ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀಲದ ಬಳಕೆ ಹೀಗೆ

Last Updated 10 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಸಸಿಗಳನ್ನು ನೆಡುವಾಗ ಸಾಮಾನ್ಯವಾಗಿ ಪ್ಲಾಸ್ಟಿಕ್ ಚೀಲ ಹರಿದು ಹಾಕುವುದಿದೆ. ಆದರೆ ಹೀಗೆ ಮಾಡುವ ಬದಲಿಗೆ ನಾಟಿ ಮಾಡಬೇಕಾಗಿರುವ ಸಸಿಗಳನ್ನು ನೀರಿನಲ್ಲಿ ಇಲ್ಲವೇ ಸೆಗಣಿ ಬೆರೆಸಿದ ತಿಳಿ ಬಗ್ಗಡದಲ್ಲಿ ಸ್ವಲ್ಪ ಹೊತ್ತು ಮಣ್ಣು ನೆನೆಯುವಂತೆ ಮುಳುಗಿಸಿರಿ. ನಂತರ ಪ್ಲಾಸ್ಟಿಕ್‌ ಚೀಲವನ್ನು ಎಳೆದು ತೆಗೆಯಿರಿ.

ಸುರಕ್ಷಿತವಾಗಿ ಹೊರ ಬರುವ ಚೀಲವನ್ನು ಮತ್ತೊಮ್ಮೆ ಸಸಿ ಬೆಳೆಸಲು ಉಪಯೋಗಿಸಿಕೊಳ್ಳಬಹುದು. ಇದರಿಂದ ಹಾಳಾಗದಂತೆ, ಮಾಲಿನ್ಯವಾಗದಂತೆ ಗಮನ ಹರಿಸಬಹುದು. ಇದಲ್ಲದೇ ಮಣ್ಣು ಸಮೇತ ನೆನೆಸಿದ ಸಸಿಯಲ್ಲಿ ಬೇರುಗಳು ಸ್ವಲ್ಪವೂ ಹಾನಿಗೆ ಒಳಗಾಗುವುದಿಲ್ಲ, ಗಿಡವೂ ಕ್ಷೇಮವಾಗಿ ಬೆಳೆಯಲು ನೆರವಾಗುತ್ತದೆ.

ನೀರು ಅಥವಾ ಬಗ್ಗಡವನ್ನು ಬಕೆಟ್‌ಗಳಲ್ಲಿ, ತೊಟ್ಟಿಗಳಲ್ಲಿ, ಡ್ರಂಗಳಲ್ಲಿ ಹಾಕಿಡಬಹುದು. ಖಾಲಿಯಾದಂತೆಲ್ಲಾ ತುಂಬಿಸಿಕೊಳ್ಳಿ. ಸಸಿಗಳನ್ನು ಮುಳುಗಿಸಿ ಇಲ್ಲವೇ ನೆನೆಸಿ ನೆಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳು ನೆಲೆಯೂರುತ್ತವೆ. ಈ ರೀತಿ ಮಾಡುವುದರಿಂದ ಮಾಲಿನ್ಯ ನಿಯಂತ್ರಿಸಲು ಚೀಲಗಳನ್ನು ಮರುಬಳಸಿ ಹಣವನ್ನು ಉಳಿಸಬಹುದು. ಕೆಲವೇ ಕೆಲವು ಜನ ಈ ರೀತಿಯ ಮಾರ್ಗವನ್ನು ಅನುಸರಿಸುತ್ತಿದ್ದು, ಉಪಯೋಗಗಳನ್ನು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT