ಲಾರ್ಡ್ಸ್: ಕನ್ನಡಿಗ ಕೆ.ಎಲ್. ರಾಹುಲ್ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯು ಮೂರನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶತಕದ ಸಂಭ್ರಮ ಆಚರಿಸಿದ್ದಾರೆ. ಅದರೊಂದಿಗೆ ಅವರು, 'ಕ್ರಿಕೆಟ್ ಕಾಶಿ' ಲಾರ್ಡ್ಸ್ನಲ್ಲಿ ಎರಡು ಬಾರಿ ಮೂರಂಕಿ ಮೊತ್ತಗಳಿಸಿದ ಭಾರತದ ಪ್ರಥಮ ಆರಂಭಿಕ ಬ್ಯಾಟರ್ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.

177 ಎಸೆತಗಳಲ್ಲಿ 100 ರನ್ ಗಳಿಸಿದ ರಾಹುಲ್, ಇಂಗ್ಲೆಂಡ್ನಲ್ಲಿ ಗಳಿಸಿದ ನಾಲ್ಕನೇ ಶತಕವಿದು. ಒಟ್ಟಾರೆ ಅವರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 10ನೇಯದ್ದು.

'ಹೋಮ್ ಆಫ್ ಕ್ರಿಕೆಟ್' ಎನಿಸಿರುವ ಲಾರ್ಡ್ಸ್ನಲ್ಲಿ ಪ್ರವಾಸಿ ತಂಡಗಳ ನಾಲ್ವರು ಆರಂಭಿಕರಷ್ಟೇ ಒಂದಕ್ಕಿಂತ ಹೆಚ್ಚು ಶತಕ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ, ಆಸ್ಟ್ರೇಲಿಯಾದ ಬಿಲ್ ಬ್ರೌನ್, ವೆಸ್ಟ್ ಇಂಡೀಸ್ನ ಗಾರ್ಡನ್ ಗ್ರೀನಿಜ್ ಹಾಗೂ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅವರೊಂದಿಗೆ ಇದೀಗ ರಾಹುಲ್ ಸ್ಥಾನ ಹಂಚಿಕೊಂಡಿದ್ದಾರೆ. ಈ ಎಲ್ಲರೂ ತಲಾ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.

ರಾಹುಲ್ 2021ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 129 ರನ್ ಗಳಿಸಿದ್ದರು.

ರಾಹುಲ್–ಪಂತ್ ಉತ್ತಮ ಆಟ
ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿದ್ದ ಭಾರತ ಪರ ಇಂದು ರಾಹುಲ್ ಹಾಗೂ ವಿಕೆಟ್ಕೀಪರ್ ರಿಷಭ್ ಪಂತ್ ಉತ್ತಮ ಪ್ರದರ್ಶನ ತೋರಿದರು. ಇವರಿಬ್ಬರು ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 141 ರನ್ ಕೂಡಿಸಿದರು. ಆದರೆ, ಕೇವಲ 6 ರನ್ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡರು.

112 ಎಸೆತಗಳಲ್ಲಿ 74 ರನ್ ಗಳಿಸಿದ್ದ ಪಂತ್, ಮೊದಲ ಅವಧಿಯ ಕೊನೇ ಎಸೆತದಲ್ಲಿ ಔಟಾದರು. ಊಟದ ವಿರಾಮದ ನಂತರ 10ನೇ ಎಸೆತದಲ್ಲಿ ರಾಹುಲ್ ಕೂಡ ವಿಕೆಟ್ ಒಪ್ಪಿಸಿದರು.
.ಟೆಸ್ಟ್ ಕ್ರಿಕೆಟ್ನಲ್ಲಿ ಅತಿಹೆಚ್ಚು ಕ್ಯಾಚ್: ದ್ರಾವಿಡ್ ದಾಖಲೆ ಮುರಿದ ಜೋ ರೂಟ್.ಲಾರ್ಡ್ಸ್ ಟೆಸ್ಟ್ನಲ್ಲಿ 5 ವಿಕೆಟ್ ಉರುಳಿಸಿದರೂ ಸಂಭ್ರಮಿಸದ ಬೂಮ್ರಾ: ಕಾರಣವೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.