ಎಐ ಶೃಂಗಸಭೆಯ ಸಂಪೂರ್ಣ ಬೆಳವಣಿಗೆಯ ವಿವರ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ದೆಹಲಿಯಲ್ಲಿ ನಡೆಯುತ್ತಿರುವ ಎ.ಐ ಇಂಪ್ಯಾಕ್ಟ್‌ ಶೃಂಗಸಭೆ–2026 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಶೃಂಗಸಭೆಯನ್ನು ‘ಭಾರತ ಮಂಟಪ’ದಲ್ಲಿ ಆಯೋಜಿಸಲಾಗಿದ್ದು, ವಿವಿಧ ದೇಶಗಳ ನಾಯಕರು ಭಾಗಿಯಾಗಿದ್ದಾರೆ.

|

ಚಿತ್ರ ಕೃಪೆ: ಪಿಟಿಐ

ಇಂಡಿಯಾ ಎ.ಐ ಶೃಂಗದಲ್ಲಿ ಮಾತಾನಡಿರುವ ಪ್ರದಾನಿ ನರೇಂದ್ರ ಮೋದಿ, ವಿಶ್ವದ ಆರನೇ ಒಂದು ಜನಸಂಖ್ಯೆ, ವಿಶ್ವದಲ್ಲೇ ಅತಿ ಹೆಚ್ಚು ಯುವಕರು ಹಾಗೂ ಅತಿ ದೊಡ್ಡ ತಂತ್ರಜ್ಞಾನ ಪ್ರತಿಭೆಗಳಿರುವ ಭಾರತದಲ್ಲಿ ಈ ಸಮಾವೇಶ ನಡೆಯುತ್ತಿದೆ ಎಂದು ಹೇಳಿದ್ದಾರೆ.

|

ಚಿತ್ರ ಕೃಪೆ: ಪಿಟಿಐ

ಸಭೆಯಲ್ಲಿ ಪ್ರದಾನಿ ನರೇಂದ್ರ ಮೋದಿ ಕೃತಕ ಬುದ್ಧಿಮತ್ತೆಗಾಗಿ ‘ಮಾನವ್‌ ವಿಷನ್‌’ ಎಂಬ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ. ಇದರ ಅಡಿಯಲ್ಲಿ 5 ಪ್ರಮುಖ ತತ್ವಗಳನ್ನು ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ವಿವರಿಸಿದ್ದಾರೆ. 

|

ಚಿತ್ರ ಕೃಪೆ: ಪಿಟಿಐ

‘ಮಾನವ್’ ಪದದ ಬಗ್ಗೆ ವಿವರಿಸಿರುವ ಅವರು, ನೈತಿಕತೆಯ ವ್ಯವಸ್ಥೆ, ಜವಾಬ್ದಾರಿಯುತ ಆಡಳಿತ, ರಾಷ್ಟ್ರೀಯ ಸಾರ್ವಭೌಮತ್ವ, ದತ್ತಾಂಶದ ಹಕ್ಕು, ಅಂತರ್ಗತ ತಂತ್ರಜ್ಞಾನ, ಮಾನ್ಯ ಮತ್ತು ಕಾನೂನುಬದ್ಧ ವ್ಯವಸ್ಥೆಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

|

ಚಿತ್ರ ಕೃಪೆ: ಪಿಟಿಐ

ಎಐ ಶೃಂಗಕ್ಕೆ ವಿಶ್ವದ ವಿವಿಧ ಮೂಲೆಗಳ ತಂತ್ರಜ್ಞಾನ ಪರಿಣಿತರು, ವಿಶ್ವ ನಾಯಕರು ದೆಹಲಿಗೆ ಆಗಮಿಸಿದ್ದಾರೆ. ಕಾರ್ಯಕ್ರಮ ಮುಗಿಸಿ ವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ವಿದೇಶಿ ಪ್ರತಿನಿಧಿಗಳು, ಶೃಂಗಕ್ಕೆ ಬಂದಿದ್ದ ಜನರು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದರು.

|

ಚಿತ್ರ ಕೃಪೆ: ಪಿಟಿಐ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಎಐ ಚಿತ್ರವನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಹಂಚಿಕೊಂಡಿದ್ದಾರೆ. ಚಿತ್ರದೊಂದಿಗೆ, 'ಸ್ನೇಹಿತರು ಒಂದಾದಾಗ, ನಾವೀನ್ಯತೆಯೂ ಜೊತೆಗೂಡುತ್ತದೆ ಎಂದು ಬರೆದುಕೊಂಡಿದ್ದಾರೆ.

|

ಚಿತ್ರ ಕೃಪೆ: ಪಿಟಿಐ

ಎ.ಐ ಶೃಂಗದಲ್ಲಿ ಚೀನಾ ನಿರ್ಮಿತ ‘ರೋಬೊ ಶ್ವಾನ’ ಪ್ರದರ್ಶಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯಿಂದ ಮುಜುಗರಕ್ಕೆ ಒಳಗಾದ ಸಂಘಟಕರು, ಶೃಂಗ ಸಭೆಯಿಂದ ಹೊರನಡೆಯುವಂತೆ ಗಲ್ಗೋಟಿಯಾಸ್ ವಿ.ವಿ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ. 

|

ಚಿತ್ರ ಕೃಪೆ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.