ಬಂಗಾರದ ಹಬ್ಬ

Akshaya Tritiya: ಹೊಳೆಯುವುದೆಲ್ಲವೂ ಚಿನ್ನ ಅಲ್ಲ

ಪ್ರಜಾವಾಣಿ ವಿಶೇಷ

ರೂಪಾ ಕೆ.ಎಂ.

ಚಿನ್ನವೆಲ್ಲ ಹೊಳೆಯಲೇ ಬೇಕಿಲ್ಲ. ಹೊಳೆಯುವುದೆಲ್ಲ ಚಿನ್ನವೂ ಆಗಬೇಕಿಲ್ಲ ಎಂಬುದು ಸದ್ಯಕ್ಕೆ ಫ್ಯಾಷನ್‌ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಸ್ಟೇಟ್‌ಮೆಂಟ್. ಚಿನ್ನವೆಂದ ತಕ್ಷಣ ಹೊಳೆಯಬೇಕು ಎನ್ನುವ ಕಾಲ ಮುಗಿದು ಹೋಯಿತು. ಹೊಳೆಯದೇ ಬಹಳ ಅತ್ಯಮೂಲ್ಯವೆನಿಸಿಕೊಂಡ ಚಿನ್ನಗಳ ಪೈಕಿ ಬ್ಲ್ಯಾಕ್‌ ಗೋಲ್ಡ್ ಮತ್ತು ರೋಸ್‌ಗೋಲ್ಡ್‌ ಪ್ರಮುಖ ಎನಿಸಿಕೊಂಡಿವೆ.

ಏನಿದು ಬ್ಲ್ಯಾಕ್‌ ಗೋಲ್ಡ್‌?

ಚಿನ್ನಾಭರಣಗಳಲ್ಲಿ ಹೊಸತನೇದರೂ ಪ್ರಯತ್ನಿಸಬೇಕು ಎನ್ನುವವರಿಗಾಗಿಯೇ ಹೇಳಿಮಾಡಿಸಿದಂತಿದೆ ಬ್ಲ್ಯಾಕ್‌ ಗೋಲ್ಡ್‌. ಬಿಳಿ ಚಿನ್ನದ ಮಿಶ್ರಲೋಹದ ತುಂಡಿನ ಮೇಲೆ ರೋಡಿಯಂ ಲೇಪನವನ್ನು ಅನ್ವಯಿಸಲಾಗುತ್ತದೆ.ಇದು ಕಪ್ಪಾಗಿ ಕಾಣುತ್ತದೆ. ಮದುವೆಯ ಉಂಗುರಗಳು, ವಿಂಟೇಜ್ ಶೈಲಿಯ ಆಭರಣಗಳಿಗೆ ಕಪ್ಪು ಚಿನ್ನವು ಉತ್ತಮವಾದ ಆಯ್ಕೆಯಾಗಿದೆ. ಅದರಲ್ಲಿಯೂ ಉಂಗುರಗಳಿಗೂ ಬ್ಲ್ಯಾಕ್‌ ಗೋಲ್ಡ್‌ ಉತ್ತಮ ಆಯ್ಕೆಯಾಗಿದ್ದು, ಯಾವುದೇ ಬಗೆಯ ರತ್ನಗಳಿಗೆ ಚೆನ್ನಾಗಿ ಒಪ್ಪುತ್ತದೆ.

ರೋಸ್‌ ಗೋಲ್ಡ್‌

ರೋಸ್‌ಗೋಲ್ಡ್‌ ಬ್ಲ್ಯಾಕ್‌ ಗೋಲ್ಡ್‌ ಹೋಲಿಸಿದರೆ ವಿಭಿನ್ನವಾಗಿ ಕಾಣುತ್ತದೆ. ತೆಳು ತಾಮ್ರದ ಹೊಳಪಿನಂತೆ ಕಾಣುವ ಇದು ಪಿಂಕ್ ಅತವಾ ರೋಸ್‌ ಗೋಲ್ಡ್‌ ಆಗಿದೆ. ಕಿವಿಯೋಲೆಗಳು, ಬಳೆಗಳು, ನೆಕ್‌ಲೇಸ್‌ಗಳಿಗೆ ರೋಸ್‌ಗೋಲ್ಡ್‌ ಉತ್ತಮ ಆಯ್ಕೆ. ಬೇರೆ ಬೇರೆ ರತ್ನಗಳನ್ನು ಹಾಕಿ ರೋಸ್‌ ಗೋಲ್ಡ್‌ ಅನ್ನು ವಿಭಿನ್ನವಾಗಿ ತಯಾರಿಸಲಾಗುತ್ತದೆ.ಈಚೆಗೆ ಚಿನ್ನಕ್ಕಿಂತಲೂ ರೋಸ್‌ಗೋಲ್ಡ್‌ ಅನ್ನು ಮಹಿಳೆಯರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರೆ ಇವುಗಳಿಗೆ ಕೆಲವು ಮಿತಿಗಳಿವೆ. ಸ್ನಾನ ಮಾಡುವಾಗ, ಈಜುವಾಗ ರೋಸ್‌ ಗೋಲ್ಡ್‌ ಧರಿಸದೇ ಉಳಿಯುವುದು ಒಳ್ಳೆಯದು. ಹಾಗೆ ಆಗಾಗ ಬ್ಲ್ಯಾಕ್‌ ಗೋಲ್ಡ್‌ಗೆ ತೆಳುವಾಗಿ ಹೊಳಪು ನೀಡುವ ಕೆಲಸ ಆಗುತ್ತಿರಬೇಕು.

ಚಿನ್ನದಷ್ಟು ದುಬಾರಿ ಅಲ್ಲದೇ ಇರುವುದರಿಂದ ಮಧ್ಯಮ ವರ್ಗದ ಜನರು ಇದನ್ನು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಮದುವೆ, ಉಪನಯನ, ಗೃಹಪ್ರವೇಶದಂಥ ಸಮಾರಂಭಗಳಲ್ಲಿ ಈ ಚಿನ್ನಾಭರಣವನ್ನು ತೊಟ್ಟು ಖುಷಿಪಡಲು ಅಡ್ಡಿ ಇಲ್ಲ.

ಎಂಥ ದಿರಿಸಿಗೆ ಒಪ್ಪುತ್ತದೆ?

ತುಂಬಾ ಲಕ್ಸುರಿಯಾಗಿ ಕಾಣಿಸುವ ಈ ಆಭರಣಗಳು ಸರಳ ಹಾಗೂ ಸಾಂಪ್ರದಾಯಿಕ ಉಡುಗೆಗಳಿಗೆ ಚೆನ್ನಾಗಿ ಒಪ್ಪುತ್ತದೆ. ಈಗೀಗ ಮಕ್ಕಳಿಗೂ ಈ ಆಭರಣಗಳು ಉತ್ತಮ ಆಯ್ಕೆ ಎನಿಸಿದೆ. ತಡ ಏಕೆ ಈ ಅಕ್ಷಯ ತೃತೀಯಾ ದಿನದಂದು ಚಿನ್ನ ಖರೀದಿಸಲು ಆಗದಿದ್ದರೂ ಅಡ್ಡಿ ಇಲ್ಲ. ಬ್ಲ್ಯಾಕ್‌ಗೋಲ್ಡ್‌, ರೋಸ್‌ಗೋಲ್ಡ್‌ ಧರಿಸಿ, ಖುಷಿಪಡಿ