ಬೆಂಗಳೂರು: ‘ಕೂಲಿ ಮಾಡಿದ ತಾಯಿ ಮಗ ನಾನು. ಹಸಿದಾಗ ತನ್ನ ಹೊಟ್ಟಿ ಕಟ್ಟಿ ನನಗ ರೊಟ್ಟಿ ಕೊಟ್ಟಾಕಿ ನಮ್ಮವ್ವ. ತನ್ನ ಸಂಕಟ ಹತ್ತಿಕ್ಕಿ ನನಗ ಅಕ್ಷರ ಕಲಿಸಿದಾಕಿ ನಮ್ಮವ್ವ. ಅದ್ಕ ನನ್ನ ಆತ್ಮಕಥಿಗೆ ಗಿರಿಜವ್ವನ ಮಗ ಅಂತ ಹೆಸರು ಇಡಾಕ ನಿರ್ಧಾರ ಮಾಡೀನಿ’.

ಇಲ್ಲಿನ ನಯನ ಸಭಾಂಗಣದ ವೇದಿಕೆ ಮೇಲೆ ಶನಿವಾರ ‘ಮನೆಯಂಗಳದಲ್ಲಿ ಮಾತುಕತೆ’ಗೆ ಕುಳಿತ ಹಿರಿಯ ಸಾಹಿತಿ ಧಾರವಾಡದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೀಗೆ ಹೇಳುತ್ತಿದ್ದರೆ ಸಭಿಕರ ಕಣ್ಣಾಲಿಗಳೆಲ್ಲ ತೇವಗೊಂಡಿದ್ದವು.

‘ನನಗೀಗ 74 ವರ್ಷ. ಇದು ಮರೆಯುವ ವಯಸ್ಸು. ಆದ್ರ ನನಗ ಎಲ್ಲದರ ಖಚಿತ ನೆನಪು ಇರ್ತಾವ. ಅಪ್ಪನ ಹೆಣ ಒಯ್ತಾ ಇದ್ದಿದ್ದು ನನ್ನ ಚಿಕ್ಕ ವಯಸ್ಸಿನ ಮೊಟ್ಟ ಮೊದಲ ನೆನಪು. ಅಪ್ಪನ್ನ ಊಟದಾಗ ವಿಷ ಹಾಕಿ ಕೊಂದ್ರಂತ. ಆಮ್ಯಾಲ ಜೀವನ ನಡಸಾಕ ದೊಡ್ಡ ಗುದುಮುರುಗಿ ಹಾಕ್ಬೇಕಾತು’ ಎಂದು ಭಾವುಕರಾದರು ಪಟ್ಟಣಶೆಟ್ಟಿ.

‘ಧಾರವಾಡದ ಹತ್ರದ ಮನಗುಂಡಿಯಲ್ಲಿ ನನ್ನ ಅಜ್ಜನ ಚಹಾದ ಅಂಗಡಿ ಇತ್ತು. ಅಲ್ಲಿ ಚಹಾ–ಒಗ್ಗರಣಿ ಮಾಡ್ತಿದ್ದೆ. ಕಪ್ಪು– ಬಸಿ ತೊಳಿತಿದ್ದೆ. ನೆಲಕ್ಕ ಸೆಗಣಿ ಸಾರಿಸ್ತಿದ್ದೆ. ಖಾಲಿ ಟೈಮ್ನಾಗ ಅಜ್ಜ ಹೇಳ್ತಿದ್ದ ನಾಟಕ– ದೊಡ್ಡಾಟದ ಕಥಿಗಳಿಂದ ಮನಸ್ಸು ತುಂಬಿ ಹೋತು. ನನ್ನ ಬರವಣಿಗೆಗೆ ಇಂತಹ ವಸ್ತುಗಳೇ ಬುನಾದಿ ಆದ್ವು’ ಎಂದು ಮೆಲುಕು ಹಾಕಿದರು.

‘ಎಂಟನೇ ಇಯತ್ತೆ ಓದುವಾಗ ಹಿಂದಿ ಭಾಷೆ ಕಡ್ಡಾಯ ಮಾಡಿದ್ರು. ನಾನು ಡುಮ್ಕಿ ಹೊಡೆದೆ. ಅದರಿಂದ ಹ್ಯಾವ ಹುಟ್ಟಿ ಛಲೋತ್ನಂಗ್ಹ ಕಲ್ತು ಅದ್ರ ಮಾ್ಯಲಿನ ಸೇಡು ತೀರಿಸ್ಕೊಂಡೆ. ಆಮ್ಯಾಲ ಹಿಂದಿ ನಾಟ್ಕ ಕನ್ನಡಕ್ಕ ತಂದೆ. ಒಳ್ಳೆ ಕವನಾನೂ ಬರ್ದೆ. ನನ್ನದು ನೋಡಾಕ ಮಂಗೋಲಿಯನ್ ಮುಖ. ಸ್ವೇಟರ್ ಮಾರುವ ಟಿಬೆಟನ್ ಮಂದಿ ನಡುವ ಮರ್ತು ಹೋದಿ ಅಂತ ಹೆಂಡ್ತಿಗೆ ಜೋಕ್ ಮಾಡಿ್ತರ್ತೀನಿ’ ಎಂದು ನಗಾಡಿದರು ಅವರು.

‘ದ.ರಾ. ಬೇಂದ್ರೆ ಬಲು ಚಂಚಲ ಸ್ವಭಾವದ ಮನುಷ್ಯ. ಅದ್ಕ ಕಾದಂಬರಿ, ನಾಟಕ ಯಾವ್ದೂ ಅವ್ರಿಗೆ ಬರ್ಯಾಕ ಆಗ್ಲಿಲ್ಲ. ಆದ್ರ ಅವ್ರು ಬರ್ದಂಗ್ಹ ಯಾರ್ಗೂ ಕವನ ಬರ್ಯಾಕ ಆಗ್ಲಿಲ್ಲ. ಕುವೆಂಪು ಅವರ ಕವನದಾಗೂ ಬೇಂದ್ರೆ ಅವರಷ್ಟು ಲಾಲಿತ್ಯ ಇಲ್ಲ. ಧಾರ್ವಾಡ್ ಭಾಷಾ ಕಾಣೆ ಆಗ್ತಾ ಇರುವ ವೇಗ ನೋಡಿದ್ರ ಕುವೆಂಪು ಹಾಗೇ ಉಳ್ಕೊಂತಾರ. ಬೇಂದ್ರೆ ಹಿಂದ್ ಸರ್ಕೊಂತ ಹೊಕ್ಕಾರ ಅನಸ್ತದ’ ಎಂದು ವಿಶ್ಲೇಷಿಸಿದರು.

‘ಪ್ರಜಾವಾಣಿ’ ಪತ್ರಿಕೆ ಚಹಾದ ಜೋಡಿ ಚೂಡಾದಂಗ ಅಂಕಣ ಬರ್ಯಾಕ ಅವಕಾಶ ಕೊಟ್ಟು ನನ್ನನ್ನ ರಾಜ್ಯಕ್ಕss ಪರಿಚಯ ಮಾಡ್ತು. ಓದುವ ಗ್ರಂಥ ಭಾಷೆ, ಆಡುವ ದೇಸಿ ಭಾಷೆ ನಡುವ ಓಡುವ ಭಾಷೆ ಇರಲಿ ಅಂತ ಆಡುವ ಮಾತಿಗೆ ಅಕ್ಷರ ರೂಪ ನೀಡ್ದೆ’ ಎಂದು ಸ್ಮರಿಸಿದರು.

‘ಸಾಹಿತಿ ಮತ್ತು ಶಿಕ್ಷಕ ಆದವನು ಸಮಾಜದ ಮುಂದ ಯಾವ್ದೂ ಮುಚ್ಚು–ಮರೆ ಮಾಡಬಾರ್ದು’ ಎಂದ ಅವರು, ‘ಬೆಂಗಳೂರು ಸ್ವೀಕಾರ ಮಾಡ್ದಂಗ್ಹ ಮಾಡಿ, ಎತ್ತಿ ಒಗಿತೈತಿ, ಅದ್ಕ ನಾ ಈ ಊರಾಗ ಇರಾಕ ಒಲ್ಲೆ’ ಎಂದು ನಗುತ್ತಲೇ ಹೇಳಿದರು.

‘ಪ್ರಾಮಾಣಿಕವಾಗಿ ಬರದ್ರ ಅದss ಒಳ್ಳೇ ಸಾಹಿತ್ಯ. ಅದಕ್ಕ ಯಾವದಾದ್ರೂ ಇಸಂ ಪಟ್ಟ ಕಟ್ಟಿ, ವ್ಯಕ್ತಿಯೊಳಗಿನ ಸಾಹಿತಿಯ ಹೆಣ ಕೆಡುವೂದು ಬ್ಯಾಡ’ ಎಂದು ಅಭಿಪ್ರಾಯಪಟ್ಟರು.

ಹೇಮಾನೇ ಕೊನೆ ಹೆಂಡ್ತಿ
‘ನನ್ನ ಬದುಕಿನಲ್ಲಿ ಭಾಳ ಮಂದಿ ಹೆಣ್ಮಕ್ಕಳು ಬಂದ್ ಹೋಗ್ಯಾರ. ನಾನು ಪ್ರೀತಿಸಿದ ಹುಡ್ಗಿ ಕೈಕೊಟ್ಟಳು. ಆಮ್ಯಾಲ ಮಾಲತಿಯನ್ನ ಮದ್ವಿ ಆದೆ. ಯಾಕೊ, ಅವ್ರಿಗೆ ನಾ ಬ್ಯಾಡ ಅನಿಸಿದೆ. ಅವ್ರು ನನ್ನಿಂದ ದೂರವಾದ ಮ್ಯಾಲ ಹೇಮಾನ ಕೈಹಿಡಿದೆ. ಆಕಿ ನನ್ನ ಎರಡನೇ ಮತ್ತು ಕೊನೆ ಹೆಂಡ್ತಿ. ಸತ್ತ ಅವ್ವನ್ನ ನಾ ಆಕಿಯೊಳಗ ಕಾಣಾಕ್ ಹತ್ತೀನಿ. ಹಂಗಂತ ನನ್ನ ಆತ್ಮಕಥಿಗೆ ‘ಹೇಮಿಗಂಡ’ ಅಂತ ಹೆಸರು ಇಡಂಗಿಲ್ಲ’ ಎಂದು ಚಟಾಕಿ ಹಾರಿಸಿದರು ಪಟ್ಟಣಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.