ಲಾರ್ಡ್ಸ್: ಭಾರತದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ ಅವರು ದಾಖಲೆ ನಿರ್ಮಿಸಿದರು. ಟೆಸ್ಟ್ ಪರಿಣತ ಬ್ಯಾಟರ್ ಎನಿಸಿಕೊಂಡಿರುವ ಅವರು, ಈ ಬಾರಿ ಫೀಲ್ಡಿಂಗ್ ಮೂಲಕ ಸಾಧನೆ ಮಾಡಿರುವುದು ವಿಶೇಷ.

ಭಾರತದ ಇನಿಂಗ್ಸ್ನ 21ನೇ ಓವರ್ ವೇಳೆ ಮೊದಲ ಸ್ಲಿಪ್ನಲ್ಲಿ ನಿಂತಿದ್ದ ರೂಟ್, ಬೆನ್ ಸ್ಟೋಕ್ಸ್ ಎಸೆದ ಈ ಓವರ್ನ ಎರಡನೇ ಎಸೆತದಲ್ಲಿ ಕನ್ನಡಿಗ ಕರುಣ್ ನಾಯರ್ ಅವರ ಕ್ಯಾಚ್ ಪಡೆದರು. ಉತ್ತಮ ಲೆಂಗ್ತ್ನಲ್ಲಿ ಬಂದ ಚೆಂಡನ್ನು ರಕ್ಷಣಾತ್ಮಕವಾಗಿ ಆಡುವ ಪ್ರಯತ್ನದಲ್ಲಿ ಕರುಣ್ ವಿಫಲವಾದರು. ಬ್ಯಾಟ್ನ ಅಂಚಿಗೆ ಸವರಿ ಬಂದ ಚೆಂಡನ್ನು ರೂಟ್ ಎಡಕ್ಕೆ ಜಿಗಿದು ಒಂದೇ ಕೈಯಲ್ಲಿ ಹಿಡಿದುಕೊಂಡರು. ಇದು ಟೆಸ್ಟ್ ಮಾದರಿಯಲ್ಲಿ ಅವರು ಪಡೆದ 211ನೇ ಕ್ಯಾಚ್.

ಇದರೊಂದಿಗೆ ದೀರ್ಘ ಮಾದರಿಯಲ್ಲಿ ಅತಿಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ ಎಂಬ ಶ್ರೇಯ ಅವರದ್ದಾಯಿತು.

ಈ ದಾಖಲೆ ಇದುವರೆಗೆ ಭಾರತದ ದಿಗ್ಗಜ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿತ್ತು. 'ಸ್ಲಿಪ್ ಕ್ಯಾಚ್' ಎಕ್ಸ್ಪರ್ಟ್ ಎನಿಸಿದ್ದ ಅವರು 164 ಪಂದ್ಯಗಳ 301 ಇನಿಂಗ್ಸ್ಗಳಲ್ಲಿ 210 ಕ್ಯಾಚ್ ಪಡೆದಿದ್ದರು.

205 ಕ್ಯಾಚ್ ಪಡೆದಿರುವ ಶ್ರೀಲಂಕಾದ ಮಹೇಲ ಜಯವರ್ಧನೆ ನಂತರದ ಸ್ಥಾನದಲ್ಲಿ ಇದ್ದಾರೆ.
.IND vs ENG 2nd Test: ಬೂಮ್ರಾಗೆ 5 ವಿಕೆಟ್: ರಾಹುಲ್ ಅರ್ಧಶತಕ.ಲಾರ್ಡ್ಸ್ನಲ್ಲಿ 350ರ ಗಡಿ ದಾಟಿದ ಆಂಗ್ಲರು: ಭಾರತದ ಜಯದ ಹಾದಿ ಕಠಿಣ! ಕಾರಣವೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.