ನವದೆಹಲಿ: ಆಟಗಾರರ ಕೇಂದ್ರೀಯ ಗುತ್ತಿಗೆ ವ್ಯವಸ್ಥೆಯಲ್ಲಿ ಎ+ ಶ್ರೇಣಿಯನ್ನು (ಕೆಟಗರಿ) ತೆಗೆದುಹಾಕಿ ಸರಳೀಕೃತಗೊಳಿಸಲು ಬಿಸಿಸಿಐ ಮುಂದಾಗಿದೆ. 2018ರಲ್ಲಿ ಇದನ್ನು ಮೊದಲ ಬಾರಿ ಈ ಪರಿಚಯಿಸಲಾಗಿತ್ತು.

ಹಾಲಿ ಇರುವ ನಿಯಮಾವಳಿಯಲ್ಲಿ ಎ+ ಶ್ರೇಣಿಯಡಿ ಬರುವ ಆಟಗಾರ ವಾರ್ಷಿಕ ₹7 ಕೋಟಿ ಮೊತ್ತ ಪಡೆಯುತ್ತಾರೆ. ಎ ಶ್ರೇಣಿಯಲ್ಲಿರುವ ಆಟಗಾರರು ₹5 ಕೋಟಿ, ಬಿ ಶ್ರೇಣಿಯಲ್ಲಿರುವ ಆಟಗಾರರು ₹3 ಕೋಟಿ ಹಾಗೂ ಸಿ ಶ್ರೇಣಿಯಲ್ಲಿರುವ ಆಟಗಾರರು ₹1 ಕೋಟಿ ಪಡೆಯುತ್ತಾರೆ.

2025–26ನೇ ಸಾಲಿಗೆ ಕೇಂದ್ರೀಯ ಗುತ್ತಿಗೆಯಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಆದರೆ ಮೂರು (ಎ, ಬಿ ಮತ್ತು ಸಿ) ಶ್ರೇಣಿಗಳು ಮಾತ್ರ ಇರಲಿವೆ.

ಈ ಹಿಂದಿನ ಎ+ ಶ್ರೇಣಿಯಲ್ಲಿ ನಾಲ್ವರು ಆಟಗಾರರು (ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ ಮತ್ತು ರವೀಂದ್ರ ಜಡೇಜ) ಮಾತ್ರ ಸ್ಥಾನ ಪಡೆದಿದ್ದರು. ಇವರಲ್ಲಿ ಬೂಮ್ರಾ ಮಾತ್ರ ಮೂರೂ ಮಾದರಿಯಲ್ಲಿ ಆಡುತ್ತಿದ್ದಾರೆ. ಜಡೇಜ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಉಳಿದುಕೊಂಡಿದ್ದಾರೆ. ರೋಹಿತ್ ಮತ್ತು ಕೊಹ್ಲಿ ಏಕದಿನ ಮಾದರಿಗೆ ಸೀಮಿತಗೊಂಡಿದ್ದಾರೆ.

ವೇತನ ಕಡಿತವಿಲ್ಲ: ಕೇಂದ್ರೀಯ ಗುತ್ತಿಗೆಯನ್ನು ಮುಂದಿನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಸ್ಥಿರೀಕರಿಸಲಾಗುತ್ತದೆ. ಆದರೆ ಕಾರ್ಯಭಾರ ಒತ್ತಡದ ಭಾಗವಾಗಿ ಅಲ್ಲೊಂದು, ಇಲ್ಲೊಂದು ಸರಣಿ ಕಳೆದುಕೊಂಡಿರುವ ಬೂಮ್ರಾ ಅವರಂಥ ಆಟಗಾರರಿಗೆ ವೇತನ ಕಡಿತವಿರುವುದಿಲ್ಲ ಎಂದು ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟೆಸ್ಟ್ ಮತ್ತು ಏಕದಿನ ಮಾದರಿಗೆ ತಂಡದ ನಾಯಕರಾಗಿರುವ ಶುಭಮನ್ ಗಿಲ್ ಅವರೂ ಎ ಶ್ರೇಣಿಗೆ ಬರಲಿದ್ದಾರೆ.

ಕೊಹ್ಲಿ ಮತ್ತು ರೋಹಿತ್ ಅವರನ್ನು ‘ಬಿ’ ಶ್ರೇಣಿಗೆ ಸೇರಿಸುವ ಸಾಧ್ಯತೆಯಿದೆ. ಬದಲಾಗುವ ಪರಿಸ್ಥಿತಿಯಲ್ಲಿ ಎ ಶ್ರೇಣಿಯ ಆಟಗಾರರು ₹7ಕೋಟಿ ಮೊತ್ತ ಪಡೆಯುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.