ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ | ಶಿರಡಿ (ಮಹಾರಾಷ್ಟ್ರ): ಸದಾಶಿವ ಲೋಕಂಡೆ vs ಬಾವು ಸಾಹೇಬ್‌ ವಾಕ್ಚೌರೆ

Published 9 ಮೇ 2024, 23:13 IST
Last Updated 9 ಮೇ 2024, 23:13 IST
ಅಕ್ಷರ ಗಾತ್ರ

ಸದಾಶಿವ ಲೋಕಂಡೆ (ಶಿವಸೇನಾ ಏಕನಾಥ ಶಿಂದೆ ಬಣ)

ಮಹಾರಾಷ್ಟ್ರದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಶಿರಡಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶಿವಸೇನಾದ ಎರಡು ಬಣಗಳ ಅಭ್ಯರ್ಥಿಗಳು ನೇರ ಹಣಾಹಣಿಗೆ ಸಿದ್ಧರಾಗಿದ್ದಾರೆ. ‘ಮಹಾಯುತಿ’ ಮೈತ್ರಿಕೂಟವು ಶಿವಸೇನಾ ಏಕನಾಥ ಶಿಂದೆ ಬಣದ ಸದಾಶಿವ ಲೋಕಂಡೆ ಅವರನ್ನು ಕಣಕ್ಕಿಳಿಸಿದೆ. 2019ರಲ್ಲಿ ಶಿವಸೇನಾದಿಂದ ಸ್ಪರ್ಧಿಸಿದ್ದ ಸದಾಶಿವ ಅವರು 1,20,195 ಮತಗಳ ಅಂತರದಿಂದ ಕಾಂಗ್ರೆಸ್‌ನ ಬಾವು ಸಾಹೇಬ್‌ ಕಾಂಬಳೆ ಅವರನ್ನು ಸೋಲಿಸಿದ್ದರು. ಸದಾಶಿವ ಅವರು ಈ ಹಿಂದೆ ಮೂರು ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಶಿವಸೇನಾವು ಇಬ್ಭಾಗವಾದಾಗ ಅವರು ಶಿಂದೆ ಬಣಕ್ಕೆ ಸೇರ್ಪಡೆಗೊಂಡಿದ್ದರು. ಬಿಜೆಪಿಗೆ ಸೇರುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ್ದ ಸದಾಶಿವ ಅವರು 2014ರಲ್ಲಿ ಶಿವಸೇನಾಕ್ಕೆ ಸೇರ್ಪಡೆಗೊಂಡಿದ್ದರು. ಎನ್‌ಸಿಪಿಯ ಅಜಿತ್‌ ಪವಾರ್‌ ಬಣವು ಜೊತೆಗಿರುವುದು ಸದಾಶಿವ ಅವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ.

...........

ಬಾವು ಸಾಹೇಬ್‌ ವಾಕ್ಚೌರೆ (ಶಿವಸೇನಾ ಉದ್ಧವ್‌ ಠಾಕ್ರೆ ಬಣ)

ಸದಾಶಿವ ಲೋಕಂಡೆ ಅವರ ವಿರುದ್ಧ ಸೆಣಸಲು ಶಿವಸೇನಾ ಉದ್ಧವ್‌ ಠಾಕ್ರೆ ಬಣವು ಬಾವು ಸಾಹೇಬ್‌ ವಾಕ್ಚೌರೆ ಅವರನ್ನು ಅಖಾಡಕ್ಕಿಳಿಸಿದೆ. ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದರು. ಶಿವಸೇನಾ ಉದ್ಧವ್‌ ಠಾಕ್ರೆ ಬಣವು ‘ಇಂಡಿಯಾ’ ಒಕ್ಕೂಟದ ಜೊತೆಗಿರುವುದರಿಂದ ಬಾವು ಸಾಹೇಬ್‌ ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಪಕ್ಷದ ಮುಖಂಡರದ್ದಾಗಿದೆ. ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್‌ ಅವರ ವಂಚಿತ್‌ ಬಹುಜನ ಆಘಾಡಿ (ವಿಬಿಎ) ಪಕ್ಷವು ಉತ್ಕರ್ಷ ರೂಪವತೆ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿರುವುದರಿಂದ ಎನ್‌ಡಿಎ ವಿರೋಧಿ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಶಿವಸೇನಾವು ಇಬ್ಭಾಗವಾಗಿರುವುದರಿಂದ ಈ ಬಾರಿ ಮತದಾರರು ಯಾರನ್ನು ಬೆಂಬಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT