ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸಬೇಕು ಮತ್ತು ಎಲ್ಲರನ್ನೂ ಒಳಗೊಳ್ಳುವ ಹಾಗೂ ಸಬಲೀಕರಣದ ಸಾಧನವಾಗಿ ಬದಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಪಾದಿಸಿದರು.

‘ಭಾರತ ಮಂಟಪ’ದಲ್ಲಿ ‘ಎ.ಐ ಇಂಪ್ಯಾಕ್ಟ್ ಶೃಂಗ’ಕ್ಕೆ ಚಾಲನೆ ನೀಡಿದ ಅವರು, ‘ಈ ತಂತ್ರಜ್ಞಾನವನ್ನು ಪರಸ್ಪರ ಹಂಚಿಕೊಂಡಾಗ ಮತ್ತು ಅದರ ಕೋಡ್ಗಳು ಎಲ್ಲರಿಗೂ ಮುಕ್ತವಾಗಿರುವಾಗ ಅದು ನಿಜವಾಗಿಯೂ ಪ್ರಪಂಚದ ಒಳಿತಿಗಾಗಿ ಕೆಲಸ ಮಾಡಲಿದೆ ಎಂಬುದು ಭಾರತದ ಬಲವಾದ ನಂಬಿಕೆ’ ಎಂದು ಹೇಳಿದರು.

‘ಕೆಲವು ದೇಶಗಳು ಎ.ಐ ಅನ್ನು ಗೋಪ್ಯವಾಗಿ ಅಭಿವೃದ್ಧಿಪಡಿಸಬೇಕು ಎಂದು ಬಯಸುತ್ತವೆ. ಆದರೆ ಭಾರತದ ನಿಲುವು ಭಿನ್ನವಾಗಿದೆ. ಎ.ಐ ತಂತ್ರಜ್ಞಾನ ಎಲ್ಲರಿಗೂ ಮುಕ್ತವಾಗಬೇಕು ಎಂದು ನಂಬುತ್ತದೆ. ಹಾಗಾದಲ್ಲಿ ಮಾತ್ರ, ಲಕ್ಷಾಂತರ ಯುವ ಮನಸ್ಸುಗಳಿಗೆ ಈ ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಿಸಲು ಸಾಧ್ಯವಾಗುತ್ತದೆ’ ಎಂದರು.

‘ಕೃತಕ ಬುದ್ಧಿಮತ್ತೆಯು ಮಾನವನ ಇತಿಹಾಸದ ಪರಿವರ್ತನೆಯ ಅಧ್ಯಾಯವಾಗಿದೆ. ಭಾರತವು ಈ ಕ್ರಾಂತಿಯ ಒಂದು ಭಾಗವಾಗಿ ಉಳಿದಿಲ್ಲ. ನಾಯಕನಾಗಿ ಮುನ್ನಡೆಸುತ್ತಿದೆಯಲ್ಲದೆ, ಅದಕ್ಕೆ ಒಂದು ಸ್ಪಷ್ಟ ರೂಪ ನೀಡುತ್ತಿದೆ’ ಎಂದು ತಿಳಿಸಿದರು.

‘ಎ.ಐ ನಮ್ಮಲ್ಲಿನ ವ್ಯವಸ್ಥೆಗಳನ್ನು ಸರಳ, ಹೆಚ್ಚು ಪರಿಣಾಮಕಾರಿ ಮತ್ತು ಪ್ರಭಾವಶಾಲಿಯಾಗಿಸುತ್ತದೆ. ಇದು ಸೃಜನಶೀಲತೆಯನ್ನು ಬಯಸುವ ಜನರಿಗೆ ವಿಪುಲ ಅವಕಾಶಗಳನ್ನು ಸೃಷ್ಟಿಸುತ್ತದೆ. ನಾವೀನ್ಯ, ಉದ್ಯಮಶೀಲತೆ ಮತ್ತು ಹೊಸ ಉದ್ಯಮಗಳ ಸ್ಥಾಪನೆಗೆ ಪ್ರಮುಖ ಅವಕಾಶವಾಗಿದೆ’ ಎಂದು ವಿಶ್ವದ ವಿವಿಧ ದೇಶಗಳ ನಾಯಕರು ಮತ್ತು ಪ್ರಮುಖ ಕಂಪನಿಗಳ ಸಿಇಒಗಳು ಭಾಗವಹಿಸಿದ ಸಮಾರಂಭದಲ್ಲಿ ಹೇಳಿದರು.

‘ಇಂದು ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ- ಎ.ಐಗೆ ಭಯ ಪಡುವವರು ಮತ್ತು ಎ.ಐನಲ್ಲಿ ಅದೃಷ್ಟವನ್ನು ನೋಡುವವರು. ನಾವು ಭಯ ಪಡುವುದಿಲ್ಲ ಎಂದು ಹೆಮ್ಮೆ ಹಾಗೂ ಜವಾಬ್ದಾರಿಯಿಂದ ಹೇಳುತ್ತೇನೆ. ಭಾರತವು ಎ.ಐನಲ್ಲಿ ಸುಯೋಗ, ಭವಿಷ್ಯ, ಅವಕಾಶ ಮತ್ತು ನಾಳಿನ ನೀಲನಕ್ಷೆಯನ್ನು ನೋಡುತ್ತದೆ’ ಎಂದು ಪ್ರತಿಪಾದಿಸಿದರು.

‘ಭಾರತವು ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸುತ್ತಿದೆಯಲ್ಲದೆ ಅದನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿದೆ. ಎ.ಐ ಭವಿಷ್ಯದಲ್ಲಿ ಏನು ಮಾಡಬಲ್ಲದು ಎಂಬುದು ನಿಜವಾದ ಪ್ರಶ್ನೆ ಅಲ್ಲ. ಪ್ರಸ್ತುತ ಎ.ಐ ಯೊಂದಿಗೆ ನಾವು ಏನು ಮಾಡಬಹುದು ಎಂಬುದು ನಮ್ಮ ಮುಂದಿರುವ ಪ್ರಶ್ನೆ’ ಎಂದರು.

‘ಎ.ಐ ಒಂದು ಪರಿವರ್ತಕ ಶಕ್ತಿಯಾಗಿದೆ. ಅದು ತನ್ನ ನೈಜ ಉದ್ಧೇಶಗಳಿಂದ ದೂರ ಸರಿದರೆ, ವಿನಾಶಕ್ಕೆ ಕಾರಣವಾಗುತ್ತದೆ. ಅದನ್ನು ಸದುಯಪಯೋಗಪಡಿಸಿಕೊಂಡರೆ, ಜಗತ್ತಿನ ಒಳಿತಿಗೆ ಕಾರಣವಾಗುತ್ತದೆ’ ಸಲಹೆ ನೀಡಿದರು.

‘ಮಾನವನ ಇತಿಹಾಸದಲ್ಲಿ ಕಂಡುಬಂದ ಕೆಲವೊಂದು ಕ್ರಾಂತಿಕಾರಿ ಪರಿವರ್ತನೆಗಳು ಇಡೀ ಶತಮಾನವನ್ನೇ ರೂಪಿಸಿವೆ. ಇಂತಹ ಬದಲಾವಣೆಗಳು ನಾಗರಿಕತೆಯ ದಿಕ್ಕನ್ನು ನಿರ್ಧರಿಸುವುದಲ್ಲದೆ, ಅಭಿವೃದ್ಧಿಗೆ ವೇಗ ನೀಡುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕೂಡ ಅಂತಹ ಒಂದು ದೊಡ್ಡ ಪರಿವರ್ತನೆಯಾಗಿದೆ’ ಎಂದು ಆಭಿಪ್ರಾಯಪಟ್ಟರು.
. ಎ.ಐ ಶೃಂಗಸಭೆಗೆ ಪ್ರಧಾನಿ ಮೋದಿಯಿಂದ ಇಂದು ಚಾಲನೆ .ಎ.ಐ ನಿಯಂತ್ರಿಸುವುದು ವಿಶ್ವಸಂಸ್ಥೆ ಕೆಲಸವಲ್ಲ: ಆಂಟೊನಿಯೊ ಗುಟೆರಸ್.

ನಾವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಮುಕ್ತ ಅವಕಾಶ ನೀಡಬೇಕು. ಅದೇ ಸಮಯದಲ್ಲಿ ಅದರ ನಿಯಂತ್ರಣವನ್ನು ನಮ್ಮ ಕೈಯಲ್ಲಿ ಇಟ್ಟುಕೊಳ್ಳಬೇಕು.
– ನರೇಂದ್ರ ಮೋದಿ, ಪ್ರಧಾನಿ

ಎ.ಐ ಎಲ್ಲರಿಗೂ ಸೇರಿದ್ದಾಗಿದೆ. ಅದರ ಭವಿಷ್ಯವನ್ನು ಬೆರಳೆಣಿಕೆಯಷ್ಟು ದೇಶಗಳು ಅಥವಾ ಕೆಲವು ಮಂದಿ ಬಿಲಿಯನೇರ್ಗಳು ನಿರ್ಧರಿಸಬಾರದು.
– ಅಂಟೊನಿಯೊ ಗುಟೆರಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ

ಭಾಷಣ ಮಾಡದ ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗೆ ಎ.ಐ ಶೃಂಗದಲ್ಲಿ ಭಾಷಣ ಮಾಡುವ ಅವಕಾಶ ದೊರೆಯಲಿಲ್ಲ. ಗೇಟ್ಸ್ ಅವರು ಗುರುವಾರ ಬೆಳಿಗ್ಗೆ 11.50ಕ್ಕೆ ಶೃಂಗವನ್ನುದ್ದೇಶಿಸಿ ಭಾಷಣ ಮಾಡಬೇಕಿತ್ತು. ಭಾಷಣಕ್ಕಾಗಿ ಅವರಿಗೆ 12 ನಿಮಿಷ ನಿಗದಿಪಡಿಸಲಾಗಿತ್ತು.

‘ಬಿಲ್ ಗೇಟ್ಸ್ ಅವರು ಭಾಷಣ ಮಾಡುವುದಿಲ್ಲ. ಅವರ ಬದಲು ಅಂಕುರ್ ಓರಾ (ಫೌಂಡೇಶನ್ನ ಆಫ್ರಿಕಾ ಮತ್ತು ಭಾರತದ ಮುಖ್ಯಸ್ಥ) ಮಾತನಾಡುವರು’ ಎಂದು ಗೇಟ್ಸ್ ಫೌಂಡೇಶನ್ ಮಂಗಳವಾರ ಬೆಳಿಗ್ಗೆ ತಿಳಿಸಿದೆ. ಈ ನಿರ್ಧಾರದ ಹಿಂದಿನ ಕಾರಣವನ್ನು ಸ್ಪಷ್ಟಪಡಿಸಿಲ್ಲ.

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್ಗೆ ಸಂಬಂಧಿಸಿದ ಫೈಲ್ಗಳಲ್ಲಿ ಗೇಟ್ಸ್ ಹೆಸರು ಕಾಣಿಸಿಕೊಂಡಿರುವುದರಿಂದ ಅವರು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಂಘಟಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ಅವರ ಭಾಷಣ ರದ್ದುಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿವಿಧ ದೇಶಗಳ ನಾಯಕರು ಭಾಗಿ

ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಗೆ ಮಾರಿಷಸ್ ಪ್ರಧಾನಿ ನವೀನ್ಚಂದ್ರ ರಾಮಗೂಲಮ್ ಕ್ರೊಯೇಷ್ಯಾ ಪ್ರಧಾನಿ ಆಂದ್ರೆ ಪ್ಲೆಂಕೋವಿಚ್ ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವೊಚಿಚ್ ಸೀಷೆಲ್ಸ್ ಉಪಾಧ್ಯಕ್ಷ ಸೆಬಾಸ್ಟಿಯನ್ ಪಿಳ್ಳೈ ಎಸ್ಟೋನಿಯಾ ಅಧ್ಯಕ್ಷ ಅಲಾರ್ ಕಾರಿಸ್ ಫಿನ್ಲೆಂಡ್ ಪ್ರಧಾನಿ ಪಿಟೆರಿ ಓರ್ಪೊ ಸೇರಿದಂತೆ ಹಲವು ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.
.ಎ.ಐ ಶೃಂಗಕ್ಕೆ ವ್ಯಾಪಕ ಬೆಂಬಲ; ಫೆ.21ರವರೆಗೆ ವಿಸ್ತರಣೆ.ಚೀನಾದ ರೋಬೊ ನಾಯಿಯನ್ನು ತಮ್ಮದೆಂದು ಪ್ರದರ್ಶಿಸಿದ ಗಾಲ್ಗೋಟಿಯಾಸ್ ವಿವಿ: ಟೀಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.