ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರಿಗೆ ನೆರವು: ಒಪ್ಪಂದಕ್ಕೆ ಭಾರತ ಸಹಿ

Last Updated 2 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಕ್ಕುಸ್ವಾಮ್ಯದ ಕಿರಿಕಿರಿಗಳಿಲ್ಲದೆ ಪ್ರಕಟಗೊಂಡಿ­ರುವ ಸಾಹಿತ್ಯ ಕೃತಿಗಳು ಅಂಧರಿಗೆ ಮತ್ತು ದೃಷ್ಟಿ ದೋಷ ಹೊಂದಿರು­ವ­ವರಿಗೆ ಸುಲಭವಾಗಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಭಾರತವು ಅಂತರರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದೆ.

ದೃಷ್ಟಿ ದೋಷ ಹೊಂದಿರುವ, ಅಂಧ ವ್ಯಕ್ತಿಗಳಿಗೆ ಕೂಡ ಬರವಣಿಗೆ ಜಗತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಭಾರತವು ‘ಮರ್ರ­ಕೇಶ್‌ ಒಪ್ಪಂದ’ಕ್ಕೆ ಕಳೆದ ಬುಧವಾರ ಜಿನೀವಾದಲ್ಲಿ ಸಹಿ ಹಾಕಿದೆ.

ಕಳೆದ ವರ್ಷದ ಜೂನ್‌ 23ರಂದು ನಡೆದಿದ್ದ ರಾಜತಾಂತ್ರಿಕ ಶೃಂಗಸಭೆಯಲ್ಲಿ ಈ ಒಪ್ಪಂದವನ್ನು ಅಂಗೀಕರಿಸಲಾಗಿತ್ತು. ಬ್ರೈಲ್‌, ಆಡಿಯೊ ಅಥವಾ ದೊಡ್ಡ ಮುದ್ರಣ ಸೇರಿದಂತೆ ಅಂಧರು, ದೃಷ್ಟಿ ದೋಷ ಹೊಂದಿರುವ ವ್ಯಕ್ತಿಗಳು ಬಳಸ­ಬಹು­ದಾದ ರೀತಿಯಲ್ಲಿ ಹಕ್ಕುಸ್ವಾಮ್ಯದ ಕೃತಿಗಳನ್ನು ರೂಪಿಸಲು ಮತ್ತು ಅಂಧ–ಸ್ನೇಹಿ ಪುಸ್ತಕ­ಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ರಫ್ತು ಮಾಡಲೂ ಈ ಒಪ್ಪಂದ ಅವಕಾಶ ಕಲ್ಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT