ಪ್ರಸ್ತಾವನೆ ಪ್ರಸ್ತಾವನೆ

img

ನಮ್ಮ ಸ್ಯಾಂಡಲ್‌ವುಡ್‌, ನಮ್ಮ ಹೆಮ್ಮೆ
ಕರ್ನಾಟಕದ ಜನರಲ್ಲಿ ಹೆಮ್ಮೆಯ ಭಾವವನ್ನು ತುಂಬಿರುವ ಸ್ಯಾಂಡಲ್‌ವುಡ್‌ನ ಅಸಾಮಾನ್ಯ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಹಾಗೂ ನಟನಟಿಯರ ಬಗ್ಗೆ ʻಪ್ರಜಾವಾಣಿʼಗೆ ಗೌರವ ಇದೆ.

ಸ್ಯಾಂಡಲ್‌ವುಡ್‌ನ ಪ್ರತಿಭೆಗಳನ್ನು ಗುರುತಿಸುವ ಮತ್ತು ಭಾರತೀಯ ಸಿನಿಮಾರಂಗದಲ್ಲಿ ಸ್ಯಾಂಡಲ್‌ವುಡ್‌ನ ಅಭೂತಪೂರ್ವ ಪರಂಪರೆಯನ್ನು ಎತ್ತಿಹಿಡಿಯುವ ವೇದಿಕೆಯಾದ ʻಪ್ರಜಾವಾಣಿ ಕನ್ನಡ ಸಿನಿ ಸಮ್ಮಾನʼ – ಕನ್ನಡದ ಅಸ್ಮಿತೆಯನ್ನು ಉತ್ತೇಜಿಸುವ ನಿಜ ಅರ್ಥದ ಸಂಭ್ರಮಾಚರಣೆ.

ನಮ್ಮ ಹೆಮ್ಮೆ, ನಮ್ಮ ವೈಭವ!
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ - ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ಏಕೈಕ ವೇದಿಕೆ.

ಕರ್ನಾಟಕದ ಸಿನಿಮಾ ಬಳಗದೊಳಗೆ ಇರುವ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಸಿಸಿ, ಮೆಚ್ಚುಗೆ ವ್ಯಕ್ತಪಡಿಸುವುದು ಅಷ್ಟೇ ಅಲ್ಲದೆ, ಕನ್ನಡ ಚಿತ್ರರಂಗದ ಬೆಳವಣಿಗೆ ಮತ್ತು ಹೊಸತನವನ್ನು ಕೂಡ ಉತ್ತೇಜಿಸುತ್ತದೆ.

2022ರ ಜನವರಿ 01ರಿಂದ 2022ರ ಡಿಸೆಂಬರ್ 31 ರವರೆಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕೃತಗೊಂಡು ಬಿಡುಗಡೆಯಾದ ಚಿತ್ರಗಳನ್ನು ಇದೇ ಮೊದಲಬಾರಿಗೆ ಪ್ರಶಸ್ತಿಗಳಿಗಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಇದರ ಆಯ್ಕೆ ಪ್ರಕ್ರಿಯೆ ವಿಶಿಷ್ಟವಾಗಿದ್ದು ಕನ್ನಡ ಚಿತ್ರರಂಗಂದ ಸಂಘ-ಸಂಸ್ಥೆಗಳನ್ನು ಒಳಗೊಳ್ಳಲಿದೆ. ಇದರಿಂದ ನಾಮನಿರ್ದೇಶಿತರು ಹಾಗೂ ವಿಜೇತರ ಕುರಿತಂತೆ ಯಾವುದೇ ಪೂರ್ವಗ್ರಹ ಮೂಡುವುದಿಲ್ಲ.