ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಪ್ರಯಾಣದಲ್ಲಿ ಹೆಚ್ಚಿನ ಕಾಳಜಿಯ ಅಗತ್ಯವಿದೆ
Published 7 ಮೇ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆರೋಗ್ಯದಲ್ಲಿನ ವ್ಯತ್ಯಾಸಕ್ಕೆ ನಿದ್ರಾಭಂಗವೇ ಮೂಲ ಕಾರಣ. ಮೃದು ಹಾಗೂ ಸ್ನಿಗ್ಧವಾದ ಮನಸ್ಸನ್ನು ಹೊಂದಿರುವಂಥರಿಗೆ ಇಂದು ನುಡಿಯುವ ಎಲ್ಲಾ ಮಾತುಗಳು ಚುಚ್ಚಿದ ಅನುಭವವಾಗುತ್ತದೆ.
ವೃಷಭ
ಹೆಚ್ಚಿನ ಎಲ್ಲಾ ಕೆಲಸಗಳು ಸಿಬ್ಬಂದಿ ವರ್ಗದವರ ಸಹಕಾರದಿಂದ ವ್ಯವಸ್ಥಿತವಾಗಿ ಕೈಗೂಡಲಿದೆ. ಹೋಟೆಲ್‌ ಹಾಗೂ ಲಾಡ್ಜ್‌ ನಿರ್ವಾಹಕರಿಗೆ ಲಾಭದಾಯಕ ದಿನ.
ಮಿಥುನ
ಕಾರ್ಯಗಳಲ್ಲಿ ಜಯಭೇರಿಯು ಎದುರಾಳಿಗಳ ಅಸೂಯೆಗೆ ಕಾರಣವಾಗುವುದು. ದೀರ್ಘಕಾಲದ ಕಾಯುವಿಕೆಯ ಬಳಿಕ ನಿಮ್ಮ ಜೀವನ ಸಂಗಾತಿಯು ನಿಮಗೆ ಜತೆಯಾಗುವರು.
ಕರ್ಕಾಟಕ
ಮಾರುಕಟ್ಟೆಯಲ್ಲಿ ನಿಮ್ಮ ವ್ಯಾಪಾರ ಅಧಿಕವಾಗಿದ್ದು , ಹೆಚ್ಚಿನ ಅವಕಾಶಗಳೊಂದಿಗೆ ಶುಭ ಫಲವನ್ನು ತರಲಿದೆ. ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ತಂಟೆ–ತಕರಾರುಗಳು ನಿಧಾನವಾಗಿ ದೂರ ಸರಿಯಲಿವೆ.
ಸಿಂಹ
ಉಡುಗೆ ತೊಡುಗೆಗಳ ಬಗ್ಗೆ ಇತರರು ಆಡಿಕೊಳ್ಳುತ್ತಿದ್ದರೂ ಸೂಕ್ತವೆನ್ನಿಸಿದಲ್ಲಿ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಗ್ರಾಮ ಪಂಚಾಯತಿ ಉದ್ಯೋಗಿಗಳಿಗೆ ಬಿಡುವಿಲ್ಲದ ದಿನವಾಗಿರುತ್ತದೆ.
ಕನ್ಯಾ
ಮನಸ್ಸಿನ ತೊಳಲಾಟಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮೂಲಕ ಪರಿಹರಿಸಿಕೊಳ್ಳಬಹುದು. ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಸ್ವಂತ ಕಾರ್ಖಾನೆ ಉದ್ಯೋಗಿಗಳಿಗೆ ಲಾಭದಾಯಕ ದಿನ.
ತುಲಾ
ಉತ್ತಮವಾದ ನೆನಪಿನ ಶಕ್ತಿಯು ಇಂದು ನಿಮ್ಮ ಕೆಲಸಗಳಲ್ಲಿ ಸಹಾಯಕಾರಿಯಾಗಲಿದೆ. ಮಗಳ ಅಂತರರಾಷ್ಟ್ರೀಯ ಸಾಧನೆಯು ಹೆಮ್ಮೆಯ ಸಂಗತಿಯಾಗುವುದು. ಪ್ರಯಾಣದಲ್ಲಿ ಹೆಚ್ಚಿನ ಕಾಳಜಿಯ ಅಗತ್ಯವಿದೆ.
ವೃಶ್ಚಿಕ
ಜವಾಬ್ದಾರಿಯಲ್ಲಿನ ಸ್ಪಷ್ಟ ವಿಷಯವೊಂದು ಮನವರಿಕೆಯಾಗುವುದು. ಸಂಜೆಯ ಮುಂದೆ ತಂಗಾಳಿಯ ಜತೆ ಸ್ನೇಹಿತರೊ ಅಥವಾ ಸಂಗಾತಿಯೊಂದಿಗೆ ಕಾಲ ಕಳೆಯುವಿರಿ. ಹಳದಿ ಬಣ್ಣವು ಶುಭ ತರಲಿದೆ.
ಧನು
ಸಂದಿಗ್ಧ ಪರಿಸ್ಥಿತಿಯಲ್ಲಿರುವ ನೀವು ಪರಿಸ್ಥಿತಿಯನ್ನು ಅವಲೋಕಿಸಿ ಇಷ್ಟದೇವರನ್ನು ಪ್ರಾರ್ಥಿಸಿ ತೀರ್ಮಾನ ಕೈಗೊಳ್ಳುವುದು ಉತ್ತಮ. ಮಗನ ವಿವಾಹದ ಸಿದ್ಧತೆಗಳು ಚುರುಕಾಗಿ ಸಾಗಲಿದೆ.
ಮಕರ
ಜಾಗತಿಕವಾಗಿ ವ್ಯವಹಾರವನ್ನು ಹೊಂದಿರುವವರು ಸಣ್ಣ ಮಟ್ಟದ ವ್ಯಾಪಾರಿಗಳ ಚಾಕಚಕ್ಯತೆಯನ್ನು ನೋಡಿ ಕಲಿಯುವಂಥ ವಿಚಾರಗಳ ಮೇಲೆ ಗಮನ ಹರಿಸುವಿರಿ. ಹೊಸ ವಾಹನ ಖರೀದಿ ಅಗತ್ಯವೆನಿಸುತ್ತದೆ.
ಕುಂಭ
ಕಿರಿಯರು ಹೇಳಿದ ಸಲಹೆಗಳನ್ನು ಅನನುಭವಿಗಳ ಮಾತು ಎಂದು ಕಡೆಗಣಿಸದೆ ಪರಾಮರ್ಶಿಸಿ ನೋಡಿ. ಮೂರನೇ ವ್ಯಕ್ತಿಗಳ ಮಾತನ್ನುಕೇಳಿಕೊಂಡು ವ್ಯವಹಾರದಲ್ಲಿ ಚನ್ನಾಗಿರುವ ವ್ಯಕ್ತಿಗಳ ಸ್ನೇಹ ಹಾಳು ಮಾಡಿಕೊಳ್ಳದಿರಿ.
ಮೀನ
ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಉದ್ಯೋಗಕ್ಕೆ ಸಂಬಂಧಿಸಿದಂಥ ಯಂತ್ರಗಳ ಹಾನಿಯು ಉಂಟಾಗಬಹುದು.