ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | RCB Playoff Scenario: ಆರ್‌ಸಿಬಿ ಪ್ಲೇ-ಆಫ್ ಹಾದಿ ಕಠಿಣ!

Published 25 ಏಪ್ರಿಲ್ 2024, 6:55 IST
Last Updated 25 ಏಪ್ರಿಲ್ 2024, 6:55 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯೂ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ-ಆಫ್ ಹಾದಿ ಕಠಿಣವೆನಿಸಿದೆ.

ಐಪಿಎಲ್ 17ನೇ ಆವೃತ್ತಿಯಲ್ಲಿ ಈವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತಿರುವ ಫಫ್ ಡುಪ್ಲೆಸಿ ಬಳಗ, ಕೇವಲ ಒಂದರಲ್ಲಿ ಮಾತ್ರ ಜಯ ಗಳಿಸಿದೆ. ಅಲ್ಲದೆ ಎರಡು ಅಂಕ ಮಾತ್ರ ಹೊಂದಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಚೆನ್ನೈ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಸೋಲನುಭವಿಸಿದ್ದ ಆರ್‌ಸಿಬಿ ನಂತರ ಪಂಜಾಬ್ ವಿರುದ್ಧ ಗೆಲುವು ದಾಖಲಿಸಿತ್ತು. ಬಳಿಕ ಸತತ ಆರು ಪಂದ್ಯಗಳಲ್ಲಿ (ಕೆಕೆಆರ್ ವಿರುದ್ಧ ಎರಡು ಸಲ, ಲಖನೌ, ರಾಜಸ್ಥಾನ, ಮುಂಬೈ, ಹೈದರಾಬಾದ್) ಸೋಲು ಕಂಡಿದೆ.

ಆರ್‌ಸಿಬಿ ಪ್ಲೇ-ಆಫ್ ಹಾದಿ ಕಠಿಣ...

ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಮುಂದಿನ ಎಲ್ಲ ಆರು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಆರ್‌ಸಿಬಿ ಒಳಗಾಗಿದೆ. ಹಾಗಾಗಿ ಟೂರ್ನಿಯಲ್ಲಿ ಉಳಿದಿರುವ ಎಲ್ಲ ಪಂದ್ಯಗಳು ಪ್ರಮುಖವೆನಿಸಿವೆ.

ಉಳಿದಿರುವ ಆರು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಆರ್‌ಸಿಬಿ ಒಟ್ಟು 14 ಅಂಕಗಳನ್ನು ಗಳಿಸಲಿದೆ. ಅಲ್ಲದೆ ಪ್ಲೇ-ಆಫ್ ಪ್ರವೇಶಿಸಲು ಅಗ್ರ ನಾಲ್ಕು ತಂಡಗಳ ಪಟ್ಟಿಗೆ ಲಗ್ಗೆ ಇಡಬೇಕಿದೆ. ಇದರಿಂದಾಗಿ ಆರ್‌ಸಿಬಿ ಪ್ಲೇ-ಆಫ್ ಪ್ರವೇಶವು ಇತರೆ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಿರಲಿದೆ. ಇಲ್ಲಿ ರನ್‌ರೇಟ್ ಕೂಡ ನಿರ್ಣಾಯಕವೆನಿಸಲಿದೆ.

ಆರ್‌ಸಿಬಿ ತಂಡದ ಉಳಿದಿರುವ ಪಂದ್ಯಗಳ ವೇಳಾಪಟ್ಟಿ:

ಏ.25 (ಇಂದು): ಹೈದರಾಬಾದ್ (ವಿರುದ್ಧ), ತಾಣ: ಹೈದರಾಬಾದ್

ಏ.28: ಗುಜರಾತ್ (ವಿರುದ್ಧ), ತಾಣ: ಅಹಮದಾಬಾದ್

ಮೇ 4: ಗುಜರಾತ್ (ವಿರುದ್ಧ), ತಾಣ: ಬೆಂಗಳೂರು

ಮೇ 9: ಪಂಜಾಬ್ (ವಿರುದ್ಧ), ತಾಣ: ಧರ್ಮಶಾಲಾ

ಮೇ 12: ಡೆಲ್ಲಿ (ವಿರುದ್ಧ), ತಾಣ: ಬೆಂಗಳೂರು

ಮೇ 18: ಚೆನ್ನೈ (ವಿರುದ್ಧ), ತಾಣ: ಬೆಂಗಳೂರು

ರನ್ ಬೇಟೆಯಲ್ಲಿ ವಿರಾಟ್ ಟಾಪ್...

ಈ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪೈಕಿ (ಆರೆಂಜ್ ಕ್ಯಾಪ್) ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಈವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ 63.17ರ ಸರಾಸರಿಯಲ್ಲಿ 379 ರನ್ ಗಳಿಸಿದ್ದಾರೆ. ಒಂದು ಶತಕ ಹಾಗೂ ಎರಡು ಅರ್ಧಶತಕವನ್ನು ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

(ಪಿಟಿಐ ಚಿತ್ರ)

3 ಬಾರಿ ರನ್ನರ್-ಅಪ್...

ಐಪಿಎಲ್‌ನಲ್ಲಿ ಆರ್‌ಸಿಬಿ ಇದುವರೆಗೆ ಟ್ರೋಫಿ ಗೆದ್ದಿಲ್ಲ. 2009, 2011 ಹಾಗೂ 2016ರಲ್ಲಿ ರನ್ನರ್-ಅಪ್ ಆಗಿರುವುದು ಈವರೆಗಿನ ಶ್ರೇಷ್ಠ ಸಾಧನೆಯಾಗಿದೆ. 2020, 2021 ಹಾಗೂ 2022ರಲ್ಲಿ ಸತತ ಮೂರು ಬಾರಿ ಪ್ಲೇ-ಆಫ್‌ಗೆ ಲಗ್ಗೆಯಿಟ್ಟಿದ್ದರೂ ಫೈನಲ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. 2023ರಲ್ಲಿ ಲೀಗ್ ಹಂತದಿಂದಲೇ ಹೊರನಡೆದಿತ್ತು.

ಐಪಿಎಲ್ 2024 ಅಂಕಪಟ್ಟಿ ಇಂತಿದೆ (40 ಪಂದ್ಯಗಳ ಅಂತ್ಯಕ್ಕೆ)
ಐಪಿಎಲ್ 2024 ಅಂಕಪಟ್ಟಿ

ಐಪಿಎಲ್ 2024 ಅಂಕಪಟ್ಟಿ

(ಕೃಪೆ: ಐಪಿಎಲ್ ವೆಬ್‌ಸೈಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT