ಷರತ್ತು ಮತ್ತು ನಿಬಂಧನೆಗಳು1. ಪ್ರವೇಶಿಕೆ
ಹೆಸರು |
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ (ಪ್ರಶಸ್ತಿ) |
ಉದ್ದೇಶ |
ಚಿತ್ರೋದ್ಯಮವನ್ನು ಭವಿಷ್ಯದ ಕಡೆಗೆ ಮುನ್ನಡೆಸುತ್ತಿರುವ ಕನ್ನಡ ಸಿನಿಮಾ ಕ್ಷೇತ್ರದ ಪ್ರತಿಭಾವಂತರನ್ನು ಗುರುತಿಸುವುದು ಮತ್ತು ಗೌರವಿಸುವುದು. |
ಪ್ರಶಸ್ತಿಯ ಸ್ಥಾಪಕರು / ಆಯೋಜಕರು : |
ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಸಂಸ್ಥೆ (ಪ್ರಜಾವಾಣಿ) |
ತೀರ್ಪುಗಾರರು |
ಉದ್ಯಮದಲ್ಲಿನ ತಾಂತ್ರಿಕ ಪರಿಣಿತರ ತಂಡ |
ಸಲಹಾ ಸಮಿತಿ |
ಪ್ರಶಸ್ತಿಯ ಸ್ಥಾಪಕರು/ಆಯೋಜಕರಿಗೆ ಮಾರ್ಗದರ್ಶನ ನೀಡಬಲ್ಲ ಕನ್ನಡ ಚಿತ್ರರಂಗದ ದಿಗ್ಗಜರ ತಂಡ |
ಸ್ಪರ್ಧಿ |
ಪ್ರಶಸ್ತಿಗಾಗಿ ಷರತ್ತು ಮತ್ತು ನಿಬಂಧನೆಗಳ ಪ್ರಕಾರ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿ ಅಥವಾ ತೀರ್ಪುಗಾರರು/ ಸಲಹಾ ಸಮಿತಿಯವರು/ಪ್ರಶಸ್ತಿಯ ಆಯೋಜಕರಿಂದ ನಾಮನಿರ್ದೇಶನಗೊಳ್ಳುವ ಯಾವುದೇ ವ್ಯಕ್ತಿ ಸ್ಪರ್ಧಿ ಆಗಿರುತ್ತಾರೆ. |
ಷರತ್ತು ಮತ್ತು ನಿಬಂಧನೆಗಳು (ಟಿ&ಸಿ): |
ಪ್ರಶಸ್ತಿಗೆ ಸಂಬಂಧಿಸಿದ ನಿಬಂಧನೆಗಳು ಈ ಕೆಳಗಿನಂತಿವೆ |
ವೆಬ್ಸೈಟ್ |
https://www.prajavani.net/cinesamman/season3 |
ಸೂಚನೆ: ಪ್ರಶಸ್ತಿ ಮಂಡಳಿಯು ಯಾವುದೇ ಪೂರ್ವ ಲಿಖಿತ ಸೂಚನೆ ನೀಡದೆಯೇ, ಕಾಲ ಕಾಲಕ್ಕೆ ನಿಬಂಧನೆಗಳಲ್ಲಿ ಬದಲಾವಣೆ ಮಾಡಬಹುದಾಗಿರುತ್ತದೆ. ಆದ್ದರಿಂದ ಸ್ಪರ್ಧಿಗಳು, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವ ಈ ನಿಬಂಧನೆಗಳನ್ನು ನಿಯಮಿತವಾಗಿ ಪರಿಶೀಲಿಸಲು ಕೋರಲಾಗಿದೆ.
2. ಪ್ರಶಸ್ತಿ ವಿಭಾಗಗಳು
ಪ್ರಶಸ್ತಿಯ ಆಯೋಜಕರು/ಸಲಹಾ ಸಮಿತಿಯವರು/ತೀರ್ಪುಗಾರರು, ಪ್ರಶಸ್ತಿಗಳ ವಿಭಾಗಗಳು ಮತ್ತು ವಿಜೇತರ ಸಂಖ್ಯೆಯಲ್ಲಿ ಬದಲಾವಣೆ/ಮಾರ್ಪಾಡು ಮಾಡಬಹುದು. ಈ ಕುರಿತಂತೆ ಪ್ರಶಸ್ತಿಯ ಆಯೋಜಕರು ಯಾವುದೇ ತಕರಾರುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
3.ಅರ್ಹತಾ ಮಾನದಂಡ
3.1. ಚಿತ್ರವು ಮೂಲತಃ ಕನ್ನಡದಲ್ಲೇ ನಿರ್ಮಾಣ ಮಾಡಿದ್ದಾಗಿರಬೇಕು. ಕನ್ನಡದ ಉಪಭಾಷೆಗಳಲ್ಲಿ (ತುಳು, ಕೊಂಕಣಿ, ಕೊಡವ ಇತ್ಯಾದಿ) ನಿರ್ಮಾಣವಾದ ಚಿತ್ರಗಳನ್ನು ಸಹ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
3.2. ಚಿತ್ರವು 2024ರ ಜನವರಿ 1ರಿಂದ 2024ರ ಡಿಸೆಂಬರ್ 31ರೊಳಗೆ ಭಾರತದ ಚಿತ್ರಮಂದಿರಗಳಲ್ಲಿ ಇಲ್ಲವೆ ಒಟಿಟಿ ವೇದಿಕೆಗಳಲ್ಲಿ ಕಡ್ಡಾಯವಾಗಿ ಬಿಡುಗಡೆ ಆಗಿರಬೇಕು ಹಾಗೂ ಸೆನ್ಸಾರ್ ಪ್ರಮಾಣಪತ್ರವನ್ನೂ ಹೊಂದಿರಬೇಕು.
3.3 ಅರ್ಹತಾ ಮಾನದಂಡಗಳಿಗೆ ಪೂರಕವಾಗಿ ಇಲ್ಲದಿರುವ ಅರ್ಜಿಗಳನ್ನು ತಿರಸ್ಕರಿಸುವ ಹಕ್ಕನ್ನು ಸಲಹಾ ಸಮಿತಿಯವರು ಮತ್ತು ತೀರ್ಪುಗಾರರು ಕಾಯ್ದಿರಿಸಿಕೊಂಡಿರುತ್ತಾರೆ. ಇವರ ನಿರ್ಣಯವೇ ಅಂತಿಮ ನಿರ್ಣಯವಾಗಿದ್ದು, ಇದನ್ನು ಯಾವುದೇ ರೀತಿಯಲ್ಲೂ ಪ್ರಶ್ನಿಸಲು ಅವಕಾಶವಿರುವುದಿಲ್ಲ.
3.4 ಪ್ರಶಸ್ತಿ ಆಯೋಜಕರು ಯಾವುದೇ ಪೂರ್ವಲಿಖಿತ ಸೂಚನೆ ನೀಡದೆಯೇ, ಕಾಲ ಕಾಲಕ್ಕೆ ಅರ್ಹತಾ ಮಾನದಂಡಗಳನ್ನು ಮಾರ್ಪಾಡುಗೊಳಿಸಿ ಜಾರಿ ಮಾಡಬಹುದು. ಸೂಚನೆ: ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವ ಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಈ ಪ್ರಶಸ್ತಿಗಳ ಅವತರಣಿಕೆಯಲ್ಲಿ ಟಿವಿ/ವೆಬ್ ಸೀರೀಸ್‌ಗಳು ಸೇರ್ಪಡೆ ಆಗಿರುವುದಿಲ್ಲ.
4. ನಾಮನಿರ್ದೇಶನ
4.1 ಸೆನ್ಸಾರ್ ಆಗಿರುವ ಚಿತ್ರಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ (https://www.prajavani.net/cinesamman/season3)
4.2 ಸ್ಪರ್ಧಿಗಳು ತಮ್ಮ ಚಿತ್ರವನ್ನು ವೀಕ್ಷಿಸಲು ನಮಗೆ ಲಿಂಕ್ ರವಾನಿಸಬೇಕು ಮತ್ತು ಚಿತ್ರ ನಿರ್ಮಾಣ ತಂಡದ ವಿವರವನ್ನು ನಾವು ಕೇಳಿರುವ ಮಾದರಿಯಲ್ಲಿ ಒದಗಿಸಬೇಕು. ಸ್ಪರ್ಧಿಗಳು ನೀಡುವ ಚಿತ್ರದ ಲಿಂಕ್, ಪ್ರಶಸ್ತಿ ಪ್ರದಾನ ಸಮಾರಂಭ ಪೂರ್ಣಗೊಳ್ಳುವವರೆಗೆ ಆ್ಯಕ್ಟಿವ್ ಆಗಿ ಇರುವುದನ್ನು ಖಚಿತಪಡಿಸಬೇಕು.(
ನೋಂಧಣಿ ಅರ್ಜಿ
)
4.3 ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ತಕ್ಷಣವೇ, ಪ್ರಶಸ್ತಿಯ ಆಯೋಜಕರು ಚಿತ್ರಗಳಿಗೆ ಸಂಬಂಧಿತ ಎಲ್ಲಾ ಲಿಂಕ್‌ಗಳನ್ನು ಮತ್ತು ಡಿಜಿಟಲ್ ಕಡತಗಳನ್ನು ತೆಗೆದುಹಾಕುತ್ತಾರೆ.
4.4 ಸ್ಪರ್ಧಿಗಳು ರವಾನಿಸುವ ತಮ್ಮ ಚಿತ್ರದ ಲಿಂಕ್, ಕೇವಲ ವ್ಯೂಯೇಬಲ್/ವೀಕ್ಷಣೆಗೆ ಬೇಕಾದ ಸ್ವರೂಪದಲ್ಲಿ ಇರಬೇಕು, ಡೌನ್‌ಲೋಡ್ ಮಾಡಿಕೊಳ್ಳುವ ಸ್ವರೂಪದಲ್ಲಿ ಅಲ್ಲ. ಒಂದು ವೇಳೆ ಸ್ಪರ್ಧಿಗಳು ಡೌನ್‌ಲೋಡ್ ಮಾಡಬಹುದಾದ ಸ್ವರೂಪದಲ್ಲಿ ಲಿಂಕ್ ಅಪ್‌ಲೋಡ್ ಮಾಡಿದಲ್ಲಿ, ಪ್ರಶಸ್ತಿ ಆಯೋಜಕರು ಅದರ ಯಾವುದೇ ಪೈರಸಿ ಕ್ಲೇಮ್‌ಗಳಿಗೆ ಹೊಣೆಯಾಗುವುದಿಲ್ಲ.
4.5 ಸಂಪೂರ್ಣ ಪ್ರೊಡಕ್ಷನ್ ಯೂನಿಟ್‌ನ ಪರವಾಗಿ ನಿರ್ಮಾಪಕರು/ಪ್ರೊಡಕ್ಷನ್ ಹೌಸ್ ಮೂಲಕ ಅರ್ಜಿ ಸಲ್ಲಿಸುವುದಾದಲ್ಲಿ, ಅಗತ್ಯವಿರುವ ಎಲ್ಲಾ ವಿವರಗಳ ಸಲ್ಲಿಕೆಯನ್ನು ಖಚಿತಪಡಿಸಬೇಕು.
4.6 ಪ್ರಶಸ್ತಿಗೆ ಸಂಬಂಧಿಸಿದಂತೆ ನಡೆಸಲಾಗುವ ಯಾವುದೇ ಕಾರ್ಯಕ್ರಮದಲ್ಲಾಗಲಿ ಅಥವಾ ಚಟುವಟಿಕೆಗಳಲ್ಲಾಗಲಿ ತೆಗೆಯಲಾಗುವ ಭಾವಚಿತ್ರಗಳು, ಬೈಟ್‌ಗಳು, ಸಂದರ್ಶನಗಳು, ಪ್ರಯೋಗಗಳು, ನಿರ್ಮಾಪಕ, ನಿರ್ದೇಶಕ, ನಾಮನಿರ್ದೇಶಿತರು ಮತ್ತು ವಿಜೇತರ ಸಂದರ್ಶನದ ಚಿತ್ರೀಕರಣಗಳು ಸೇರಿದಂತೆ ಪ್ರಶಸ್ತಿಗೆ ಸಂಬಂಧಿತ ಯಾವುದೇ ಧ್ವನಿ ಮತ್ತು/ ಅಥವಾ ವಿಷುಯಲ್ ರೆಕಾರ್ಡಿಂಗ್ ಮಾದರಿಯ ಎಲ್ಲಾ ಬೌದ್ಧಿಕ ಸ್ವತ್ತಿನ ಹಕ್ಕು ಮತ್ತು ಕಾಪಿರೈಟ್ ಹಕ್ಕುಗಳಿಗೆ ಪ್ರಶಸ್ತಿಯ ಆಯೋಜಕರ ಸಂಪೂರ್ಣ ಮಾಲೀಕತ್ವ ಇರುತ್ತದೆ ಎಂಬುದಕ್ಕೆ, ಸ್ಪರ್ಧಿಗಳು ಪ್ರಶಸ್ತಿಯಲ್ಲಿ ಪಾಲ್ಗೊಳ್ಳುವ ಮೂಲಕ ಸಮ್ಮತಿ ಸೂಚಿಸಿದಂತೆ ಪರಿಗಣಿಸಲಾಗುತ್ತದೆ. ಈ ಮೇಲೆ ತಿಳಿಸಲಾಗಿರುವ ಎಲ್ಲಾ ಕಂಟೆಂಟ್‌ಗಳನ್ನು ಮತ್ತು ಚಿತ್ರೀಕರಣಗಳನ್ನು ಯಾವುದೇ ಮತ್ತು ಎಲ್ಲಾ ಮಾಧ್ಯಮಗಳಲ್ಲಿ ಅಥವಾ ವೇದಿಕೆಗಳಲ್ಲಿ ಡಿಜಿಟಲ್ ಹಕ್ಕುಗಳು ಸೇರಿದಂತೆ ಎಲ್ಲವನ್ನೂ ವಿಶ್ವದಾದ್ಯಂತ ಎಲ್ಲಾದರೂ ಬಳಸಿಕೊಳ್ಳುವ ಹಕ್ಕು ಪ್ರಶಸ್ತಿಯ ಆಯೋಜಕರಿಗೆ ಇರುತ್ತದೆ.
4.7 ಪರದೆಯ ಮೇಲೆ ಗೋಚರಿಸುವ ಚಿತ್ರ ನಿರ್ಮಾಣ ತಂಡದ ವಿವರವನ್ನೇ (ಕ್ರೆಡಿಟ್ಸ್) ಸ್ಪರ್ಧೆಯ ವಿಭಾಗಗಳಿಗೆ ಅರ್ಹತೆಯಾಗಿ ಪರಿಗಣಿಸಲಾಗುತ್ತದೆ ಮತ್ತು ಪರದೆಯ ಮೇಲಿನ ಆ ವಿವರವನ್ನೇ (ಕ್ರೆಡಿಟ್ಸ್) ಪ್ರೊಡಕ್ಷನ್ ಕಂಪನಿ ಕಡೆಯಿಂದ ಮಾಡಲಾದ ದೃಢೀಕರಣವನ್ನಾಗಿಯೂ ಪರಿಗಣಿಸಲಾಗುತ್ತದೆ. ಆದರೆ, ಯಾವುದೇ ವಿಭಾಗದಲ್ಲಿ ಯಾವುದೇ ನಾಮನಿರ್ದೇಶನವನ್ನು ಮಾಡುವ ಹಕ್ಕನ್ನು ಪ್ರಶಸ್ತಿ ಆಯೋಜಕರು ಕಾಯ್ದಿರಿಸಿಕೊಂಡಿರುತ್ತಾರೆ. ಕ್ರೆಡಿಟ್ ಲೈನ್‌ಅನ್ನು ಯಾವುದೇ ರೀತಿಯಲ್ಲಿ ಹಂಚಿಕೊಳ್ಳುವ ಅಥವಾ ನೀಡುವುದಕ್ಕೆ ಸಂಬಂಧಿಸಿದಂತೆ ಮಾಡಿಕೊಂಡ ಒಪ್ಪಂದಕ್ಕೆ ನಾಮನಿರ್ದೇಶನವು ಒಳಪಡುವುದಿಲ್ಲ ಮತ್ತು ಪರಿಗಣನೆಯ ಉದ್ದೇಶದಿಂದ ಅರ್ಹತೆಯನ್ನು ಇತ್ಯರ್ಥಗೊಳಿಸುವ ಅಂತಿಮ ಹಕ್ಕನ್ನು ಪ್ರಶಸ್ತಿಯ ಆಯೋಜಕರು ಕಾಯ್ದಿರಿಸಿಕೊಂಡಿರುತ್ತಾರೆ.
4.8 ಸ್ಪರ್ಧಿಗಳು ಪಾಲ್ಗೊಳ್ಳುವಿಕೆಗೆ ಸಂಬಂಧಿತ ಮಾಹಿತಿಯನ್ನು ಪ್ರಕಟಿಸಲು ಪ್ರಶಸ್ತಿಯ ಆಯೋಜಕರು ಸ್ವತಂತ್ರವಾಗಿರುತ್ತಾರೆ.
4.9 ಸ್ಪರ್ಧಿಗಳು ಪ್ರಶಸ್ತಿಗಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವ ಎಲ್ಲಾ ವಿವರಗಳು ಮತ್ತು ಸಲ್ಲಿಸಿರುವ ಪೂರಕ ದಾಖಲಾತಿಗಳ ಸತ್ಯಾಸತ್ಯತೆಯನ್ನು, ಸಮರ್ಪಕತೆಯನ್ನು ಮತ್ತು ಪರಿಪೂರ್ಣತೆಯನ್ನು ಸಮಗ್ರವಾಗಿ ಪರಿಶೀಲಿಶಿಸಿ, ವಿಚಾರಿಸಿದ ನಂತರ ಅವುಗಳ ನೈಜತೆಯನ್ನು ಘೋಷಿಸಬೇಕು. ಒಂದು ವೇಳೆ ಯಾವುದೇ ಮಾಹಿತಿಯು ಸುಳ್ಳು, ಸತ್ಯಕ್ಕೆ ದೂರವಾಗಿದೆ ಅಥವಾ ದಿಕ್ಕು ತಪ್ಪಿಸುವುದಾಗಿದೆ ಅಥವಾ ತಪ್ಪಾಗಿದೆ ಎಂದು ಕಂಡುಬಂದಲ್ಲಿ, ಅಂತಹುದಕ್ಕೆ ಸ್ಪರ್ಧಿಗಳೇ ಜವಾಬ್ದಾರರಾಗುತ್ತಾರೆ ಮತ್ತು ಇದರಿಂದಾಗಿ ಪ್ರಶಸ್ತಿಯ ಆಯೋಜಕರಿಗೆ ಉಂಟಾಗುವ ಯಾವುದೇ ಖರ್ಚು, ವೆಚ್ಚ, ಹಾನಿ, ನಷ್ಟ ಪರಿಹಾರ ಸೇರಿದಂತೆ ಇನ್ನಿತರ ಆಗುಹೋಗುಗಳಿಗೆ ಕೂಡ ಹೊಣೆಗಾರರಾಗುತ್ತಾರೆ.
4.10 ಕ್ರೆಡಿಟ್ ಲೈನ್‌ಗೆ ಸಂಬಂಧಿಸಿದಂತೆ ಯಾವುದೇ ವಿವಾದ ಉಂಟಾದಲ್ಲಿ, ಅಂತಹ ಸಲ್ಲಿಕೆಯನ್ನು ಅಥವಾ ಸಾಧನೆಯನ್ನು ಅನರ್ಹ ಎಂದು ಘೋಷಿಸುವ, ಕ್ರೆಡಿಟ್‌ಗೆ ಸಂಬಂಧಿತ ಎಲ್ಲಾ ಕ್ಲೇಮ್‌ಗಳನ್ನು ತಿರಸ್ಕರಿಸುವ, ‘ಇಂತಹ ಕ್ರೆಡಿಟ್’ಗಳು ವಿವಾದದಲ್ಲಿವೆ ಎಂದು ಪಟ್ಟಿ ಮಾಡುವ ಹಾಗೂ ವಿವಾದ ಪರಿಹಾರ ಆಗುವವರೆಗೂ ಪ್ರಶಸ್ತಿ ಪ್ರದಾನವನ್ನು ತಡೆಹಿಡಿಯುವ ಹಕ್ಕನ್ನು ಪ್ರಶಸ್ತಿ ಆಯೋಜಕರು ಕಾಯ್ದಿರಿಸಿಕೊಂಡಿರುತ್ತಾರೆ.
4.11 ಪ್ರಶಸ್ತಿಯ ಯಾವುದೇ ಹಂತದಲ್ಲಿ ಪ್ರಶಸ್ತಿ ಆಯೋಜಕರ ಸಂಪೂರ್ಣ ವಿವೇಚನೆಯ ಮೇರೆಗೆ, ಈ ಮುಂದಿನ ಹಿನ್ನಲೆಗಳಿಗಷ್ಟೆ ಸೀಮಿತವಲ್ಲದೆ ಇನ್ನಿತರ ಆಧಾರಗಳ ಮೇರೆಗೆ ಕೂಡ ಯಾವುದೇ ಸ್ಪರ್ಧಿಯನ್ನು ಸ್ಪರ್ಧೆಯಿಂದ ಕೈಬಿಡಬಹುದಾಗಿರುತ್ತದೆ: (೧) ಸದರಿ ಪ್ರಶಸ್ತಿಯುಲ್ಲಿ ಸ್ಪರ್ಧಿಸಲು ಈ ಸ್ಪರ್ಧಿಯು ಅರ್ಹನಲ್ಲ ಎನ್ನುವಂತಹ ಸಂದರ್ಭಗಳು ಎದುರಾದಾಗ; (೨) ಸ್ಪರ್ಧಿಯ ಗುರುತು ಸಾಬೀತುಪಡಿಸಬಲ್ಲ ನಿಗದಿತ ದಾಖಲಾತಿಯನ್ನು ಪೂರೈಸಲು ವಿಫಲಗೊಂಡಾಗ; (೩) ಪ್ರಶಸ್ತಿಯ ಮೇಲೆ ದುಷ್ಪರಿಣಾಮ ಬೀರಬಲ್ಲ ವಿವೇಚನಾರಹಿತ ನಡವಳಿಕೆ. ಯಾವುದೇ ಸಮಯದಲ್ಲಾದರೂ ಸರಿ, ಪ್ರಶಸ್ತಿಯ ಆಯೋಜಕರು ಯಾವುದೇ ಸ್ಪರ್ಧಿಯನ್ನು ಅನರ್ಹನೆಂದು ಗುರುತಿಸುವ ಅಧಿಕಾರ ಹೊಂದಿರುತ್ತದೆ. ಸೂಚನೆ: ಪ್ರಶಸ್ತಿಯ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ನಾಮನಿರ್ದೇಶನಗಳ ಮರು ವರ್ಗೀಕರಣ ಮಾಡುವ ಹಕ್ಕನ್ನು ತೀರ್ಪುಗಾರರ ವಿವೇಚನೆಗೆ ನೀಡಲಾಗಿದೆ. ಈ ಕುರಿತು ಅವರ ನಿರ್ಧಾರವೇ ಅಂತಿಮವಾಗಿರುತ್ತದೆ, ಪ್ರಶ್ನಾತೀತವಾಗಿರುತ್ತದೆ ಮತ್ತು ಎಲ್ಲಾ ಸ್ಪರ್ಧಿಗಳಿಗೂ ಅನ್ವಯಿಸುತ್ತದೆ.
5. ಸಲ್ಲಿಕೆ
5.1 ಚಿತ್ರ ವೀಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ಅಧಿಕೃತ ಸ್ಕ್ರೀನ್ ಕ್ರೆಡಿಟ್ಸ್/ಲಿಂಕ್‌ಗಳನ್ನು 10/04/2025 ರಂದು ಭಾರತೀಯ ಕಾಲಮಾನ ರಾತ್ರಿ 11:59 ಗಂಟೆಯೊಳಗೆ ತಲುಪುವಂತೆ ರವಾನಿಸತಕ್ಕದ್ದು.
5.2 ಮೇಲೆ ತಿಳಿಸಲಾಗಿರುವ ನಾಮನಿರ್ದೇಶನದ ಕೊನೆಯ ದಿನಾಂಕದ ನಂತರ ಸಲ್ಲಿಕೆಗಳನ್ನು ಹಿಂಪಡೆಯಲು ಸಾಧ್ಯವಿರುವುದಿಲ್ಲ ಮತ್ತು ಸಲ್ಲಿಕೆಯೇ ಅಂತಿಮವಾಗಿರುತ್ತದೆ.
5.3 ತೀರ್ಪುಗಾರರು ಚಿತ್ರಗಳನ್ನು ವೀಕ್ಷಿಸುತ್ತಾರೆ ಮತ್ತು ಪ್ರತಿ ವಿಭಾಗಕ್ಕೆ ಗರಿಷ್ಠ 8 ಚಿತ್ರಗಳನ್ನು ನಾಮನಿರ್ದೇಶನ ಮಾಡುತ್ತಾರೆ.
5.4 ಪ್ರತಿ ವಿಭಾಗಕ್ಕೆ ಆಯ್ಕೆಗೊಂಡ ನಾಮನಿರ್ದೇಶನಗಳನ್ನು ಅಕಾಡೆಮಿ ಸದಸ್ಯರ ಮತದಾನಕ್ಕಾಗಿ ಕಳುಹಿಸಲಾಗುತ್ತದೆ.
5.5 ಅಕಾಡೆಮಿ ಸದಸ್ಯರ ಮತಗಳ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ.
6. ವಿಜೇತರ ಘೋಷಣೆ
6.1 ಎಲ್ಲಾ ಪ್ರಶಸ್ತಿಗಳ ಆಯ್ಕೆಗೆ ಸಂಬಂಧಿಸಿದ ಅಂತಿಮ ನಿರ್ಧಾರ, ಸಲಹಾ ಸಮಿತಿ/ತೀರ್ಪುಗಾರರ ವಿವೇಚನೆಗೆ ಒಳಪಟ್ಟಿರುತ್ತದೆ.
6.2 ಯಾವುದೇ ಪ್ರಶಸ್ತಿಯನ್ನು, ಯಾವುದೇ ಸಮಯದಲ್ಲಿ, ಘೋಷಣೆಯಾದ ನಂತರದಲ್ಲಿಯೂ ಕೂಡ ಪ್ರಶಸ್ತಿ ಪ್ರದಾನ ಮಾಡುವ ಅಥವಾ ಹಿಂಪಡೆಯುವ ಹಕ್ಕನ್ನು ಪ್ರಶಸ್ತಿಯ ಆಯೋಜಕರು ಕಾಯ್ದಿರಿಸಿಕೊಂಡಿರುತ್ತಾರೆ.
6.3 ಕೆಳಕಂಡ ಕಾರಣಗಳಿಂದಾಗಿ ವಿಜೇತರೊಂದಿಗೆ ಸಂಪರ್ಕ ಸಾಧ್ಯವಾಗದಿದ್ದಲ್ಲಿ, ಪ್ರಶಸ್ತಿ ಮಂಡಳಿ ಅದಕ್ಕೆ ಹೊಣೆಯಾಗಿರುವುದಿಲ್ಲ:
6.3.1 ಲೈನ್ ಬ್ಯುಸಿಯಾಗಿದ್ದಲ್ಲಿ
6.3.2 ಕರೆದಟ್ಟಣೆಯಿದ್ದಲ್ಲಿ
6.3.3 ಪ್ರತಿಕ್ರಿಯೆ ಬಾರದಿದ್ದಲ್ಲಿ
6.3.4 ಕಳಪೆ ಕರೆ ಪರಿಸ್ಥಿತಿ/ರಿಸೀವರ್ ಕಡೆಯಲ್ಲಿ ಅಸ್ಪಷ್ಟತೆ
6.3.5 ಸಂಖ್ಯೆ ಎಂಗೇಜ್ ಆಗಿದ್ದಲ್ಲಿ
6.3.6 ಕಾಲ್ ಡ್ರಾಪ್ ಆದಲ್ಲಿ
6.3.7 ಇ-ಮೇಲ್ ಡೆಲಿವರಿ ಆಗದಿದ್ದಲ್ಲಿ
6.3.8 ದೂರವಾಣಿ ಕರೆಗೆ ಅಡೆತಡೆ ಉಂಟು ಮಾಡುವ ಅಥವಾ ಸ್ಥಗಿತಗೊಳಿಸುವ ಇನ್ಯಾವುದೇ ಕಾರಣಗಳಿದ್ದಲ್ಲಿ
6.4 ಯಾರಾದರು ವಿಜೇತರು ಯಾವುದಾದರೂ ಕಾರಣದಿಂದ ವಿಫಲರಾದಲ್ಲಿ ಅಥವಾ ಸ್ಪರ್ಧೆಯಿಂದ ಅನರ್ಹರಾದಲ್ಲಿ ಅಥವಾ ಪ್ರಶಸ್ತಿಯಲ್ಲಿ ಪಾಲ್ಗೊಳ್ಳಲು ವಿಫಲವಾದಲ್ಲಿ ಹಾಗೂ ವಿಜೇತರಾಗುವ ಅರ್ಹತೆ ಪಡೆದಿರುವ ಮತ್ತೊಬ್ಬ ಸ್ಪರ್ಧಿಗೆ ತನ್ನದೇ ವಿವೇಚನೆಯಲ್ಲಿ ಬದಲಾವಣೆ ಮಾಡುವ ಹಕ್ಕನ್ನು ಪ್ರಶಸ್ತಿ ಪ್ರದಾನ ಮಂಡಳಿಯು ಕಾದಿರಿಸಿಕೊಂಡಿರುತ್ತದೆ.
6.5 ಯಾವುದಾದರೂ ವಿವರಗಳು ಹಾಗೂ ದಾಖಲಾತಿಗಳನ್ನು ಪಡೆದುಕೊಳ್ಳಲು ವಿಜೇತರನ್ನು ಪ್ರಶಸ್ತಿ ಪ್ರದಾನ ಮಂಡಳಿಯು ಸಂಪರ್ಕಿಸುತ್ತದೆ. ಅಂತಹ ವಿಜೇತರೊಂದಿಗೆ ಸಂಪರ್ಕಿಸಲು ಗರಿಷ್ಠ 3 ಪ್ರಯತ್ನಗಳನ್ನು ಪ್ರಶಸ್ತಿ ಪ್ರದಾನ ಮಂಡಳಿಯು ಮಾಡುತ್ತದೆ. ವಿಜೇತರ ಸಂಪರ್ಕ ಸಾಧ್ಯವಾಗದಿದ್ದಲ್ಲಿ, ಆ ಸ್ಪರ್ಧಿಗೆ ಆ ಪ್ರಶಸ್ತಿಯನ್ನು ರದ್ದು ಪಡಿಸಿ, ಅದನ್ನು ಮತ್ತೊಬ್ಬರು ಆ ನಂತರದ ಹೆಚ್ಚಿನ ಅಂಕ ಪಡೆದುಕೊಂಡಿರುವಅರ್ಹ ಸ್ಪರ್ಧಿಗೆ ಪ್ರಶಸ್ತಿಯನ್ನು ಪ್ರಶಸ್ತಿ ಪ್ರದಾನ ಮಂಡಳಿಯು ನೀಡಬಹುದು
6.6 ಯಾವುದಾದರೂ ಕಾರಣಕ್ಕೆ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಸ್ಪರ್ಧಿಗೆ ಪ್ರಶಸ್ತಿ ಪ್ರದಾನ ಮಂಡಳಿಯು ಯಾವುದೇ ಬಾಧ್ಯತೆ ಹೊಂದಿರುವುದಿಲ್ಲ. ಯಾವುದೇ ಸಮಯದಲ್ಲಿ ಪ್ರಶಸ್ತಿ ಪ್ರದಾನ ಮಂಡಳಿಯ ವಿವೇಚನೆಯಲ್ಲಿ ಸ್ಪರ್ಧಿಗಳನ್ನು ಅನರ್ಹಗೊಳಿಸುವ ಹಕ್ಕನ್ನು ಪ್ರಶಸ್ತಿ ಪ್ರದಾನ ಮಂಡಳಿಯು ಹೊಂದಿರುತ್ತದೆ.
6.7 ಯಾರಾದರೂ ವಿಜೇತರು(ರುಗಳು) ಯಾವುದಾದರೂ ಕಾರಣಕ್ಕೆ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದಲ್ಲಿ, ವಿಫಲರಾದಲ್ಲಿ ಅಥವಾ ಅನರ್ಹಗೊಂಡಲ್ಲಿ ಅಂತಹವರನ್ನು ಬೇರೊಬ್ಬರು ಸ್ಪರ್ಧಿಗೆ ಬದಲಿಸುವ ಹಕ್ಕನ್ನು ಪ್ರಶಸ್ತಿ ಪ್ರದಾನ ಮಂಡಳಿ ಕಾಯ್ದಿರಿಸಿಕೊಂಡಿರುತ್ತದೆ. ಅಂತಹ ಸ್ಪರ್ಧಿಯು, ಪ್ರಶಸ್ತಿ ಪಟ್ಟಿಯಿಂದ ಈ ಹಿಂದೆ ಹೆಸರು ತೆಗೆದುಹಾಕಿದ್ದವರೂ ಆಗಿದ್ದಿರಬಹುದು. ಪ್ರಶಸ್ತಿ ಪ್ರದಾನ ಮಂಡಳಿಯು ನಿಗದಿ ಪಡಿಸಿದ ರೀತಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಳ್ಳುವುದಕ್ಕೆ ಪ್ರತೀ ಸ್ಪರ್ಧಿಯಅಂಗೀಕಾರವಿರುತ್ತದೆ.
6.8 ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ವೆಬ್ ಸೈಟ್, ಅಥವಾ ಯಾವುದೇ ದತ್ತಾಂಶ/ಸರ್ವರ್ ಗಳು/ಡೇಟಾಬೇಸ್/ ಇತ್ಯಾದಿಗಳನ್ನು ಯಾರಾದರೂ ಅಕ್ರಮವಾಗಿ ತಿದ್ದಿರುವುದು ಅಥವಾ ಬದಲಿಸಿರುವುದನ್ನು ಪ್ರಶಸ್ತಿ ಪ್ರದಾನ ಮಂಡಳಿಯು ನಿರ್ಣಯಿಸಿದಲ್ಲಿ, ಅಂತಹ ಸ್ಪರ್ಧಿಗಳ ಗೆಲುವು/ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆಯುವ ಹಕ್ಕನ್ನು ಪ್ರಶಸ್ತಿ ಪ್ರದಾನ ಮಂಡಳಿ ಹೊಂದಿರುತ್ತದೆ ಅಥವಾ ಮೊಕದ್ದಮೆ ಹೂಡುವುದು ಅಗತ್ಯವೆಂದು ಪ್ರಶಸ್ತಿ ಪ್ರದಾನ ಮಂಡಳಿ ನಿರ್ಣಯಿಸಿದಲ್ಲಿ ಆ ಕ್ರಮವನ್ನೂ ಕೈಗೊಳ್ಳಲಾಗುವುದು.
6.9 ಪ್ರಶಸ್ತಿ ಪಡೆದುಕೊಳ್ಳಲು/ಬಿಡಿಸಿಕೊಳ್ಳಲು, , ಸರ್ಕಾರ ನೀಡಿರುವಂತಹ ವಿಳಾಸ ಒಳಗೊಂಡ ಮಾನ್ಯತೆ ಪಡೆದ ಫೋಟೊ ಸಹಿತದ ಗುರುತು ಪುರಾವೆಯ (ಪಾಸ್ ಪೋರ್ಟ್ ಅಥವಾ ಸರ್ಕಾರದ ಯಾವುದೇ ಗುರುತು ಪುರಾವೆ) ದೃಢೀಕೃತ ಪ್ರತಿಗಳು ಹಾಗೂ ಅಗತ್ಯವಾದ ಇತರ ಯಾವುದೇ ದಾಖಲೆಗಳನ್ನು ನಿಗದಿತ ಕಾಲಾವಧಿಯಲ್ಲಿ ವಿಜೇತರು ಕಳಿಸಬೇಕು.
6.10 ಯಾವುದೇ ವಿಳಂಬಗಳು ಹಾಗೂ/ ಅಥವಾ ಪ್ರಶಸ್ತಿಯಿಂದ ಹುಟ್ಟುವ ವಿವಾದಗಳು ಹಾಗೂ /ಅಥವಾ ಪ್ರತಿಪಾದನೆಗಳಿಗೆ ಪ್ರಶಸ್ತಿ ಪ್ರದಾನ ಮಂಡಳಿಯನ್ನು ತಾವು ಜವಾಬ್ದಾರರನ್ನಾಗಿಸುವುದಿಲ್ಲ ಎಂಬುದಕ್ಕೆ ವಿಜೇತರು/ದೊಡ್ಡ ಪ್ರಶಸ್ತಿ ವಿಜೇತರು ಈ ಮೂಲಕ ಒಪ್ಪಿಕೊಂಡಿರುತ್ತಾರೆ. ಜೊತೆಗೆ ಮತ್ಯಾವುದೇ ಅಂತಹ ಪ್ರತಿಪಾದನೆಗಳಿಗೆ ನಷ್ಟ ಪರಿಹಾರಕ್ಕಾಗಿ ಪ್ರಶಸ್ತಿ ಪ್ರದಾನ ಮಂಡಳಿಯನ್ನು ಕೋರುವುದಿಲ್ಲ.
6.11 ಪ್ರಶಸ್ತಿಯಿಂದ ಯಾವುದೇ ವಿವಾದ/ಪ್ರತಿಪಾದನೆ ಮೇಲೆದ್ದಲ್ಲಿಅದು ಪ್ರಶಸ್ತಿ ಪ್ರದಾನ ಮಂಡಳಿಯ ನೇರ ನಿರ್ವಹಣೆಗೆ ಒಳಪಡುವುದು ಎಂಬುದನ್ನು ವಿಜೇತರು ಈ ಮೂಲಕ ಒಪ್ಪಿಕೊಳ್ಳುತ್ತಾರೆ.
7. ಸಿಂಧುತ್ವ ಹಾಗೂ ಮಾಹಿತಿಯ ಸಮರ್ಪಕತೆ
7.1 ಪ್ರಶಸ್ತಿ ಸಮಾರಂಭ ಮುಕ್ತಾಯವಾದ ನಂತರವೂ ಯಾವುದಾದರೂ ಸಂದರ್ಭದಲ್ಲಿ ಯಾರಾದರೂ ಸ್ಪರ್ಧಿಗಳು ನೀಡಿರುವ ಯಾವುದಾದರೂ ಮಾಹಿತಿಯು ಯಾವುದೇ ರೀತಿಯಲ್ಲಿ ತಪ್ಪಾಗಿದೆ ಎಂಬುದು ಗೊತ್ತಾದಲ್ಲಿ, ಆಗ ಸ್ಪರ್ಧಿಯನ್ನು ಅನರ್ಹಗೊಳಿಸುವುದು ಸಾಧ್ಯವಿರುತ್ತದೆ ಹಾಗೂ/ಅಥವಾ ಪ್ರಶಸ್ತಿಯನ್ನು ಹಿಂತಿರುಗಿಸಬೇಕಾಗುತ್ತದೆ ಹಾಗೂ ಪ್ರಶಸ್ತಿಗಳಿಗೆ ಅನುಗುಣವಾಗಿ ಏನಾದರೂ ನಗದು ಬಹುಮಾನ ನೀಡಿದ್ದಲ್ಲಿ ಅದನ್ನು ಹಿಂತಿರುಗಿಸಬೇಕಾಗುತ್ತದೆ. ಪ್ರಶಸ್ತಿಗೆ ಪ್ರವೇಶ ಪಡೆಯಲು ತಪ್ಪು ಮಾಹಿತಿ ಒದಗಿಸಿದ್ದಕ್ಕಾಗಿ ಸ್ಪರ್ಧಿಯ ವಿರುದ್ಧ ಪ್ರಶಸ್ತಿ ಪ್ರದಾನ ಮಂಡಳಿಯು ಕಾನೂನು ಕ್ರಮವನ್ನೂ ಕೈಗೊಳ್ಳಬಹುದು.
7.2 ಒದಗಿಸಲಾದ ಮಾಹಿತಿಯು ಸರಿಯಾಗಿದೆಯೇ, ನಿಖರವಾಗಿದೆಯೇ ಎಂಬುದನ್ನು ನಿರ್ಣಯಿಸುವುದು ತೀರ್ಪುಗಾರರು, ಸಲಹಾ ಮಂಡಳಿ ಹಾಗೂ ಪ್ರಶಸ್ತಿ ಪ್ರದಾನ ಮಂಡಳಿಗೆ ಸೇರಿರುತ್ತದೆ.
7.3 ಒದಗಿಸಲಾದ ಮಾಹಿತಿಗೆ ಪುರಾವೆ ಕೇಳುವ ಹಕ್ಕು/ಪ್ರವೇಶ ಅರ್ಜಿ ನಮೂನೆಯಲ್ಲಿ ಒದಗಿಸಿರುವ ಮಾಹಿತಿ ತಪಾಸಣೆಯ ಹಕ್ಕು ಪ್ರಶಸ್ತಿ ಪ್ರದಾನ ಮಂಡಳಿಗಿದೆ. ಅಂತಹ ಮನವಿಯನ್ನು ಮಾಡಿದಾಗ, ಸ್ಪರ್ಧೆಯಲ್ಲಿ ಭಾಗವಹಿಸುವವರು ಒಪ್ಪಿಕೊಳ್ಳದಿದ್ದಾಗ, ಪ್ರಶಸ್ತಿಗಾಗಿ ಭಾಗವಹಿಸದಂತೆ ಸ್ಪರ್ಧಿಗಳನ್ನು ಅನರ್ಹಗೊಳಿಸಬಹುದು.
7.4 ತಮ್ಮ ಸಾಮರ್ಥ್ಯ, ವಿಶ್ವಾಸಾರ್ಹತೆ ಕುರಿತು ಹೇಳಬಲ್ಲವರೆಂದು ಅರ್ಜಿ ನಮೂನೆಯಲ್ಲಿ ಒದಗಿಸಲಾಗಿರುವ ವ್ಯಕ್ತಿಗಳಿಗೆ, ಅರ್ಜಿ ನಮೂನೆಯಲ್ಲಿ ಅರ್ಜಿದಾರರು ಒದಗಿಸುವ ಮಾಹಿತಿ ಪರಿಶೀಲನೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಂಡಳಿ ಕರೆ ಮಾಡುತ್ತದೆ.
8. ನಿಷೇಧಿತ ಚಟುವಟಿಕೆಗಳು
8.1 ಮತ್ತೊಂದು ಕಂಪ್ಯೂಟರ್ ಅಥವಾ ಆಸ್ತಿಯ ಕಾರ್ಯಾಚರಣೆಗೆ ಹಾನಿ ಮಾಡುವ ವೈರಸ್ ಗಳು, ಟ್ರೋಜನ್ ಹಾರ್ಸ್, ವರ್ಮ್ಸ್ , ಟೈಂ ಬಾಂಬ್ಸ್ , ಕರಪ್ಟ್ ಆದ ಫೈಲ್ಸ್, ಕುತಂತ್ರಾಂಶ ( ಮಾಲ್ ವೇರ್), ಸ್ಪೈ ವೇರ್ ಅಥವಾ ಮತ್ಯಾವುದೇ ಇಂತಹದ್ದೇ ಸಾಫ್ಟ್ ವೇರ್
8.2 ಹಾನಿ ಮಾಡುವ, ನಿಷ್ಕ್ರಿಯಗೊಳಿಸುವ, ಹೆಚ್ಚು ಹೊರೆ ಹೊರಿಸುವ ಉದ್ದೇಶದಿಂದ ವೆಬ್ ಸೈಟ್ ಬಳಕೆ ಮಾಡುವುದು ಅಥವಾ ಯಾವುದೇ ಸರ್ವರ್ ಅಥವಾ ಯಾವುದೇ ಸರ್ವರ್ ಗೆ ಸಂಪರ್ಕ ಹೊಂದಿದ ನೆಟ್ ವರ್ಕ್ (ಗಳು) ಹಾಳುಗೆಡುವುವುದು, ಅಥವಾ ಯಾರೋ ವೆಬ್ ಸೈಟ್ ಬಳಕೆ ಮಾಡುತ್ತಿರುವಾಗ ಹಸ್ತಕ್ಷೇಪ ಮಾಡುವುದು.
8.3 ವೆಬ್ ಸೈಟ್, ಇತರ ಅಕೌಂಟ್ ಗಳು, ಕಂಪ್ಯೂಟರ್ ಸಿಸ್ಟಮ್ಸ್ ಅಥವಾ ಯಾವುದೇ ಸರ್ವರ್ ಗೆ ಸಂಪರ್ಕಿತವಾದ ನೆಟ್ ವರ್ಕ್ ಗಳಿಗೆ ಹ್ಯಾಕಿಂಗ್, ಪಾಸ್ ವರ್ಡ್ ಭೇದಿಸುವುದು ಅಥವಾ ಬೇರೆ ಯಾವುದಾದರೂ ಮಾರ್ಗದ ಮೂಲಕ ಅನಧಿಕೃತ ಪ್ರವೇಶ ಪಡೆದುಕೊಳ್ಳಲು ಯತ್ನಿಸುವುದು.
8.4 ಸೈಟ್, ಅದರ ಸರ್ವರ್ ಗಳು ಅಥವಾ ಸಂಬಂಧಿಸಿದ ಕಂಪ್ಯೂಟರ್ ಗಳಲ್ಲಿ ಸಂಗ್ರಹಿಸಿಡಲಾದ ಯಾವುದೇ ವಿಷಯ ಅಥವಾ ಮಾಹಿತಿಯನ್ನು, ಸೈಟ್ ಮೂಲಕ ಉದ್ದೇಶಪೂರ್ವಕವಾಗಿ ಅಲಭ್ಯವಾಗಿಸಿರುವುದನ್ನು ಪಡೆದುಕೊಳ್ಳುವುದು ಅಥವಾ ಪಡೆದುಕೊಳ್ಳಲು ಯತ್ನಿಸುವುದು.
9. ಮಿತಿಗಳು ಹಾಗೂ ನಿರಾಕರಣೆಗಳು
9.1 ತಡವಾದ/ಅಪೂರ್ಣ/ದೋಷಪೂರಿತ ಪ್ರವೇಶಗಳು ಹಾಗೂ /ಅಥವಾ ಯಾವುದೇ ಕಾರಣಕ್ಕೂ ಓದಲಾಗದ ಅಥವಾ ನೋಡಲಾಗದವುದಕ್ಕೆ ಪ್ರಶಸ್ತಿ ಪ್ರದಾನ ಮಂಡಳಿಯು ಹೊಣೆಯಾಗುವುದಿಲ್ಲ ಹಾಗೂ ಅಂತಹ ಪ್ರವೇಶಗಳು ತಾವಾಗಿಯೇ ಅನರ್ಹಗೊಳ್ಳುತ್ತವೆ. ಯಾವುದಾದರೂ ತಾಂತ್ರಿಕ, ಭೌತಿಕಅಥವಾ ಮತ್ಯಾವುದಾದರೂ ಕಾರಣಗಳಿಗಾಗಿ ಪ್ರವೇಶ ಸ್ವೀಕಾರವಾಗದಿದ್ದಲ್ಲಿ, ಓದಲಾಗದಿದ್ದಲ್ಲಿ/ನೋಡಲಾಗದಿದ್ದಲ್ಲಿ/ನಿರ್ಣಯಿಸಲಾಗದಿದ್ದಲ್ಲಿ ಪ್ರಶಸ್ತಿ ಪ್ರದಾನ ಮಂಡಳಿಯು ಜವಾಬ್ದಾರರಾಗುವುದಿಲ್ಲ.
9.2 ಯಾವುದೇ ಸೂಚನೆ ನೀಡದೆ ಯಾವುದೇ ಸಂದರ್ಭದಲ್ಲಾದರೂ ಈ ನಿಬಂಧನೆ ಮತ್ತು ಷರತ್ತುಗಳನ್ನು ಅಮಾನತುಗೊಳಿಸುವ, ರದ್ದು ಮಾಡುವ ಅಥವಾ ಮಾರ್ಪಡಿಸುವ, ಇನ್ನಷ್ಟು ಸೇರಿಸುವಅಥವಾ ಸಂಕ್ಷಿಪ್ತಗೊಳಿಸುವ ತಮ್ಮ ಹಕ್ಕನ್ನು ಪ್ರಶಸ್ತಿ ಪ್ರದಾನ ಮಂಡಳಿ ಕಾದಿರಿಸಿಕೊಂಡಿದೆ. ಈ ನಿಬಂಧನೆ ಮತ್ತು ಷರತ್ತುಗಳ ನವೀಕೃತ ಮಾಹಿತಿಗಳಿಗಾಗಿ ಸ್ಪರ್ಧಿಗಳು ಆಗಾಗ್ಗೆ ಈ ಪುಟವನ್ನು ಪರಿಶೀಲಿಸುತ್ತಿರಬೇಕು
10.ಸಾಮಾನ್ಯ
10.1 ಸ್ಪರ್ಧೆಗೆ ಪ್ರವೇಶಿಸಲು ಕಾನೂನುಬದ್ಧವಾಗಿ ಸಮರ್ಥರು ಎಂಬುದನ್ನು ಸ್ಪರ್ಧಿಗಳು ಒಪ್ಪಿಕೊಳ್ಳುತ್ತಾರೆ ಹಾಗೂ ನಿಬಂಧನೆಗಳು ಮತ್ತು ಷರತ್ತುಗಳಿಗೆ ಒಪ್ಪಿಕೊಂಡು ಪ್ರಶಸ್ತಿಗೆ ಅರ್ಜಿ ಸಲ್ಲಿಸುತ್ತಿರುವುದನ್ನು ಅಂಗೀಕರಿಸುತ್ತಾರೆ.
10.2 ಈ ಪ್ರಶಸ್ತಿ ಗಾಗಿ ಕೇವಲ ಪಾಲ್ಗೊಳ್ಳುವಿಕೆಯು ಸ್ಪರ್ಧಿಗೆ ಪ್ರಶಸ್ತಿಯ ಹಕ್ಕು ತಂದುಕೊಡಲಾಗದು ಅಥವಾ ಯಾವುದೇ ರೀತಿಯ ಪರಿಗಣನೆಗೆ ಕಾರಣವಾಗದು ಎಂಬುದನ್ನು ಅರ್ಥಮಾಡಿಕೊಂಡು ಸಮ್ಮತಿಸುತ್ತಾರೆ.
10.3 ಯಾವುದೇ ಉಲ್ಲಂಘನೆ ಅಥವಾ ಉಲ್ಲಂಘನೆ ಆರೋಪಗಳ ನಿರ್ವಹಣೆಗೆ ಸ್ಪರ್ಧಿಯೇ ಸಂಪೂರ್ಣ ಜವಾಬ್ದಾರರು ಹಾಗೂ ಯಾವುದೇ ಪ್ರತಿಪಾದನೆಗಳು, ವೆಚ್ಚಗಳು ಅಥವಾ ಉಲ್ಲಂಘನೆಯಿಂದಾದ ಹಾನಿಗಳು ಅಥವಾ ಲೋಗೊ, ಟ್ರೇಡ್ ಮಾರ್ಕ್ ನ ಉಲ್ಲಂಘನೆ ಆರೋಪ ಅಥವಾ ಪ್ರತಿಪಾದನೆಗಳು ಹಾಗೂ ಯಾವುದೇ ವೆಚ್ಚವನ್ನೂ ಭರಿಸುವುದರಿಂದ ಪ್ರಶಸ್ತಿ ಪ್ರದಾನ ಮಂಡಳಿಯನ್ನು ಹೊರತಾಗಿಸಿರುತ್ತದೆ.
10.4 ಪ್ರಶಸ್ತಿಗಳಿಗೆ ಸ್ಪರ್ಧೆಗಾಗಿ ಕಳಿಸಲಾದಂತಹ ಪ್ರವೇಶವನ್ನು ಬಳಸಲು ಹಾಗೂ ಪ್ರದರ್ಶಿಸಲು ರಾಯಲ್ಟಿ ಇಲ್ಲದ, ಬದಲಾಯಿಸಲಾಗದ, ವಿಶ್ವದಾದ್ಯಂತದ, ವರ್ಗಾವಣೆ ಮಾಡಲಾಗದ, ಮೀಸಲಾಗಿರಿಸಿಕೊಳ್ಳದ ಹಕ್ಕು ಹಾಗೂ ಪರವಾನಗಿಯನ್ನು ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿರುವ ಸ್ಪರ್ಧಿಗಳು, ತಾವಾಗಿಯೇ ಪ್ರಶಸ್ತಿ ಪ್ರದಾನ ಮಂಡಳಿಗೆ ನೀಡುತ್ತಾರೆ ಹಾಗೂ ವ್ಯಾಪಾರಿ ಪ್ರಕಟಣೆಗಳು, ಪತ್ರಿಕಾ ಪ್ರಕಟಣೆಗಳು, ವೆಬ್ ಸೈಟ್ ಗೆ ಎಲೆಕ್ಟ್ರಾನಿಕ್ ಪೋಸ್ಟಿಂಗ್ ಗಳು, ಪ್ರಶಸ್ತಿ ಸಂದರ್ಭದಲ್ಲಿ ಆಯ್ಕೆ ಮಾಡಿಕೊಳ್ಳಲಾದ ಯಾವುದೇ ಡಿಸ್ ಪ್ಲೇ ಫಾರ್ಮಾಟ್ ನಲ್ಲಿರುವ ವೆಬ್ ಸೈಟ್ ಸೇರಿದಂತೆ ಪ್ರಶಸ್ತಿಯಲ್ಲಿ ಸ್ಪರ್ಧಿಸುವುದರಿಂದ ಸೃಷ್ಟಿಯಾಗುವ ಚಿತ್ರದ ತುಣುಕುಗಳು (ಫೂಟೇಜ್ ಗಳು) ಹಾಗೂ ಸಂಬಂಧಿಸಿದ ಯಾವುದೇ ಬೌದ್ಧಿಕ ಆಸ್ತಿಯೂ ಇದರಲ್ಲಿ ಸೇರುತ್ತದೆ.
10.5 ಯಾವುದೇ ಸಮಯದಲ್ಲಿ ಪ್ರಶಸ್ತಿಯ ನಿಬಂಧನೆಗಳು ಹಾಗೂ ಷರತ್ತುಗಳನ್ನು ತನ್ನದೇ ವಿವೇಚನೆಯ ಮೇರೆಗೆ ಪೂರ್ವಾನ್ವಯವಾಗಿ ಅಥವಾ ಭವಿಷ್ಯದಲ್ಲಿ ಹಿಂತೆಗೆದುಕೊಳ್ಳುವ ಅಥವಾ ತಿದ್ದುಪಡಿ ಮಾಡುವಅಥವಾ ಸೇರ್ಪಡೆ ಮಾಡುವ ಹಕ್ಕನ್ನು ಪ್ರಶಸ್ತಿ ಪ್ರದಾನ ಮಂಡಳಿಯು ಕಾದಿರಿಸಿಕೊಂಡಿದೆ. ಜೊತೆಗೆ, ಪ್ರಶಸ್ತಿಗಳನ್ನು ಹಿಂತೆಗೆದುಕೊಂಡಿದ್ದಕ್ಕಾಗಿ ಅಥವಾ ಅದರ ಷರತ್ತುಗಳನ್ನು ತಿದ್ದುಪಡಿ ಮಾಡಿದ್ದರಿಂದಾಗಿ ಪ್ರಶಸ್ತಿಗಾಗಿ ಸ್ಪರ್ಧಿಸಿ ಅಥವಾ ಸ್ಪರ್ಧಿಸಲು ಯತ್ನಿಸಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಉಂಟು ಮಾಡಿಕೊಂಡ ನಷ್ಟಅಥವಾ ಹಾನಿಗೆ ಪ್ರಶಸ್ತಿ ಪ್ರದಾನ ಮಂಡಳಿಯು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ.
10.6 ಪ್ರಶಸ್ತಿ ಸ್ಪರ್ಧೆಯಿಂದ ಹಿಂತೆಗೆದುಕೊಳ್ಳಲು ಯಾರಾದರೂ ಸ್ಪರ್ಧಿ ಬಯಸಿದಲ್ಲಿ, ಅಂತಿಮ ಪ್ರಶಸ್ತಿ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಯಾವುದೇ ಸಮಯದಲ್ಲೂ ಪ್ರಶಸ್ತಿ ಪ್ರದಾನ ಮಂಡಳಿಗೆ ಲಿಖಿತ ರೂಪದಲ್ಲಿ
cinesammana@prajavani.co.in ವಿಳಾಸಕ್ಕೆ ಮಾಹಿತಿ ನೀಡಬೇಕು
10.7 ಪ್ರಶಸ್ತಿ ನಂತರದಲ್ಲಿ ಹುಟ್ಟಿಕೊಳ್ಳುವ ಅಥವಾ ಪ್ರಶಸ್ತಿಗೆ ಸಂಬಂಧಿಸಿದ ಎಲ್ಲಾ ವಿವಾದಗಳೂ ಭಾರತದ ಕಾನೂನುಗಳ ವ್ಯಾಪ್ತಿಗೆ ಬರುತ್ತವೆ. ಜೊತೆಗೆ, ಭಾರತದಲ್ಲಿನ ಬೆಂಗಳೂರಿನ ಸ್ಪರ್ಧಾತ್ಮಕ ವ್ಯಾಪ್ತಿಯ ಕೋರ್ಟ್ ಗಳ ವಿಶೇಷ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
10.8 ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಅಥವಾ ದೂರನ್ನು ಈ ನಿಬಂಧನೆ ಹಾಗೂ ಷರತ್ತುಗಳು ಒಳಗೊಳ್ಳದಿದ್ದಲ್ಲಿ, ಅದನ್ನು ಪ್ರಶಸ್ತಿ ಪ್ರದಾನ ಮಂಡಳಿ (ಇತರ ಎಲ್ಲಾ ವಿಚಾರಗಳಿಗೂ) ಅಥವಾ ಯಾವುದಾದರೂ ಸ್ವತಂತ್ರ ಸಂಸ್ಥೆ ಅಥವಾ ಪ್ರಶಸ್ತಿ ಪ್ರದಾನ ಮಂಡಳಿಯು ಅಗತ್ಯವೆಂದು ಪರಿಗಣಿಸಿ ನೇಮಕ ಮಾಡಲಾದ ಕಾನೂನು ತಂಡವು ಪರಿಹರಿಸುವುದು
11.ಜಾಲತಾಣ
11.1 ಜಾಲತಾಣವು ಕೇವಲ ಪ್ರಶಸ್ತಿಗಳ ಮಾಹಿತಿಗಳನ್ನು ನೀಡುವ ವೆಬ್ ಸೈಟ್ ಆಗಿರುತ್ತದೆ. (https://www.prajavani.net/cinesamman/season3). ಸ್ಪರ್ಧಿಯು ಅಥವಾ ಸ್ಪರ್ಧಿಯ ಪರವಾಗಿ ಯಾರಾದರೂ ಅಥವಾ ಸ್ಪರ್ಧಿಯ ಕೈಕೆಳಗೆ ಕೆಲಸ ಮಾಡುವವರು ಅಥವಾ ಸ್ಪರ್ಧಿಯ ಜೊತೆ ಒಪ್ಪಂದದಲ್ಲಿರುವವರು ಕೈಗೊಂಡ ಯಾವುದೇ ಕ್ರಿಯೆ ಅಥವಾ ನಿರ್ಧಾರಕ್ಕೆ ಪ್ರಶಸ್ತಿ ಪ್ರದಾನ ಮಂಡಳಿ ಬಾಧ್ಯಸ್ಥರಲ್ಲಅಥವಾ ಜವಾಬ್ದಾರರಲ್ಲ. ಸ್ಪರ್ಧಿಗೆ ಪ್ರಶಸ್ತಿ ಪ್ರದಾನ ಮಂಡಳಿಯು ಯಾವುದೇ ರೀತಿಯಲ್ಲಿ ಬಾಧ್ಯಸ್ಥರಲ್ಲ ಹಾಗೂ ಆಯ್ಕೆ ಪ್ರಕ್ರಿಯೆ ಅಥವಾ ಪ್ರಶಸ್ತಿಗೆ ಸ್ಪರ್ಧೆಗೆ ಸಂಬಂಧಿಸಿದಂತೆ ಪ್ರಶಸ್ತಿ ಪ್ರದಾನ ಮಂಡಳಿಯ ವಿರುದ್ಧ ಸ್ಪರ್ಧಿಗೆ ಯಾವುದೇ ಬಾಧ್ಯಸ್ಥಿಕೆ ಅಥವಾ ಹಕ್ಕು ಇರುವುದಿಲ್ಲ.
11.2 ಪ್ರಶಸ್ತಿ ಪ್ರದಾನ ಮಂಡಳಿಯು ಈ ಕೆಳಕಂಡ ವಿಚಾರಗಳಿಗೆ ಯಾವುದೇ ರೀತಿಯಲ್ಲಿ ಜವಾಬ್ದಾರರಾಗುವುದಿಲ್ಲ::
11.2.1 ಯಾವುದೇ ವಿತರಣೆ, ವಿಡಿಯೊಗಳು/ಪ್ರೆಸೆಂಟೇಶನ್ ಗಳ ರಿಜಿಸ್ಟ್ರೇಷನ್ ಅಥವಾ ಅಪ್ ಲೋಡಿಂಗ್ ಗೆ ಸಂಬಂಧಿಸಿದ ವೈಫಲ್ಯಗಳು
11.2.2 ಸ್ಪರ್ಧಿಯು ವೆಬ್ ಸೈಟ್ ಸಂಪರ್ಕಿಸಿದ ಪರಿಣಾಮವಾಗಿ ಸೃಷ್ಟಿಯಾದ ಯಾವುದೇ ಸ್ಪಾಮ್ ಸಂದೇಶಗಳು
11.2.3 ಯಾವುದೇ ದತ್ತಾಂಶ ತಿರಸ್ಕರಿಸುವಿಕೆಗೆ ಅಥವಾ ಪ್ರಶಸ್ತಿ ಪ್ರದಾನ ಮಂಡಳಿಗೆ ತಲುಪದಿರುವುದು
11.2.4 ನೆಟ್ ವರ್ಕ್ ಅಥವಾ ಕಂಪ್ಯೂಟರ್ ಟ್ರಾನ್ಸ್ ಮಿಷನ್ ತಪ್ಪುಗಳು, ನಷ್ಟ, ತಡವಾಗುವಿಕೆ, ಯಾವುದೇ ರೀತಿಯ ಎಲೆಕ್ಟ್ರಾನಿಕ್ ವೈಫಲ್ಯಗಳು ಅಥವಾ ಟ್ರಾನ್ಸ್ ಮಿನ್ ವೈಫಲ್ಯಗಳಿಂದ ಅಥವಾ ಯಾವುದೇ ತಾಂತ್ರಿಕ ಕಾರಣಗಳಿಂದ ಪ್ರವೇಶಗಳನ್ನು ಪಡೆಯುವಲ್ಲಿನ ಯಾವುದೇ ವೈಫಲ್ಯ
11.2.5 ನಿಯಂತ್ರಣಕ್ಕೆ ಸಿಗದ ಇತರ ಷರತ್ತುಗಳು/ಪರಿಸ್ಥಿತಿಗಳು ಅಥವಾ ವೈಫಲ್ಯಗಳು
12. ನಿರಾಕರಣೆಗಳು
12.1 ಮುಂಚೆಯೇ ಸ್ಪರ್ಧೆಗೆ ಬಂದ ಪ್ರವೇಶಗಳಲ್ಲಿನ ವಸ್ತುಗಳ ಮೌಲ್ಯಮಾಪನ ಮಾಡುವ ಬಾಧ್ಯಸ್ತಿಕೆ ಪ್ರಶಸ್ತಿ ಪ್ರದಾನ ಮಂಡಳಿಗೆ ಇಲ್ಲ. ಬೌದ್ಧಿಕ ಆಸ್ತಿ ಸ್ವಾಮ್ಯ ಹಕ್ಕು ಉಲ್ಲಂಘನೆ, ಇತರ ಯಾವುದೇ ಕಾನೂನು, ನಿಯಮ ಅಥವಾ ನಿಯಮಾವಳಿ ಉಲ್ಲಂಘನೆಯ ತಡೆ ಉದ್ದೇಶಕ್ಕಾಗಿ ಪ್ರವೇಶಗಳ ಕುರಿತು ನಿಗಾ ವಹಿಸಬೇಕಾದ ಹೊಣೆಯೂ ಇಲ್ಲ. ನಿಯಮಗಳಿಗೆ ಬದ್ಧವಾಗದ ಸಲ್ಲಿಕೆಗಳು ಅಥವಾ ವಸ್ತುಗಳ ಬಗ್ಗೆ ಪ್ರಶಸ್ತಿ ಪ್ರದಾನ ಮಂಡಳಿಗೆ ಸೂಚನೆ ನೀಡಿದಲ್ಲಿ, ಆರೋಪಗಳ ಕುರಿತಾಗಿ ತನಿಖೆ ನಡೆಸಿ ಅಂತಹ ಪ್ರವೇಶವನ್ನು ಪರಿಗಣನೆಯಿಂದ ಕಿತ್ತುಹಾಕಬೇಕೇ ಎಂಬುದನ್ನು ತನ್ನದೇ ವಿವೇಚನೆಯಲ್ಲಿ ಸದ್ಭಾವದಿಂದ ನಿರ್ಣಯಿಸುವುದು. ಅಂತಹ ಚಟುವಟಿಕೆಗಳ ನಿರ್ವಹಣೆಗಳು ಅಥವಾ ನಿರ್ವಹಣೆಗಳಿಲ್ಲದಿರುವುದಕ್ಕೆ ಸ್ಪರ್ಧಿಗಳಿಗೆ ಅಥವಾ ವೆಬ್ ಸೈಟ್ ನ ಇತರ ಬಳಕೆದಾರರಿಗೆ ಪ್ರಶಸ್ತಿ ಪ್ರದಾನ ಮಂಡಳಿಯು ಬಾಧ್ಯಸ್ಥಿಕೆ ಅಥವಾ ಹೊಣೆಗಾರಿಕೆ ಹೊಂದಿರುವುದಿಲ್ಲ.
12.2 ಯಾವುದೇ ಹಕ್ಕು ಚಲಾಯಿಸುವಲ್ಲಿ ಪ್ರಶಸ್ತಿ ಪ್ರದಾನ ಮಂಡಳಿಯ ವೈಫಲ್ಯವನ್ನು ಇನ್ನೂ ಹೆಚ್ಚಿನ ಹಕ್ಕುಗಳ ಮನ್ನಾ ಮಾಡುವಿಕೆ ಎಂದು ಭಾವಿಸಿಕೊಳ್ಳಬಾರದು. ಪ್ರಶಸ್ತಿ ಪ್ರದಾನ ಮಂಡಳಿಯ ತರ್ಕಬದ್ಧ ನಿಯಂತ್ರಣಕ್ಕೆ ಮೀರಿ ಆದಂತಹ ತನ್ನ ಬಾಧ್ಯಸ್ಥಿಕೆಗಳ ನಿರ್ವಹಣೆಯಲ್ಲಿನ ಯಾವುದೇ ವೈಫಲ್ಯಕ್ಕೆ ಪ್ರಶಸ್ತಿ ಪ್ರದಾನ ಮಂಡಳಿಯು ಹೊಣೆಯಾಗುವುದಿಲ್ಲ. ಈ ಒಪ್ಪಂದದಲ್ಲಿನ ಯಾವುದೇ ಅಂಶ ಜಾರಿಮಾಡಲಾಗದಂತಹದ್ದು ಅಥವಾ ಅಸಿಂಧು ಎಂದು ಕಂಡುಬಂದಲ್ಲಿ ಈ ಒಪ್ಪಂದಕ್ಕಾಗಿ ಆ ಅಂಶವನ್ನು ಅಗತ್ಯಬಿದ್ದಲ್ಲಿ ಕನಿಷ್ಠ ಮಟ್ಟಕ್ಕೆ ಮಿತಿಗೊಳಿಸಬಹುದು ಅಥವಾ ತೆಗೆದುಹಾಕಬಹುದು ಅಥವಾ ಅದು ಪೂರ್ಣಪ್ರಮಾಣದಲ್ಲಿ ಅಳವಡಿಸಬಹುದಾದ ರೀತಿಯಲ್ಲಿ ಜಾರಿಯಲ್ಲಿರಬಹುದು. ಈ ಒಪ್ಪಂದವು ಬೇರೆಯವರಿಗೆ ನಿಯೋಜಿಸಲಾಗದಂತಹದ್ದು, ವರ್ಗಾವಣೆ ಮಾಡಲಾಗದಂತಹದ್ದು ಅಥವಾ ಪ್ರಶಸ್ತಿ ಪ್ರದಾನ ಮಂಡಳಿಯ ಲಿಖಿತ ಪೂರ್ವಾನುತಿಯಿಲ್ಲದೆ ನಿಮ್ಮಿಂದ ಉಪ ಗುತ್ತಿಗೆ ನೀಡಲಾಗದಂತಹದ್ದು. ಈ ಒಪ್ಪಂದವು ಭಾರತದ ಆಂತರಿಕ ಕಾನೂನುಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಒಪ್ಪಂದಕ್ಕೊಳಪಡುವ ಭಾಗೀದಾರರು, ಭಾರತದ ಬೆಂಗಳೂರಿನಲ್ಲಿರುವ ನ್ಯಾಯಾಲಯಗಳ ವಿಶೇಷ ವ್ಯಾಪ್ತಿಗೆ ಒಳಪಡುವರು. ಈ ಒಪ್ಪಂದದ ಅನ್ವಯ ಕ್ರಿಯೆಯೊಂದರಲ್ಲಿ ಮೇಲುಗೈ ಸಾಧಿಸಿದ ಪಕ್ಷದವರು ವಕೀಲರ ಸಮಂಜಸವಾದ ಶುಲ್ಕ ಹಾಗೂ ವೆಚ್ಚಗಳನ್ನು ಮತ್ತೊಂದು ಪಕ್ಷದವರಿಂದ ಪಡೆದುಕೊಳ್ಳುವ ಅರ್ಹತೆ ಹೊಂದಿರುತ್ತಾರೆ. ಈ ಒಪ್ಪಂದ ಪರಿಪೂರ್ಣ ಹಾಗೂ ಪರಸ್ಪರ ತಿಳಿವಳಿಕೆಯ ಅನನ್ಯ ಹೇಳಿಕೆ ಎಂದು ಎರಡೂ ಪಕ್ಷಗಳವರು ಸಮ್ಮತಿಸಿ, ಈ ಹಿಂದಿನ ಎಲ್ಲಾ ಲಿಖಿತ ಹಾಗೂ ಮೌಖಿಕ ಒಪ್ಪಂದಗಳು, ಸಂವಹನಗಳು ಹಾಗೂ ಈ ಒಪ್ಪಂದದ ವಿಷಯಕ್ಕೆ ಸಂಬಂಧಿಸಿದ ಇತರ ತಿಳಿವಳಿಕೆಗಳನ್ನು ಹಿಂದೆ ಹಾಕಿ ರದ್ದು ಪಡಿಸಲಾಗುತ್ತದೆ. ಎಲ್ಲಾ ಮಾರ್ಪಾಡುಗಳೂ ಲಿಖಿತ ರೂಪದಲ್ಲಿದ್ದು ಉಭಯ ಪಕ್ಷದವರೂ ಸಹಿ ಮಾಡಿರಬೇಕು.
12.3 ಈ ಒಪ್ಪಂದದ ಫಲಿತವಾಗಿ ಯಾವುದೇ ಸಂಸ್ಥೆ, ಪಾಲುದಾರಿಕೆ, ಜಂಟಿ ಉದ್ಯಮ ಅಥವಾ ಉದ್ಯೋಗವನ್ನು ಸೃಷ್ಟಿಸಲಾಗದು. ಪ್ರಶಸ್ತಿ ಪ್ರದಾನ ಮಂಡಳಿಯ ಜೊತೆ ಯಾವುದೇ ರೀತಿಯಲ್ಲೂ ಬೆಸೆದುಕೊಳ್ಳಲು ನಿಮಗೆ ಯಾವುದೇ ರೀತಿಯ ಅಧಿಕಾರವಿಲ್ಲ ಎಂಬುದನ್ನು ನೀವು ದೃಢೀಕರಿಸುತ್ತೀರಿ.
13 ಸಿಸ್ಟಮ್ಸ್ ಮತ್ತು ಲಭ್ಯತೆ
13.1 ತಾಂತ್ರಿಕ, ಹಾರ್ಡ್ ವೇರ್, ಸಾಫ್ಟ್ ವೇರ್ ಅಥವಾ ಇತರ ಸಂಪರ್ಕ ಲೋಪಗಳು, ಯಾವುದೇ ರೀತಿಯ ತಪ್ಪುಗಳು ಅಥವಾ ವೈಫಲ್ಯಗಳು , ನೆಟ್ ವರ್ಕ್ ಸಂಪರ್ಕ ನಷ್ಟ ಅಥವಾ ಅಲಭ್ಯತೆ, ವೆಬ್ ಸೈಟ್, ಇಂಟರ್ ನೆಟ್ ಅಥವಾ ಐಎಸ್ ಪಿ ಲಭ್ಯತೆ, ಅನಧಿಕೃತ ಮಾನವ ಮಧ್ಯ ಪ್ರವೇಶ, ಟ್ರಾಫಿಕ್ ದಟ್ಟಣೆ, ಅಪೂರ್ಣ ಅಥವಾ ನಿಖರವಲ್ಲದ ಮಾಹಿತಿಯ ಲಭ್ಯತೆ (ಏನಾದರೂ ಕಾರಣ ಇರಲಿ), ಅಥವಾ ಭಾಗವಹಿಸುವ ಸಂದರ್ಭದಲ್ಲಿ ಸ್ಪರ್ಧಿಗಳಿಗೆ ಗಾಯ ಅಥವಾ ಯಾವುದೇ ವಸ್ತು ಡೌನ್ ಲೋಡ್ ಮಾಡುವಾಗ ಯಾವುದೇ ವ್ಯಕ್ತಿಯ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನಕ್ಕೆ ಹಾನಿ ಸೇರಿದಂತೆ ಸ್ಪರ್ಧಿಗಳನ್ನು/ಭಾಗವಹಿಸುವ ಸ್ಪರ್ಧಿಗಳ ಸಾಮರ್ಥ್ಯವನ್ನು ಸೀಮಿತಗೊಳಿಸುವ ವಿಫಲವಾದ,ಅಪೂರ್ಣ, ಗೋಜಲಾದ, ಅವ್ಯವಸ್ಥೆಯ ಅಥವಾ ವಿಳಂಬವಾದ ಕಂಪ್ಯೂಟರ್ ಟ್ರಾನ್ಸ್ ಮಿಷನ್ ಗಳಿಗೆ, ಪ್ರಶಸ್ತಿ ಪ್ರದಾನ ಮಂಡಳಿ , ಅದರಅಂಗ ಸಂಸ್ಥೆಗಳು, ಪ್ರಕ್ರಿಯಾ ಸಲಹೆಗಾರರು , ಗುತ್ತಿಗೆದಾರರು , ಪಾಲುದಾರರು ಹಾಗೂ ಪ್ರವರ್ತಕರು ಜವಾಬ್ದಾರರಾಗುವುದಿಲ್ಲ. ಕಳೆದುಹೋದ, ತಡವಾದ, ಅಸ್ಪಷ್ಟ, ಅಪೂರ್ಣ,ಅಸಿಂಧು, ಅರ್ಥವಾಗದ , ತಾಂತ್ರಿಕವಾಗಿ ಕರಪ್ಟ್ ಆದ ಅಥವಾ ದಿಕ್ಕು ತಪ್ಪಿಸುವ ಉತ್ತರಗಳ ಅನರ್ಹಗೊಳಿಸುವಿಕೆಗೆ ಪ್ರಶಸ್ತಿ ಪ್ರದಾನ ಮಂಡಳಿ ಹೊಣೆಯಾಗುವುದಿಲ್ಲ. ಎಲ್ಲಾ ಉತ್ತರಗಳ ವೈಯಕ್ತಿಕ ವಿವರಗಳ ನಿಖರತೆ ಹಾಗೂ ಭದ್ರತೆ ಖಾತ್ರಿ ಪಡಿಸುವಲ್ಲಿ ವಾಣಿಜ್ಯಿಕವಾಗಿ ಸಮಂಜಸವಾದ ಪ್ರಯತ್ನಗಳನ್ನು ಬಳಸಲು ಪ್ರಶಸ್ತಿ ಪ್ರದಾನ ಮಂಡಳಿಯು ಯತ್ನಿಸುತ್ತದೆ. (ಆದರೆ, ಅಂತಹ ವಿಧಾನಗಳು ದೋಷಪೂರಿತವಲ್ಲ ಎಂದೇನೂ ಹೇಳಲಾಗದು ಹಾಗೂ ಅದರ ಪರಿಣಾಮಕಾರಿತ್ವದ ಬಗ್ಗೆ ಸಂಘಟಕರು ಖಾತ್ರಿನೀಡಲಾಗದು ಎಂಬದನ್ನು ಭಾಗಿದಾರರು ಗುರುತಿಸಿ ಒಪ್ಪಿಕೊಳ್ಳುವ ಷರತ್ತಿಗೆ ಒಳಪಡಬೇಕಾಗುತ್ತದೆ)
13.2 ಪ್ರಶಸ್ತಿ ಪ್ರಕ್ರಿಯೆ ಸಂದರ್ಭದಲ್ಲಿ ಸ್ಪರ್ಧಿಯು ಅನುಭವಿಸುವ ಯಾವುದೇ ನಷ್ಟ ಅಥವಾ ಆಕ್ರೋಶ ಅಥವಾ ಅತೃಪ್ತಿಗೆ ಪ್ರಶಸ್ತಿ ಪ್ರದಾನ ಮಂಡಳಿ ಹಾಗೂ/ಅಥವಾ ಅದರ ಅಂಗಸಂಸ್ಥೆಗಳು/ಸಹ ಸಂಸ್ಥೆಗಳು ಜವಾಬ್ದಾರವಾಗುವುದಿಲ್ಲ. ಅಂತಹ ನಷ್ಟಅಥವಾ ಅತೃಪ್ತಿಗೆ ಪರಿಹಾರ ಒದಗಿಸುವ ಹೊಣೆಯೂ ಪ್ರಶಸ್ತಿ ಪ್ರದಾನ ಮಂಡಳಿ ಅಥವಾ ಅದರ ಅಂಗಸಂಸ್ಥೆಗಳು/ಸಹ ಸಂಸ್ಥೆಗಳಿಗೆ ಸೇರಿದ್ದಲ್ಲ. ದತ್ತಾಂಶ ನಷ್ಟವಾಗದಂತೆ ಅಥವಾ ಕರಪ್ಟ್ ಆಗದಂತೆ ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಆದರೆ ದತ್ತಾಂಶ ನಷ್ಟವೇನಾದರೂ ಸಂಭವಿಸಿದಲ್ಲಿ, ಎಷ್ಟು ದತ್ತಾಂಶ ಲಭ್ಯವಿದೆಯೋ ಅದರಲ್ಲೇ ಅಥವಾ ಸಮಂಜಸವೆನಿಸಬಹುದಾದ ಬೇರೆ ಇನ್ಯಾವುದಾದರೂ ರೀತಿಯಲ್ಲೇ ಪ್ರಶಸ್ತಿ ಪ್ರದಾನ ಮಂಡಳಿ ಮುಂದುವರಿಯಬೇಕಾಗುತ್ತದೆ. ದತ್ತಾಂಶ ನಷ್ಟಕ್ಕೆ ಪ್ರಶಸ್ತಿ ಪ್ರದಾನ ಮಂಡಳಿಯನ್ನು ಹೊಣೆ ಮಾಡಬಾರದು ಅಥವಾ ಅದಕ್ಕಾಗಿ ಕ್ರಮ ತೆಗೆದುಕೊಳ್ಳಲೂ ಬಾರದು. ಅಂತಹ ನಷ್ಟದಿಂದಾಗಿ ಉಂಟಾಗುವ ಅತೃಪ್ತಿ ಅಥವಾ ನಷ್ಟ ಭರ್ತಿಗೆ ಪ್ರಶಸ್ತಿ ಪ್ರದಾನ ಮಂಡಳಿಯನ್ನು ಹೊಣೆಯಾಗಿಸಬಾರದು.
13.3 ಒಂದೇ ವಿಚಾರದ ಬಗ್ಗೆ ಸ್ಪರ್ಧಿಯಿಂದ ಬಹು ಪ್ರವೇಶಗಳು ಬಂದಲ್ಲಿ ಆ ಸ್ಪರ್ಧಿಯಿಂದ ಬಂದ ಮೊದಲ ಸಲ್ಲಿಕೆಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರಶಸ್ತಿ ಪ್ರದಾನ ಮಂಡಳಿಗೆ ಇದೆ. ಪ್ರಶಸ್ತಿ ಆರಂಭಿಸುವ ಮುಂಚೆ, ವೆಬ್ ಸೈಟ್ ಗಳು ಕಾರ್ಯಾಚರಣೆ ನಿರ್ವಹಿಸುತ್ತಿದ್ದು ಸರಿಯಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಸ್ಪರ್ಧಿಗಳು ಪರಿಶೀಲಿಸಿಕೊಳ್ಳಬೇಕು. ಸೈಟ್ ನ ಸುಗಮ ಕಾರ್ಯಾಚರಣೆಗಾಗಿ ಸಾಕಷ್ಟು ರ್ಯಾಮ್ (RAM) ಹಾಗೂ ಫೋನ್ ಮೆಮರಿಯನ್ನು ಇಟ್ಟು ಕೊಳ್ಳಲೂ ಸ್ಪರ್ಧಿಗಳಿಗೆ ಸೂಚಿಸಲಾಗುತ್ತದೆ. ಸ್ಪರ್ಧಿಯ ಜೊತೆ ಸಂವಹನ ಮಾಡಲು ಬಳಸುವ ಸರ್ವರ್ ನಲ್ಲಿ ಸಾಕಷ್ಟು ಹೆಚ್ಚಿನದು ತುಂಬಿಕೊಂಡಿದೆ. ಆದರೂ, ಅಪರೂಪದ ಸಂದರ್ಭಗಳಲ್ಲಿ, ಪ್ರವೇಶ ಸಂದರ್ಭದ ಕರೆಯ ಸಂದರ್ಭದಲ್ಲಿ ಸರ್ವರ್ ಡೌನ್ ಆಗಿ ಬಿಡಬಹುದು. ಆಗ, ಪ್ರಶಸ್ತಿ ಪ್ರದಾನ ಮಂಡಳಿಯು ಬಾಧ್ಯಸ್ಥಿಕೆಯ ಕಾರಣದಿಂದಲ್ಲ, ತನ್ನದೇ ವಿವೇಚನೆಯಿಂದ, ಸೂಕ್ತವೆನಿಸಿದ ಕ್ರಮಗಳನ್ನು ನಿರ್ಧರಿಸಬಹುದು.
13.4 sಪ್ರಶಸ್ತಿ ಪ್ರದಾನ ಮಂಡಳಿ ಹಾಗೂ ಅದರ ಪಾಲುದಾರರು ಎಲ್ಲಾ ಸಾಧ್ಯತೆಗಳ ಸಮಸ್ಯೆಗಳನ್ನು ಗುರುತಿಸಲಾಗುವುದಿಲ್ಲ ಎಂಬುದನ್ನು ಸ್ಪರ್ಧಿಗಳು ಗುರುತಿಸುತ್ತಾರೆ ಹಾಗೂ ಅಪ್ಲಿಕೇಷನ್, ನೆಟ್ ವರ್ಕ್, ಪ್ರಕ್ರಿಯೆ , ತಾಂತ್ರಿಕ ಅಥವಾ ಇನ್ನು ಯಾವುದೇ ವೈಫಲ್ಯಗಳಿಗೂ ಪ್ರಶಸ್ತಿ ಪ್ರದಾನ ಮಂಡಳಿಯನ್ನು ನಿರುಪದ್ರವಿ ಎಂದು ಭಾವಿಸಲು ಒಪ್ಪುತ್ತಾರೆ. ಯಾವುದೇ ನಷ್ಟ, ಗಾಯ,ಅಸ್ವಸ್ಥತೆ, ಖಾಸಗಿತನ ನಷ್ಟ , ಭಾಗವಹಿಸುವಿಕೆಯ ಅಸಾಮರ್ಥ್ಯ ಅಥವಾ ಇನ್ನು ಯಾವುದೇ ತೊಂದರೆಗಳು ಸ್ಪರ್ಧಿಗೆ ಅಥವಾ ಸ್ಪರ್ಧಿಯ ಆಸ್ತಿ ಅಥವಾ ಸಾಧನಗಳಿಗೆ ಉಂಟಾದಲ್ಲಿ ಅದು ಪ್ರಶಸ್ತಿ ಪ್ರದಾನ ಮಂಡಳಿ ಅಥವಾ ಅದರ ಪಾಲುದಾರರ ಜವಾಬ್ದಾರಿಯಲ್ಲ.
13.5 ಯಾರೇ ವ್ಯಕ್ತಿ, ( ಸ್ಪರ್ಧಿ ಅಥವಾ ಸ್ಪರ್ಧಿಯ ಪರವಾದ ಯಾರೇ ವ್ಯಕ್ತಿ )
cinesammana@prajavani.co.in ವಿಳಾಸದಲ್ಲಿ ಪ್ರಶಸ್ತಿ ಪ್ರದಾನ ಮಂಡಳಿಗೆ ಮೊದಲು ದೂರು ದಾಖಲಿಸಿ ಆ ದೂರನ್ನು ನಿರ್ವಹಿಸಲು ಪ್ರಶಸ್ತಿ ಪ್ರದಾನ ಮಂಡಳಿಗೆ ಅವಕಾಶ ನೀಡದೆಯೇ ಪ್ರಶಸ್ತಿ ಪ್ರದಾನ ಮಂಡಳಿ ಅಥವಾ ಅದರ ಪಾಲುದಾರರ ವಿರುದ್ಧ ಯಾವುದೇ ರೀತಿ ಮೊಕದ್ದಮೆ ಹೂಡಲಾಗದು.
13.6 ಪ್ರಶಸ್ತಿ ಪ್ರಕ್ರಿಯೆಯಲ್ಲಿ ಅಪ್ಲಿಕೇಷನ್ ಸರ್ವರ್ ಅಥವಾ ಸಿಸ್ಟಮ್ ವೈಫಲ್ಯಕ್ಕೆ ಪ್ರಶಸ್ತಿ ಪ್ರದಾನ ಮಂಡಳಿ ಬಾಧ್ಯಸ್ಥಿಕೆ ಹೊತ್ತುಕೊಳ್ಳುವುದಿಲ್ಲ.
14. ಗೌಪ್ಯತೆ ಹಾಗೂ ಪ್ರಚಾರ
14.1 ಸ್ಪರ್ಧಿಗಳಿಂದ ಸಂಗ್ರಹಿಸಿದ ಎಲ್ಲಾ ಮಾಹಿತಿ ಹಾಗೂ ದತ್ತಾಂಶಗಳನ್ನು, ಪ್ರಶಸ್ತಿ ಉದ್ದೇಶಕ್ಕೆ ಹೊರತು ಪಡಿಸಿ, ಪ್ರಶಸ್ತಿ ಪ್ರದಾನ ಮಂಡಳಿಯು ಗೌಪ್ಯವಾಗಿ ಇರಿಸುತ್ತದೆ ಹಾಗೂ ಸಂಗ್ರಹಿಸಲಾದ ಈ ಮಾಹಿತಿಯನ್ನು ಯಾರ ಜೊತೆಗೂ ಹಂಚಿಕೊಳ್ಳುವುದಿಲ್ಲ. ಸೂಕ್ಷ್ಮ ವೈಯಕ್ತಿಕ ಮಾಹಿತಿ ಹಾಗೂ ದತ್ತಾಂಶಗಳನ್ನು ಒದಗಿಸಿದ ಸ್ಪರ್ಧಿಯು, ಹೀಗೆ ಸಂಗ್ರಹಿಸಲಾದ ಮಾಹಿತಿ ಹಾಗೂ ದತ್ತಾಂಶವನ್ನು ಪ್ರಶಸ್ತಿ ಉದ್ದೇಶಕ್ಕಾಗಿ ಮೂರನೇ ವ್ಯಕ್ತಿ ಜೊತೆ ಹಂಚಿಕೊಳ್ಳಲು ಪ್ರಶಸ್ತಿ ಪ್ರದಾನ ಮಂಡಳಿಗೆ ಹಕ್ಕಿದೆ ಎಂಬುದನ್ನು ಅಂಗೀಕರಿಸಿ, ಇಂತಹ ವೈಯಕ್ತಿಕ ಮಾಹಿತಿ ಹಂಚಿಕೊಂಡ ಕಾರಣಕ್ಕಾಗಿ ಪ್ರಶಸ್ತಿ ಪ್ರದಾನ ಮಂಡಳಿ ವಿರುದ್ಧ ಯಾವುದೇ ಪ್ರತಿಪಾದನೆ ಹೂಡುವುದಿಲ್ಲ ಎಂಬುದನ್ನು ಅಂಗೀಕರಿಸುತ್ತಾರೆ. ಪ್ರಶಸ್ತಿ ಪ್ರದಾನ ಮಂಡಳಿ ಜೊತೆಗೆ ಸ್ಪರ್ಧಿಯು ಹಂಚಿಕೊಂಡ ಯಾವುದೇ ಮಾಹಿತಿಯನ್ನು ಪ್ರಶಸ್ತಿ ಪ್ರದಾನ ಮಂಡಳಿಯ ಖಾಸಗಿತನ ನೀತಿಗೆ ಅನುಗುಣವಾಗಿ, ಪ್ರಶಸ್ತಿ ಪ್ರದಾನ ಮಂಡಳಿಯು ನಿರ್ವಹಿಸುತ್ತದೆ.
14.2 ಪ್ರಶಸ್ತಿ ಪ್ರಕ್ರಿಯೆಗೆ ಪ್ರವೇಶಿಸುವ ಮೂಲಕ, ಯಾವುದೇ ಮಾಧ್ಯಮ ಅಥವಾ ಪ್ರಶಸ್ತಿ ಪ್ರಕ್ರಿಯೆಯಿಂದ ಸೃಷ್ಟಿಯಾಗುವ ಪ್ರಚಾರ ಕಾರ್ಯಗಳಲ್ಲಿ ಪ್ರಶಸ್ತಿ ಪ್ರದಾನ ಮಂಡಳಿಯ ಮನವಿ ಮೇರೆಗೆ ಅವರದೇ ಖರ್ಚಿನಲ್ಲಿ ಭಾಗವಹಿಸಲು ಸ್ಪರ್ಧಿಯು ಒಪ್ಪಿಕೊಂಡಂತಾಗುತ್ತದೆ ಹಾಗೂ ಪ್ರಶಸ್ತಿ ಪ್ರದಾನ ಮಂಡಳಿಯಿಂದ ತಮ್ಮ ಹೆಸರು ಹಾಗೂ /ಅಥವಾ ಚಿತ್ರಗಳನ್ನು ಬಳಕೆ ಮಾಡಲು ಒಪ್ಪಿಗೆ ನೀಡಿದಂತಾಗುತ್ತದೆ.
14.3 ಸಂದರ್ಶನಗಳಿಗಾಗಿ ಯಾವುದೇ ಪ್ರಶಸ್ತಿ ಪ್ರದಾನ ಮಂಡಳಿಯ ಮಾಧ್ಯಮ ಕೋರಿಕೆಗೆ ಸ್ಪರ್ಧಿಗಳನ್ನು ಪ್ರಶಸ್ತಿ ಪ್ರದಾನ ಮಂಡಳಿಯು ಮುಂಚಿತವಾಗಿಯೇ ಸಂಪರ್ಕಿಸುತ್ತದೆ. ಈ ಸಂದರ್ಶನಗಳನ್ನು ಪ್ರಚಾರ, ಮಾರುಕಟ್ಟೆ ಪ್ರಚಾರ, ಪತ್ರಿಕೆಗಳು ಹಾಗೂ ಮಾಧ್ಯಮ ಪ್ರಸಾರ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಹಾಗೂ ಸ್ಪರ್ಧಿಗಳು ಈ ಕುರಿತ ಯಾವುದೇ ಹಕ್ಕುಗಳನ್ನು ಬಿಟ್ಟುಕೊಡಲು ಹಾಗೂ ಯೋಜನೆ ಸಲ್ಲಿಕೆಯಲ್ಲಿ ಅವರು ಹೊಂದಿರುವ ಅಥವಾ ಹೊಂದಿರಬಹುದಾದ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪ್ರತಿಪಾದಿಸದಿರಲೂ ಒಪ್ಪಿಕೊಳ್ಳುತ್ತಾರೆ. ಪ್ರಚಾರ ಉದ್ದೇಶಗಳಿಗಾಗಿ ವೆಬ್ ಸೈಟ್ ಅಥವಾ ಇತರ ಮಾಧ್ಯಮಗಳ ಮೂಲಕ ಸ್ಪರ್ಧಿಗಳು, ಅಂತಿಮ ಘಟ್ಟಕ್ಕೆ ಬಂದವರು ಹಾಗೂ ಪ್ರಶಸ್ತಿ ವಿಜೇತರ ಹೆಸರು, ಅವರ ಚಿತ್ರ ಪ್ರಕಟಿಸುವ ಹಕ್ಕನ್ನು ಪ್ರಶಸ್ತಿ ಪ್ರದಾನ ಮಂಡಳಿ ಕಾದಿರಿಸಿಕೊಂಡಿರುತ್ತದೆ. ಹೆಸರು ಹಾಗೂ /ಅಥವಾ ಚಿತ್ರಗಳ ಬಳಕೆ, ಅಥವಾ ಪ್ರಾಜೆಕ್ಟ್ ಸಲ್ಲಿಕೆಗಳಿಗೆ ಹಣ ನೀಡಲಾಗುವುದಿಲ್ಲ ಎಂಬುದನ್ನು ಸ್ಪರ್ಧಿಗಳು ದೃಢೀಕರಿಸಿಕೊಳ್ಳುತ್ತಾರೆ ಹಾಗೂ ಇದರ ಬಳಕೆಗಾಗಿ ಪ್ರಶಸ್ತಿ ಪ್ರದಾನ ಮಂಡಳಿ ಹಾಗೂ ಅದರ ಸಹ ಸಂಸ್ಥೆಗಳ ವಿರುದ್ಧ ಯಾವುದೇ ಗತ, ವರ್ತಮಾನ ಅಥವಾ ಭವಿಷ್ಯದ ಹಣಕಾಸು ಹಾಗೂ ಇತರ ಪ್ರತಿಪಾದನೆಗಳನ್ನು ಮಾಡುವುದನ್ನು ( ಅನ್ವಯವಾಗುವುದಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಕಂಪೆನಿ) ಈ ಮೂಲಕ ಬಿಟ್ಟುಕೊಡುತ್ತಾರೆ.
14.4 ಪ್ರಶಸ್ತಿ ಪ್ರದಾನ ಮಂಡಳಿಯ ಲಿಖಿತ ಪೂರ್ವಾನುಮತಿಯಿಲ್ಲದೆ ಯಾವುದೇ ಸ್ಪರ್ಧಿಯು ಪತ್ರಿಕೆಗಳು ಅಥವಾ ಯಾವುದೇ ಇತರ ಮಾಧ್ಯಮಗಳ ಜೊತೆ ಅಥವಾ ಮೂರನೇ ವ್ಯಕ್ತಿಯ ಜೊತೆ ಮಾತನಾಡುವಂತಿಲ್ಲ ಅಥವಾ ಪ್ರಶಸ್ತಿಯ ಯಾವುದೇ ಆಯಾಮಕ್ಕೆ ಸಂಬಂಧಿಸಿ ಯಾವುದೇ ಸಂದರ್ಶನ ಅಥವಾ ಪ್ರತಿಕ್ರಿಯೆಗಳನ್ನು ನೀಡುವಂತಿಲ್ಲ. ಇತರ ಯಾರೊಂದಿಗೂ ಪ್ರಶಸ್ತಿ ಪ್ರದಾನ ಮಂಡಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನೂ ಸ್ಪರ್ಧಿಯು ಹೊರಗೆಡಹುವಂತಿಲ್ಲ. ಈ ನಿಯಮದ ಉಲ್ಲಂಘನೆಯಾದಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಸ್ಪರ್ಧಿಯ ಮುಂದಿನ ಭಾಗವಹಿಸುವಿಕೆಯ ಅವಕಾಶವನ್ನು ಅನರ್ಹಗೊಳಿಸಲಾಗುತ್ತದೆ.
14.5 ಪ್ರಶಸ್ತಿಗೆ ಸಂಬಂಧಿಸಿದ ಮಾಹಿತಿಗಳು ಹಾಗೂ ವಿವರಗಳನ್ನು ಎಲ್ಲಾ ಸಂದರ್ಭಗಳಲ್ಲೂ ಸ್ಪರ್ಧಿಯು ಗೌಪ್ಯವಾಗಿಡಬೇಕಾಗುತ್ತದೆ.
14.6 ಸ್ಪರ್ಧಿಗಳಿಂದ/ವಿಜೇತರಿಂದ ಪ್ರಶಸ್ತಿ ಪ್ರದಾನ ಮಂಡಳಿಗೆ ಸಲ್ಲಿಕೆಯಾದ ಯಾವುದೇ ಛಾಯಾಚಿತ್ರಗಳು, ವಿಡಿಯೊಗಳು ಮುಂತಾದವು,ಅಥವಾ ರೆಕಾರ್ಡ್ ಮಾಡಿದ್ದಂತಹದ್ದು, ಸಲ್ಲಿಸಿದ ನಂತರ/ಸೃಷ್ಟಿಸಿದ ನಂತರ ಪ್ರಶಸ್ತಿ ಪ್ರದಾನ ಮಂಡಳಿಯ ಆಸ್ತಿಯಾಗುತ್ತದೆ ಹಾಗೂ ನಿರಂತರವಾಗಿ ವಿಶ್ವದಾದ್ಯಂತ ಎಲ್ಲಾ ಮಾಧ್ಯಮಗಳಲ್ಲಿ ಬಳಸಿಕೊಳ್ಳಲು ಪ್ರಶಸ್ತಿ ಪ್ರದಾನ ಮಂಡಳಿಗೆ ಲಭ್ಯವಿರುತ್ತದೆ. ಯಾವುದೇ ಸಾರ್ವಜನಿಕ ನೆಲೆಯಲ್ಲಿ (ಪಬ್ಲಿಕ್ ಡೊಮೇನ್) ತಮ್ಮಿಂದ ಸಲ್ಲಿಕೆಯಾದ ಛಾಯಾಚಿತ್ರಗಳು ಅಥವಾ ವಿಡಿಯೊಗಳು ಅಥವಾ ತಮ್ಮ ಕಲಾ ಪ್ರದರ್ಶನಗಳು ಅಶ್ಲೀಲ, ಅಸಭ್ಯ, ಅಪಮಾನಿಸುವಂತಹದ್ದು, ಮಹಿಳೆ ಅಥವಾ ಮಕ್ಕಳನ್ನು ಅವಹೇಳನಕಾರಿಯಾಗಿ ಚಿತ್ರಿಸುವಂತಹದ್ದು, ಧಾರ್ಮಿಕ ಭಾವನೆಗಳನ್ನು ನೋಯಿಸುವಂತಹದ್ದು, ಹಿಂಸೆಯ ಚಿತ್ರಣ ಅಥವಾ ಮೂರನೇ ವ್ಯಕ್ತಿಯ ಹಕ್ಕುಗಳ ನಿರಾಕರಣೆಯಾಗಿರುವಹದ್ದಾಗಿರಬಾರದು ಎಂಬುದನ್ನು ಸ್ಪರ್ಧಿ(ಗಳು) ಖಾತ್ರಿ ಪಡಿಸಿಕೊಳ್ಳಬೇಕು. ಇದರಿಂದ ಉಂಟಾಗುವ ಯಾವುದೇ ಕ್ರಮಕ್ಕೆ (ಕ್ರಿಮಿನಲ್/ಸಿವಿಲ್) ಸ್ಪರ್ಧಿ(ಗಳು) ಮಾತ್ರ ಬಾಧ್ಯಸ್ಥರಾಗುತ್ತಾರೆ.
14.7 ಸ್ಪರ್ಧಿಯ(ಗಳ) ಛಾಯಾಚಿತ್ರಗಳನ್ನು ತೆಗೆಯಲು, ವಿಡಿಯೊಗಳನ್ನು ರೆಕಾರ್ಡ್ ಮಾಡಲು, ಸ್ಪರ್ಧಿಯ(ಗಳ) ಹೆಸರು, ಛಾಯಾಚಿತ್ರಗಳು, ಸಾಮ್ಯತೆ, ಧ್ವನಿ ಮತ್ತು ಜಾಹೀರಾತು ಹಾಗೂ ಪ್ರಚಾರ ಉದ್ದೇಶಗಳಿಗಾಗಿ ಸ್ಪರ್ಧಿಯ(ಗಳ)ಕಮೆಂಟ್ ಗಳನ್ನು ವಿಶ್ವದಾದ್ಯಂತ ಜಾಹೀರಾತು ಹಾಗೂ ವ್ಯಾಪಾರ ಉದ್ದೇಶಗಳಿಗಾಗಿ ಯಾವುದೇ ಹೆಚ್ಚುವರಿ ಪರಿಹಾರ ನೀಡದೆಯೇ ಬಳಸಿಕೊಳ್ಳಲು ಈ ನಿಬಂಧನೆ ಹಾಗೂ ಷರತ್ತುಗಳಿಗೆ ಸ್ಪರ್ಧಿಯ(ಗಳ) ಅಂಗೀಕಾರವು ಪ್ರಶಸ್ತಿ ಪ್ರದಾನ ಮಂಡಳಿ ಹಾಗೂ ಅದರ ಅಂಗ ಸಂಸ್ಥೆಗಳಿಗೆ ಅನುಮತಿ ನೀಡುತ್ತದೆ.
15. ಖಾಸಗಿತನ
15.1 ಹೆಸರು, ಅಂಚೆ ವಿಳಾಸ, ಫೋನ್ ನಂಬರ್ ಹಾಗೂ ಇಮೇಲ್ ವಿಳಾಸ ಸೇರಿದಂತೆ ಸಲ್ಲಿಸಲಾದ ವೈಯಕ್ತಿಕ ದತ್ತಾಂಶಗಳನ್ನು ಸಂಗ್ರಹಿಸಿ, ಸಂಸ್ಕರಿಸಿ , ಸಂಗ್ರಹಿಸಿಡಬಹುದು ಹಾಗೂ ಅದನ್ನು ಪ್ರಶಸ್ತಿ ಪ್ರಕ್ರಿಯೆಯ ಉದ್ದೇಶಗಳಿಗಾಗಿ ಮಾತ್ರ ಪ್ರಶಸ್ತಿ ಪ್ರದಾನ ಮಂಡಳಿ ಹಾಗೂ ಅದರ ಅಂಗಸಂಸ್ಥೆಗಳು ಬಳಸಬೇಕು ಎಂಬುದನ್ನು ಸ್ಪರ್ಧಿಗಳು ಒಪ್ಪುತ್ತಾರೆ. ಪ್ರಶಸ್ತಿ ಪ್ರಕ್ರಿಯೆಗೆ ಪ್ರವೇಶಿಸುವ ಮೂಲಕ, ಪ್ರಶಸ್ತಿ ಪ್ರದಾನ ಮಂಡಳಿ ಹಾಗೂ ಅದರ ಅಂಗಸಂಸ್ಥೆಗಳಿಂದ ಈ ವೈಯಕ್ತಿಕ ದತ್ತಾಂಶದ ಪ್ರಸಾರ, ಸಂಸ್ಕರಣೆ, ಬಹಿರಂಗಗೊಳಿಸುವಿಕೆ ಹಾಗೂ ಸಂಗ್ರಹಕ್ಕೆ ಸ್ಪರ್ಧಿಯು ಒಪ್ಪಿದಂತಾಗುತ್ತದೆ. ಸ್ಪರ್ಧಿಯಿಂದ ಸಂಗ್ರಹಿಸಲಾದ ಎಲ್ಲಾ ವೈಯಕ್ತಿಕ ದತ್ತಾಂಶವು ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ನ ಪ್ರೈವಸಿ ಪಾಲಿಸಿಗೆ (ಖಾಸಗಿತನ ನೀತಿ) ಒಳಪಡುತ್ತದೆ. ಈ ನೀತಿಯ ಕೊಂಡಿ ಇಲ್ಲಿದೆ:
www.printersmysore.com 16. ವಾರಂಟಿ ಲಿಖಿತ ಖಾತರಿ ಮತ್ತು ಭದ್ರತೆ ನಷ್ಟ ಪರಿಹಾರ
16.1 ಪ್ರವೇಶಕ್ಕೆ ಸಲ್ಲಿಸಿದ ತಮ್ಮ ಕೃತಿಗಳು ತಮ್ಮದೇ ಸ್ವೋಪಜ್ಞ ಕೃತಿಗಳು ಎಂಬುದರ ಖಾತರಿಯನ್ನು ಸ್ಪರ್ಧಿಗಳು ನೀಡುತ್ತಾರೆ. ಹೀಗಾಗಿ ಅವರೇ ಅದರ ಮೂಲ ಸ್ವಾಮಿತ್ವ ಹಾಗೂ ಹಕ್ಕುಗಳನ್ನು ಹೊಂದುತ್ತಾರೆ. ಪ್ರಶಸ್ತಿಗೆ ಪ್ರವೇಶ ಸಲ್ಲಿಸುವುದಲ್ಲದೆ ಅಗತ್ಯವಾದ ಎಲ್ಲಾ ಪರವಾನಗಿಗಳನ್ನೂ ನೀಡುವ ಹಕ್ಕು ಹೊಂದಿರುತ್ತಾರೆ. ಪ್ರತಿ ಸ್ಪರ್ಧಿಯೂ ಈ ಕೆಳಕಂಡಅಂಶಗಳಿರುವ ಪ್ರವೇಶಗಳನ್ನು ಸಲ್ಲಿಸದಿರಲು ಒಪ್ಪಿಕೊಳ್ಳುತ್ತಾರೆ: (ಅ) ಯಾವುದೇ ಮೂರನೇ ವ್ಯಕ್ತಿಯ ಸ್ವಾಮಿತ್ವದ ಹಕ್ಕುಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಕೈಗಾರಿಕಾ ಆಸ್ತಿ ಹಕ್ಕುಗಳು, ವೈಯಕ್ತಿಕ ಅಥವಾ ನೈತಿಕ ಹಕ್ಕುಗಳು ಅಥವಾ ಕಾಪಿರೈಟ್, ಟ್ರೇಡ್ ಮಾರ್ಕ್ , ವ್ಯಾಪಾರಿ ಹೆಸರುಗಳು, ಕೈಗಾರಿಕಾ ವಿನ್ಯಾಸಗಳು, ಪೇಟೆಂಟ್ , ವ್ಯಾಪಾರ ರಹಸ್ಯ, ಖಾಸಗಿತನ, ಪ್ರಚಾರ ಅಥವಾ ಗೋಪ್ಯತೆಯ ಬಾಧ್ಯಸ್ಥಿಕೆಗಳ ಹರಣ ಮಾಡುವುದಿದ್ದಲ್ಲಿ ಅಥವಾ (ಆ) ಅನ್ವಯವಾಗುವ ರಾಜ್ಯ, ಒಕ್ಕೂಟ ವ್ಯವಸ್ಥೆ ಅಥವಾ ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸುವುದಿದ್ದಲ್ಲಿ
16.2 ಸ್ಪರ್ಧಿಯ ಯಾವುದೇ ಕೃತ್ಯ, ಲೋಪ, ಕರ್ತವ್ಯ ಲೋಪದಿಂದ ಅಥವಾ ಯಾವುದೇ ಖಾತರಿಯ ಉಲ್ಲಂಘನೆಯಿಂದ ಬರಬಹುದಾದಯಾವುದೇ ಬಾಧ್ಯಸ್ಥಿಕೆ, ಪ್ರತಿಪಾದನೆ, ಬೇಡಿಕೆ, ನಷ್ಟ, ಹಾನಿ, ಖರ್ಚು ವೆಚ್ಚ ಗಳಿಂದ ಎಲ್ಲಾ ಸಂದರ್ಭಗಳಲ್ಲೂ ಕಾನೂನಿನಲ್ಲಿ ಅವಕಾಶವಿರುವಂತೆ ಗರಿಷ್ಠ ಮಟ್ಟದಲ್ಲಿ ಪ್ರಶಸ್ತಿ ಪ್ರದಾನ ಮಂಡಳಿಗೆ ಭದ್ರತೆ ನೀಡುವುದನ್ನು ಸ್ಪರ್ಧಿಯು/ಗಳು ಅಂಗೀಕರಿಸುತ್ತಾರೆ. ಈ ಕೆಳಕಂಡ ಅಂಶಗಳಿಂದ ಬರಬಹುದಾದ ಯಾವುದೇ ಹಾಗೂ ಎಲ್ಲಾ ಪ್ರತಿಪಾದನೆಗಳು, ಕ್ರಮಗಳು, ದಾವೆಗಳು ಅಥವಾ ಕಲಾಪಗಳ ವಿರುದ್ಧ ಹಾಗೂ ಎಲ್ಲಾ ನಷ್ಟಗಳು, ಬಾಧ್ಯಸ್ಥಿಕೆಗಳು, ಹಾನಿಗಳು, ವೆಚ್ಚಗಳು, ಖರ್ಚುಗಳ ( ವಕೀಲರ ಸಮಂಜಸ ಶುಲ್ಕವೂ ಸೇರಿದಂತೆ) ವಿರುದ್ಧ ನಿರುಪದ್ರವಿ ಪ್ರಶಸ್ತಿ ಪ್ರದಾನ ಮಂಡಳಿಯನ್ನು ಕಾನೂನಿನಲ್ಲಿ ಅವಕಾಶವಿರುವ ಗರಿಷ್ಠ ಮಟ್ಟದಲ್ಲಿ ಸಮರ್ಥಿಸಿಕೊಳ್ಳಲು, ಭದ್ರತೆ ಒದಗಿಸಲು ಸ್ಪರ್ಧಿಯು ಒಪ್ಪಿಕೊಳ್ಳುತ್ತಾರೆ: (1) ಯಾವುದೇ ಕಾಪಿ ರೈಟ್ , ಟ್ರೇಡ್ ಮಾರ್ಕ್ , ವ್ಯಾಪಾರ ಗುಟ್ಟು, ವ್ಯಾಪಾರ ವೇಷ , ಪೇಟೆಂಟ್ ಅಥವಾ ಯಾವುದೇ ವ್ಯಕ್ತಿಯ ಇತರ ಬೌದ್ಧಿಕ ಆಸ್ತಿ ಹಕ್ಕು ಅಥವಾ ಯಾವುದೇ ವ್ಯಕ್ತಿಯಅವಹೇಳನ ಅಥವಾ ಸಾರ್ವಜನಿಕ ಪ್ರಚಾರ ಅಥವಾ ಖಾಸಗಿತನದ ಅವರ ಹಕ್ಕುಗಳನ್ನು ಉಲ್ಲಂಘಿಸುವಂತಹ ಯಾವುದೇ ಪ್ರಾಜೆಕ್ಟ್ ಸಲ್ಲಿಕೆ ಅಥವಾ ಇತರ ವಿಚಾರವನ್ನು ಸ್ಪರ್ಧಿಯು ಒದಗಿಸಿದ್ದಲ್ಲಿ ಅಥವಾ ಅಪ್ ಲೋಡ್ ಮಾಡಿದ್ದಲ್ಲಿ ; (2) ಪ್ರಶಸ್ತಿಗೆ ಸಂಬಂಧಿಸಿದಂತೆ ಸ್ಪರ್ಧಿಯಿಂದಾದ ಯಾವುದೇ ತಪ್ಪು ಪ್ರತಿನಿಧೀಕರಣದಿಂದಾಗಿ; (3) ಈ ನಿಬಂಧನೆಗಳಿಗೆ ಸ್ಪರ್ಧಿಯು ಬಾಧ್ಯಸ್ಥಿಕೆ ತೋರದೇ ಇರುವುದರಿಂದ ; (4) ಪ್ರಶಸ್ತಿಗೆ ಸ್ಪರ್ಧಿಯ ಒಳಗೊಳ್ಳುವಿಕೆಯಿಂದಾಗಿ ಅಥವಾ ಒಳಗೊಳ್ಳುವಿಕೆಯ ಸಂಬಂಧದಿಂದಾಗಿ ಈ ನಿಬಂಧನೆಗಳಿಗೆ ಸ್ಪರ್ಧಿಗಳಲ್ಲದ ವ್ಯಕ್ತಿಗಳು ಅಥವಾ ಸಂಸ್ಥೆಗಳು ಪ್ರತಿಪಾದನೆಗಳನ್ನು ತಂದಲ್ಲಿ ; (5) ಯಾವುದೇ ಪ್ರಶಸ್ತಿಯ ಅಂಗೀಕಾರ, ಹೊಂದುವಿಕೆ, ದುರ್ಬಳಕೆ ಅಥವಾ ಬಳಕೆ ಅಥವಾ ಪ್ರಶಸ್ತಿಗಳು ಅಥವಾ ಪ್ರಶಸ್ತಿ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿ ; (6) ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಸ್ಪರ್ಧಿಯ ಪ್ರವೇಶ ಹಾಗೂ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಪ್ರಶಸ್ತಿ ವೆಬ್ ಸೈಟ್ ನಲ್ಲಿ ಯಾವುದೇ ಕಾರ್ಯಾಚರಣೆಯ ತೊಂದರೆ ಅಥವಾ ಇತರ ಸಮಸ್ಯೆ ; (7) ಸ್ಪರ್ಧಿಯಿಂದ ಪ್ರಶಸ್ತಿಗಳಿಗೆ ಪ್ರವೇಶ ಹಾಗೂ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಪ್ರವೇಶ ಅಥವಾ ಮತದಾನದ ಮಾಹಿತಿಯ ಕಾಪಾಡಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ, ಸಂಸ್ಕರಣೆ ಹಾಗೂ ಗ್ರಾಹಕರ ಮತದಾನದ ಪ್ರಕ್ರಿಯೆಯಲ್ಲಿನ ಯಾವುದೇ ತಪ್ಪು ; ಅಥವಾ (8) ಸ್ಪರ್ಧಿಯಿಂದ ಪ್ರಶಸ್ತಿಯಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಪ್ರವೇಶಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶಸ್ತಿ ಅಥವಾ ವಿಜೇತರ ಪ್ರಕಟಣೆ, ಮುದ್ರಣದಲ್ಲಿ ಯಾವುದೇ ಮುದ್ರಣದೋಷಅಥವಾ ಇತರ ದೋಷಗಳು.