ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB Vs GT | ಆರ್‌ಸಿಬಿಗೆ ಮತ್ತೊಂದು ಜಯದ ಕನಸು

ಫಫ್ ಡುಪ್ಲೆಸಿ ಬಳಗಕ್ಕೆ ಗುಜರಾತ್ ಟೈಟನ್ಸ್ ಸವಾಲು;ವಿರಾಟ್, ರಜತ್ ಮೇಲೆ ಕಣ್ಣು
Published 28 ಏಪ್ರಿಲ್ 2024, 0:33 IST
Last Updated 28 ಏಪ್ರಿಲ್ 2024, 0:33 IST
ಅಕ್ಷರ ಗಾತ್ರ

ಅಹಮದಾಬಾದ್: ಈ ಸಲದ ಐಪಿಎಲ್‌ನಲ್ಲಿ ಪ್ಲೇ ಆಫ್‌ ಹಾದಿಯಿಂದ ಬಹುದೂರದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ತಪ್ಪಿಸಿಕೊಳ್ಳುವ ‘ಸಾಹಸ‘ ಮಾಡುತ್ತಿದೆ. 

ಸತತ ಆರು ಸೋಲುಗಳ ನಂತರ ಗೆಲುವಿನ ರುಚಿ ಕಂಡಿರುವ ಫಫ್ ಡುಪ್ಲೆಸಿ ಬಳಗದ ಆತ್ಮವಿಶ್ವಾಸ ಮರಳಿ ಜಾಗೃತವಾಗಿದೆ. ಅದೇ ಹುಮ್ಮಸ್ಸಿನಲ್ಲಿ ಭಾನುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. 

ಆಡಿರುವ ಒಂಬತ್ತು ಪಂದ್ಯಗಳಲ್ಲಿ ಬೆಂಗಳೂರು ತಂಡವು ಜಯಿಸಿರುವುದು ಎರಡು ಮಾತ್ರ. ಇನ್ನುಳಿದಿರುವ ಐದು ಪಂದ್ಯಗಳಲ್ಲಿ ಜಯಿಸಿದರೂ ಪ್ಲೇ ಆಫ್‌ ಅವಕಾಶ ಪಡೆಯುವುದು ಖಚಿತವಿಲ್ಲ.  

ಟೂರ್ನಿಯ ಮೊದಲ ಹಂತದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಗೆದ್ದ ಒಂದು ತಿಂಗಳ ನಂತರ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಅದರ ನೆಲದಲ್ಲಿ ಮಣಿಸಿದೆ. ಟೂರ್ನಿಯಲ್ಲಿ ಮೊದಲ ಬಾರಿಗೆ ಆರ್‌ಸಿಬಿ ಬೌಲರ್‌ಗಳು ಚೆನ್ನಾಗಿ ಆಡಿದ್ದು ಇದೇ ಪಂದ್ಯದಲ್ಲಿ 

ದೊಡ್ಡ ಮೊತ್ತಗಳನ್ನು ಕಲೆಹಾಕಿ ದಾಖಲೆ ಬರೆದಿರುವ ಸನ್‌ರೈಸರ್ಸ್ ಎದುರು ವಿಲ್ ಜ್ಯಾಕ್ಸ್, ಕ್ಯಾಮರಾನ್ ಗ್ರೀನ್, ಸಿರಾಜ್, ಸ್ವಪ್ನಿಲ್ ಸಿಂಗ್ ಹಾಗೂ ಕರ್ಣ ಶರ್ಮಾ ಅವರು ಉತ್ತಮವಾಗಿ ಆಡಿದ್ದರು. ಸನ್‌ ತಂಡವನ್ನು 171 ರನ್‌ಗಳಿಗೆ ನಿಯಂತ್ರಿಸಿದ್ದರು. ಬ್ಯಾಟಿಂಗ್‌ನಲ್ಲಿಯೂ  ಆರೆಂಜ್ ಕ್ಯಾಪ್‌ ಧರಿಸಿರುವ ವಿರಾಟ್ ಕೊಹ್ಲಿಗೆ ತಕ್ಕ ಜೊತೆ ನೀಡಿದ್ದ ರಜತ್ ಪಾಟೀದಾರ್ ಹಾಗೂ ಗ್ರೀನ್ ಅವರು ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದ್ದಾರೆ.  ದಿನೇಶ್ ಕಾರ್ತಿಕ್ ಉತ್ತಮ ಲಯದಲ್ಲಿರುವುದು ’ಫಿನಿಷರ್’ ಕಾರ್ಯವನ್ನು ನಿರ್ವಹಿಸಬಲ್ಲರು.

ತಂಡದಲ್ಲಿರುವ ಎಲ್ಲರೂ ಕಳೆದ ಪಂದ್ಯದ ಲಯವನ್ನೇ ಮುಂದುವರಿಸಿದರೆ ಮತ್ತೊಂದು ಜಯದ ಸಂಭ್ರಮ ಅಚರಿಸಬಹುದು. 

ಆದರೆ, ಈಗಾಗಲೇ ಎಂಟು ಅಂಕ ಗಳಿಸಿರುವ ಗುಜರಾತ್ ತಂಡವನ್ನು ಸೋಲಿಸುವುದು ಸುಲಭವಲ್ಲ. ಶುಭಮನ್ ಗಿಲ್ ನಾಯಕತ್ವದ ತಂಡಕ್ಕೂ ಇನ್ನು ಐದು ಪಂದ್ಯಗಳು ಉಳಿದಿವೆ. ಕಳೆದ ಬಾರಿಯ ರನ್ನರ್ ಅಪ್ ತಂಡವಾಗಿರುವ ಗುಜರಾತ್ ತನ್ನ ತವರಿನಲ್ಲಿ ಜಯಿಸುವ ಛಲದಲ್ಲಿದೆ. 

ತಂಡದ ಸಾಯಿ ಸುದರ್ಶನ್, ನಾಯಕ ಗಿಲ್ ಅವರಿಬ್ಬರು ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ರಶೀದ್ ಖಾನ್ ಆಲ್‌ರೌಂಡ್ ಆಟವಾಡುತ್ತಿದ್ದಾರೆ. ಸಾಯಿಕಿಶೋರ್, ಮೋಹಿತ್ ಶರ್ಮಾ, ಉಮೇಶ್ ಯಾದವ್  ಇದುವರೆಗೆ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಹಾಗೂ ವಿಜಯಶಂಖರ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿದೆ. 

ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ  4 ರನ್‌ಗಳಿಂದ ತಂಡವು ಸೋತಿತ್ತು. ಅಂಕಪಟ್ಟಿಯಲ್ಲಿ ಮತ್ತಷ್ಟು ಮೇಲೆರಲು ಟೈಟನ್ಸ್ ತಂಡಕ್ಕೆ  ಈ ಪಂದ್ಯದ ಜಯ ಮಹತ್ವದ್ದಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಸಿನಿಮಾ ಆ್ಯಪ್ 

ಬಲಾಬಲ

ಪಂದ್ಯ;3

ಆರ್‌ಸಿಬಿ ಜಯ;1

ಗುಜರಾತ್ ಜಯ;2

ಗರಿಷ್ಠ ಸ್ಕೋರು

ಆರ್‌ಸಿಬಿ;197

ಗುಜರಾತ್;198

ಕನಿಷ್ಠ ಸ್ಕೋರು

ಆರ್‌ಸಿಬಿ;170

ಗುಜರಾತ್;168

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT