ದೇಹ ತಂಪಾಗಿಸುವ ಕೋಸಂಬರಿ
ಯುಗಾದಿಯ ಭರ್ಜರಿ ಊಟಕ್ಕೆ ಕೋಸಂಬರಿ ಸದಾ ಹೊಸತನ ನೀಡುತ್ತದೆ. ಬೇಸಿಗೆಯ ಬಿಸಿಲು ಆರಂಭವಾಗುವ ಈ ಹಬ್ಬದಿಂದ ಹಸಿಬೇಳೆ ಕಾಳುಗಳ ಕೋಸಂಬರಿ ಹೊಟ್ಟೆಗೆ ತಂಪು ತರುತ್ತದೆ. ನಿಮ್ಮ ಹಬ್ಬದೂಟದಲ್ಲಿ ಈ ಕೋಸಂಬರಿಗಳು ಇವೆಯೇ ನೋಡಿ.. ಇಲ್ಲದಿದ್ದರೆ ಇವನ್ನು ತಯಾರು ಮಾಡಿ.
ಹೆಸರು ಕಾಳು ಕೋಸಂಬರಿ
ಮಾಡುವ ವಿಧಾನ : ಒಲೆಯ ಒಂದು ಪಾತ್ರೆಯಿಟ್ಟು ಬಾಣಲೆ ಕಾದ ಮೇಲೆ ಎರಡು ಸ್ಪೂನ್ ಎಣ್ಣೆ ಹಾಕಿ, ಅದಕ್ಕೆ ಶೇಂಗಾ ಬೇಳೆ ಚನ್ನಾಗಿ ಹುರಿಯಬೇಕು, ನಂತರ ಒಲೆ ಆರಿಸಬೇಕು. ಬಳಿಕ ಒಣ ಕೆಂಪು ಕಾರದ ಪುಡಿ ಜೊತೆ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಬಿಡಬೇಕು. ನಂತರ ತುರಿದ ಕ್ಯಾರೆಟ್, ಸಣ್ಣ ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರ್ಧ ಲಿಂಬು ಹಣ್ಣಿನ ರಸ ಹಾಕಿ ಮಿಶ್ರಣ ಮಾಡಿ ಸೇವಿಸಬಹುದು.
ಪಾಪ್ ಕಾರ್ನ್ ಕೋಸಂಬರಿ
ಬೇಕಾಗುವ ಸಾಮಗ್ರಿಗಳು: ಪಾಪ್ ಕಾರ್ನ್ (ಒಂದು ಕಪ್ಪು), ದಾಳಿಂಬೆ ಹಣ್ಣು (ಅರ್ಧ ಕಪ್ಪು), ತುರಿದ ತೆಂಗಿನ ಕಾಯಿ (ಅರ್ಧ ಕಪ್ಪು), ಕೊತ್ತಂಬರಿ, ಲಿಂಬು, ಉಪ್ಪು, ಕರಿಮೆಣಸು, ಕರಿಬೇವು, ಸಾಸಿವೆ, ಎಣ್ಣೆ.
ಮಾಡುವ ವಿಧಾನ: ಬೇಯಿಸಿಟ್ಟುಕೊಂಡ ಒಂದು ಕಪ್ಪು ಪಾಪ್ ಕಾರ್ನಗೆ ಅರ್ಧ ಕಪ್ಪು ದಾಳಿಂಬೆ ಹಣ್ಣುಗಳ ಬೀಜ, ತುರಿದ ಕೊಬ್ಬರಿ ಅರ್ಧ ಕಪ್ಪು, ಹೆಚ್ಚಿಟ್ಟುಕೊಂಡ ನಾಲ್ಕೈದು ಎಸಳು ಕೊತ್ತಂಬರಿ ಸೊಪ್ಪು, ಅರ್ಧ ಹಣ್ಣಿನ ಲಿಂಬು ರಸ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಕಾಳು ಪೌಡರ್ ಹಾಕಿ ಮಿಶ್ರಣ ಮಾಡಬೇಕು. ನಂತರ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದು ಕಾದ ನಂತರ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾಯಿಸಬೇಕು ಕಾದ ಎಣ್ಣೆಗೆ ಸಾಸಿವೆ ಕರಿಬೇವು ಹಾಕಿ ಬೇಯಿಸಿದ ನಂತರ ಮಿಶ್ರಣ ಮಾಡಿಟ್ಟುಕೊಂಡ ಕೋಸಂಬರಿಗೆ ಹಾಕಿ ಮಿಶ್ರಣ ಮಾಡಬೇಕು. ನಂತರ ಸೇವಿಸಬಹುದು.
ಶೇಂಗಾ ಬೇಳೆ ಕೋಸಂಬರಿ
ಬೇಕಾಗುವ ಸಾಮಗ್ರಿಗಳು: ಶೇಂಗಾ ಬೇಳೆ ( ಒಂದು ಕಪ್ಪು) ಒಂದು ಈರುಳ್ಳಿ, ಎರಡು ಕ್ಯಾರೆಟ್, ಕೊತಂಬರಿ, ಉಪ್ಪು, ಲಿಂಬೆಹಣ್ಣು.