ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಪ್ಲೇಆಫ್‌ ಮೇಲೆ ರಾಹುಲ್–ಕಮಿನ್ಸ್ ಕಣ್ಣು

ಸನ್‌ರೈಸರ್ಸ್‌ ಹೈದರಾಬಾದ್–ಲಖನೌ ಸೂಪರ್‌ ಜೈಂಟ್ಸ್ ಹಣಾಹಣಿ
Published 7 ಮೇ 2024, 14:38 IST
Last Updated 7 ಮೇ 2024, 14:38 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಪ್ಲೇಆಫ್‌ ಸುತ್ತಿನಲ್ಲಿ ಸ್ಥಾನ ಪಡೆಯುವತ್ತ ಚಿತ್ತ ನೆಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಬುಧವಾರ ಮುಖಾಮುಖಿಯಾಗಲಿವೆ. 

ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಅತಿಥೇಯ ಸನ್‌ರೈಸರ್ಸ್ ತಂಡವು ತನ್ನ ಬಲಾಢ್ಯ ಬ್ಯಾಟಿಂಗ್ ನೆಚ್ಚಿಕೊಂಡು ಕಣಕ್ಕಿಳಿಯಲಿದೆ.  ಉಭಯ ತಂಡಗಳೂ ತಲಾ 11 ಪಂದ್ಯಗಳಲ್ಲಿ ಆಡಿ 12 ಅಂಕ ಗಳಿಸಿವೆ. ಸನ್‌ರೈಸರ್ಸ್ ತಂಡವು ನೆಟ್‌ ರನ್‌ರೇಟ್‌ನಲ್ಲಿ ಸ್ವಲ್ಪ ಹೆಚ್ಚು ಇರುವುದರಿಂದ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಲಖನೌ ಐದರಲ್ಲಿದೆ.

ತಲಾ 16 ಅಂಕ ಗಳಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳೂ ಮೊದಲೆರಡು ಸ್ಥಾನಗಳಲ್ಲಿವೆ. ಚೆನ್ನೈ ಸೂಪರ್ ಕಿಂಗ್ಸ್ (12) ಮೂರನೇ ಸ್ಥಾನದಲ್ಲಿದೆ. 

ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ತಂಡವು ಈ ಬಾರಿಯ ಟೂರ್ನಿಯಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದೆ. ಆದರೆ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋತಿತು. ಅದರಲ್ಲಿ ಅವರು ಮುಂಬೈ ತಂಡಕ್ಕೆ ದೊಡ್ಡ ಗುರಿಯೊಡ್ಡುವಲ್ಲಿ ವಿಫಲವಾಗಿತ್ತು. ಟ್ರಾವಿಸ್ ಹೆಡ್ ಅವರು ಉತ್ತಮ ಲಯದಲ್ಲಿದ್ದಾರೆ.  ಆರಂಭದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದ ಅಭಿಷೇಕ್ ಶರ್ಮಾ ಕಳೆದ ನಾಲ್ಕು ಪಂದ್ಯಗಳ ಪೈಕಿ ಯಾವುದರಲ್ಲೂ 30ರನ್ ದಾಟುವಲ್ಲಿ ಸಫಲರಾಗಿಲ್ಲ. 

ಹೆನ್ರಿಚ್ ಕ್ಲಾಸೆನ್, ನಿತೀಶ್ ರೆಡ್ಡಿ ಅವರ ಆಟದಲ್ಲಿಯೂ ಸ್ಥಿರತೆ ಇಲ್ಲ. ಬೌಲಿಂಗ್‌ನಲ್ಲಿ ಟಿ. ನಟರಾಜನ್, ಭುವನೇಶ್ವರ್ ಕುಮಾರ್ ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. 

ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡವೂ ಕಳೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಸೋತಿತ್ತು.  ಏಕನಾ ಕ್ರೀಡಾಂಗಣದಲ್ಲಿ ಕೋಲ್ಕತ್ತ 200ಕ್ಕೂ ಹೆಚ್ಚು ರನ್‌ಗಳ ಮೊತ್ತ ಪೇರಿಸಿತ್ತು. ಗುರಿಯನ್ನು ಮುಟ್ಟಲು ರಾಹುಲ್ ಪಡೆಗೆ ಸಾಧ್ಯವಾಗಿರಲಿಲ್ಲ. ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೊಲಸ್ ಪೂರನ್ ಅವರು ವೈಫಲ್ಯ ಅನುಭವಿಸಿದ್ದರು. ಆಯುಷ್ ಬದೋನಿ ಲಯಕ್ಕೆ ಮರಳಬೇಕಿದೆ. ವೇಗಿ ಮಯಂಕ್ ಯಾದವ್ ಗೈರುಹಾಜರಿಯಲ್ಲಿ ನವೀನ್ ಉಲ್ ಹಕ್, ಯಶ್ ಠಾಕೂರ್, ಸ್ಪಿನ್ನರ್ ಕೃಣಾಲ್ ಪಾಂಡ್ಯ ಹಾಗೂ ರವಿ ಬಿಷ್ಣೋಯಿ ಅವರು ಬೌಲಿಂಗ್ ಹೊಣೆ ನಿಭಾಯಿಸಬೇಕಿದೆ. 


ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ಲಖನೌ ಸೂಪರ್‌ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಮಾತುಕತೆ  –ಪಿಟಿಐ ಚಿತ್ರ
ಲಖನೌ ಸೂಪರ್‌ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಮಾತುಕತೆ  –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT