Akshaya Tritiya: ಗುಳ್ಳಕದಲ್ಲಿ ಕೂಡಿಡಿ, ಚಿನ್ನ ಖರೀದಿಸಿ

Akshaya Tritiya: ಗುಳ್ಳಕದಲ್ಲಿ ಕೂಡಿಡಿ, ಚಿನ್ನ ಖರೀದಿಸಿ

Published on

ರೂಪಾ ಕೆ.ಎಂ.

ಹನಿ ಹನಿ ಕೂಡಿ ಹಳ್ಳ. ತೆನೆ ತೆನೆ ಸೇರಿ ರಾಶಿ ಅಂಥ ಒಂದು ಮಾತಿದೆ. ಸಣ್ಣದು ಎಂದು ನಿರ್ಲಕ್ಷ್ಯ ಮಾಡದೇ ಕೂಡಿಡುತ್ತ ಹೋದರೆ ಸಂಪತ್ತಿಗೆ ಅಧಿಪತಿ ಆಗಬಹುದು. ಹೀಗೆ ಸಣ್ಣ ಸಣ್ಣ ಪದಾರ್ಥಗಳನ್ನು ಕೂಡಿಟ್ಟು, ಬದುಕು ಸೊಗಸಾಗಿ ಕಟ್ಟಿಕೊಳ್ಳುವ ಇರುವೆಗಳು ಎಂದಿಗೂ ಇಷ್ಟೆನಾ? ಇಷ್ಟರಲ್ಲಿ ಏನಾಗುತ್ತೆ ಅಂಥ ಇರುವೆಗಳು ಅಸಡ್ಡೆಯ ಮನೋಭಾವ ತಾಳಿಲ್ಲ.

ಸಣ್ಣ ಸಣ್ಣ ಮೊತ್ತವೂ ದೊಡ್ಡ ದೊಡ್ಡ ಕನಸುಗಳಿಗೆ ಸದಾ ನಾಂದಿಯೆಂಬುದನ್ನು ಈ ಅಕ್ಷಯಾ ತೃತೀಯಾ ದಿನ ಮರೆಯದಿರೋಣ. ವರ್ಷಕ್ಕೊಮ್ಮೆಯಾದರೂ ದುಡ್ಡು ಹಾಕಲು ಅನುಕೂಲವಾಗುವ ಹುಂಡಿಗಳನ್ನು ಖರೀದಿಸಿ, ಅದರಲ್ಲಿ ಆಪತ್ತ್ಧನವೆಂಬಂತೆ ನಿಮಗೆ ತೋಚುವಷ್ಟು ದುಡ್ಡನ್ನು ಅದರಲ್ಲಿ ಹಾಕಿ ಕೂಡಿಡಿ. ಅಕ್ಷಯಾ ತೃತೀಯಾಗೆ ಒಂದು ವಾರವಿರುವಾಗ ಆ ಹುಂಡಿಯನ್ನು ಒಡೆದು, ಯಾವುದಾದರೂ ಸಮರ್ಥ ಉದ್ದೇಶಕ್ಕೆ ಆ ಹಣವನ್ನು ವಿನಿಯೋಗಿಸಿ. ಇವು ಕೂಡ ಮನೆಗೆ ಸೀಮಿತವಾದ ಪಿಗ್ಮಿ ಬ್ಯಾಂಕುಗಳಂತೆ.

Akshaya Tritiya: ಗುಳ್ಳಕದಲ್ಲಿ ಕೂಡಿಡಿ, ಚಿನ್ನ ಖರೀದಿಸಿ
Akshaya Tritiya | ಸಣ್ಣ ಉಳಿತಾಯ.. ಸುಭದ್ರ ಜೀವನ

ಹೀಗೆ ಒದಗಿಬರುವ ಆಪತ್ತ್ಧನದಲ್ಲಿ ಒಂದು ಚಿನ್ನದ ನಾಣ್ಯವನ್ನು ಅಕ್ಷಯ ತೃತೀಯ ದಿನದಂದು ಖರೀದಿಸಲು ಪ್ರಯತ್ನಿಸಿ. ಹೀಗೆ ವರ್ಷಕ್ಕೊಮ್ಮೆ ನಾಣ್ಯ ಖರೀದಿಸಿದರೆ, ಅದು ಮುಂದೆ ನಿಮಗೆ ದೊಡ್ಡ ಮಟ್ಟದ ಉಳಿತಾಯವಾಗುವುದಲ್ಲದೇ, ಅಗತ್ಯವಾದದದ್ದನ್ನು ಖರೀದಿಸಲೂ ಉಪಯೋಗಕ್ಕೂ ಬರಬಹುದು.

ಹಣ ಉಳಿತಾಯದ ಬಗ್ಗೆ ಮಕ್ಕಳಿಗೆ ಅರಿವಿರಲಿ

ಮಗುವಿಗೆ ಆರು ವರ್ಷಗಳಾಗುತ್ತಿದ್ದಂತೆ ಹಣಕ್ಕೆ ಕೊಡಬೇಕಾದ ಗೌರವದ ಬಗ್ಗೆ ತಿಳಿಸಿ ಹೇಳಿ. ಒಂದೊಂದು ಪೈಸೆಯೂ ಬದುಕು ನಡೆಸಲು ಎಷ್ಟು ಅಮೂಲ್ಯವೆಂಬುದನ್ನು ಹೇಳಿಕೊಡಿ. ಸಾಮಾನ್ಯವಾಗಿ ಹಣ ಖರ್ಚೇ ಮಾಡದಂತೆ ಹೇಳುವುದಕ್ಕಿಂತಲೂ ಯಾವುದಕ್ಕೆ ಖರ್ಚು ಮಾಡಬೇಕು? ಖರ್ಚು ಮಾಡುವಾಗ ಆದ್ಯತಾ ಪಟ್ಟಿಯೊಂದು ರೂಪಿಸಿಕೊಂಡು, ಅದಕ್ಕೆ ಅನುಸಾರ ಖರ್ಚು–ವೆಚ್ಚಗಳಿರಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಎಳವೆಯಲ್ಲಿಯೇ ತಿಳಿಸಿಕೊಡುವುದು ಒಳ್ಳೆಯದು.

Akshaya Tritiya: ಗುಳ್ಳಕದಲ್ಲಿ ಕೂಡಿಡಿ, ಚಿನ್ನ ಖರೀದಿಸಿ
Akshaya Tritiya | ಚಿನ್ನದ ಹಬ್ಬ: ಇದು ಹೊನ್ನು ಖರೀದಿ ಸಮಯ..!

ಇದರಿಂದ ಮಗುವಿನಲ್ಲಿ ಹಣದ ಬಗ್ಗೆ ಅಷ್ಟೆ ಬದುಕಿನ ಬಗ್ಗೆ ಜವಾಬ್ದಾರಿಯುತ ದೃಷ್ಟಿಕೋನವೊಂದು ಬೆಳೆಯುತ್ತದೆ. ಇದ್ದ ದುಡ್ಡಿನಲ್ಲಿ ಏನನ್ನು ಕೊಂಡುಕೊಳ್ಳಬೇಕು ಎಂಬುದರ ಕುರಿತು ಮಕ್ಕಳಲ್ಲಿ ಜ್ಞಾನ ಬೆಳೆಯುತ್ತದೆ. ಅವರಲ್ಲಿರುವ ವ್ಯವಹಾರಿಕ ಪ್ರತಿಭೆ ಜಾಗೃತವಾಗುತ್ತದೆ.

ಎಂಥ ಗುಳ್ಳಕವಿದ್ದರೆ ಚೆನ್ನ

ಮಕ್ಕಳಿಗಾಗಿಯೇ ಹಣ ಕೂಡಿಡಲು ತರಹೇವಾರಿ ಗುಳ್ಳಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ವರಾಹ ಮೂತಿಯ ಡಬ್ಬಿಗಳು, ಮನೆಗಳಂತೆ ಕಾಣುವ ಗುಳ್ಳಕಗಳು, ಮಕ್ಕಳಿಗೆ ಇಷ್ಟವಾಗುವ ಹಲವು ಕಾರ್ಟೂನ್‌ ಪಾತ್ರಗಳ ಗುಳ್ಳಕಗಳನ್ನು ನೋಡಬಹುದು. ಇವುಗಳಲ್ಲಿ ಒಂದು ಖರೀದಿಸಿ, ಇಡಿ. ಆಗಾಗ್ಗೆ ಮಕ್ಕಳ ಕೈಗೆ ಕಡಿಮೆ ಮೊತ್ತದ ನಾಣ್ಯಗಳನ್ನು ಕೊಟ್ಟು, ಅದರಲ್ಲಿ ಸಂಗ್ರಹಿಸಲು ಹೇಳಿ. ಮಕ್ಕಳಿಗೆ ವರ್ಷಕ್ಕೊಮ್ಮೆ ಏನು ತೆಗೆದುಕೊಳ್ಳಬೇಕು ಎಂದು ಇಷ್ಟವಿದೆಯೋ ಅದನ್ನು ಖರೀದಿಸಲು ವಿನಿಯೋಗಿಸಿ

Akshaya Tritiya: ಗುಳ್ಳಕದಲ್ಲಿ ಕೂಡಿಡಿ, ಚಿನ್ನ ಖರೀದಿಸಿ
Akshaya Tritiya: ಹೊಸ್ತಿಲು ಪೂಜೆ ವಿಶೇಷ 
Advertisement
Festivals in Karnataka – A Prajavani Special Feature | ಕರ್ನಾಟಕದ ಹಬ್ಬಗಳು – ಪ್ರಜಾವಾಣಿಯ ವಿಶೇಷ ವೈಶಿಷ್ಟ್ಯ | Karnatakada Habbagalu – Prajavaniya Vishesha Vaishishtya
www.prajavani.net