ಪರಿವರ್ತನೆ ಪ್ರೇರೇಪಿಸುವ ಮಹಿಳೆಯರ
ಸಾಧನೆಗೊಂದು ಸಲಾಂ
ಸುತ್ತಲ ಸಮಾಜದ ಪರಿವರ್ತನೆಗೆ ಕಾರಣರಾದ ಹತ್ತು
ಅಸಾಮಾನ್ಯ ಸಾಧಕಿಯರ ಯಶೋಗಾಥೆಗಳನ್ನು ನಾವು
ಪ್ರಸ್ತುತಪಡಿಸುತ್ತೇವೆ.

Previous Next



ಪ್ರಶಸ್ತಿ ಕುರಿತು

ನಮ್ಮ ಸುತ್ತಲಿನ ಸಮಾಜ ಇಂದು ಇಷ್ಟು ಸಹ್ಯವಾಗಿ ಉಳಿಯುವಲ್ಲಿ ಸ್ತ್ರೀಶಕ್ತಿಯೇ ಪ್ರಧಾನ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ಶಕ್ತಿಗೆ ಎಲ್ಲೆಡೆ ಸಿಗಬೇಕಾದ ಮಾನ್ಯತೆ ಇನ್ನೂ ಸಿಕ್ಕಿಲ್ಲ. ಸಮಾಜ ಪರಿವರ್ತನೆಯ ಹರಿಕಾರರಾದ ಸಾಧಕ ಮಹಿಳೆಯರನ್ನು ನಾಡಿಗೆ ಪರಿಚಯಿಸುವ ಮೂಲಕ ಆ ಕೊರತೆಯನ್ನು ನೀಗಿಸುವಲ್ಲಿ ತುಸು ದೂರವಾದರೂ ಮುಂದೆ ಕ್ರಮಿಸಬೇಕು ಎನ್ನುವ ಉದ್ದೇಶ ಪ್ರಜಾವಾಣಿಯ ಈ ‘ಪಿವಿ ಸಾಧಕಿಯರು’ ಪ್ರಶಸ್ತಿಯ ಹಿಂದಿದೆ. ಪಿವಿ ಸಾಧಕಿಯರ ಪ್ರೇರಣೆದಾಯಕ ಯಶೋಗಾಥೆಗಳು ಇತರರಲ್ಲೂ ಸ್ಫೂರ್ತಿ ತುಂಬುವಲ್ಲಿ ಯಶಸ್ವಿಯಾದರೆ ಪ್ರಶಸ್ತಿಯ ಆಶಯ ಈಡೇರಿದಂತೆ. ಬನ್ನಿ, ತಮ್ಮ ನೋವು ಮರೆತು ನಮ್ಮ ಭವಿಷ್ಯದ ಪೋಷಣೆಗೆ ಟೊಂಕಕಟ್ಟಿ ನಿಂತ ಅಪರೂಪದ ಸಾಧಕಿಯರನ್ನು ಗೌರವಿಸೋಣ.

img