ಎಐ ಶೃಂಗದ ಭಾಗವಾಗಲು ಪ್ರಪಂಚದ ವಿವಿಧ ಮೂಲೆಗಳ ತಂತ್ರಜ್ಞಾನ ಪರಿಣಿತರು, ವಿಶ್ವ ನಾಯಕರು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿದ್ದಾರೆ.

ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗದಲ್ಲಿ ಕೃತಕ ಬುದ್ಧಿಮತ್ತೆಯ ಭವಿಷ್ಯ ಸೇರಿದಂತೆ ಹಲವು ವಿಚಾರಗಳು ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಜಗತ್ತಿನ ಅತಿದೊಡ್ಡ ಟೆಕ್ ಶೃಂಗಕ್ಕೆ ಬಂದವರಿಗೆ ಬಿಸಿ ಮುಟ್ಟಿಸಿದ್ದು ದೆಹಲಿ ನಗರದ ವಾಹನ ದಟ್ಟಣೆ.

ಬುಧವಾರ ಸಂಜೆ ಅಂದಿನ ಕಾರ್ಯಕ್ರಮ ಮುಗಿಸಿ ವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ವಿದೇಶಿ ಪ್ರತಿನಿಧಿಗಳು, ಶೃಂಗಕ್ಕೆ ಬಂದಿದ್ದ ಜನರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದಾರೆ.

ಭಾರತ್ ಮಂಟಪದ ಹೊರಗಿನ ರಸ್ತೆಗಳಲ್ಲಿ ವಿವಿಐಪಿಗಳ ಸಂಚಾರಕ್ಕೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಜತೆಗೆ ಹತ್ತಿರದ ಮೆಟ್ರೊ ನಿಲ್ದಾಣಕ್ಕೆ ಪ್ರವೇಶವನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ತಮ್ಮ ಕ್ಯಾಬ್ಗಳನ್ನು ಹುಡುಕಲು ಕಿಲೋಮೀಟರ್ಗಳಷ್ಟು ದೂರ ನಡೆದುಕೊಂಡು ಹೋಗಬೇಕಾಯಿತು’ ಎಂದು ಪಾಲ್ಗೊಂಡವರು ಅಳಲು ತೋಡಿಕೊಂಡರು.

ಈ ಕುರಿತು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ‘ಜಾಗತಿಕವಾಗಿ ಏನನ್ನು ತೋರಿಸಲು ಬಯಸಿದ್ದೀರಿ, ಎಐ ಶೃಂಗ ನಡೆಯುವಲ್ಲಿ ಕನಿಷ್ಠ ಪಕ್ಷ ವಾಹನ ದಟ್ಟಣೆಯನ್ನಾದರೂ ನಿರ್ವಹಣೆ ಮಾಡಬೇಕಿತ್ತು’ ಎಂದು ಕೇಂದ್ರ ಸರ್ಕಾರದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಇನ್ನೊಬ್ಬರು, ‘ಕ್ಯಾಬ್ ಹುಡುಕಲು ಸುಮಾರು 5 ಕಿ.ಮೀ ನಡೆಯಬೇಕಾಯಿತು. ಸರ್ಕಾರ ಎಲ್ಲಾ ರಸ್ತೆ, ಗೇಟ್ಗಳನ್ನು ಬಂದ್ ಮಾಡಿದೆ, ಕೇಳಿದರೆ ವಿಐಪಿ ಬರುತ್ತಿದ್ದಾರೆ ಎನ್ನುತ್ತಾರೆ. ಭಾರತದ ಎಐ ಶೃಂಗ ನಿರ್ವಹಣೆ ಮಾಡುತ್ತಿರುವವರು ವಿಫಲರಾಗಿದ್ದಾರೆ’ ಎಂದು ಅಸಮಧಾನ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.