ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ತೆಕ್ಕೆಯಲ್ಲಿ ಯುಪಿಸಿಎಲ್ ಕಂಪೆನಿ

ಸಮಸ್ಯೆ ಸರಿಪಡಿಸಿ ಇಲ್ಲವೇ ಹೋರಾಟ ಎದುರಿಸಿ: ಸಚಿವ ಸೊರಕೆ ಎಚ್ಚರಿಕೆ
Last Updated 8 ಮೇ 2015, 8:55 IST
ಅಕ್ಷರ ಗಾತ್ರ

ಪಡುಬಿದ್ರಿ: ಬೃಹತ್ ಕೈಗಾರಿಕೆಗಳಿಂದಾಗಿ ಜಿಲ್ಲೆಗೆ ಹಾನಿಯೇ ಜಾಸ್ತಿಯೆನಿಸಿದೆ. ಅವರು ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರ ಮ­ಗಳಿಗಾಗಿ ತಮ್ಮ ಲಾಭಾಂಶದ ಶೇ 2 ರಷ್ಟು ವಿನಿಯೋಗಿಸಬೇಕಿದೆ ಅದನ್ನು ನಿರ್ವಹಿಸುತ್ತಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದ್ದಾರೆ.

ಮೋದಿ ಆಪ್ತ ಅದಾನಿ ಉದ್ಯಮಪತಿ ಇದನ್ನು ಗಮನಿಸಿ ಸರಿಪಡಿಸಬೇಕಿದೆ. ಇಲ್ಲದಿದ್ದಲ್ಲಿ ಯುಪಿಸಿಎಲ್‌ಗೆ  ನಾವು ಮುತ್ತಿಗೆಯನ್ನು ಹಾಕುವುದ ರೊಂದಿಗೆ ಹೋರಾಟವನ್ನು ನಡೆಸಲಿರುವುದಾಗಿ ಅವರು ಎಚ್ಚರಿಸಿದ್ದಾರೆ.

ಅವರು ಬುಧವಾರ ಮುದರಂಗಡಿ ಗ್ರಾಮ ಪಂಚಾಯಿತಿಗೆ ಭೇಟಿ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ಪರಿಸರವನ್ನು ಹಾಳು ಮಾಡುತ್ತಿವೆ. ಸ್ಥಳೀಯರಿಗೆ ಉದ್ಯೋಗ ನೀಡಿಕೆಯಾ ಗಿಲ್ಲ. ನಮಗೆ ಬೃಹತ್ ಯೋಜನೆಗಳು ಸಾಕು. ಮುಂದೆ ಕಾಪು ಕ್ಷೇತ್ರವನ್ನು ವಿದ್ಯಾಕ್ಷೇತ್ರವನ್ನಾಗಿ ಮಾರ್ಪ ಡಿಸಲು ಉದ್ದೇಶಿಸಲಾಗಿದ್ದು ಬೆಳಪುವಿ ನಲ್ಲಿ 141ಕೋಟಿ ರೂ.ಗಳ ವಿಜ್ಞಾನ ಕೇಂದ್ರಕ್ಕೆ ಶಂಕುಸ್ಥಾಪನೆಯನ್ನು ಈಗಾಗಲೇ ನೆರವೇ ರಿಸಲಾಗಿದೆ. ಎಲ್ಲೂರು ಗ್ರಾಮದಲ್ಲಿ ಐಟಿಐಯೊಂದನ್ನು ಆರಂಭಿಸಲೂ ಉದ್ದೇಶಿಸಲಾಗಿದೆ ಎಂದೂ  ಹೇಳಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿ`ಸೋಜ ಮಾತನಾಡಿ, ಸ್ಥಳೀಯ ಜನರನ್ನು ಕಡೆಗಣಿಸಿ ಪರಿಸರಕ್ಕೆ ಹಾಳು ಮಾಡುವ ಉದ್ದಿಮೆಗಳು ನಮಗೆ ಬೇಡ. ಸಚಿವ ಸೊರಕೆಯವರ ಬೃಹತ್ ಕೈಗಾರಿಕೆ ಗಳ ವಿರುದ್ಧದ ಸಮರದಲ್ಲಿ ತಾನೂ ಭಾಗಿಯಾಗುವುದಾಗಿ ಹೇಳಿದರು.

ಅದಾನಿ ತೆಕ್ಕೆಗೆ: ಎಲ್ಲೂರಿನ ನಂದಿಕೂರಿ ನಲ್ಲಿ ಕಾಯರ್ಾಚರಿಸುತ್ತಿರುವ 1200 ಮೆವ್ಯಾ ವಿದ್ಯುತ್ ಉತ್ಪಾದಿಸುವ ಕಲ್ಲಿ ದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರ ಇದೀಗ ಅದಾನಿ ತೆಕ್ಕೆಗೆ ಸೇರ್ಪಡೆ ಗೊಂಡಿದೆ. ಲ್ಯಾಂಕೋ ಸಂಸ್ಥೆಯ ಅಧೀನದಲ್ಲಿದ್ದ ಉಡುಪಿ ಪವರ್ ಕಾರ್ಪೋರೇಷನ್ ಆರಂಭದಲ್ಲಿ ಸ್ಥಳೀಯರ ವಿರೋಧದ ಮಧ್ಯೆಯೂ ಕಾರ್ಯ ಮಾಡುತಿತ್ತು. 600ಮೆವ್ಯಾ ವಿದ್ಯುತ್ ಆರಂಭದಲ್ಲಿ ಆರಂಭಿಸಿದ ಕಂಪೆನಿ ಬಳಿಕ ಇನ್ನೊಂದು 600 ಮ್ಯವ್ಯಾನ ಘಟಕವನ್ನು ಆರಂಭಿಸಿತು.

ಕಳೆದ ಆರು ತಿಂಗಳಿಂದ ಅದಾನಿ ಕಂಪೆನಿಗೆ ಮಾತುಕತೆ ನಡೆದಿತ್ತು. ಆದರೆ ಒಮ್ಮೆ ಈ ಮಾತುಕತೆ ಮುರಿದು ಬಿತ್ತಾದರೂ ಇದೀಗ ಅದಾನಿ ತೆಕ್ಕೆಗೆ ಯುಪಿಸಿಎಲ್ ಕಂಪೆನಿ ಸೇರ್ಪಡೆ ಗೊಂಡಿದೆ. ಕಂಪೆನಿ ಪ್ರವೇಶ ದ್ವಾರದಲ್ಲೂ ಅದಾನಿ ಎಂಬ ಫಲಕವನ್ನು ಕಂಪೆನಿ ಅಳವಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT