ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್: ಭಾರತಕ್ಕೆ ಕ್ಲೀನ್‌ಸ್ವೀಪ್ ಗುರಿ

Published 8 ಮೇ 2024, 16:21 IST
Last Updated 8 ಮೇ 2024, 16:21 IST
ಅಕ್ಷರ ಗಾತ್ರ

ಸಿಲೆಟ್‌ (ಬಾಂಗ್ಲಾದೇಶ): ಭಾರತ ಮಹಿಳಾ ಕ್ರಿಕೆಟ್ ತಂಡ ಗುರುವಾರ ಇಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡುವ ಗುರಿ ಹೊಂದಿದೆ. 

ನಾಲ್ಕು ಪಂದ್ಯ  ಸೇರಿ ಭಾರತದ ಶಫಾಲಿ ವರ್ಮಾ ಅವರು ಮಾತ್ರ  ಒಂದು ಅರ್ಧಶತಕ ಬಾರಿಸಿದ್ದಾರೆ. ಸರಣಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ್ತಿ (84 ರನ್) ಅವರಾಗಿದ್ದಾರೆ. ಸ್ಮೃತಿ ಮಂದಾನ (83) ಹಾಗೂ ಹರ್ಮನ್ ಪ್ರೀತ್ ಕೌರ್ (75) ರನ್ ಗಳಿಸಿದ್ದಾರೆ.

ಪ್ರತಿಕೂಲ ಹವಾಮಾನದಿಂದಾಗಿ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಮೊಟಕುಗೊಳಿಸಲಾಗಿತ್ತು.  ಮಂದನಾ ಮತ್ತು ಕೌರ್ ಗುರುವಾರ ಅವಕಾಶ ಸದುಪಯೋಗಪಡಿಸಿಕೊಂಡು ದೊಡ್ಡ ಮೊತ್ತ ಗಳಿಸಲು ಎದುರು ನೋಡುತ್ತಿದ್ದಾರೆ.

ಕೌರ್, ಸೋಮವಾರ ನಡೆದ ಕೊನೆಯ ಪಂದ್ಯದಲ್ಲಿ 26 ಎಸೆತಗಳಲ್ಲಿ 39 ರನ್ ಗಳಿಸಿದ ನಂತರ ಆವೇಗವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ 56 ರನ್‌ಗಳ ಜಯ ಸಾಧಿಸಿತು.

ಪಿಚ್‌ಗಳಿಗೆ ಸಂಬಂಧಿಸಿದಂತೆ ಈ ಪ್ರವಾಸದಿಂದ ಸಾಧ್ಯವಾದಷ್ಟು ಪಾಠಗಳನ್ನು ಕಲಿಯಲು ಭಾರತೀಯ ಬ್ಯಾಟರ್‌ಗಳಿಗೆ ಗುರುವಾರ ಕೊನೆಯ ಅವಕಾಶವಿದೆ.

ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಬಾಂಗ್ಲಾದೇಶದ ನಾಯಕಿ ನಿಜರ್ ಸುಲ್ತಾನಾ ಅವರು ಲಯದಲ್ಲಿ ಇಲ್ಲ. ಅವರು ನಾಲ್ಕು ಪಂದ್ಯಗಳಿಂದ ಒಟ್ಟು 86 ರನ್ ಗಳಿಸಿದ್ದಾರೆ.

ಭಾರತದ ಬೌಲರ್‌ಗಳು ನಿಧಾನಗತಿಯ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಎಡಗೈ ಸ್ಪಿನ್ನರ್ ರಾಧಾ ಯಾದವ್ ಏಳು ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ವೇಗಿಗಳಾದ ಪೂಜಾ ವಸ್ತ್ರಾಕರ್ (5 ವಿಕೆಟ್), ರೇಣುಕಾ ಸಿಂಗ್ (4) ಮತ್ತು ಆಫ್ ಸ್ಪಿನ್ನರ್ ಶ್ರೇಯಂಕಾ ಪಾಟೀಲ (4) ಉತ್ತಮ ಬೆಂಬಲ ನೀಡಿದರು.

ಪಂದ್ಯ ಆರಂಭ: ಮಧ್ಯಾಹ್ನ 3.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT