಗ ರಸ್ತೆ ಇವುಗಳ ಕೆಳಗೆ ನಿರ್ಮಾಣವಾಗುವುದರಿಂದ ತೊಂದರೆಯಾಗುವುದು ನಿಶ್ಚಿತ. ಇನ್ನು ಮೇಲ್ಭಾಗದಲ್ಲಿ ಕೆಲವು ಎಕರೆಯ ಲಾಲ್‌ಬಾಗ್‌ ಪ್ರದೇಶದಲ್ಲಿ ‘ಶಾಫ್ಟ್‌’ ನಿರ್ಮಾಣವಾದರೆ ವಾಹನ ದಟ್ಟಣೆಯ ಜೊತೆಗೆ ಜನದಟ್ಟಣೆಯೂ ಉಂಟಾಗುತ್ತದೆ
ವಿಜಯ್‌ ನಿಶಾಂತ್‌,ಪರಿಸರ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT