ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಂಗಡಿ ಮುಚ್ಚದೇ ಬೇರೆ ದಾರಿ ಇಲ್ಲ'

ಇ ಕಾಮರ್ಸ್‌ ಅಬ್ಬರ
Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇ – ಕಾಮರ್ಸ್‌ ಕಂಪೆನಿ­ಗಳು ಆನ್‌­ಲೈನ್‌­ನಲ್ಲಿ ಶೇ 20ರಿಂದ 70ರಷ್ಟು ರಿಯಾಯ್ತಿಗೆ ವಸ್ತು­ಗಳನ್ನು ಮಾರಾಟ ಮಾಡುತ್ತಿವೆ. ಮಾರುಕಟ್ಟೆ ನಿಯಮ­ಗಳನ್ನು ಉಲ್ಲಂ­ಘಿಸಿ ಕಾನೂನು ಬಾಹಿರ ವಹಿವಾಟಿ­ನಲ್ಲಿ ತೊಡ­ಗಿವೆ. ಜೊತೆಗೆ ನಮ್ಮ ಹೊಟ್ಟೆಯ ಮೇಲೂ ಹೊಡೆ­­ಯು­ತ್ತಿವೆ. ಹೀಗಾದರೆ ನಾವು ಕೆಲಸ­ಗಾರರನ್ನು ಮನೆಗೆ ಕಳುಹಿಸಿ ಅಂಗಡಿ ಬಾಗಿಲು ಮುಚ್ಚಬೇಕಾ­ಗುತ್ತದೆ’...

–ಮೊಬೈಲ್‌ ಫೋನ್‌ ಮಾರಾಟ ಕ್ಷೇತ್ರ­ದಲ್ಲಿ ಹೆಸರು ಮಾಡಿ­ರುವ ಸಂಗೀತಾ ಮೊಬೈಲ್ಸ್‌ ಚಿಲ್ಲರೆ ಮಾರಾಟ ಮಳಿಗೆ­ಗಳ ವ್ಯವಸ್ಥಾಪಕ ನಿರ್ದೇಶಕ ಸುಭಾಷ್‌ ಚಂದ್ರ ರೆಡ್ಡಿ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಸಂಕಷ್ಟವನ್ನು ಹೇಳಿ­ಕೊಂಡ ರೀತಿ ಇದು.

‘ನಾವು ಒಟ್ಟು 170 ಮಳಿಗೆಗಳನ್ನು ಹೊಂದಿದ್ದೇವೆ. ಬೆಂಗಳೂರಿ­ನಲ್ಲಿಯೇ 92 ಮಳಿಗೆಗಳಿವೆ. ಇ–ಕಾಮರ್ಸ್‌ ಕಂಪೆನಿ­­­ಗಳಾದ ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ಡೀಲ್‌, ಅಮೆ­ಜಾನ್‌ ವಿಪರೀತ ರಿಯಾಯ್ತಿ ನೀಡಿ ಮೊಬೈಲ್‌ಗಳನ್ನು ಮಾರಾಟ ಮಾಡು­ತ್ತಿರು­ವುದರಿಂದ 2ನಮ್ಮ ವಹಿವಾಟಿನ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ಇನ್ನು ಕೆಲವರು ಭಾರಿ ನಷ್ಟ ಅನುಭವಿಸು­ತ್ತಿ­ದ್ದಾರೆ. ಕೆಲ ಮಾಲೀಕರು ತಮ್ಮ ಮಳಿಗೆ­­­­ಗಳಿಗೆ ಬೀಗ ಹಾಕಿದ್ದಾರೆ’ ಎಂದು ಕಳವಳ ವ್ಯಕ್ತ­ಪಡಿಸಿದರು.

ಇದು ಕೇವಲ ಒಬ್ಬರ ಗೋಳಾಟವಲ್ಲ. ಸಾಂಪ್ರ­ದಾಯಿಕ ವ್ಯಾಪಾರದಲ್ಲಿ ತೊಡಗಿರುವ ನೂರಾರು ವರ್ತ­ಕರ ಸಮಸ್ಯೆ. ಅದರಲ್ಲೂ ಎಲೆ­

ತನಿಖೆ ಇಲ್ಲ
ನವದೆಹಲಿ (ಪಿಟಿಐ): ಫ್ಲಿಪ್‌ಕಾರ್ಟ್‌ ಕಳೆದ ವಾರ ನಡೆಸಿದ ಭಾರಿ ರಿಯಾಯ್ತಿ ಮಾರಾ­ಟಕ್ಕೆ ಸಂಬಂಧಿಸಿದಂತೆ ಹೊಸದಾಗಿ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.
‘ಬಿಗ್‌ ಬಿಲಿಯನ್‌ ಡೇ ಸೇಲ್‌’ ಹೆಸರಿನಲ್ಲಿ ನಡೆಸಿದ ಮಾರಾಟ  ಬಗ್ಗೆ ಯಾವುದೇ ತನಿಖೆ ನಡೆಸುತ್ತಿಲ್ಲ. ಆದರೆ, ಸಂಸ್ಥೆ ಈ ಹಿಂದೆ ನಡೆಸಿದ ವಹಿವಾಟಿನ ವೇಳೆ ಎಫ್‌ಡಿಐ ನಿಯಮಾವಳಿ ಉಲ್ಲಂಘಿ­ಸಿದ ಆರೋಪದ ಬಗೆಗಿನ ಈ ಹಿಂದಿನ ತನಿಖೆ ಮುಂದುವರೆಸಿ­ರುವುದಾಗಿ   ಸ್ಪಷ್ಟಪಡಿಸಿದೆ.

ಕ್ಟ್ರಾನಿಕ್‌ ಉಪಕರಣಗಳ ಮಾರಾಟ ಕೇಂದ್ರಗಳಿಗೆ ಭಾರಿ ನಷ್ಟವಾಗುತ್ತಿದೆ.

‘ಆನ್‌ಲೈನ್‌ ವಹಿವಾಟು ಕಂಪೆನಿಗಳು ಸಾಂಪ್ರ­ದಾಯಿಕ ಮಾರುಕಟ್ಟೆಯನ್ನೂ ಆಪೋ­ಷನ ತೆಗೆದುಕೊಳ್ಳುವ ಭಯ­ವನ್ನೂ ಹುಟ್ಟು­ಹಾಕು­ತ್ತಿವೆ. ಅತ್ಯಂತ ವೇಗವಾಗಿ ಈ ಮಾರು­ಕಟ್ಟೆ ವಿಸ್ತರಿಸುತ್ತಾ ಹೋಗುತ್ತಿದೆ. ಕೇವಲ ಎರಡು ಮೂರು ವರ್ಷಗಳಲ್ಲಿ ಸಾಂಪ್ರ­ದಾ­ಯಿಕ ಮಾರುಕಟ್ಟೆಯ ಶೇ 10ರಷ್ಟು ಪಾಲನ್ನು ಆನ್‌ಲೈನ್‌ ಮಾರಾಟ ಕ್ಷೇತ್ರ ಆವ­ರಿಸಿ­­ಕೊಂ­ಡಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದು ಎಂ.ಜಿ ರಸ್ತೆ ಸೋನಿ ಮಳಿಗೆ ಮ್ಯಾನೇಜರ್‌ ಸಾಜಿದ್‌.

ಅಂಗಡಿಗೆ ಬೀಗ, ಸಿಬ್ಬಂದಿ ಮನೆಗೆ
ಚಿಲ್ಲರೆ ಮಾರಾಟದಲ್ಲಿ ಹೆಸರು ಮಾಡಿರುವ ರಾಜ್ಯದ ಮತ್ತೊಂದು ಹೆಸರಾಂತ ಮೊಬೈಲ್‌ ಮಳಿಗೆಯೊಂದು ಮಲ್ಲೇ­ಶ್ವರ­ದಲ್ಲಿದ್ದ ತನ್ನ ಅಂಗಡಿ­ಯೊಂದನ್ನು ಮುಚ್ಚಿದ್ದು, ಕೆಲಸ­ಗಾರರನ್ನು ಮನೆಗೆ ಕಳುಹಿಸಿದೆ. ಇನ್ನೂ ಕೆಲ ಮಾರಾಟ ಕೇಂದ್ರಗಳನ್ನು ಮುಚ್ಚಲು ಸಿದ್ಧತೆ ನಡೆಸಿರು­ವುದು ತಿಳಿದುಬಂದಿದೆ. 

‘₨18 ಸಾವಿರ ಮೌಲ್ಯದ ಮೊಬೈಲ್‌ ಫೋನನ್ನು ₨6 ಸಾವಿ­ರಕ್ಕೆ ಆನ್‌ಲೈನ್‌ನಲ್ಲಿ ಮಾರಾಟ ಮಾಡಿದರೆ ನಮ್ಮ ಮಳಿ­ಗೆಗೆ ಯಾರು ಬರುತ್ತಾರೆ ಹೇಳಿ? ಆದರೆ, ಮರು­ದಿನವೇ ಅದೇ ಮೊಬೈಲ್‌ ಫೋನ್‌ ಬೆಲೆ ಆ ಆನ್‌ಲೈನ್‌ ಕಂಪೆನಿ­ಯಲ್ಲಿಯೇ ₨18ಸಾವಿರಕ್ಕೆ ಏರಿತ್ತು.
 

ಸಂಕಟ ತಂದ ‘ಬಿಗ್‌ ಬಿಲಿಯನ್‌ ಡೇ’
ಹಬ್ಬದ ಅಂಗವಾಗಿ ಆನ್‌ಲೈನ್‌ ಮಾರಾಟ ತಾಣಗಳು ಭಾರಿ ವಿನಾಯ್ತಿ ದರದಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿರುವುದು ತಮ್ಮ ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ ಎಂಬುದು ಸಾಂಪ್ರದಾಯಿಕ ಮಾರಾಟ­ಗಾರರ ಕಳವಳ.
‘ಬಿಗ್‌ ಬಿಲಿಯನ್‌ ಡೇ’ ಎಂಬ ಹೆಸರಿನಲ್ಲಿ ಆನ್‌ಲೈನ್‌ ಕಂಪೆನಿ ಫ್ಲಿಪ್‌ಕಾರ್ಟ್‌, ಇನ್ನೊಂದೆಡೆ ಸ್ನ್ಯಾಪ್‌­ಡೀಲ್‌  ಸೋಮವಾರ (ಅ. 6) ಒಂದೇ ದಿನ  ₨1,200 ಕೋಟಿಗೂ ಅಧಿಕ ಮೌಲ್ಯದ ವಹಿವಾಟು ನಡೆಸಿವೆ.
10 ಗಂಟೆಗಳ ಅವಧಿಯಲ್ಲಿ 15 ಲಕ್ಷ ಮಂದಿ ₨600 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಫ್ಲಿಪ್‌ಕಾರ್ಟ್‌ ಹೇಳಿಕೊಂಡಿತ್ತು.
ಸ್ನ್ಯಾಪ್‌ಡೀಲ್‌ ಸಹ ತಾನು ಪ್ರತಿ ನಿಮಿಷಕ್ಕೆ ₨1 ಕೋಟಿಯಂತೆ (ಒಟ್ಟು ಅಂದಾಜು ₨600 ಕೋಟಿ) ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿದ್ದಾಗಿ ಹೇಳಿತ್ತು. ಒಂದೇ ದಿನದಲ್ಲಿ ಲಕ್ಷಾಂತರ ವಸ್ತುಗಳು ಮಾರಾಟವಾಗಿವೆ.
ದೀಪಾವಳಿ ಹಬ್ಬದ ಅಂಗವಾಗಿ ಮೈಂತ್ರಾ ಡಾಟ್‌ ಕಾಮ್‌ ಕೂಡ ಶೇ 50ರಷ್ಟು ರಿಯಾಯ್ತಿ ದರದಲ್ಲಿ ಉಡುಪು ಹಾಗೂ ಪಾದರಕ್ಷೆಗಳ ಮಾರಾಟಕ್ಕೆ ಮುಂದಾ­ಗಿದೆ. ಗ್ರಾಹಕರು ತಾವು ಖರೀದಿಸಿದ ವಸ್ತುಗಳ ಬಗ್ಗೆ ತೃಪ್ತರಾಗದಿದ್ದರೆ 30 ದಿನಗಳಲ್ಲಿ ಬದಲಾಯಿಸಿ ಕೊಡಲಾ­ಗುವುದು ಎಂದೂ ಸಂಸ್ಥೆ ಹೇಳಿಕೊಂಡಿದೆ. ಅಮೆಜಾನ್‌ ಕೂಡ ರಿಯಾಯ್ತಿ ಮಾರಾಟ ಮುಂದುವರಿಸಿದೆ.

ಇ– ಕಾಮರ್ಸ್‌ ಕಂಪೆನಿಗಳು ಮಾರುಕಟ್ಟೆ ನಿಯಮ­ಗಳನ್ನು ಪೂರ್ಣ ಉಲ್ಲಂಘಿಸುತ್ತಿವೆ’ ಎಂದು ಆ ಮಳಿಗೆಯ ಮ್ಯಾನೇ­ಜರ್‌ ಅಲವತ್ತುಕೊಂಡರು.

‘ವಿದ್ಯಾರ್ಥಿಗಳೇ ನಮ್ಮ ಪ್ರಮುಖ ಗ್ರಾಹ­ಕರು. ಆದರೆ, ಅವ­ರೆಲ್ಲಾ ಈಗ ‘ಇ–ಕಾಮರ್ಸ್’ ಕಂಪೆನಿಗಳ ಮೂಲಕ ಮೊಬೈಲ್‌­ಗಳನ್ನು ಖರೀದಿ ಮಾಡುತ್ತಿದ್ದಾರೆ. ರಿಯಾಯ್ತಿ ದರದಲ್ಲಿ ಮಾರಾಟ ಮಾಡಿದರೂ ಖರೀದಿಸಲು ಮುಂದಾ­­­­­ಗು­ತ್ತಿಲ್ಲ. ನಮ್ಮ ಒಂದೇ ಮಾರಾಟ ಮಳಿಗೆಯಲ್ಲಿ ದಿನಕ್ಕೆ ಕನಿಷ್ಠ 10–15 ಮೊಬೈ­ಲ್‌­ಗಳು ಮಾರಾಟ­ವಾಗು­ತ್ತಿ­ದ್ದವು. ಈಗ ಆ ಸಂಖ್ಯೆ 4–6ಕ್ಕೆ ಬಂದು ನಿಂತಿದೆ’
ಎನ್ನು­ತ್ತಾರೆ ಯೂನಿವರ್ಸೆಲ್‌ ಮಾರಾಟ ಮಳಿಗೆ ಸಿಬ್ಬಂದಿ.

ಸರ್ಕಾರಕ್ಕೆ ವರ್ತಕರ ಪತ್ರ
‘ಇ–ಕಾಮರ್ಸ್’ ಕಂಪೆನಿಗಳು ಕಾನೂನುಬಾಹಿರ ವಹಿವಾಟಿನಲ್ಲಿ ತೊಡಗಿವೆ ಎಂದು ಆರೋಪಿಸಿ ಚಿಲ್ಲರೆ ಮಾರಾಟಗಾರರು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.

ಅಖಿಲ ಭಾರತ ವರ್ತಕರ ಸಂಘಟನೆ­ಗಳ ಒಕ್ಕೂಟ (ಸಿಎಐಟಿ) ಕೂಡ ಅಸಹಜ ಸ್ವರೂಪದ ‘ಇ–ಕಾಮರ್ಸ್’ ವಹಿವಾಟು ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ತಕ್ಷಣ ಮಧ್ಯಪ್ರವೇಶಿಸಿ ಸಾಂಪ್ರದಾಯಿಕ ವರ್ತಕ ಸಮೂಹದ ಹಿತ ರಕ್ಷಿಸಬೇಕು ಎಂದೂ ಮನವಿ ಮಾಡಿದೆ.

ಕಾನೂನುಬಾಹಿರ ವಹಿವಾಟಿನಲ್ಲಿ ತೊಡಗಿರುವ ಆನ್‌ಲೈನ್‌ ಕಂಪೆನಿಗಳ

ಕುಸಿದ ಗ್ರಾಹಕರ ಸಂಖ್ಯೆ
ಗಾಂಧಿ ಬಜಾರ್‌ನಲ್ಲಿ ಸದಾ ತುಂಬಿ ತುಳುಕುತ್ತಿದ್ದ ಮೊಬೈಲ್‌ ಮಳಿಗೆ­ಯೊಂದು ಹಬ್ಬದ ಈ ಸಂದರ್ಭದಲ್ಲೂ ಖಾಲಿ ಹೊಡೆಯು-­ತ್ತಿದೆ. ಗಿರಿಯಾಸ್‌, ಪೈ ಇಂಟರ್‌ನ್ಯಾಷನಲ್‌, ವಿವೇಕ್ಸ್‌, ಆದೀಶ್ವರ್‌, ಯೂನಿವರ್ಸೆಲ್‌, ಪೂರ್ವಿಕಾ, ಕ್ರೋಮಾ, ರಿಲಯನ್ಸ್‌ ಡಿಜಿಟಲ್‌, ಮೊಬೈಲ್‌ ಸ್ಟೋರ್‌, ಸ್ಪೈಸ್‌ ಮಳಿಗೆಗಳು ನಗರದ ವಿವಿಧೆಡೆ ಇವೆ. ಆದರೆ, 6 ತಿಂಗಳಿನಿಂದ ಈ ಮಳಿಗೆಗಳಲ್ಲಿ ಖರೀದಿಸುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ­ಯಾಗಿದೆ. ಅಷ್ಟೇ ಅಲ್ಲ; ಮಾಲ್‌­ಗಳ­ಲ್ಲಿಯೂ ಮಾರಾಟ ಕುಸಿತವಾಗಿದೆ. ಪ್ರಮುಖವಾಗಿ ಎಲೆಕ್ಟ್ರಾನಿಕ್‌ ಉಪಕರಣ­ಗಳ ಮಾರಾಟದ ಮೇಲೆ ಹೊಡೆತ ಬಿದ್ದಿದೆ.

ಮೇಲೆ ಸರ್ಕಾರವು ನಿಯಂತ್ರಣ ಹೇರದಿದ್ದರೆ ಸುಪ್ರೀಂಕೋರ್ಟ್‌ ಹಾಗೂ ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ಮೊರೆ ಹೋಗುವುದಾಗಿಯೂ ಸಿಎಐಟಿ ತಿಳಿಸಿದೆ.

ಮೊದಲಿಗೆ ಮೊಬೈಲ್‌ ಫೋನ್‌, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌ ಎಂದು ಎಲೆಕ್ಟ್ರಾನಿಕ್‌ ಉಪಕರಣಗಳ ವಿಭಾಗ­ಕ್ಕಷ್ಟೇ ಸೀಮಿತವಾಗಿದ್ದ ಆನ್‌ಲೈನ್‌ ಮಾರಾಟ ವಹಿವಾಟು ಈಗ ಸಿದ್ಧ ಉಡುಪು, ಪಾದರಕ್ಷೆ,  ವ್ಯಾನಿಟಿ ಬ್ಯಾಗ್‌ ಎಂದು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಪುಸ್ತಕ, ದಿನಸಿ ಸಾಮಗ್ರಿಗಳಿಗೂ ಕೈಹಾಕಿದೆ.

‘ಮೊಬೈಲ್‌ ಮಾತ್ರವಲ್ಲ; ಅದರ ರಕ್ಷಣೆಗೆ ಬಳಸುವ ಕವರ್‌, ಹೆಡ್‌ಸೆಟ್‌, ಬ್ಯಾಟರಿ, ಎಂಪಿ3 ಪ್ಲೇಯರ್‌, ಪೆನ್‌­ಡ್ರೈವ್‌ಗಳನ್ನೂ ಆನ್‌ಲೈನ್‌ನಲ್ಲಿ ಖರೀದಿ­ಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಈ ಉಪಕರಣಗಳಿಗೆ ಹೆಚ್ಚು ವಿನಾಯ್ತಿ ಇರುವುದಿಲ್ಲ. ಆದರೂ ಆನ್‌ಲೈನ್‌ ಖರೀದಿ ಒಂಥರಾ ಫ್ಯಾಷನ್‌ ಆಗಿಬಿಟ್ಟಿದೆ’ ಎನ್ನುತ್ತಾರೆ ಯೂನಿವರ್ಸೆಲ್‌ ಮೊಬೈಲ್‌ ಮಳಿಗೆಯೊಂದರ ಸಿಬ್ಬಂದಿ.
(ಮುಂದುವರೆಯುವುದು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT