ಆರ್. ಮಂಜುನಾಥ್
ಪ್ರಜಾವಾಣಿಯಲ್ಲಿ ಹಿರಿಯ ವರದಿಗಾರರಾಗಿರುವ ಆರ್. ಮಂಜುನಾಥ್ ಅವರು ನಗರಾಭಿವೃದ್ಧಿ, ಪರಿಸರ, ಬೆಂಗಳೂರಿನ ಸಮಗ್ರ ವಿಶೇಷ ವರದಿಗಳತ್ತ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕೆರೆಗಳ ಬಗ್ಗೆ ಹಲವು ಅಧ್ಯಯನ, ತನಿಖಾ ವರದಿಗಳನ್ನು ಬರೆದಿರುವುದರಿಂದ ಅವರು ಕೆರೆ ಮಂಜುನಾಥ್ ಎಂದೇ ಪ್ರಸಿದ್ಧರು. 1995ರಿಂದ ಪ್ರಮುಖ ದಿನಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’, ಕರ್ನಾಟಕ ಸರ್ಕಾರದಿಂದ “ಪರಿಸರ ಪತ್ರಿಕೋದ್ಯಮ ಪ್ರಶಸ್ತಿ’ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ‘ಯಿಂದ ಪುರಸ್ಕೃತರಾಗಿದ್ದಾರೆ.